ಬಿಎಸ್‌ವೈ ಪ್ರಮಾಣ ವಚನಕ್ಕೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್: ಮೂರನೇ ಬಾರಿ ಮುಖ್ಯ ಮಂತ್ರಿಯಾಗಲಿರುವ ಯಡಿಯೂರಪ್ಪ


Updated:May 17, 2018, 9:29 AM IST
ಬಿಎಸ್‌ವೈ ಪ್ರಮಾಣ ವಚನಕ್ಕೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್: ಮೂರನೇ ಬಾರಿ ಮುಖ್ಯ ಮಂತ್ರಿಯಾಗಲಿರುವ ಯಡಿಯೂರಪ್ಪ

Updated: May 17, 2018, 9:29 AM IST
ನ್ಯೂಸ್​ 18 ಕನ್ನಡ

ಬೆಂಗಳೂರು: ಬುಧವಾರ ತಡ ರಾತ್ರಿಯಿಂದ ಗುರುವಾರ ಮುಂಜಾನವರೆಗೂ ನಡೆದ ರಾಜಕೀಯ ಹೈಡ್ರಾಮ ಕೊನೆಗೂ ಅಂತ್ಯವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸುಪ್ರೀಂ ಕೋರ್ಟ್‌ ಗ್ರೀನ್ ಸಿಗ್ನಲ್‌ ನೀಡಿದೆ.

ಸರಕಾರ ರಚನೆ ಕುರಿತು ರಾಜ್ಯಪಾಲ ವಜುಭಾಯಿ ವಾಲಾ ಅವರ ಕ್ರಮ ಪ್ರಶ್ನಿಸಿ ಕಾಂಗ್ರೆಸ್‌ ಹಾಗೂ ಜೆಡಿಎಸ್ ಪಕ್ಷ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌ ಅಂತಿಮವಾಗಿ ತೀರ್ಪನ್ನು ಬಿಜೆಪಿ ಪರ ನೀಡಿದ್ದು, ರಾಜ್ಯಪಾಲರು ನಿಗದಿ ಮಾಡಿರುವಂತೆಯೇ ಬಿಎಸ್​ವೈ ಗುರುವಾರ ಬೆಳಗ್ಗೆ ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಸಲ್ಲಿಸಿದ ಅರ್ಜಿ ವಿಚಾರಣೆಗೆ ಮುಂದಾದ ನ್ಯಾಯಮೂರ್ತಿ ಎಕೆ ಸಿಕ್ರಿ, ಅಶೋಕ್ ಭೂಷಣ್ ಮತ್ತು ಬೋಬ್ಡೆ ಸೇರಿದ ಪೀಠ, ರಾಜ್ಯಪಾಲರ ಆದೇಶಕ್ಕೆ ಬೆಲೆ ಕೊಡಬೇಕು ಅವರ ಆದೇಶವನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಕೋರಿದ್ದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ತಡೆ ನೀಡಲು ನಿರಾಕರಿಸಿದೆ.

 
First published:May 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...