ಸುಪ್ರೀಂ ಅಂಗಳದಲ್ಲಿ ಅನರ್ಹ ಶಾಸಕರ ಭವಿಷ್ಯ; ನಾಳೆಗೆ ಅರ್ಜಿ ವಿಚಾರಣೆ ಮುಂದೂಡಿಕೆ

ಈ ಪ್ರಕರಣವನ್ನು ಸಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡುವಂತೆ ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಮನವಿ ಮಾಡಿಕೊಂಡರು. ಮೊದಲು ವಿಚಾರಣೆ ನಡೆಯಲಿ, ಆ ಮೇಲೆ ಅದನ್ನ ತೀರ್ಮಾನ ಮಾಡೋಣ ಎಂದು ನ್ಯಾಯಪೀಠ ತಿಳಿಸಿತು.

news18-kannada
Updated:October 23, 2019, 4:21 PM IST
ಸುಪ್ರೀಂ ಅಂಗಳದಲ್ಲಿ ಅನರ್ಹ ಶಾಸಕರ ಭವಿಷ್ಯ; ನಾಳೆಗೆ ಅರ್ಜಿ ವಿಚಾರಣೆ ಮುಂದೂಡಿಕೆ
ಅನರ್ಹ ಶಾಸಕರು
news18-kannada
Updated: October 23, 2019, 4:21 PM IST
ಬೆಂಗಳೂರು (ಅ. 23): ಸುಪ್ರೀಂ ಕೋರ್ಟ್​ನಲ್ಲಿ ಅನರ್ಹ ಶಾಸಕರ ಪ್ರಕರಣ ಇವತ್ತೂ ಇತ್ಯರ್ಥವಾಗಲಿಲ್ಲ. ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್​-ಜೆಡಿಎಸ್​ ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರ ಪತನವಾಗಲು ಕಾರಣರಾಗಿದ್ದ 17 ಅನರ್ಹ ಶಾಸಕರ ಪ್ರಕರಣದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್​ ನಾಳೆಗೆ ಮುಂದೂಡಿದೆ.  

ನಿನ್ನೆ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ಆರಂಭವಾದಾಗ ಕಾಂಗ್ರೆಸ್​​ ಪರ ವಕೀಲ ಕಪಿಲ್ ಚುನಾವಣೆ ನೀತಿ ಸಂಹಿತೆಯ ಕುರಿತು ಹೈಕೋರ್ಟ್​ನಲ್ಲಿ ವಿಚಾರಣೆ ಬಾಕಿಯಿದೆ. ಹೀಗಾಗಿ, ವಿಚಾರಣೆ ಮುಂದೂಡಬೇಕೆಂದು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಸಿಬಲ್ ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ್ದರು.

ಇದೀಗ ಸುಪ್ರೀಂಕೋರ್ಟ್​ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ಆರಂಭವಾಗಿದೆ. ಮೊದಲಿಗೆ ಆರ್​. ಶಂಕರ್ ಪರ ವಕೀಲರಿಂದ ಮನವಿ ಸಲ್ಲಿಸಲಾಯಿತು.  ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಇನ್ನೂ ನ್ಯಾಯಾಲಯಕ್ಕೆ ಬಂದಿರದ ಕಾರಣ ರೋಹ್ಟಗಿ ಎಲ್ಲಿ? ಎಂದು ಜಡ್ಜ್ ಪ್ರಶ್ನೆ ಮಾಡಿದರು. 'ಬೇಗ ಬೇಗ ವಾದ ಮುಗಿಸಿ. ಮುಕುಲ್ ರೋಹ್ಟಗಿ,  ಕಪಿಲ್ ಸಿಬಲ್ ಕೂಡ ಬಂದಿಲ್ಲ. ಅನರ್ಹ ಶಾಸಕರ ವಾದ ಇಂದೇ ಮುಗಿಸಿ' ಎಂದು ಹೇಳಿದ ನ್ಯಾಯಮೂರ್ತಿಗಳು ಮಧ್ಯಾಹ್ನ 2ಕ್ಕೆ ವಿಚಾರಣೆ ಮುಂದೂಡಿದರು.

ವಿಚಾರಣೆ ವೇಳೆ ಕಪಿಲ್ ಸಿಬಲ್ ಇರಲಿ ಎಂದು ಜೆಡಿಎಸ್ ಪರ ವಕೀಲ ರಾಜೀವ್ ಧವನ್ ಮನವಿ ಮಾಡಿದರು. ನಮ್ಮ ವಾದಕ್ಕೂ ಅವಕಾಶ ಕೊಡಿ ಎಂದು ಧವನ್ ಕೇಳಿದಾಗ 'ನಿಮ್ಮ ಪರ‌ ಸಿಬಲ್ ವಾದಿಸುತ್ತಿದ್ದಾರಲ್ಲ' ಎಂದು ನ್ಯಾಯಮೂರ್ತಿಗಳು ಮರು ಪ್ರಶ್ನೆ ಹಾಕಿದರು. ನಾವು ಇನ್ನೂ ಹೆಚ್ಚಿನ ಮಾಹಿತಿ ನೀಡಬೇಕಿದೆ. ನಮ್ಮ ವಾದವನ್ನೂ ಕೇಳಿ ಎಂದ ಆರ್. ಶಂಕರ್ ಪರ ವಕೀಲ ಸುಂದರ್ ಮನವಿ ಮಾಡಿದರು. ಅನರ್ಹ ಶಾಸಕರ ಪರವಾಗಿ ಎಲ್ಲ ವಕೀಲರೂ ಒಟ್ಟಾಗಿ ವಾದಿಸಿ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಸಂವಿಧಾನಕ ಪೀಠದಿಂದ ವಿಚಾರಣೆ ನಡೆಯಲಿ: ಸಿಬಲ್ ಮನವಿ

ಮಧ್ಯಾಹ್ನದ ನಂತರ ಪ್ರಕರಣದ ವಿಚಾರಣೆ ಮುಂದುವರಿಯಿತು. ಈ ವೇಳೆ, ಅನರ್ಹ ಶಾಸಕರ ವಿರುದ್ಧವಾಗಿ ವಾದ ಮಂಡನೆ ಮಾಡಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಈ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಿ. ಈಗ ವಿಚಾರಣೆ ಮುಂದೂಡಿ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಮೊದಲು ವಾದ ಮಂಡನೆಯಾಗಲಿ, ಆಮೇಲೆ ನೋಡೋಣ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಅನರ್ಹ ಕಾಂಗ್ರೆಸ್ ಶಾಸಕರ ಪರ ವಕಾಲತು ವಹಿಸಿರುವ ಮುಕುಲ್ ರೋಹಟಗಿ, ಶಾಸಕರು ಯಾರೂ ಕೂಡ ಬಲವಂತವಾಗಿ ರಾಜೀನಾಮೆ ನೀಡಿಲ್ಲ ಎಂದು ಒತ್ತಿ ಹೇಳಿದರು.
Loading...

ಅಧಿವೇಶನಕ್ಕೆ ಹಾಜರಾಗುವಂತೆ ಶಾಸಕರಿಗೆ ಬಲವಂತ ಮಾಡುವ ಹಾಗಿಲ್ಲ. ಅಧಿವೇಶನಕ್ಕೆ ಹಾಜರಾಗಲು ಕನಿಷ್ಠ 7 ದಿನ ಕಾಲಾವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿತ್ತು. ವಿಚಾರಣೆಗೆ ಶಾಸಕರು ಹಾಜರಾಗುವ ದಿನಾಂಕವನ್ನು ಸ್ಪೀಕರ್ ಮುಂದೂಡುತ್ತಲೇ ಬಂದರು. ಇವರ ಉದ್ದೇಶ ಏನು ಎಂಬುದು ಅರ್ಥವಾಗಲಿಲ್ಲ ಎಂದು ಮುಕುಲ್ ರೋಹಟಗಿ ವಾದಿಸಿದರು.

ಇನ್ನು, ಜೆಡಿಎಸ್ ಅನರ್ಹ ಶಾಸಕರ ಪರವಾಗಿ ಎ.ಕೆ. ಗಂಗೂಲಿ ವಾದಿಸಿದರು.

ಈ ಹಿಂದೆ​ ಸೆ. 27ರಂದು ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆದಿದ್ದ ಸುಪ್ರೀಂಕೋರ್ಟ್ ಉಪಚುನಾವಣೆಗೆ ತಾತ್ಕಾಲಿಕ ತಡೆ ನೀಡಿತ್ತು. ಪ್ರಕರಣದ ವಿಚಾರಣೆಯನ್ನು ತರಾತುರಿಯಲ್ಲಿ ಮಾಡಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿನ ಅಂಶಗಳನ್ನು ಜಾಗರೂಕವಾಗಿ ವಿಚಾರಣೆಗೆ ಒಳಪಡಿಸಬೇಕು ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಅನರ್ಹ ಶಾಸಕರ ಅರ್ಜಿ ಸಂಬಂಧ ತೀರ್ಪು ನೀಡುವ ತನಕ ಕರ್ನಾಟಕ ಉಪಚುನಾವಣೆಯನ್ನು ಮುಂದೂಡಿತ್ತು. ಅಕ್ಟೋಬರ್​ 21ರಂದು ನಡೆಯಬೇಕಿದ್ದ ಚುನಾವಣೆಯನ್ನೇ ಮುಂದೂಡಿದ ಸುಪ್ರೀಂಕೋರ್ಟ್​, ವಿಚಾರಣೆಯನ್ನು ಅ.22ಕ್ಕೆ ನಿಗದಿ ಮಾಡಿತ್ತು.

ಅನರ್ಹ ಶಾಸಕರ ಅರ್ಜಿ ವಿಚಾರಣೆ ಮತ್ತೆ ಮುಂದೂಡಿದ ಸುಪ್ರೀಂ: ಅ.23ಕ್ಕೆ ರೆಬೆಲ್ಸ್​​ ಭವಿಷ್ಯ ನಿರ್ಧಾರ

ಕಳೆದ ಮೇ ತಿಂಗಳಲ್ಲಿ ಮೈತ್ರಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದ 17 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನ ಐಷಾರಾಮಿ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿದ್ದರು. ಇದಾದ ಬೆನ್ನಲ್ಲೇ ಅಂದಿನ ಸ್ಪೀಕರ್​ ರಮೇಶ್​ ಕುಮಾರ್​ ಸಿಪಿಎಲ್​ ನಾಯಕ ಸಿದ್ದರಾಮಯ್ಯ ಹಾಗೂ ಮೈತ್ರಿ ಸರ್ಕಾರದ ನಾಯಕ ಅಂದಿನ ಸಿಎಂ ಕುಮಾರಸ್ವಾಮಿ ದೂರಿನ ಮೇರೆಗೆ ವಿಚಾರಣೆ ನಡೆಸಿ ಎಲ್ಲಾ 17 ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.

ಹಿಂದಿನ ಸ್ಪೀಕರ್​​ ನಿರ್ಧಾರದ ವಿರುದ್ಧ 17 ಮಂದಿ ಅನರ್ಹ ಶಾಸಕರು ಸುಪ್ರೀಂಕೋರ್ಟ್​​ ಮೆಟ್ಟಿಲೇರಿದರು. ಬಳಿಕ ಸುಪ್ರೀಂಕೋರ್ಟ್​​ನಲ್ಲಿ ಜಯ ಸಿಗಬಹುದು ಎನ್ನುವ ಆಸೆ ಹೊತ್ತಿದ್ದ ಅನರ್ಹ ಶಾಸಕರಿಗೆ ಪ್ರತಿ ಬಾರಿಯೂ ಹಿನ್ನಡೆ ಆಗುತ್ತಲೇ ಇದೆ. ಸ್ಪೀಕರ್​ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಿ ಒಂದು ತಿಂಗಳು ಕಳೆದರೂ ಪ್ರಕರಣ ವಿಚಾರಣೆಗೆ ಬಂದಿರಲ್ಲ. ಇದು ಅನರ್ಹರನ್ನು ಆತಂಕಕ್ಕೆ ಈಡು ಮಾಡಿತ್ತು. ಇದೀಗ ನಾಡಿದ್ದಾದರೂ ಸುಪ್ರಿಂನಲ್ಲಿ ತೀರ್ಪು ಬರುವ ನಿರೀಕ್ಷೆಯಲ್ಲಿ ಅನರ್ಹರಿದ್ದಾರೆ.

ದೆಹಲಿ ಹೈಕೋರ್ಟ್​ನಿಂದ ಇಂದು ಡಿಕೆಶಿ ಜಾಮೀನು ಅರ್ಜಿ ತೀರ್ಪು ಪ್ರಕಟ; ಶಿವಕುಮಾರ್​ಗೆ ಸಿಗಲಿದೆಯಾ ರಿಲೀಫ್?

ಅನರ್ಹ ಶಾಸಕರ ಪ್ರಕರಣದ ವಿಚಾರಣೆಯನ್ನು ಜಸ್ಟೀಸ್​. ಮೋಹನ್ ಶಾಂತನಗೌಡರ ನಡೆಸಬೇಕಿತ್ತು. ಆದರೆ, ಅವರು ಕರ್ನಾಟಕ ಮೂಲದವರು ಮತ್ತು ಅನರ್ಹ ಶಾಸಕ ಬಿಸಿ ಪಾಟೀಲ್​ ಅವರ ದೂರದ ಸಂಬಂಧಿ. ಹೀಗಾಗಿ ಸ್ವಇಚ್ಛೆಯಿಂದ ಅವರು ವಿಚಾರಣೆಯಿಂದಲೇ ಹಿಂದೆ ಸರಿದಿದ್ದರು. ಹೀಗಾಗಿ ಈ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಕೃಷ್ಣ ಮುರಳಿ, ಸಂಜಯ್ ಖನ್ನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ವಿಚಾರಣೆ ನಡೆಸುತ್ತಿದೆ.

First published:October 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...