ನನಗೆ ಸಚಿವ ಸ್ಥಾನ ಸಿಗದಂತೆ ನಮ್ಮ ಪಕ್ಷದವರೇ ಗೇಮ್ ಆಡಿದ್ದಾರೆ; ಸುರಪುರ ಶಾಸಕ ರಾಜುಗೌಡ ಆರೋಪ!

ನನಗೆ ಈ ಹಿಂದೆ ಸಚಿವನಾಗಿ ಕೆಲಸ ಮಾಡಿದ ಅನುಭವ ಇದೆ. ಹೀಗಾಗಿ ಪಕ್ಷದಿಂದಲೂ ಸಂಘದಿಂದಲೂ ನನಗೆ ಸಚಿವ ಸ್ಥಾನದ ಭರವಸೆ ಸಿಕ್ಕಿತ್ತು. ಆದರೆ, ಕೊನೆ ಕ್ಷಣದಲ್ಲಿ ನಾನು ನೋ ಬಾಲ್​ಗೆ ರನೌಟ್ ಆಗಿದ್ದೇನೆ. ನಾನೊಬ್ಬ ಕ್ರೀಡಾಪಟು ಹೀಗಾಗಿ ಸೋಲು ಗೆಲುವು ನನಗೆ ಹೊಸತಲ್ಲ. ಆದರೆ, ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಕನಿಷ್ಠ 3 ರಿಂದ 4 ಸಚಿವ ಸ್ಥಾನ ನೀಡಲಿ, ಈ ಭಾಗದ ಅಭಿವೃದ್ಧಿಯ ಕಡೆಗೆ ಸರ್ಕಾರ ಗಮನ ಹರಿಸಲಿ ಎಂದು ರಾಜುಗೌಡ ಮನವಿ ಮಾಡಿದ್ದಾರೆ.

MAshok Kumar | news18
Updated:August 21, 2019, 11:15 AM IST
ನನಗೆ ಸಚಿವ ಸ್ಥಾನ ಸಿಗದಂತೆ ನಮ್ಮ ಪಕ್ಷದವರೇ ಗೇಮ್ ಆಡಿದ್ದಾರೆ; ಸುರಪುರ ಶಾಸಕ ರಾಜುಗೌಡ ಆರೋಪ!
ಶಾಸಕ ಜಿ. ರಾಜುಗೌಡ
  • News18
  • Last Updated: August 21, 2019, 11:15 AM IST
  • Share this:
ಬೆಂಗಳೂರು (ಆಗಸ್ಟ್.21); ನಾನು ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದೆ, ನನಗೆ ಸಚಿವ ಸ್ಥಾನ ನೀಡಬೇಕು ಎಂದು ಸಿಎಂ ಯಡಿಯೂರಪ್ಪ ಸಹ ಪ್ರಯತ್ನಿಸಿದ್ದರು. ಆದರೆ, ನಮ್ಮ ಪಕ್ಷದವರೇ ನನಗೆ ಸಚಿವ ಸ್ಥಾನ ಸಿಗದಂತೆ ಗೇಮ್ ಆಡಿದ್ದಾರೆ ಎಂದು ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದ ಶಾಸಕ ರಾಜು ಗೌಡ ಆರೋಪಿಸಿದ್ದಾರೆ.

ತನಗೆ ಸಚಿವ ಸ್ಥಾನ ಕೈತಪ್ಪಿದ್ದರ ಕುರಿತು ಇಂದು ಪತ್ರಕರ್ತರ ಜೊತೆ ಮಾತನಾಡಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ ರಾಜುಗೌಡ, “ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ 16 ಜನ ಶಾಸಕರು ಬಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಈ ಶಾಸಕರ ಪೈಕಿ ಕನಿಷ್ಠ 3 ಜನಕ್ಕಾದರೂ ಸಚಿವ ಸ್ಥಾನ ನೀಡಬೇಕಾಗಿತ್ತು. ಆದರೆ, ನಮ್ಮ ಯಾದಗಿರಿ ಜಿಲ್ಲೆಗಾಗಲಿ ಅಥವಾ ರಾಯಚೂರು ಜಿಲ್ಲೆಗಾಗಲಿ ಒಂದೇ ಒಂದು ಸಚಿವ ಸ್ಥಾನವನ್ನೂ ನೀಡಲಿಲ್ಲ. ನನಗೆ ಸಚಿವ ಸ್ಥಾನ ನೀಡಲು ಸಿಎಂ ಯಡಿಯೂರಪ್ಪ ಸಹ ಮನಸ್ಸು ಮಾಡಿದ್ದರು. ಆದರೆ, ಕೊನೆಗಳಿಗೆಯಲ್ಲಿ ಸ್ಥಾನ ಕೈತಪ್ಪಿದೆ. ನಮ್ಮವರೇ ನನಗೆ ಸ್ಥಾನ ಸಿಗದಂತೆ ಮಾಡಿದ್ದಾರೆ” ಎಂದು ಅಸಮಾಧನವನ್ನು ಹೊರಹಾಕಿದ್ದಾರೆ

“ನನಗೆ ಈ ಹಿಂದೆ ಸಚಿವನಾಗಿ ಕೆಲಸ ಮಾಡಿದ ಅನುಭವ ಇದೆ. ಹೀಗಾಗಿ ಪಕ್ಷದಿಂದಲೂ ಸಂಘದಿಂದಲೂ ನನಗೆ ಸಚಿವ ಸ್ಥಾನದ ಭರವಸೆ ಸಿಕ್ಕಿತ್ತು. ಆದರೆ, ಕೊನೆ ಕ್ಷಣದಲ್ಲಿ ನಾನು ನೋ ಬಾಲ್​ಗೆ ರನೌಟ್ ಆಗಿದ್ದೇನೆ. ನಾನೊಬ್ಬ ಕ್ರೀಡಾಪಟು ಹೀಗಾಗಿ ಸೋಲು ಗೆಲುವು ನನಗೆ ಹೊಸತಲ್ಲ. ಆದರೆ, ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಕನಿಷ್ಠ 3 ರಿಂದ 4 ಸಚಿವ ಸ್ಥಾನ ನೀಡಲಿ, ಈ ಭಾಗದ ಅಭಿವೃದ್ಧಿಯ ಕಡೆಗೆ ಸರ್ಕಾರ ಗಮನ ಹರಿಸಲಿ ಎಂಬುದಷ್ಟೆ ನನ್ನ ಕೋರಿಕೆ” ಎಂದು ಅವರು ಪಕ್ಷದ ಮುಖಂಡರ ಎದುರು ಮನವಿಯನ್ನು ಇಟ್ಟಿದ್ದಾರೆ.

ಇದನ್ನೂ ಓದಿ : ಆನಂದ್​​ ಸಿಂಗ್ ವಿರುದ್ಧ ಸೂರ್ಯನಾರಾಯಣ ರೆಡ್ಡಿ ಕಣಕ್ಕೆ?; ಸಿದ್ದರಾಮಯ್ಯ ಮಾಸ್ಟರ್​​​ ಪ್ಲಾನ್​​

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

First published:August 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading