Deadly Humps: ಅವೈಜ್ಞಾನಿಕ ಹಂಪ್ ನಿಂದ ಆಕ್ಸಿಡೆಂಟ್; ಸುನೇತ್ರಾ ಪಂಡಿತ್ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಪುಣ್ಯಕ್ಕೆ ಅಮ್ಮ ಹೆಲ್ಮೆಟ್ ಹಾಕಿದ್ರು, ಇಲ್ಲ ಅಂದಿದ್ರೆ ದೊಡ್ಡ ಮಟ್ಟದ ಗಾಯವಾಗಿರೋದು. ಸದ್ಯ ಯಾವುದೇ ಸಮಸ್ಯೆ ಇಲ್ಲ, ಚಿಕ್ಕಪುಟ್ಟ ಗಾಯವಾಗಿದೆ. ಈಗ ಆರಾಮಾಗಿದ್ದಾರೆ, ಡಾಕ್ಟರ್ ಏನ್ ಹೇಳ್ತಾರೆ ನೋಡ್ಕೊಂಡು ಡಿಸ್ಚಾರ್ಚ್ ಮಾಡಿಕೊಂಡು ಹೋಗಲಾಗುತ್ತದೆ ಎಂದು ಪುತ್ರಿ ಶ್ರೇಯಾ ಹೇಳಿದ್ದಾರೆ.

ಸುನೇತ್ರಾ ಪಂಡಿತ್

ಸುನೇತ್ರಾ ಪಂಡಿತ್

  • Share this:
ಕಿರುತೆರೆ ನಟಿ ಸುನೇತ್ರಾ ಪಂಡಿತ್ (Sunetra Pandit Accident) ಅವರ ಸ್ಕೂಟಿ ಅಪಘಾತಕ್ಕೆ ಅವೈಜ್ಞಾನಿಕ ಹಂಪ್ ನಿರ್ಮಾಣವೇ ಕಾರಣ (Unscientific Road Humps) ಎಂದು ತಿಳಿದು ಬಂದಿದೆ. ರಾತ್ರಿ ಶೂಟಿಂಗ್ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸುನೇತ್ರಾ ಅವರ ಸ್ಕೂಟಿ, ಬಸವನಗುಡಿಯ ಎನ್.ಆರ್.ಕಾಲೋನಿ (NR Colony, Basavanagudi) ಬಳಿಕ ಅಪಘಾತಕ್ಕೀಡಾಗಿತ್ತು. ಸುನೇತ್ರಾ ಅವರ ಸ್ಕೂಟಿ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಕ್ಯಾಮೆರಾ (CCTV Footage) ಸೆರೆಯಾಗಿದ್ದು, ಅವೈಜ್ಞಾನಿಕ ಹಂಪ್ ನಿರ್ಮಾಣವೇ ಇದಕ್ಕೆ ಕಾರಣ ಎನ್ನಲಾಗುತ್ತದೆ. ಹಂಪ್ ಕ್ರಾಸ್ ಮಾಡಿದ ಬಳಿಕ ಸ್ಕೂಟಿ ನಿಯಂತ್ರಣ ಕಳೆದುಕೊಂಡು ಬಿದ್ದಿದೆ. ಸುನೇತ್ರಾ ಅವರು ಬದ್ದ ರಭಸಕ್ಕೆ ಹೆಲ್ಮೆಟ್ (Helmet) ಸಹ ದೂರದಲ್ಲಿ ಕಳಚಿ ಬಿದ್ದಿದೆ.  ಈ ವೇಳೆ ಅಲ್ಲಿಗೆ ಆಟೋ ಚಾಲಕ ಮತ್ತು ಸ್ಥಳೀಯರು ಸುನೇತ್ರಾ ಅವರನ್ನು ಕಾರ್ ನಲ್ಲಿ ಬಸವನಗುಡಿಯ ಖಾಸಗಿ ಆಸ್ಪತ್ರೆಗೆ (Private Hospital) ದಾಖಲಿಸಿದ್ದಾರೆ. ಹೆಲ್ಮೆಟ್ ಹಾಕಿದ್ದರಿಂದ ಸಣ್ಣ ಪ್ರಮಾಣದ ಗಾಯಗಳಾಗಿದೆ.

ಇನ್ನು ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಸುನೇತ್ರಾ ಪುತ್ರಿ ಶ್ರೇಯಾ, ರಾತ್ರಿ ಹನ್ನೊಂದು ಮುಕ್ಕಾಲು ಗಂಟೆಗೆ ಘಟನೆ ನಡೆದಿದೆ. ನಿನ್ನೆ ಶೂಟಿಂಗ್ ಮುಗಿಸಿ ,ಒಂದು ಮೀಟಿಂಗ್ ಇತ್ತು. ಹಂಪ್ ಕಾಣಿಸಿದೇ ಸ್ಕೂಟಿ ಜಂಪ್ ಆಗಿದೆ, ನಂತರ ಅಲ್ಲಿ ಪಾಟ್ ಹೋಲ್ ಇದ್ದಿದರಿಂದ ಅಪಘಾತವಾಗಿದೆ ಎಂದು ಹೇಳುತ್ತಿದ್ದಾರೆ.

ಪುಣ್ಯಕ್ಕೆ ಅಮ್ಮ ಹೆಲ್ಮೆಟ್ ಹಾಕಿದ್ರು

ಪುಣ್ಯಕ್ಕೆ ಅಮ್ಮ ಹೆಲ್ಮೆಟ್ ಹಾಕಿದ್ರು, ಇಲ್ಲ ಅಂದಿದ್ರೆ ದೊಡ್ಡ ಮಟ್ಟದ ಗಾಯವಾಗಿರೋದು. ಸದ್ಯ ಯಾವುದೇ ಸಮಸ್ಯೆ ಇಲ್ಲ, ಚಿಕ್ಕಪುಟ್ಟ ಗಾಯವಾಗಿದೆ. ಈಗ ಆರಾಮಾಗಿದ್ದಾರೆ, ಡಾಕ್ಟರ್ ಏನ್ ಹೇಳ್ತಾರೆ ನೋಡ್ಕೊಂಡು ಡಿಸ್ಚಾರ್ಚ್ ಮಾಡಿಕೊಂಡು ಹೋಗಲಾಗುತ್ತದೆ ಎಂದು ಶ್ರೇಯಾ ಹೇಳಿದ್ದಾರೆ.

ಇದನ್ನೂ ಓದಿ:  Sunetra Pandit: ಶೂಟಿಂಗ್ ಮುಗಿಸಿ ಮನೆಗೆ ತೆರಳ್ತಿದ್ದ ನಟಿ ಸುನೇತ್ರಾ ಪಂಡಿತ್ ಸ್ಕೂಟಿ ಅಪಘಾತ

ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಹೇಳಿಕೆ

ಸುನೇತ್ರಾ ನಮಗೆ ಹಳೇ ಪರಿಚಯ. ನಿನ್ನೆ ಹೊರಗಡೆ ಹೋಗಿ ವಾಪಸ್ಸು ಬರುವಾಗ ಈ ಘಟನೆ ನಡೆದಿದೆ.. ಹಂಪ್ ನೋಡಿ ಬ್ರೇಕ್ ಹಾಕಿ, ಅಪಘಾತ ನಡೆದಿದೆ.. ಸದ್ಯ ಆರಾಮವಾಗಿ ಇದ್ದಾರೆ, ತಲೆಗೆ ಸ್ವಲ್ಪ ಪೆಟ್ಟಾಗಿದೆ ಚಿಕಿತ್ಸೆ ನಡೆಯುತ್ತಿದೆ. ಅಲ್ಲಿನ ಸ್ಥಳೀಯರು ಮನೆಯ ಎರಡು ಕಡೆಗಳಲ್ಲಿ ಹಂಪ್ ಹಾಕಿ ಅಂತಾರೆ. ಹಾಗಾಗಿ ಹಂಪ್ ಗಳ ಸಂಖ್ಯೆ ಹೆಚ್ಚಾಗಿದೆ. ಸುನೇತ್ರಾ ಕುಟುಂಬಕ್ಕೆ ಯಾವುದೇ ಸಹಾಯ ಬೇಕಾದ್ರು ಮಾಡ್ತೀವಿ ಎಂದು ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಹೇಳಿದ್ದಾರೆ.ಸ್ಥಳೀಯ ನಿವಾಸಿ ಹೇಳಿಕೆ

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸ್ಥಳೀಯ ನಿವಾಸಿ ಶಶಿಕುಮಾರ್, ಜೋರಾದ ಸದ್ದು ಕೇಳಿದ್ದರಿಂದ ಮಲಗಿದ್ದ ನಾನು ಹೊರಗೆ ಓಡಿ ಬಂದೆ. ಸ್ಕೂಟಿ ಹಂಪ್ ಜಂಪ್ ಮಾಡಿದಾಗ ಸ್ಕೂಟಿಯ ಗಾಲಿ ಮುಂದಿದ್ದ ಹಳ್ಳದಲ್ಲಿ ಸಿಲುಕಿದ್ದರಿಂದ ಅಪಘಾತ ಆಗಿದೆ. ತಲೆಯ ಭಾಗಕ್ಕೆ ಗಂಭೀರ ಗಾಯವಾಗಿ ರಕ್ತ ಬರುತ್ತಿತ್ತು. ಕೂಡಲೇ ಅವರನ್ನ ಕೆಲವರು ಕಾರ್ ಮೂಲಕ ಆಸ್ಪತ್ರೆಗೆ ಶಿಫ್ಟ್ ಮಾಡಲಾಯ್ತು. ಆನಂತರ ಬಂದ ಜನರು ಅವರನ್ನು ನಟಿ ಸುನೇತ್ರಾ ಎಂದು ಗುರುತಿಸಿದರು ಅಂತ ಶಶಿಕುಮಾರ್ ಹೇಳುತ್ತಾರೆ.

ಇಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ಹಂಪ್ ನಿಂದ ಯಾವಾಗ ಅಪಘಾತಗಳು ಸಂಭವಿಸುತ್ತವೆ. 15 ದಿನ ಹಿಂದೆಯೇ ದಂಪತಿ ಇಲ್ಲಿಯೇ ಬಿದ್ದಿದ್ದರು ಎಂದು ಸ್ಥಳೀಯ ನಿವಾಸಿ ನ್ಯೂಸ್ 18 ಕನ್ನಡಕ್ಕೆ ಹೇಳುತ್ತಾರೆ.

ಇದನ್ನೂ ಓದಿ:  Hassan: ನನ್ನ ಮಗಳನ್ನ ಹುಡುಕಿಕೊಡಿ: ವಿಷದ ಬಾಟೆಲ್ ಹಿಡಿದು ಜಿಲ್ಲಾಧಿಕಾರಿಗಳ ಬಳಿ ಬಂದ ತಾಯಿ

ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ನ್ಯೂಸ್ 18 ಅಭಿಯಾನ

ರಾಜ್ಯ ರಾಜಧಾನಿಯಲ್ಲಿ ರಸ್ತೆಗಳ ಬಗ್ಗೆ ನಿಮ್ಮ ನ್ಯೂಸ್ 18 ಕನ್ನಡ ಅಭಿಯಾನ ಸಹ ಮಾಡಿತ್ತು. ಆದ್ರೂ ಬಿಬಿಎಂಪಿ ಮಾತ್ರ ಎಚ್ಚೆತ್ತುಕೊಂಡಿಲ್ಲ. ರಸ್ತೆಯಲ್ಲಿರುವ ಗುಂಡಿಗಳ ಬಗ್ಗೆ ಹೈಕೋರ್ಟ್ ಚಾಟಿ ಬೀಸಿದ್ರೂ ಬಿಬಿಎಂಪಿ ಎಚ್ಚೆತ್ತುಕೊಂಡಿಲ್ಲ.
Published by:Mahmadrafik K
First published: