Tax Evasion Case: ಡಿಕೆ ಶಿವಕುಮಾರ್​ಗೆ ಮತ್ತೆ ಸಂಕಷ್ಟ; ಸುಪ್ರೀಂಕೋರ್ಟ್​ನಿಂದ ನೋಟಿಸ್​

ಡಿಕೆ ಶಿವಕುಮಾರ್​ಗೆ ಸುಪ್ರೀಂಕೋರ್ಟ್​ ನೋಟಿಸ್​ ನೀಡಿದ್ದು, 6 ವಾರಗಳಲ್ಲಿ ನೋಟಿಸ್​ಗೆ ಉತ್ತರ ನೀಡುವಂತೆಯೂ ಹಾಗೂ 4 ವಾರಗಳಲ್ಲಿ ಕೌಂಟರ್ ಸಲ್ಲಿಸಲು ಸೂಚನೆ ನೀಡಿದೆ. ಆ ಬಳಿಕ 2 ವಾರಗಳಲ್ಲಿ ಮರುಜೋಡಣೆ ಮಾಡಲು ನ್ಯಾಯಪೀಠ ಆದೇಶಿಸಿದೆ.

ಡಿ.ಕೆ. ಶಿವಕುಮಾರ್

ಡಿ.ಕೆ. ಶಿವಕುಮಾರ್

  • Share this:
ನವದೆಹಲಿ (ಸೆ.19): ತೆರಿಗೆ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್​ ನಾಯಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ (D.K Shivakumar) ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಡಿ.ಕೆ. ಶಿವಕುಮಾರ್​ಗೆ ಸುಪ್ರೀಂಕೋರ್ಟ್ (Supreme Court) ನೋಟಿಸ್ ನೀಡಿದ್ರು, ಡಿಕೆಶಿ ವಿರುದ್ಧ ಐಟಿ ತನಿಖೆಗೂ ಸುಪ್ರೀಂ ಅಸ್ತು ಎಂದಿದೆ. ಈ ಸಂಬಂಧ ಕರ್ನಾಟಕ (Karnataka) ಹೈಕೋರ್ಟ್​ ಈ ಹಿಂದೆಯೇ ಅರ್ಜಿ ವಜಾಗೊಳಿಸಿತ್ತು. ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​​​ ನೋಟಿಸ್​ ಜಾರಿ ಮಾಡಿದೆ. ಇದೇ ವೇಳೆ ಹೈಕೋರ್ಟ್​ (High Court) ನೀಡಿದ್ದ ಆದೇಶಕ್ಕೆ ಜಸ್ಟೀಸ್​​ ಸಂಜೀವ್​ ಖನ್ನಾ ಅವರ ನೇತೃತ್ವದ ಪೀಠ ಮಧ್ಯಂತರ ತಡೆ ನೀಡಿದೆ.

2018ರಲ್ಲಿ ಬಿಡದಿ ಈಗಲ್ಟನ್ ರೆಸಾರ್ಟ್​ನಲ್ಲಿ ಹಣ ವರ್ಗಾವಣೆ ದಾಖಲೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ರು. ಬಳಿಕ ಡಿಕೆಶಿ ಐಟಿ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದರು. ಐಟಿ ತನಿಖೆಗೆ ಹೈಕೋರ್ಟ್ ತಡೆ ನೀಡಿತ್ತು, ಇದೀಗ ಸುಪ್ರೀಂಕೋರ್ಟ್​ ಡಿಕೆಶಿ ವಿರುದ್ಧ ಐಟಿ ತನಿಖೆಗೆ ಅಸ್ತು ಎಂದಿದೆ.ED Summons to Dk Shivakumar in money laundering case mrq

6 ವಾರಗಳಲ್ಲಿ ನೋಟಿಸ್​ಗೆ ಉತ್ತರ ನೀಡಲು ಸೂಚನೆ
ಅಷ್ಟೇ ಅಲ್ಲ ಈ ಪ್ರಕರಣದಲ್ಲಿ ಹೊಸದಾಗಿ ಪ್ರಾಸಿಕ್ಯೂಷನ್ ಸಲ್ಲಿಸಲು ಅರ್ಜಿದಾರರಿಗೆ ಸುಪ್ರೀಂಕೋರ್ಟ್​ ಸ್ವಾತಂತ್ರ್ಯ ನೀಡಿದೆ. 6 ವಾರಗಳಲ್ಲಿ ನೋಟಿಸ್​ಗೆ ಉತ್ತರ ನೀಡುವಂತೆಯೂ ಹಾಗೂ 4 ವಾರಗಳಲ್ಲಿ ಕೌಂಟರ್ ಸಲ್ಲಿಸಲು ಸೂಚನೆ ನೀಡಿದೆ. ಆ ಬಳಿಕ 2 ವಾರಗಳಲ್ಲಿ ಮರುಜೋಡಣೆ ಮಾಡಲು ನ್ಯಾಯಪೀಠ ಆದೇಶಿಸಿದೆ. ಕಕ್ಷಿದಾರರ ಪರ ಹಿರಿಯ ವಕೀಲ ಮುಕುಲ್​ ರೋಹ್ಟಗಿ ವಾದ ಮಂಡನೆ ಮಾಡಿದರು.

ಇಡಿ ವಿಚಾರಣೆಗೆ ಹಾಜರಾದ ಡಿಕೆ ಶಿವಕುಮಾರ್​

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜಾರಿ ನಿರ್ದೇಶನಾಲಯದ ವಿಚಾರಣೆಗೆ ಸೋಮವಾರ ಹಾಜರಾದರು. ಶಿವಕುಮಾರ್ ಅವರಿಗೆ ಕಳೆದ ವಾರ ಇ.ಡಿ. ಅಧಿಕಾರಿಗಳು ಸಮನ್ಸ್ ನೀಡಿ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಸೋಮವಾರ 11 ಗಂಟೆ ಸುಮಾರಿಗೆ ಇ.ಡಿ. ಕಚೇರಿಗೆ ಡಿ.ಕೆ.ಶಿವಕುಮಾರ್ ತಲುಪಿದರು. ಯಾವ ವಿಷಯಕ್ಕೆ ಸಂಬಂಧಿಸಿ ಸಮನ್ಸ್ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ವಿಚಾರಣೆ ಮುಗಿದ ಬಳಿಕ ಪ್ರತಿಕ್ರಿಯಿಸುತ್ತೇನೆ ಎಂದು ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ: V Munirathna: 50 ಕೋಟಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ; ಕೆಂಪಣ್ಣ ಸೇರಿ 18 ಜನರಿಗೆ ಮುನಿರತ್ನ ಕೊಟ್ರು ವಾರ್ನಿಂಗ್​!

ಡಿಕೆಶಿ ಮೇಲೆ ತೆರಿಗೆ ವಂಚನೆ ಕೇಸ್​
ಐಟಿ ಅಧಿಕಾರಿಗಳು ಸಲ್ಲಿಸಿರುವ ದೂರಿನ ಅನುಸಾರ 2015-16ರ ಅವಧಿಗೆ 3.14 ಕೋಟಿ ರೂ ತೆರಿಗೆ ವಂಚಿಸಲಾಗಿದೆ. 2016-17ರಲ್ಲಿ ಅಂದಾಜು 2.56 ಕೋಟಿ ರೂ. ಹಾಗೂ 2017-18ರ ಅಂದಾಜು 7.08 ಕೋಟಿ ರೂ. ತೆರಿಗೆ ವಂಚಿಸಲಾಗಿದೆ ಎಂದು ಆರೋಪಿಸಲಾಗಿತ್ತು.

2017ರ ಆಗಸ್ಟ್‌ನಲ್ಲಿ ಡಿ ಕೆ ಶಿವಕುಮಾರ್‌ ಅವರ ಮೇಲೆ ನಡೆದಿದ್ದ ದಾಳಿಗೆ ಸಂಬಂಧಿಸಿದ 3 ಪ್ರಕರಣಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಜಾಗೊಳಿಸಿದ್ದನ್ನು ಪ್ರಶ್ನಿಸಿ ಐಟಿ ಇಲಾಖೆಯು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿತ್ತು.

ಆಕ್ಷೇಪಿತ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಸಕಾರಣಗಳು ನನಗೆ ಕಾಣುತ್ತಿಲ್ಲ. ಪ್ರತಿವಾದಿಯ ವಿರುದ್ಧ ಕಾನೂನಿಗೆ ವಿರುದ್ಧವಾಗಿ ಪ್ರಾಸಿಕ್ಯೂಷನ್‌ ಆರಂಭಿಸಲಾಗಿದ್ದು, ಕ್ರಿಮಿನಲ್‌ ಅಪರಾಧ ಪ್ರಕ್ರಿಯೆ ಸಂಹಿತೆ ಮತ್ತು ಆದಾಯ ತೆರಿಗೆ ಕಾಯಿದೆಯ ನಿಬಂಧನೆಗಳಿಗೆ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಆದೇಶ ಮರುಪರಿಶೀಲನಾ ಮನವಿಗಳು ವಜಾಕ್ಕೆ ಅರ್ಹವಾಗಿರುವುದರಿಂದ ಅವುಗಳನ್ನು ವಜಾಗೊಳಿಸಲಾಗಿದೆ ಎಂದು ಪೀಠ ಹೇಳಿತ್ತು.

ಇದನ್ನೂ ಓದಿ: BC Nagesh: ಶಾಲೆ-ಕಾಲೇಜುಗಳಲ್ಲಿ ಈ ವರ್ಷದಿಂದಲೇ ಭಗವದ್ಗೀತೆ ಬೋಧನೆ

ಆದಾಯ ತೆರಿಗೆ ಕಾಯ್ದೆಯಡಿ ಅಪರಾಧಗಳ ಹೊರತಾಗಿ, ಒಂದೆರಡು ವರ್ಷಗಳ ಹಿಂದೆ ನಡೆದ ಐಟಿ ದಾಳಿಯ ಸಂದರ್ಭದಲ್ಲಿ ಕಾಗದದ ಹಾಳೆಯನ್ನು ಹರಿದು ಹಾಕಿದ ಆರೋಪದ ಮೇಲೆ ಶಿವಕುಮಾರ್‌ಗೆ ಒಂದು ಪ್ರಕರಣದಲ್ಲಿ ಐಪಿಸಿಯ ಸೆಕ್ಷನ್ 201 (ಅಪರಾಧದ ಪುರಾವೆಗಳು ಕಣ್ಮರೆಯಾಗಲು ಕಾರಣವಾಗಿದೆ) ವಿರುದ್ಧ ಆರೋಪಿಸಲಾಯಿತು.
Published by:ಪಾವನ ಎಚ್ ಎಸ್
First published: