HOME » NEWS » State » SUPREME COURT SENDS NOTICE TO GOVERNMENT ON BIDAR SCHOOL STUDENTS SEDITION CASE SNVS

ಬೀದರ್ ಶಾಲಾ ಮಕ್ಕಳ ವಿರುದ್ಧ ದೇಶದ್ರೋಹ ಪ್ರಕರಣ: ವಿಚಾರಣೆಗೆ ತಡೆ ಕೋರಿ ಪಿಐಎಲ್ – ಸರ್ಕಾರಕ್ಕೆ ಸುಪ್ರೀಂ ನೋಟೀಸ್

ಸಿಎಎ ಮತ್ತು ಎನ್​ಆರ್​ಸಿ ವಿರುದ್ಧ ದೇಶವ್ಯಾಪಿ ಹೋರಾಟಗಳು ಮತ್ತು ಪ್ರತಿಭಟನೆಗಳು ನಡೆಯುತ್ತಿರುವಂತೆಯೇ ಜನವರಿ 21ರಂದು ಬೀದರ್​ನ ಶಾಹೀನ್ ಶಾಲೆಯಲ್ಲಿ ಮಕ್ಕಳಿಂದ ನಾಟಕ ಪ್ರದರ್ಶನ ನಡೆದಿತ್ತು. ಅದರಲ್ಲಿ ಸಿಎಎ ಮತ್ತು ಎನ್​ಆರ್​ಸಿ ವಿರುದ್ಧ ಡೈಲಾಗ್​ಗಳನ್ನ ಮಕ್ಕಳಿಂದ ಹೇಳಿಸಲಾಗಿತ್ತು.

news18
Updated:February 14, 2020, 1:28 PM IST
ಬೀದರ್ ಶಾಲಾ ಮಕ್ಕಳ ವಿರುದ್ಧ ದೇಶದ್ರೋಹ ಪ್ರಕರಣ: ವಿಚಾರಣೆಗೆ ತಡೆ ಕೋರಿ ಪಿಐಎಲ್ – ಸರ್ಕಾರಕ್ಕೆ ಸುಪ್ರೀಂ ನೋಟೀಸ್
ಸಾಂದರ್ಭಿಕ ಚಿತ್ರ
  • News18
  • Last Updated: February 14, 2020, 1:28 PM IST
  • Share this:
ನವದೆಹಲಿ(ಫೆ. 14): ಕಳೆದ ತಿಂಗಳು ಬೀದರ್​ನ ಶಾಲೆಯೊಂದರಲ್ಲಿ ಸಿಎಎ, ಎನ್​ಆರ್​ಸಿ ವಿರುದ್ಧ ಜನಜಾಗೃತಿ ಮೂಡಿಸುವ ನಾಟಕವಾಡಿದ್ದ ಮಕ್ಕಳ ಮೇಲೆ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿರುವುದು ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಮಕ್ಕಳ ವಿಚಾರಣೆ ನಡೆಸದಂತೆ ತಡೆ ಕೋರಿ ಸುಪ್ರೀಂ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ನೋಟೀಸ್ ನೀಡಿದೆ. ಫೆ. 19ರೊಳಗೆ ಉತ್ತರ ನೀಡುವಂತೆ ಸರ್ಕಾರಿ ಪರ ವಕೀಲರಿಗೆ ಮುಖ್ಯನ್ಯಾಯಮೂರ್ತಿಗಳು ಸೂಚನೆ ನೀಡಿದ್ದಾರೆ.

ಏನಿದು ಪ್ರಕರಣ?

ಸಿಎಎ ಮತ್ತು ಎನ್​ಆರ್​ಸಿ ವಿರುದ್ಧ ದೇಶವ್ಯಾಪಿ ಹೋರಾಟಗಳು ಮತ್ತು ಪ್ರತಿಭಟನೆಗಳು ನಡೆಯುತ್ತಿರುವಂತೆಯೇ ಜನವರಿ 21ರಂದು ಬೀದರ್​ನ ಶಾಹೀನ್ ಶಾಲೆಯಲ್ಲಿ ಮಕ್ಕಳಿಂದ ನಾಟಕ ಪ್ರದರ್ಶನ ನಡೆದಿತ್ತು. ಅದರಲ್ಲಿ ಸಿಎಎ ಮತ್ತು ಎನ್​ಆರ್​ಸಿ ವಿರುದ್ಧ ಡೈಲಾಗ್​ಗಳನ್ನ ಮಕ್ಕಳಿಂದ ಹೇಳಿಸಲಾಗಿತ್ತು. ಮಕ್ಕಳ ಪೋಷಕರೊಬ್ಬರು ಈ ನಾಟಕವನ್ನು ಸೋಷಿಯಲ್ ಮೀಡಿಯಾದಲ್ಲಿ ಲೈವ್ ಸ್ಟ್ರೀಮ್ ಪ್ರಸಾರ ಮಾಡಿದ್ದರು. ಐದು ದಿನಗಳ ನಂತರ ಎಬಿವಿಪಿ ಕಾರ್ಯಕರ್ತ ನೀಲೇಶ್ ರಕ್ಷಲಾ ಎಂಬುವವರು ಪೊಲೀಸ್ ಠಾಣೆಯಲ್ಲಿ ದೇಶದ್ರೋಹದ ದೂರು ದಾಖಲಿಸಿದರು.

ಇದನ್ನೂ ಓದಿ: ವೀರಪ್ಪನ್ ವಿರುದ್ಧ ಹೋರಾಡಿ ಮಡಿದ ಪೊಲೀಸರನ್ನು ನೆನಪಿಸುತ್ತಿದೆ ಈ ಶಿಥಿಲ ಕಟ್ಟಡ; ಸ್ಮಾರಕ ನಿರ್ಮಾಣಕ್ಕೆ ಸಚಿವರ ಮನಸು

ಈ ದೂರಿನ ಮೇರೆಗೆ ಕಾರ್ಯಾಚರಣೆ ಮಾಡಿದ ಪೊಲೀಸರು ಶಾಹೀನ್ ಶಾಲೆಯ ಮುಖ್ಯ ಶಿಕ್ಷಕಿ ಫರೀದಾ ಬೇಗಮ್ ಮತ್ತು ವಿದ್ಯಾರ್ಥಿಯ ತಾಯಿ ನಜಬುನ್ನೀಸಾ ಎಂಬಿಬ್ಬರನ್ನು ಬಂಧಿಸಿದರು. ಸಮಾದಲ್ಲಿ ಹಿಂಸೆ ನಡೆಸಲು ಮತ್ತು ನರೇಂದ್ರ ಮೋದಿ ವಿರುದ್ಧ ಧ್ವೇಷ ಸಾಧಿಸಲು ಮಕ್ಕಳಿಗೆ ಪ್ರಚೋದನೆ ಕೊಡಲಾಯಿತು ಎಂದು ಪೊಲೀಸರು ಆರೋಪ ಮಾಡಿ ಪ್ರಕರಣ ದಾಖಲಿಸಿದ್ಧಾರೆ. ಈ ಇಬ್ಬರು ವ್ಯಕ್ತಿಗಳು ಈಗಲೂ ಬಂಧನದಲ್ಲಿದ್ದಾರೆ. ಬೀದರ್​ನ ಸ್ಥಳೀಯ ನ್ಯಾಯಾಲಯದಲ್ಲೂ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಪೊಲೀಸರು ಪ್ರತೀ ದಿನವೂ ಶಾಲೆಗೆ ಬಂದು ವಿಚಾರಣೆಯ ಹೆಸರಿನಲ್ಲಿ ಮಕ್ಕಳಿಗೆ ಹಿಂಸೆ ನೀಡುತ್ತಿದ್ದಾರೆ. ಮಕ್ಕಳು ಮಾನಸಿಕವಾಗಿ ನೊಂದು ಹೋಗಿದ್ದಾರೆ ಎಂದು ಶಾಹೀನ್ ಶಾಲೆಯ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ಪೋಷಕರು ಅಲವತ್ತುಕೊಂಡಿದ್ಧಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: February 14, 2020, 1:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories