• Home
  • »
  • News
  • »
  • state
  • »
  • Hijab Verdict: ಹಿಜಾಬ್ ತೀರ್ಪು, ಬಿ ಸಿ ನಾಗೇಶ್, ಚಕ್ರವರ್ತಿ ಸೂಲಿಬೆಲೆ, ಮುತಾಲಿಕ್ ಹೇಳಿದ್ದೇನು?

Hijab Verdict: ಹಿಜಾಬ್ ತೀರ್ಪು, ಬಿ ಸಿ ನಾಗೇಶ್, ಚಕ್ರವರ್ತಿ ಸೂಲಿಬೆಲೆ, ಮುತಾಲಿಕ್ ಹೇಳಿದ್ದೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈಗಾಗಲೇ ಜಾರಿಯಾಗಿರುವ ನಿಯಮಗಳೇ ರಾಜ್ಯದ ಶಾಲಾ ಕಾಲೇಜುಗಳಲ್ಲಿ ಮುಂದುವರಿಯಲಿದೆ. ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶ ಇರಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

  • Share this:

ಇಡೀ ಜಗತ್ತು ಹಿಜಾಬ್ ಪ್ರಕರಣದ (Hijab Row) ಬಗ್ಗೆ ಸುಪ್ರೀಂಕೋರ್ಟ್ (Supreme Court)​ ನೀಡುವ ತೀರ್ಪಿನ ಕುರಿತು ಕಾಯುತ್ತಿತ್ತು. ದ್ವಿಸದಸ್ಯ ಪೀಠ ಭಿನ್ನ ತೀರ್ಪು ನೀಡಿದ್ದು, ಪ್ರಕರಣ ಸಿಜೆಐ ಅವರ ಅಂಗಳದಲ್ಲಿದೆ. ಈ ಬಗ್ಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (Minister BC Nagesh) ಸೇರಿದಂತೆ ಹಲವು ನಾಯಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇರೋ ನಾವು ಸುಪ್ರೀಂಕೋರ್ಟ್​ ನೀಡಿದ ತೀರ್ಪನ್ನು ಗೌರವಿಸುತ್ತವೆ. ದ್ವಿಸದಸ್ಯ ಪೀಠದಿಂದ ಭಿನ್ನ ತೀರ್ಪು ಬಂದಿರುವ ಕಾರಣ ಕರ್ನಾಟಕ ಹೈಕೋರ್ಟ್ (Karnataka Highcourt)​ ನೀಡಿರುವ ತೀರ್ಪು ಯಥಾಸ್ಥಿತಿ ಮುಂದುವರಿಯಲಿದೆ. ಇಡೀ ಪ್ರಪಂಚದಾದ್ಯಂತ ಮಹಿಳೆಯರು ಬುರ್ಕಾ (Burqa), ಹಿಜಾಬ್ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಒಮ್ಮತ ತೀರ್ಪು ಬರುವ ನಿರೀಕ್ಷೆಯಲ್ಲಿತ್ತು. ಮುಂದೆ ಯಾವ ಪೀಠಕ್ಕೆ ವರ್ಗಾವಣೆ ಆಗುತ್ತೆ ಅನ್ನೋದನ್ನ ನೋಡೋಣ. ಈಗಾಗಲೇ ಜಾರಿಯಾಗಿರುವ ನಿಯಮಗಳೇ ರಾಜ್ಯದ ಶಾಲಾ ಕಾಲೇಜುಗಳಲ್ಲಿ ಮುಂದುವರಿಯಲಿದೆ. ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶ ಇರಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.


ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanendra), ಸುಪ್ರೀಂ ತೀರ್ಪು ಹಿನ್ನೆಲೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನ್ಯಾಯಮೂರ್ತಿಗಳು ಭಿನ್ನ ತೀರ್ಪು ಬಂದಿದೆ. ಆದ್ದರಿಂದ ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗಾವಣೆ ಆಗಿದೆ. ವಿಸ್ತೃತ ಪೀಠದ ತೀರ್ಪು ಬರೋವರೆಗೂ ಸದ್ಯ ಇರೋ ನಿಯಮಗಳು ಜಾರಿಯಲ್ಲಿರವೆ ಎಂದು ಹೇಳಿದರು.


ವಿಸ್ತೃತ ಪೀಠದಲ್ಲಿ ಚರ್ಚೆಗಳು ನಡೆಯಲಿವೆ


ಹಿಜಾಬ್ ವಿವಾದ ಕುರಿತು ಮಾತನಾಡಿರುವ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್,  ಮುಸ್ಲಿಂ ರಾಷ್ಟ್ರಗಳಲ್ಲಿಯೇ ಹಿಜಾಬ್, ಬುರ್ಕಾ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಆದ್ದರಿಂದ ಈ ಬಗ್ಗೆ ಸಾಂವಿಧಾನಿಕ ಅಂಶಗಳನ್ನು ಒಳಗೊಂಡಿರುವ ಈ  ಪ್ರಕರಣದ ಬಗ್ಗೆ ಚರ್ಚೆ ನಡೆಯಬೇಕಿದೆ. ಮುಂದೆ ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದರು.


ಇದನ್ನೂ ಓದಿ:  Explained: ಹೆಣ್ಣುಮಕ್ಕಳಿಗೆ ಕಲಿಯಲು ಕಂಟಕವಾಗುವ ಋತುಚಕ್ರ! ಮುಟ್ಟಿನ ಸಮಸ್ಯೆಗೆ ಕೊನೆ ಎಂದು?


ಒಂದೇ ಸಂವಿಧಾನ, ನ್ಯಾಯಮೂರ್ತಿಗಳ ಮುಂದೆ ಏಕಕಾಲದಲ್ಲಿ ವಾದ ಮಾಡಲಾಗಿದೆ. ಆದ್ರೆ ಇಷ್ಟು ವ್ಯತಿರಿಕ್ತವಾಗಿ ತೀರ್ಪು ಬರುತ್ತೆ ಅಂತ ನಿರೀಕ್ಷೆ ಮಾಡಿರಲಿಲ್ಲ ಎಂದು ಸಾಮಾಜಿಕ ಹೋರಾಟಗಾರ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.


ಸಂವಿಧಾನ ಪೀಠಕ್ಕೆ ವರ್ಗಾವಣೆ ಸಾಧ್ಯತೆ ಕಡಿಮೆ


ಸಾಮಾನ್ಯವಾಗಿ ಇಬ್ಬರು ನ್ಯಾಯಮೂರ್ತಿಗಳು ಭಿನ್ನ ತೀರ್ಪು ಕೊಟ್ಟಾಗ ಮುಖ್ಯನ್ಯಾಯಮೂರ್ತಿಗಳು ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ ಮಾಡ್ತಾರೆ. ಈ ತ್ರಿಸದಸ್ಯ ಪೀಠದ ಮುಂದೆ ಮತ್ತೊಮ್ಮೆ ವಾದ-ಪ್ರತಿವಾದಗಳು ನಡೆಯಬೇಕು. ಆದ್ದರಿಂದ ಸಂವಿಧಾನ ಪೀಠಕ್ಕೆ ವರ್ಗಾವಣೆ ಮಾಡೋದು ತೀರ ವಿರಳ ಎಂದು ಕಾನೂನು ತಜ್ಞ ಬಿ.ವಿ.ಆಚಾರ್ಯ ಅಭಿಪ್ರಾಯ ವ್ಯಕ್ತಪಡಿಸಿದರು.


ಹಿಜಾಬ್ ಬಗ್ಗೆ ನ್ಯಾಯಾಧೀಶರು ಹೇಳಿದ್ದೇನು?


ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ ಅರ್ಜಿಯನ್ನು ವಜಾ ಮಾಡಿದ್ದಾರೆ. ನ್ಯಾಯಮೂರ್ತಿ ಸುಧಾಂಶ ಧುಲಿಯಾ ಅವರು ಕರ್ನಾಟಕ ಹೈಕೋರ್ಟ್​ ನೀಡಿದ ತೀರ್ಪನ್ನು ರದ್ದುಗೊಳಿಸಿದ್ದಾರೆ. ಹಿಜಾಬ್ ವಿವಾದ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆಗೊಳಿಸಲಾಗಿದೆ.


ಇದನ್ನೂ ಓದಿ:  Hijab Verdict: ನ್ಯಾಯಮೂರ್ತಿಗಳಿಂದ ವಿಭಿನ್ನ ತೀರ್ಪು, ಹಿಜಾಬ್ ವಿವಾದ ವಿಸ್ತೃತ ಪೀಠಕ್ಕೆ ವರ್ಗಾವಣೆ


ಸಮ್ಮತ ತೀರ್ಪು ಬರದ ಹಿನ್ನೆಲೆ ಕರ್ನಾಟಕ ಹೈಕೋರ್ಟ್​ ತೀರ್ಪು ಯಥಾಸ್ಥಿತಿ ಇರಲಿದೆ.  ಕರ್ನಾಟಕದ ಶಾಲಾ ಕಾಲೇಜುಗಳಲ್ಲಿ ಕೆಲವು ಮುಸ್ಲಿಂ ಮಹಿಳೆಯರು (Women) ಧರಿಸುವ ಹಿಜಾಬ್​​ಗೆ ನಿಷೇಧ (Hijab Ban) ಹೇರಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ತೀರ್ಪನ್ನು ಸುಪ್ರೀಂಕೋರ್ಟ್‌ನ (Supreme court) ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ (Justices Hemant Gupta and Sudhanshu Dhulia) ದ್ವಿ ಸದಸ್ಯ ಪೀಠ ಪ್ರಕಟಿಸಿದೆ.

Published by:Mahmadrafik K
First published: