ನಾಳೆಯಿಂದ ಬೆಂಬಲ ಬೆಲೆಯಡಿ ಹೆಸರು ಕಾಳು ಖರೀದಿ ಪ್ರಾರಂಭ

news18
Updated:September 10, 2018, 8:56 PM IST
ನಾಳೆಯಿಂದ ಬೆಂಬಲ ಬೆಲೆಯಡಿ ಹೆಸರು ಕಾಳು ಖರೀದಿ ಪ್ರಾರಂಭ
ಸಚಿವ ಬಂಡೆಪ್ಪ ಕಾಶೆಂಪುರ
  • News18
  • Last Updated: September 10, 2018, 8:56 PM IST
  • Share this:
ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.10): ಬೆಂಬಲ ಬೆಲೆಯಡಿ ಹೆಸರು ಕಾಳು ಖರೀದಿ ಪ್ರಾರಂಭಕ್ಕೆ ನಾಳೆಯಿಂದ ಸೂಚನೆ ನೀಡಲಾಗಿದ್ದು, ನೋಂದಣಿ ಜೊತೆಗೆ ಖರೀದಿಗೂ ಹಸಿರು ನಿಶಾನೆ ತೋರಲಾಗಿದೆ ಎಂದು ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪುರ ತಿಳಿಸಿದರು

ವಿಕಾಸಸೌಧದಲ್ಲಿ ಮಾತನಾಡಿದ ಅವರು, 2019ನೇ ಸಾಲಿನಲ್ಲಿ 3,87,000 ಹೆಕ್ಟೇರ್​ನಲ್ಲಿ ಬಿತ್ತನೆ ಮಾಡಲಾಗಿದೆ. 1,24,000 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ನಿರೀಕ್ಷೆ‌ ಮಾಡಲಾಗಿದೆ. ಆಗಸ್ಟ್​ 28ರಿಂದ ಹೆಸರುಕಾಳು ಖರೀದಿ ನೋಂದಣಿ ಶುರು‌ಮಾಡಿದ್ದು, ಈಗಾಗಲೇ 24 ಸಾವಿರ ರೈತರು ಹೆಸರು ನೋಂದಾಣಿ ಮಾಡಿದ್ದಾರೆ ಎಂದರು.

ದಿಂದ ಪ್ರತಿ ಕ್ವಿಂಟಾಲ್​ಗೆ 6,975 ರೂ. ಬೆಂಬಲ ಬೆಲೆ ನಿಗದಿ ಮಾಡಲಾಗಿದ್ದು, ನಾಳೆಯಿಂದ ಬೆಂಬಲ ಬೆಲೆಯಡಿ ಹೆಸರುಕಾಳು ಖರೀದಿ ಪ್ರಾರಂಭ ಮಾಡುತ್ತೇವೆ.  ಪ್ರತಿ ರೈತರಿಗೆ 10 ಕ್ವಿಂಟಾಲ್ ಖರೀದಿಗೆ ಮಿತಿ ಇರಿಸಿದ್ದೇವೆ ಎಂದರು

ಗದಗ, ಬೀದರ್, ಧಾರವಡ, ಬಾಗಲಕೋಟೆ, ಕಲಬುರ್ಗಿ, ಯಾದಗಿರಿ ಜಿಲ್ಲೆಗಳಲ್ಲಿ ಹೆಸರುಕಾಳು ಬೆಳೆ ಬಿತ್ತನೆ ಮಾಡಲಾಗಿದೆ. ತಾಲೂಕು ಕೇಂದ್ರಗಳಲ್ಲಿ ರೈತರು ಬೆಳೆದ ಹೆಸರು ಬೆಳೆಯನ್ನು ಸರ್ಕಾರದಿಂದಲೇ ಖರೀದಿಸಲು ಮುಂದಾಗಿದೆ.

15 ತಾರೀಖಿನ ವರೆಗೆ ನೋಂದಾಣಿ ಕಾಲಾವಧಿ ವಿಸ್ತರಣೆ ಮಾಡಲಾಗಿದ್ದು, ಹೆಚ್ಚಿನ ಖರೀದಿಗೆ ಸಂಪುಟ ಉಪ ಸಮಿತಿಯಲ್ಲಿ ನಿರ್ಧರಿಸಲಾಗಿದೆ. ಹೆಚ್ಚುವರಿ 25 ಸಾವಿರ ಮೆಟ್ರಿಕ್ ಟನ್ ಖರೀದಿಗೆ ಪ್ರಸ್ತಾಪ ಸಲ್ಲಿಸಲಾಗುವುದು.

ಉದ್ದಿನ ಬೇಳೆಗೂ ಬೆಂಬಲ ಬೆಲೆ ನೀಡುವಂತೆ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿದ್ದೇವೆ. ಸದ್ಯ 5,600ರೂ. ಬೆಂಬಲ ಬೆಲೆ ಇದೆ ಎಂದು ಮಾಹಿತಿ ನೀಡಿದರು.
First published:September 10, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading