HOME » NEWS » State » SUPPORT TOMORROW KARNATAKA BANDH DCM LAXMAN SAVADI CLARIFIED HK

ಕರ್ನಾಟಕ ಬಂದ್: ಬಸ್ ಸಂಚಾರ ಅಬಾಧಿತ ; ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟನೆ

ಈಗಾಗಲೇ  ಕಾರ್ಮಿಕ ಸಂಘಟನೆಗಳು ಬಸ್ ನಿಲ್ಲಿಸುವುದಿಲ್ಲ ಅಂತ ಹೇಳಿದೆ. ಹಾಗಾಗಿ ನಾಳೆ ಎಂದಿನಂತೆ ಬಸ್ ಸಂಚಾರ ಇರುತ್ತದೆ.

news18-kannada
Updated:February 12, 2020, 2:31 PM IST
ಕರ್ನಾಟಕ ಬಂದ್: ಬಸ್ ಸಂಚಾರ ಅಬಾಧಿತ ; ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟನೆ
ಡಿಸಿಎಂ ಲಕ್ಷ್ಮಣ ಸವದಿ.
  • Share this:
ಬೆಂಗಳೂರು(ಫೆ. 12): ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕೆಲ ಕನ್ನಡಪರ ಸಂಘಟನೆಗಳು ನಾಳೆ ನಡೆಸಲಿರುವ ಕರ್ನಾಟಕ ಬಂದ್ ವೇಳೆ ಬಸ್ ಸಂಚಾರಕ್ಕೆ  ಯಾವುದೇ ಅಡಚಣೆ ಇರುವುದಿಲ್ಲ. ಈ ವಿಚಾರವನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,  ಈಗಾಗಲೇ  ಕಾರ್ಮಿಕ ಸಂಘಟನೆಗಳು ಬಸ್ ನಿಲ್ಲಿಸುವುದಿಲ್ಲ ಅಂತ ಹೇಳಿದೆ. ಹಾಗಾಗಿ ನಾಳೆ ಎಂದಿನಂತೆ ಬಸ್ ಸಂಚಾರ ಇರುತ್ತೆ. ಗಲಾಟೆ ಏನಾದರೂ ಆದರೆ, ಸಂದರ್ಭಕ್ಕೆ ಅನುಸಾರವಾಗಿ ಅಲ್ಲಿನ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಕೃಷಿ ಖಾತೆ ವಾಪಸ್ ಪಡೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಮೊದಲು ಸಾರಿಗೆ ಖಾತೆ ಕೊಟ್ಟಿದ್ದರು. ನಂತರ ಹೆಚ್ಚುವರಿಯಾಗಿ ಇನ್ನೊಂದು ಖಾತೆ ಕೊಟ್ಟಿದ್ದರು. ಈಗ ಒಂದು ಖಾತೆ ವಾಪಸ್ ಪಡೆದಿದ್ದಾರೆ ಅಷ್ಟೆ. ಇಂತಹದ್ದೇ ಖಾತೆ ಬೇಕು ಅಂತ ಯಾರು ಕೇಳಿಲ್ಲ. ಅ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಹೊಸದಾಗಿ ಬಂದವರಿಗೆ ಪಕ್ಷದ ಸಿದ್ದಾಂತ ಅರ್ಥ ಮಾಡಿಕೊಳ್ಳೋಕೆ ಕಷ್ಟ ಆಗುತ್ತೆ. ನಿಧಾನವಾಗಿ ಎಲ್ಲವನ್ನೂ ತಿಳಿದುಕೊಳ್ತಾರೆ ಎಂದರು.

ಆರೋಪ ಹೊತ್ತಿರೋ ಆನಂದ್ ಸಿಂಗ್​ಗೆ ಅರಣ್ಯ ಖಾತೆ ಕೊಟ್ಟಿರುವುದನ್ನು ಸವದಿ ಸಮರ್ಥಿಸಿಕೊಂಡರು. ಆರೋಪಗಳು ಬಂದ ಕೂಡಲೇ ಅವರು ತಪ್ಪು ಮಾಡಿದ್ದಾರೆ ಅಂತ ಅಲ್ಲ. ಅವರ ಮೇಲೆ ದೂರುಗಳು ಇವೆ ಅಷ್ಟೆ. ಅವರ ಮೇಲಿನ ಯಾವುದೇ ಆರೋಪ ಸಾಬೀತಾಗಿಲ್ಲ. ಆರೋಪ ಸಾಬೀತಾದ ಮೇಲೆ ನೋಡೋಣ. ಬೇರೆ ಪಕ್ಷದಲ್ಲಿ ಇದ್ದಾಗ ಆರೋಪ ಪ್ರತ್ಯಾರೋಪ ಸಹಜ. ನಾವು ಹಿಂದೆ ಇದ್ದಾಗ ಆರೋಪ ಮಾಡಿರುತ್ತೇವೆ. ಆದರೆ, ಯಾವುದೇ ಆರೋಪ ಸಾಬೀತಾಗಿಲ್ಲ ಎಂದು ತಿಳಿಸಿದರು.

ಕನ್ನಡ ಸಂಘಟನೆಗಳು ಕರೆದಿರುವ ಕರ್ನಾಟಕ ಬಂದ್ ಗೆ ನಮ್ಮ ಬೆಂಬಲವಿಲ್ಲ : ಟಿ.ಎ ನಾರಾಯಣ ಗೌಡ

ಹುಬ್ಬಳ್ಳಿ ಮತ್ತು ಕಲಬುರ್ಗಿ ನಿಗಮದಲ್ಲಿ ಹುದ್ದೆ ಭರ್ತಿಗೆ ಪ್ರಕ್ರಿಯೆ ಪ್ರಾರಂಭ ‌ಮಾಡಲಾಗಿದೆ. ಕೆಲ ಮಧ್ಯವರ್ತಿಗಳು ಕೆಲಸ ಕೊಡಿಸುತ್ತೇವೆ ಅಂತ ಹಣ ಪಡೆಯುತ್ತಿದ್ದಾರೆ. ಯಾವುದೇ ಮೋಸ ಆಗದಂತೆ ಹುದ್ದೆ ಭರ್ತಿ ಆಗುತ್ತೆ. ಮಧ್ಯವರ್ತಿಗಳಿಂದ ಮೋಸಕ್ಕೆ‌ ಒಳಗಾಗಬೇಡಿ. ನೇರ ಮತ್ತು ಪ್ರಾಮಾಣಿಕ ನೇಮಕಾತಿ ಆಗ್ತಿದೆ. ಹಣ ಕೊಟ್ಟು ಅಭ್ಯರ್ಥಿಗಳು ಮೋಸ ಹೋಗಬೇಡಿ ಎಂದು ಮನವಿ ಮಾಡಿದರು.

ಗತಕಾಲಕ್ಕೆ ಹೋಗಲಿವೆಯಾ ಬಿಎಂಟಿಸಿ ಬಸ್ಸುಗಳು?

ಬಿಎಂಟಿಸಿಯಲ್ಲಿ ಮುಂದಿನ ದಿನಗಳಲ್ಲಿ ವೋಲ್ವೋ ಬಸ್ಸುಗಳು ಇತಿಹಾಸ ಪುಟ ಸೇರಲಿವೆ. ಉಪಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ಸುಳಿವು ನೀಡಿದ್ದಾರೆ.ಹಂತ ಹಂತವಾಗಿ ವೊಲ್ವೋ ಬಸ್ ಕಡಿಮೆ ಮಾಡೋ ಚಿಂತನೆ ಇದೆ. ವೋಲ್ವೋ ಬಸ್ ನಿರ್ವಹಣೆಗೆ ಹೆಚ್ವು ಹಣ ವ್ಯಯ ಆಗ್ತಿದೆ. ಇಂಧನದ ಖರ್ಚು, ನಿರ್ವಹಣೆ ವೆಚ್ಚ ಹೆಚ್ಚಾಗುತ್ತಿದೆ. ಹೀಗಾಗಿ ಇವುಗಳನ್ನು ಹಂತ ಹಂತವಾಗಿ ಕಡಿಮೆ ಮಾಡೋ ಚಿಂತನೆ ಇದೆ. ವೋಲ್ವೋ ಬದಲಾಗಿ ಟಾಟಾ ಮತ್ತು ಲಾಯ್ ಲ್ಯಾಂಡ್ ಕಂಪನಿಯ ಬಸ್ ಓಡಿಸುತ್ತೇವೆ‌. 1,200 ಹೊಸ ಬಸ್ ಖರೀದಿಗೆ ನಿರ್ಧಾರ ಮಾಡಿದ್ದೇವೆ. ಮಾರ್ಚ್ 31 ಒಳಗೆ ಬಸ್ ಕೊಡೋದಾಗಿ ಬಸ್ ಕಂಪನಿಗಳು ಹೇಳಿವೆ ಎಂದು ಸ್ಪಷ್ಟಪಡಿಸಿದರು.

ಎಲೆಕ್ಟ್ರಿಕ್ ಬಸ್ ವಿಚಾರದ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಕಂಪನಿಗಳು ಪ್ರಪೋಸಲ್ ಕೊಟ್ಟಿವೆ. ಮಹಾರಾಷ್ಟ್ರ, ಹರಿಯಾಣದಿಂದ ಕಂಪನಿಗಳು ಪ್ರಸ್ತಾವನೆ ಕೊಟ್ಟಿವೆ. ನಾವೇ ಬಸ್ ಕೊಟ್ಟು, ದಿನದ ಆಧಾರದಲ್ಲಿ ಲಾಭ ಕೊಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣವಾದ ಚರ್ಚೆ ಆಗಬೇಕು. ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಆಗಿಲ್ಲ. 60:40 ಸೂತ್ರ ಕೆಲ ಕಂಪನಿಗಳು ಮುಂದೆ ಇಟ್ಟಿವೆ. ಇನ್ನೂ ಅನೇಕ ಕಂಪನಿ ಆಸಕ್ತಿ ತೋರಿವೆ. ಅವುಗಳ ಜೊತೆಯೂ ಚರ್ಚೆ ಮಾಡಿ ಅಂತಿಮ ನಿರ್ಧಾರ ಮಾಡುತ್ತೇವೆ. ಅಂತಿಮ ಒಪ್ಪಂದದ ಬಳಿಕ ಟೆಂಡರ್ ಪ್ರಕ್ರಿಯೆ ಬಗ್ಗೆ ತೀರ್ಮಾನ ಮಾಡ್ತೀವಿ. ಈಗಾಗಲೇ 3-4 ಕಂಪನಿಗಳು ಮುಂದೆ ಬಂದಿವೆ. ಈ ಬಗ್ಗೆ ಸೂಕ್ತ ನಿರ್ಧಾರ ಮಾಡಿ ಕ್ರಮ ತಗೋತೀವಿ ಎಂದು ಸವದಿ ತಿಳಿಸಿದರು.

ಸರೋಜಿನಿ ಮಹಿಷಿ ವರದಿಗೆ ಆಗ್ರಹ; ಫೆಬ್ರವರಿ.13ಕ್ಕೆ ಕರ್ನಾಟಕ ಬಂದ್ ಅನುಮಾನ?

ರಸ್ತೆ ಸುರಕ್ಷತೆ ವಿಚಾರವಾಗಿ ದಂಡ ಹೆಚ್ಚಳ ಮಾಡೋ ಪ್ರಸ್ತಾವನೆ ಇದೆ. ಕೇಂದ್ರ ಸರ್ಕಾರ ದಂಡ ಹೆಚ್ಚಳಕ್ಕೆ ತಿದ್ದುಪಡಿ ತಂದಿದೆ. ನಾವು ಕೂಡಾ ದಂಡ ಹೆಚ್ಚಳ ಮಾಡೋ ಪ್ರಸ್ತಾವನೆ ಇದೆ. ಜನರಿಗೆ ಅಗತ್ಯ ಜಾಗೃತಿ ಮೂಡಿಸಿ ದಂಡ ಹೆಚ್ಚುವರಿ ಮಾಡುವ ಬಗ್ಗೆ ಚಿಂತನೆ ಮಾಡ್ತೀವಿ. ಮೊದಲು ಜನರಿಗೆ ಜಾಗೃತಿ ಮೂಡಿಸುತ್ತೇವೆ. ಆದಾದ ನಂತರ ದಂಡ ಹೆಚ್ಚಳ ಮಾಡುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.

ವಾಹನ ನೋಂದಣಿ ತೆರಿಗೆ ಈ ಬಾರಿ ಸ್ವಲ್ಪ  ಕೊರತೆ ಆಗೋ ಸಾಧ್ಯತೆ ಇದೆ. ಈ ಬಾರಿ 7 ಸಾವಿರ  ನಿರೀಕ್ಷೆ ಇತ್ತು. ಇದರಲ್ಲಿ 1200 ಕೋಟಿ ಕೊರತೆ ಆಗೋ ಸಾಧ್ಯತೆ ಇದೆ ಅಕ್ಟೋಬರ್, ನವೆಂಬರ್, ಡಿಸೆಂಬರ್ ನಲ್ಲಿ ವಾಹನ ನೋಂದಣಿ ಕಡಿಮೆ ಆಗಿದೆ. ಹೊಸ ವರ್ಷದಿಂದ ಮತ್ತೆ ವಾಹನ ನೋಂದಣಿ ಚುರುಕಾಗಿದೆ ಎಂದು ಹೇಳಿದರು.
Youtube Video
First published: February 12, 2020, 2:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories