Surathkal Murder: ಹತ್ಯೆಗೆ ಬಳಸಿದ ಕಾರ್ ಮಾಲೀಕ ವಶಕ್ಕೆ ಪಡೆದ ಬಳಿಕ ಪೊಲೀಸ್ ಕಮಿಷನರ್ ಸುದ್ದಿಗೋಷ್ಠಿ

ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದವರು ಹಾಗೂ ಕೊಲೆಗೆ ಸಂಬಂಧಿಸಿದವರ ಪರಿಚಿತರನ್ನ ವಿಚಾರಣೆ ನಡೆಸಲಾಗಿದೆ. ಹಂತ ಹಂತವಾಗಿ 14, 21, 16 ಜನರನ್ನ ಒಟ್ಟು 51 ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ ಎಂದು ತಿಳಿಸಿದರು.

ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತು ಫಾಜಿಲ್

ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತು ಫಾಜಿಲ್

  • Share this:
Surathkal Murder Case: ಮಂಗಳೂರಿನ ಸೂರತ್ಕಲ್ ಕೊಲೆ ಸಂಬಂಧ ಇಂದು ನಗರ ಪೊಲೀಸ್ ಕಮಿಷನರ್ ಎನ್ ಶಶಿ ಕುಮಾರ್ (Police Commissioner of Mangaluru N Shashikumar) ಸುದ್ದಿಗೋಷ್ಠಿ ನಡೆಸಿ, ಮೊಹಮ್ಮದ್ ಫಾಜಿಲ್ ಹತ್ಯೆಯ (Fazil Murder) ಕುರಿತ ತನಿಖೆಯ ಮಾಹಿತಿ ನೀಡಿದರು. ಜುಲೈ 28 ರಂದು ಫಾಜಿಲ್ ಎಂಬಾತನನ್ನ ಮೇಲೆ ಮಾರಣಾಂತಿಕ ಹಲ್ಲೆಯಾಗತ್ತದೆ. ಆಸ್ಪತ್ರೆಯಲ್ಲಿ ಆತ ಮೃತಪಟ್ಟಿದ್ದಾನೆ (Death) ಅನ್ನೋದು ದೃಢಪಡಿಸುತ್ತಾರೆ. ನಮ್ಮ ತನಿಖಾ ತಂಡ ತನಿಖೆಯನ್ನ (Investigation Team) ಮಾಡುತ್ತಿದೆ. ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದವರು ಹಾಗೂ ಕೊಲೆಗೆ ಸಂಬಂಧಿಸಿದವರ ಪರಿಚಿತರನ್ನ ವಿಚಾರಣೆ ನಡೆಸಲಾಗಿದೆ. ಹಂತ ಹಂತವಾಗಿ 14, 21, 16 ಜನರನ್ನ ಒಟ್ಟು 51 ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ ಎಂದು ತಿಳಿಸಿದರು.

ಶನಿವಾರ ಸಂಜೆ ವೇಳೆ ಬಿಳಿ ಬಣ್ಣದ ಇಯಾನ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಸುರತ್ಕಲ್ ಪರಿಸರ ವ್ಯಾಪ್ತಿಯಲ್ಲಿರುವ ಒಟ್ಟು ಎಂಟು ಕಾರ್ ಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.  ಕಾರ್ ಓನರ್ ಬಗ್ಗೆ ಮಾಹಿತಿ ಪತ್ತೆ ಮಾಡಲು ಮುಂದಾಗಿದ್ದೇವು

ಕೆಲ ಮಾಹಿತಿ ನೀಡಿದ ಕಾರ್ ಮಾಲೀಕ

ಈ ವೇಳೆ ಮಾಲೀಕನ ಮಾಹಿತಿ ಪಡೆಯುತ್ತೇವೆ. ಕಾರ್ ಮಾಲೀಕನನ್ನ ಸೂರತ್ಕಲ್ ಹೊರ ವಲಯದಲ್ಲಿ ವಶಕ್ಕೆ ಪಡೆಯಲಾಗಿದೆ. ಕಾರ್ ಮಾಲೀಕ ಅಜಿತ್ ಡಿಸೋಜಾ ಕೆಲವು ಮಾಹಿತಿ ಒದಗಿಸಿದ್ದಾನೆ. ಈತ ಮತ್ತೊಬ್ಬನಿಗೆ ಕಾರ್ ನೀಡಿರುವ ಬಗ್ಗೆ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: Surathkal murder: ಫಾಜಿಲ್ ಕೊಲೆ ಕೇಸ್; ಕಾರ್ ಮಾಲೀಕ ಪೊಲೀಸರ ವಶಕ್ಕೆ; ಸುಳ್ಳು ಸುದ್ದಿ ಹಬ್ಬಿಸಬೇಡಿ; ಕಮಿಷನರ್ ಮನವಿ

ಎಷ್ಟು ಹಣ ಕೊಟ್ಟಿದ್ದಾರೆ? ಯಾರು ತಗೊಂಡು ಹೋಗಿದ್ದಾರೆ ಅನ್ನೊ ಮಾಹಿತಿ ಕಲೆ ಹಾಕಲಾಗಿದೆ. ಆರೋಪಿಗಳಲ್ಲಿ ಓರ್ವ ಆರೋಪಿ ಈತನ ಜೊತೆ ನೇರ ಸಂಪರ್ಕದಲ್ಲಿದ್ದಾನೆ. ಈತ ಹೆಚ್ಚು ಹಣಕ್ಕೆ ಕಾರ್ ಬಾಡಿಗೆಗೆ ಕೊಟ್ಟಿದ್ದಾನೆ ಅನ್ನೋ ಮಾಹಿತಿ ಇದೆ. ಈ ಪ್ರಕರಣದಲ್ಲಿ ಈತ ಇಷ್ಟ ಬಂದಂತೆ ಮಾತನಾಡುತ್ತಿದ್ದಾನೆ. ಹಂತಕರನ್ನ ವಿಚಾರಣೆ ನಡೆಸಿದ ನಂತರ ಕಂಪ್ಲೀಟ್ ಮಾಹಿತಿ ಸಿಗಲಿದೆ ಎಂದರು.

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕರಿ ಹೇಳಿಕೆ

ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನಾಕಾರಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶಶಿಕುಮಾರ್,  ದೊಡ್ಡಮಟ್ಟದ ಕೋಮು ಗಲಭೆಯಾಗಲಿದೆ ಎಂದು ಗುಪ್ತಚರ ಇಲಾಖೆ ಸ್ಪಷ್ಟ ಪಡಿಸಿದೆ ಅಂತಾ ವೈರಲ್ ಮಾಡಿದ್ದಾರೆ. ಇದರ ವಿರುದ್ಧ ಒಟ್ಟು ಮಂಗಳೂರಿನಲ್ಲಿ 5 ಪ್ರಕರಣಗಳು ದಾಖಲಾಗಿದೆ.

ಕಿಡಿಗೇಡಿಗಳಿಗೆ ಎಚ್ಚರಿಕೆ ಸಂದೇಶ

ಸಾಮಾಜಿಕ ಜಾಲತಾಣಗಳಲ್ಲಿ  ಗುಂಪಿನಲ್ಲಿ ಗೋವಿಂದ ಅನ್ನೊ ಕೆಲಸ ಮಾಡ್ತಿದ್ದಾರೆ. ನಮಗೆ ಐಡೆಂಟಿಟಿ ಗೊತ್ತಾಗಲ್ಲ ಅಂತೆಲ್ಲ ಅಂದುಕೊಳ್ತಾರೆ. ಮಂಗಳೂರಿನಲ್ಲಿ‌ ನಮ್ಮ ಎಂಟು ತಂಡ ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಲು ಇಷ್ಟಪಡುತ್ತೇನೆ ಎಂದು ಎಚ್ಚರಿಕೆ ಸಂದೇಶ ರವಾನಿಸಿರು.

ಯಾರ್ಯಾರು ಪೋಸ್ಟ್ ಮಾಡ್ತಿದ್ದಾರೆ ಅಂತವರ ವಿರುದ್ಧ ಹದ್ದಿನ ಕಣ್ಣಿಟ್ಟಿದ್ದಾರೆ/ ಪೋಸ್ಟ್  ಮಾಡೋದು ಶೇರ್ ಹಾಗೂ ಕಮೆಂಟ್ ಮಾಡುವವರ ಮೇಲೆ ನಿಗಾವಹಿಸಲಾಗಿದೆ. ಈ ರೀತಿ ಕೃತ್ಯ ಮಾಡುವಂತವರಿಗೆ ಮುಂದಿನ ದಿನಗಳಲ್ಲಿ ಕೋರ್ಟ್ ಗೆ ಅಲೆಯುವ ದಿನಗಳು ಬರತ್ತೆ ಎಂದು ಬಹಳ ಸ್ಪಷ್ಟವಾಗಿ ಹೇಳ್ತೀನಿ ಅಂತ ವಾರ್ನ್ ಮಾಡಿದರು.

ಇವತ್ತೆ ಎಚ್ಚೆತ್ತುಕೊಳ್ಳೋದು ಒಳ್ಳೆಯದು. ಯಾರು ಸಾಮಾಜಿಕ ಜಾಲತಾಣಗಳಲ್ಲಿ ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ತನಿಖಾಧಿಕಾರಿಯಾಗಿ ಎಸಿಪಿ ಮಹೇಶ್ ಕುಮಾರ್ ನೇಮಕ

ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಮಾಡಿಸಲು ಫಾಜಿಲ್ ಪೋಷಕರಿ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆ ಪ್ರಕರಣದ ತನಿಖಾಧಿಕಾರಿಯಾಗಿ ಮಂಗಳೂರು ಉತ್ತರ ವಿಭಾಗ ಎಸಿಪಿ ಮಹೇಶ್ ಕುಮಾರ್ ಅವರನ್ನು ನೇಮಕ ಮಾಡಿ ಎನ್ ಶಶಿಕುಮಾರ್ ಆದೇಶ ಮಾಡಿದ್ದಾರೆ.

ಕೇರಳ-ಕರ್ನಾಟಕ ಗಡಿಯಲ್ಲಿ ಭದ್ರತೆ

ಕರವಾಳಿಯಲ್ಲಿ ನಡೆದಿರುವ ಕೊಲೆಗಳಿಗೆ ಕೇರಳ ಲಿಂಕ್ ಹಿನ್ನೆಲೆ ದಕ್ಷಿಣ ಕನ್ನಡ ಗಡಿ ಭಾಗದಲ್ಲಿ ತಪಾಸಣೆ ಹೆಚ್ಚಳ ಮಾಡಲಾಗಿದೆ. ದ.ಕ ಮತ್ತು ಕೇರಳ ಗಡಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.  ತಲಪಾಡಿ, ಉಳ್ಳಾಲ, ವಿಟ್ಲ, ಈಶ್ಚರಮಂಗಲ, ಸುಳ್ಯ, ಪಾಣಾಜೆ ಗಡಿಭಾಗದಲ್ಲಿ ತಪಾಸಣೆ ಹೆಚ್ಚಳ ಮಾಡಲಾಗಿದೆ.

ಇದನ್ನೂ ಓದಿ:  Murder Case: ಚಿಕನ್​ ಅಂಗಡಿ ತೆರೆದಿದ್ದೇ ಕೊಲೆಗೆ ಕಾರಣವಾಯ್ತಾ? ಪ್ರವೀಣ್​ ಸಹೋದರನ ಸ್ಫೋಟಕ ಹೇಳಿಕೆ

ಪ್ರತಿ ವಾಹನ ಸವಾರರನ್ನು ತಡೆಯುತ್ತಿರುವ ಪೊಲೀಸರು ಪರಿಶೀಲಿನೆ ಗಡಿ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಗಳಲ್ಲಿ ಸಿಸಿಟಿವಿ ಅಳವಡಿಸಲಾಗುತ್ತಿದೆ.
Published by:Mahmadrafik K
First published: