ಮಾಜಿ ಶಾಸಕರಿಂದಲೂ ಮಂತ್ರಿಗಿರಿಗೆ ಲಾಬಿ; ಬಿಎಸ್​ವೈ ಕಾಲಿಗೆ ಬಿದ್ದ ಚಿಂಚನಸೂರ್ ಬೆಂಬಲಿಗರು

ಬಾಬುರಾವ್ ಅವರಿಗೆ ಮಂತ್ರಿ ಮಾಡುವ ಭರವಸೆಯನ್ನೂ ಈ ಮುಂಚೆಯೇ ನೀಡಿದ್ದೀರಿ. ನಿಮ್ಮ ಮಾತನ್ನು ದಯವಿಟ್ಟು ಉಳಿಸಿಕೊಳ್ಳಿ ಎಂದು ಸಿಎಂ ಬಳಿ ಅವರ ಬೆಂಬಲಿಗರು ಮನವಿ ಮಾಡಿದ್ಧಾರೆ.

news18-kannada
Updated:August 15, 2019, 4:15 PM IST
ಮಾಜಿ ಶಾಸಕರಿಂದಲೂ ಮಂತ್ರಿಗಿರಿಗೆ ಲಾಬಿ; ಬಿಎಸ್​ವೈ ಕಾಲಿಗೆ ಬಿದ್ದ ಚಿಂಚನಸೂರ್ ಬೆಂಬಲಿಗರು
ಬಾಬುರಾವ್ ಚಿಂಚನಸೂರ
  • Share this:
ಬೆಂಗಳೂರು(ಆ. 15): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದೆಹಲಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಪುಟ ಸೇರ್ಪಡೆ ಕಸರತ್ತು ಗರಿಗೆದರಿದೆ. ಸಂಪುಟ ಸೇರಲು ನಾ ಮುಂದು ನೀ ಮುಂದು ಸ್ಪರ್ಧೆ ಶುರುವಾಗಿದೆ. ಹಾಲಿ ಶಾಸಕರ ಜೊತೆಗೆ ಮಾಜಿ ಶಾಸಕರೂ ಕೂಡ ಮಂತ್ರಿಗಿರಿಗೆ ಪೈಪೋಟಿ ನಡೆಯುತ್ತಿದೆ. ಮಾಜಿ ಕಾಂಗ್ರೆಸ್ ಶಾಸಕ ಹಾಗೂ ಬಿಜೆಪಿ ಮುಖಂಡ ಬಾಬುರಾವ್ ಚಿಂಚನಸೂರ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಅವರ ಬೆಂಬಲಿಗರು ಇವತ್ತು ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ. ಯಡಿಯೂರಪ್ಪ ಅವರು ಕೂಡ ಈ ಮನವಿಗೆ ಪೂರಕವಾಗಿ ಸ್ಪಂದಿಸಿದ್ದಾರೆ.

ಇವತ್ತು ಡಾಲರ್ಸ್ ಕಾಲೊನಿಯಲ್ಲಿರುವ ಸಿಎಂ ನಿವಾಸಕ್ಕೆ ಆಗಮಿಸಿದ ಚಿಂಚನಸೂರ ಅವರ ಬೆಂಬಲಿಗರು, ತಮ್ಮ ನಾಯಕನ ಪರವಾಗಿ ಘೋಷಣೆಗಳನ್ನ ಕೂಗಿದರು. ಕೆಲವರು ಯಡಿಯೂರಪ್ಪ ಅವರ ಕಾಲಿಗೆರಗಿಯೂ ಬೇಡಿಕೊಂಡರು.

ಇದನ್ನೂ ಓದಿ: ಫೋನ್ ಕದ್ದಾಲಿಕೆ ಸದ್ದು; ಸರ್ಕಾರ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಲಿ; ಶಾಸಕ ಯತ್ನಾಳ್ ಆಗ್ರಹ!

ಲೋಕಸಭೆ ಚುನಾವಣೆಯಲ್ಲಿ ತಮ್ಮ ನಾಯಕರು ಉತ್ತಮ ಕೆಲಸ ಮಾಡಿದ್ಧಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಇವರ ಶ್ರಮ ಸಾಕಷ್ಟಿದೆ. ಈ ಮುಂಚೆಯೇ ಅವರಿಗೆ ಮಂತ್ರಿಸ್ಥಾನದ ಭರವಸೆ ಕೊಟ್ಟಿದ್ದೀರಿ. ತಮ್ಮ ಮಾತನ್ನು ದಯವಿಟ್ಟು ಉಳಿಸಿಕೊಳ್ಳಿ ಎಂದು ಚಿಂಚನಸೂರ ಅವರ ಬೆಂಬಲಿಗರು ಯಡಿಯೂರಪ್ಪರ ಬಳಿ ಪರಿಪರಿಯಾಗಿ ಬೇಡಿಕೊಂಡರು.

ಚಿಂಚನಸೂರ ಅವರ ಬೆಂಬಲಿಗರ ಕೋರಿಕೆಗೆ ಯಡಿಯೂರಪ್ಪ ಕೂಡ ಪೂರಕವಾಗಿ ಸ್ಪಂದಿಸಿದರು. ಚಿಂಚನಸೂರ ಬಗ್ಗೆ ಅಪಾರ ಗೌರವ ಇದೆ. ತಾವೆಲ್ಲಾ ಬಂದು ಮಂತ್ರಿ ಮಾಡಿ ಎಂದು ಕೇಳುವ ಅಗತ್ಯವೇ ಇಲ್ಲ. ರಾಷ್ಟ್ರೀಯ ಅಧ್ಯಕ್ಷರಲ್ಲಿ ಅವರ ವಿಚಾರವನ್ನು ಪ್ರಸ್ತಾಪ ಮಾಡುತ್ತೇನೆ. ಅವರಿಗೆ ಮಂತ್ರಿ ಸ್ಥಾನ ಕೊಡಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇನೆ ಎಂದು ಚಿಂಚನಸೂರ ಅವರ ಬೆಂಬಲಿಗರಿಗೆ ಯಡಿಯೂರಪ್ಪ ಭರವಸೆ ಕೊಟ್ಟು ಕಳುಹಿಸಿದರು.

ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟದ ಹೆಗ್ಗುರುತು ಈ ಈಸೂರು ಗ್ರಾಮ

ಈ ಮೊದಲೂ ಕೂಡ ಚಿಂಚನಸೂರ ಅವರ ಬೆಂಬಲಿಗರು ತಮ್ಮ ನಾಯಕನ ಪರವಾಗಿ ಯಡಿಯೂರಪ್ಪ ಬಳಿ ಮನವಿ ಮಾಡಿಕೊಂಡಿದ್ದರು. ಐದು ಬಾರಿ ಶಾಸಕರಾಗಿದ್ದ ಬಾಬುರಾವ್ ಚಿಂಚನಸೂರ ಅವರು ಕಳೆದ ವರ್ಷದ ಆಗಸ್ಟ್ 28ರಂದು ಕಾಂಗ್ರೆಸ್​ನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗುರುಮಿಟ್ಕಲ್ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್​ನಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಆದರೆ, ಲೋಕಸಭಾ ಚುನಾವಣೆಯಲ್ಲಿ ಕಲಬುರ್ಗಿ ಕ್ಷೇತ್ರದಲ್ಲಿ ಉಮೇಶ್ ಜಾಧವ್ ಅವರನ್ನು ಸೋಲಿಸಲು ಬಾಬುರಾವ್ ಅವರ ಪಾತ್ರವೂ ಬಹಳಷ್ಟಿತ್ತೆನ್ನಲಾಗಿದೆ.
Loading...

ಇದೇ ವೇಳೆ, ಯಡಿಯೂರಪ್ಪ ಅವರು ಇವತ್ತು ಗುರುವಾರ ರಾತ್ರಿಯೇ ದೆಹಲಿಗೆ ಹೋಗಲಿದ್ದಾರೆ. ನಾಳೆ ಪ್ರವಾಹಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮತ್ತಿತರರನ್ನು ಭೇಟಿಯಾಗಿ ನೆರವು ಕೋರಲಿದ್ದಾರೆ. ಶನಿವಾರದಂದು ಅಮಿತ್ ಶಾ, ಜೆ.ಪಿ. ನಡ್ಡಾ ಹಾಗೂ ಇತರ ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ಸಂಪುಟ ರಚನೆ ಸಂಬಂಧ ಚರ್ಚೆ ನಡೆಸಲಿದ್ದಾರೆ. ಅಲ್ಲಿಯೇ ಸಂಪುಟ ಸೇರ್ಪಡೆಯ ಪಟ್ಟಿಯನ್ನು ಅಂತಿಮಗೊಳಿಸಿ ಬರಲಿದ್ದಾರೆ. ಸೋಮವಾರದಂದು ಸಂಪುಟ ರಚನೆಯಾಗುವ ಸಂಭವ ಇದೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ

First published:August 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...