ಸಂಸತ್ತಿನಲ್ಲಿ ಸುಮಲತಾ ಚೊಚ್ಚಲ ಭಾಷಣ; ಕನ್ನಡದಲ್ಲೇ ಕುಡಿಯುವ ನೀರು ಕೇಳಿದ ಮಂಡ್ಯದ ನೂತನ ಸಂಸದೆ!

ರಾಜ್ಯದಲ್ಲಿ ಅದರಲ್ಲೂ ಪ್ರಮುಖವಾಗಿ ಕಾವೇರಿ ಕೊಳ್ಳದ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ಕಬ್ಬು-ಭತ್ತ ಬೆಳೆಗಾರರು ಸತತ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕೃಷಿ ಸಾಲವನ್ನು ತೀರಿಸಲಾಗದೆ ರೈತರು ಪರಿತಪಿಸುತ್ತಿದ್ದಾರೆ. ಹೀಗಾಗಿ ನಾವೆಲ್ಲರೂ ರೈತರ ಬೆನ್ನಿಗೆ ನಿಲ್ಲಬೇಕಾದ ಅವಶ್ಯಕತೆ ಇದೆ ಎಂದು ನೂತನ ಸಂಸದೆ ಸುಮಲತಾ ಸಂಸತ್​ನಲ್ಲಿ ಮನವಿ ಮಾಡಿದ್ದಾರೆ.

MAshok Kumar | news18
Updated:July 2, 2019, 2:07 PM IST
ಸಂಸತ್ತಿನಲ್ಲಿ ಸುಮಲತಾ ಚೊಚ್ಚಲ ಭಾಷಣ; ಕನ್ನಡದಲ್ಲೇ ಕುಡಿಯುವ ನೀರು ಕೇಳಿದ ಮಂಡ್ಯದ ನೂತನ ಸಂಸದೆ!
ನಟಿ ಸುಮಲತಾ
  • News18
  • Last Updated: July 2, 2019, 2:07 PM IST
  • Share this:
ನವ ದೆಹಲಿ (ಜುಲೈ.02); “ಕರ್ನಾಟಕ ಹಾಗೂ ನನ್ನ ಕ್ಷೇತ್ರವಾದ ಮಂಡ್ಯ ಜಿಲ್ಲೆಯ ನೀರಿನ ಸಮಸ್ಯೆ ತಾರಕಕ್ಕೇರಿದೆ. ಜನ-ಜಾನುವಾರು ಕುಡಿಯಲು ಸಹ ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಹೀಗಾಗಿ ಮಂಡ್ಯಕ್ಕೆ ನೀರು ಬಿಡಿ” ಸಂಸತ್ನಲ್ಲಿ ತಾವು ಮಾಡಿದ ಮೊದಲ ಭಾಷಣದಲ್ಲೇ ಹೀಗೆ ಕನ್ನಡದಲ್ಲಿ ನೀರು ಕೇಳುವ ಮೂಲಕ ನೂತನ ಸಂಸದೆ ಸುಮಲತಾ ಗಮನ ಸೆಳೆದಿದ್ದಾರೆ.

ಪ್ರತಿ ದಿನದ ಅಧಿವೇಶನದಲ್ಲೂ ಲೋಕಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಸಂಸದರಿಗೆ ಸರದಿಯ ಮೇಲೆ ಭಾಷಣ ಮಾಡಲು ಅನುವು ಮಾಡಿಕೊಡುವ ವಾಡಿಕೆ ಇದೆ. ಇದರಂತೆ ಇಂದು ತಮ್ಮ ಭಾಷಣದ ಅವಧಿಯಲ್ಲಿ ಮಂಡ್ಯದ ರೈತರ ಸಮಸ್ಯೆಯನ್ನು ಮೊದಲು ಕನ್ನಡದಲ್ಲೇ ಪ್ರಸ್ತಾಪಿಸಿ ನಂತರ ಇಂಗ್ಲೀಷ್ನಲ್ಲಿ ಮನವರಿಕೆ ಮಾಡಿಕೊಡುವ ಮೂಲಕ ಸಂಸದೆ ಸುಮಲತಾ ಇಡೀ ಸದನದ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ : ಸುಮಲತಾ ಕಾಂಗ್ರೆಸ್​ಗೆ ಸೇರ್ಪಡೆಯಾಗ್ತಾರ? ಹೀಗೊಂದು ಪ್ರಶ್ನೆಗೆ ಕಾರಣವಾಗಿದೆ ಮಂಡ್ಯದ ಪೋಸ್ಟರ್​ ಬ್ಯಾನರ್​ಗಳು!

“ರಾಜ್ಯದಲ್ಲಿ ಅದರಲ್ಲೂ ಪ್ರಮುಖವಾಗಿ ಕಾವೇರಿ ಕೊಳ್ಳದ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ಕಬ್ಬು-ಭತ್ತ ಬೆಳೆಗಾರರು ಸತತ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕೃಷಿ ಸಾಲವನ್ನು ತೀರಿಸಲಾಗದೆ ರೈತರು ಪರಿತಪಿಸುತ್ತಿದ್ದಾರೆ. ಹೀಗಾಗಿ ನಾವೆಲ್ಲರೂ ರೈತರ ಬೆನ್ನಿಗೆ ನಿಲ್ಲಬೇಕಾದ ಅವಶ್ಯಕತೆ ಇದೆ” ಎಂದು ಮನವಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಕುರಿತು ಗಮನ ಸೆಳೆದ ಸುಮಲತಾ, “ಮಂಡ್ಯ ಜನರ ಕುಡಿಯುವ ಹಾಗೂ ಬೇಸಿಗೆ ಬೆಳೆಗೆ 2 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ನಾನು ಈಗಾಗಲೆ ಜಲಶಕ್ತಿ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ. ಈ ಕುರಿತು ಪ್ರಧಾನಿ ಹಾಗೂ ಜಲಶಕ್ತಿ ಸಚಿವರು ತುರ್ತಾಗಿ ಗಮನವಹಿಸಬೇಕಿದೆ. ಅಲ್ಲದೆ ರಾಜ್ಯದ ಬರ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರ ಕೂಡಲೇ ಮುಂದಾಗಬೇಕು, ಎಲ್ಲರೂ ಒಟ್ಟಾಗಿ ಸಮಸ್ಯೆ ಬಗೆಹರಿಸಬೇಕು” ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ಮಂಡ್ಯದ ಕೆಲ ಕಾಂಗ್ರೆಸ್ ನಾಯಕರ ರಾಜಕೀಯ ಅಸ್ತಿತ್ವಕ್ಕೆ ದಾಳವಾದ್ರ ಸುಮಲತಾ?; ಅಡಕತ್ತರಿಗೆ ಸಿಲುಕಿದ ರೆಬಲ್ ನಾಯಕಿ!

First published:July 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...