ಚಿಕ್ಕಮಗಳೂರು (ಮೇ 3) : ವೀಕ್ ಎಂಡ್ಗಳಲ್ಲಿ(Week End) ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಚಿಕ್ಕಮಗಳೂರು (Chikkamagaluru) ತಾಲೂಕಿನ ಮುಳ್ಳಯ್ಯನಗಿರಿಯಲ್ಲಿ (Mullayyanagiri) ಬೇಸಿಗೆ ರಜೆ (Summer Holidays) ಹಾಗೂ ವೀಕ್ ಎಂಡ್ನಲ್ಲೂ ಪ್ರವಾಸಿಗರಿಲ್ಲದೆ (Tourist) ಬಿಕೋ ಎನ್ನುತ್ತಿದೆ. ಸಾಲಾಗಿ 4 ದಿನ ರಜೆ ಇದ್ದರೂ ಕೂಡ ಮುಳ್ಳಯ್ಯನಗಿರಿಗೆ ಜನರೇ ಬರ್ತಿಲ್ಲ, ಏನಿಲ್ಲಾ ಅಂದ್ರು, ತಲೆಗಳನ್ನ ಲೆಕ್ಕ ಹಾಕಿದರೂ ಕೂಡ ಹೆಚ್ಚಿಂದರೆ 150-200 ಜನರಷ್ಟೆ ಪ್ರವಾಸಿಗರು ಇದ್ದಾರೆ. ಚಿಕ್ಕಮಗಳೂರಿನಲ್ಲಿ ಪ್ರಸ್ತುತ ಶೇಕಡ 30ಕ್ಕೂ ಅಧಿಕ ಬಿಸಿಲಿನ ತಾಪಮಾನವಿದೆ (Temperatures) . ಜಿಲ್ಲೆಯ ಜನ ಭಾರೀ ಬಿಸಿಲಿನಿಂದ ಹೈರಾಣಾಗಿದ್ದಾರೆ. ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿವೆ ಕಾಫಿನಾಡ ಪ್ರವಾಸಿ ತಾಣಗಳು
ಪ್ರವಾಸಿಗರ ಹಾಟ್ ಸ್ಪಾಟ್
ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಅಂದ್ರೆ ಪ್ರವಾಸಿಗರ ನೆಚ್ಚಿನ ಹಾಟ್ ಸ್ಪಾಟ್. ವರ್ಷದ 365 ದಿನವೂ ಪ್ರವಾಸಿಗರಿಂದ ತುಂಬಿರುತ್ತೆ. ಅದರಲ್ಲೂ ವೀಕ್ ಎಂಡ್ ಜೊತೆ ಕಂಟಿನ್ಯೂ ಮೂರ್ನಾಲ್ಕು ದಿನ ರಜೆ ಬಂದರಂತೂ ಗಿರಿ ಭಾಗದಲ್ಲಿ ಭಾರೀ ಪ್ರವಾಸಿಗರು ಇರುತ್ತಾರೆ. ಆದರೆ, ಈ ವರ್ಷ ಬಿಸಿಲ ಧಗೆಗೆ ಪ್ರವಾಸಿಗರು ಕಾಫಿನಾಡಿನತ್ತ ಮುಖ ಮಾಡಿಲ್ಲ. ವೀಕ್ ಎಂಡ್ ಜೊತೆ ಬೇಸಿಗೆ ರಜೆ ಇದ್ರು ಕೂಡ ಮುಳ್ಳಯ್ಯನಗಿರಿಗೆ ಅನಾಘಪ್ರಜ್ಞೆ ಕಾಡ್ತಿದೆ. ಏಪ್ರಿಲ್-ಮೇ ತಿಂಗಳಲ್ಲಿ ಜಿಲ್ಲೆಯ ಮಲೆನಾಡು ಭಾಗದ ಪ್ರವಾಸಿ ತಾಣಗಳಲ್ಲಿ ಭಾರಿ ಜನಸ್ತೋಮವೇ ಏರ್ಪಡುತ್ತಿತ್ತು.
ಹೆಚ್ಚಿದೆ ಬಿಸಿಲ ತಾಪಮಾನ
ಆದರೆ, ಈ ವರ್ಷ ಅದೇಕೋ ಏನೋ ಪ್ರವಾಸಿಗರು ಕಾಫಿನಾಡಿನತ್ತ ಮುಖ ಮಾಡಿಲ್ಲ. ಜಿಲ್ಲೆಯ ಇಂದಿನ ಸ್ಥಿತಿ ಕೆಲ ಪ್ರವಾಸಿಗರು ಹಾಗೂ ಸ್ಥಳೀಯರಲ್ಲೇ ಆಶ್ಚರ್ಯ ತಂದಿದೆ. ಕೋರೋನ ವೇಳೆಯಲ್ಲಿ ನಿರ್ಬಂಧವಿದ್ದರೂ ಜನ ಬಂದು ವಾಪಸ್ ಹೋಗುತ್ತಿದ್ದರು. ಆದರೆ, ಈಗ ಯಾವುದೇ ನಿರ್ಬಂಧ ಇಲ್ಲ. ಜೊತೆಗೆ ವೀಕ್ಎಂಡ್ ಸಾಲದಕ್ಕೆ ಬೇಸಿಗೆ ರಜೆ ಆದರೂ ಪ್ರವಾಸಿಗರು ಬಾರದಿರುವುದನ್ನ ಕಂಡು ಸ್ಥಳಿಯರು ನಾವು ಮೂರ್ನಾಲ್ಕು ದಶಕಗಳಿಂದ ಇಂತಹಾ ಮುಳ್ಳಯ್ಯನಗಿರಿಯನ್ನ ನೋಡಿಲ್ಲ ಅಂತಾರೆ ಸ್ಥಳಿಯರು.
ಇದನ್ನೂ ಓದಿ: James: ಅಪ್ಪು ವಾಯ್ಸ್ನಲ್ಲೇ ರೀ ರಿಲೀಸ್ ಆಯ್ತು ಜೇಮ್ಸ್! 'ರಾಜರತ್ನ'ನ ಧ್ವನಿ ಕೇಳಿ ಫ್ಯಾನ್ಸ್ ಭಾವುಕ
ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಕೆ
ಗಿರಿಭಾಗದಲ್ಲಿ ಪ್ರವಾಸಿಗರ ಸಂಖ್ಯೆ ಎಷ್ಟರ ಮಟ್ಟಿಗೆ ಕುಸಿದಿದೆ ಅಂದರೆ ಗುಡ್ಡದ ತುದಿಯಲ್ಲಿ ನಿಂತು ಲೆಕ್ಕ ಹಾಕಿದರೂ ಅಬ್ಬಾಬ್ಬ ಅಂದ್ರೆ 150-200 ಜನ ಇರಬಹುದು. ಜಿಲ್ಲೆಯ ಇಂದಿನ ಈ ಸ್ಥಿತಿಗೆ ಬಿಸಿಳ ಝಳ ಕೂಡ ಕಾರಣ ಎಂದು ಅಂದಾಜಿಸಲಾಗಿದೆ. ಯಾಕಂದ್ರೆ, ಜಿಲ್ಲೆಯಲ್ಲಿ ಪ್ರಸ್ತುತ ಶೇಕಡ 30ಕ್ಕೂ ಅಧಿಕ ಬಿಸಿಲಿನ ತಾಪಮಾನವಿದೆ. ಮುಳ್ಳಯ್ಯನಗಿರಿಯ ಗುಡ್ಡದ ತುದಿಯಲ್ಲೂ ಕೂಡ ಬಿಸಿಲ ಧಗೆ ನೆತ್ತಿಯನ್ನ ಸುಡುತ್ತಿದೆ.
ಸಾಲು ಸಾಲು ರಜೆಗಳಿದ್ರೂ ಬರ್ತಿಲ್ಲ
ಗಿರಿ ಭಾಗದಲ್ಲಿ ತಣ್ಣನೆಯ ಗಾಳಿ ಬೀಸುತ್ತಿದ್ದರೂ ಬಿಸಿಲ ಬೇಗೆ ಪ್ರವಾಸಿಗರನ್ನ ಹೈರಾಣಾಗಿಸಿದೆ. ಬರೀ ಬೆಟ್ಟ-ಗುಡ್ಡಗಳಿಂದಲೇ ಕೂಡಿದ ಮುಳ್ಳಯ್ಯನಗಿರಿ ಭಾಗದಲ್ಲಿ ಬಿಸಿಲಿನಿಂದ ಸುಧಾರಿಸಿಕೊಳ್ಳಲು ನಿಲ್ಲೋದಕ್ಕೂ ನೆರಳಿನ ಸೌಲಭ್ಯವಿಲ್ಲ. ಹಾಗಾಗಿ, ಇತಿಹಾಸದಲ್ಲಿ ಮೊದಲ ಬಾರಿಗೆ ಬೇಸಿಗೆ ರಜೆ ಹಾಗೂ ಕಂಟಿನ್ಯೂ ನಾಲ್ಕೈದು ದಿನ ರಜೆ ಇದ್ದರೂ ಕೂಡ ಪ್ರವಾಸಿಗರ ಹಾಟ್ಸ್ಟಾಪ್ ಕಾಫಿನಾಡಲ್ಲಿ ಪ್ರವಾಸಿಗರಲ್ಲಿದೆ ಪ್ರವಾಸಿ ತಾಣಗಳದಲ್ಲಿ ಅನಾಥ ಪ್ರಜ್ಞೆ ಕಾಡ್ತಿದೆ.
ಇದನ್ನೂ ಓದಿ: Basava Jayanti 2022: ಆಂಧ್ರ ಪ್ರದೇಶದಲ್ಲೂ ಬಸವ ಜಯಂತಿ ಆಚರಣೆಗೆ ಆದೇಶ, ಪ್ರಧಾನಿ ಮೋದಿಯಿಂದ ಸ್ಮರಣೆ
ಒಟ್ಟಾರೆ, ಏಪ್ರಿಲ್-ಮೇ ತಿಂಗಳಲ್ಲಿ ಮುಳ್ಳಯ್ಯನಗಿರಿಯಲ್ಲಿ ಭಾಗದಲ್ಲಿ ಪ್ರವಾಸಿಗರು ಜೇನುನೋಣಗಳಂತೆ ತುಂಬಿರುತ್ತಿದ್ದರು. ಆದರೆ, ಈ ಬಾರಿಯ ರಣ ಬಿಸಿಲು ಜಿಲ್ಲೆಯ ಜನ, ಪ್ರವಾಸೋದ್ಯಮ ಜೊತೆ ಪ್ರವಾಸಿಗರನ್ನೂ ಸುಡುತ್ತಿದೆ. ಹಾಗಾಗಿ, ಭಾರೀ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರೇ ಇಲ್ಲದಂತಾಗಿದೆ. ಹಾಗಾಗಿ, ಇಲ್ಲಿನ ಬಿಸಿಲಿನ ಧಗೆ ಕಂಡ ಜನ ಹಾಗೂ ಪ್ರವಾಸಿಗರು ಉಯ್ಯೋ, ಉಯ್ಯೋ, ಮಳೆರಾಯ ಮುಳ್ಳಯ್ಯನಗಿರಿ ಸುಡುತ್ತಿದೆ ಎಂದು ಪದಕಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ