ರಾಜ್ಯದ ಪ್ರತಿಷ್ಠಿತ ಚಿತ್ರದುರ್ಗದ ಮುರುಘಾರಾಜೇಂದ್ರ (Murugha Math) ಬ್ರಹನ್ಮಠದ ಡಾ. ಶಿವರಾತ್ರಿ ಮುರುಘಾ ಶರಣರ (Shivamurthy Murugha Sharanaru) ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ದಿ ಫೈಲ್ಸ್ ವರದಿ ಮಾಡಿದೆ. ಮುರುಘಾ ಶರಣರ ವಿರುದ್ಧ ಮಠದ ಉಚಿತ ವಿದ್ಯಾರ್ಥಿ ನಿಲಯದಲ್ಲಿರುವ (Hostel) ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿವೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಎನ್ನಲಾದ ಮಕ್ಕಳೇ (Students) ಈ ಸಂಬಂಧ ಮಠದ ಸ್ವಾಮೀಜಿ ವಿರುದ್ಧ ದೂರು ಸಲ್ಲಿಸಿದ್ದಾರೆ. ಈಗ ಶಿವಮೂರ್ತಿ ಮುರುಘಾ ಶರಣರ ಬೆಂಬಲಕ್ಕೆ ಮಠದ ಭಕ್ತರು (Devotees), ಚಿತ್ರದುರ್ಗದ (Chitradurga) ದಲಿತ ಸಂಘಟನೆಗಳು (Dalit Organizations) ನಿಂತಿವೆ. ಇದರ ವಿರುದ್ಧ ಒಗ್ಗಟ್ಟಾಗಿ ಹೋರಾಡೋಕೆ ಶ್ರೀಗಳು ಕರೆನೀಡಿದ್ದಾರೆ.
ಮುರುಘಾ ಶರಣರ ಮೇಲೆ ಬಂದಿರುವ ಆರೋಪ ಆಧಾರರಹಿತ, ಅಲ್ಲದೇ ಮಠ ಹಾಗೂ ಮುರುಘಾ ಶರಣರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಭಾಗವಾಗಿ ಈ ರೀತಿ ಆರೋಪ ಮಾಡಲಾಗುತ್ತಿದೆ ಎನ್ನುವ ಮಾತುಗಳೂ ಕೂಡ ಕೇಳಿ ಬಂದಿದೆ. ಇದೀಗ ಸ್ವಾಮೀಜಿಗಳ ಬೆಂಬಲಕ್ಕೆ ಭಕ್ತರು ಹಾಗೂ ದಲಿತ ಸಂಘಟನೆಗಳು ನಿಂತಿವೆ.
ಒಗ್ಗಟ್ಟಾಗಿ ಹೋರಾಡುತ್ತೇವೆ ಎಂದ ಸ್ವಾಮೀಜಿ
ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹಿನ್ನಲೆ ಮುರಾಘಾ ಮಠದಲ್ಲಿ ಸಭೆ ನಡೆಯಿತು. ಮುರುಘಾ ಶರಣರ ನೇತೃತ್ವದಲ್ಲಿ ಭಕ್ತರು ಮತ್ತು ಮಠಾಧೀಶರ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಶ್ರೀಗಳು, ಸುಳ್ಳು ಕೇಸ್ ವಿರುದ್ಧ ಧೈರ್ಯದಿಂದ ಒಗ್ಗಟ್ಟಾಗಿ ಹೋರಾಡುವುದಾಗಿ ಹೇಳಿದರು.
ಶ್ರೀಗಳ ಪರ ನಿಂತ ಹಲವು ಮಠಾಧೀಶರು
ಪ್ರಕರಣ ಕುರಿತು ಈಗ ಹಲವು ಮಠಾಧೀಶರು, ವಿವಿಧ ಸಮುದಾಯದ ಮುಖಂಡರು ಮುರುಘಾ ಶ್ರೀಗಳ ಬೆಂಬಲಕ್ಕೆ ನಿಂತಿದ್ದಾರೆ. ಸಂಜೆ ನಡೆದ ಸಭೆಯಲ್ಲಿ ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕುಂಚಟಿಗ ಮಠದ ಶಾಂತವೀರ ಸ್ವಾಮೀಜಿ, ಉಪ್ಪಾರ ಮಠದ ಪುರುಶೋತ್ತಮಾನಂದಪುರಿ ಶ್ರೀಗಳು, ವಿವಿಧ ಸಮುದಾಯದ ಮುಖಂಡರು ಭಾಗಿಯಾಗಿದ್ದರು.
ಇದನ್ನೂ ಓದಿ: ಮುರುಘಾ ಶ್ರೀಗಳ ಬೆಂಬಲಕ್ಕೆ ನಿಂತ ಭಕ್ತರು, ಮಠದ ಆಡಳಿತಾಧಿಕಾರಿ ವಿರುದ್ಧ ದೂರು
ಕಾನೂನು ಹೋರಾಟಕ್ಕೆ ಸಭೆಯಲ್ಲಿ ತೀರ್ಮಾನ
ಮುರುಘಾ ಶ್ರೀಗಳ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟಕ್ಕೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯ್ತು. ಸುಳ್ಳು ಪ್ರಕರಣ ದಾಖಲಿಸಿರುವವರು ಕ್ಷಮೆ ಕೇಳಿದರೆ ಕಾನೂನು ಹೋರಾಟ ಕೈ ಬಿಡುವಂತೆಯೂ ಚರ್ಚೆ ನಡೆಯಿತು. ಅಲ್ಲದೇ ಸುಳ್ಳು ಪ್ರಕರಣ ಎಂದು ಕ್ಷಮಾಪಣೆ ಕೇಳಿದ್ರೆ ರಾಜೀ ಸಂಧಾನಕ್ಕೂ ಚಿಂತನೆ ನಡೆದಿದೆ.
ಇದನ್ನೂ ಓದಿ: ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ, ರೇಪ್ ಆರೋಪ; ವಿದ್ಯಾರ್ಥಿನಿಯರಿಂದ ದೂರು
ಮಠದ ಆಡಳಿತಾಧಿಕಾರಿ ವಿರುದ್ಧ ದೂರು
ಮುರುಘಾ ಮಠದ ಆಡಳಿತಾಧಿಕಾರಿ ಬಸವರಾಜನ್ ಅವರ ಮೇಲೂ ದೂರು ನೀಡಲಾಗಿದೆ. ವಿದ್ಯಾರ್ಥಿಗಳನ್ನು ಮುಂದೆ ಬಿಟ್ಟು ದೂರು ಕೊಡಿಸಿ ಮುರುಘಾ ಶರಣರ ಮೇಲೆ ಬಸವರಾಜನ್ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೈಸೂರಿನಲ್ಲಿ ದಾಖಲಾದ ಪ್ರಕರಣದಲ್ಲಿ ಆರೋಪಿಯಾಗಿರುವ ಮಹಿಳಾ ವಾರ್ಡನ್ ನೀಡಿರುವ ದೂರಿನ ಅನ್ವಯ ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಸವರಾಜನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ