ಮಂಡ್ಯದಲ್ಲಿ ಸುಮಲತಾ V/S ನಿಖಿಲ್​​​: ಹಣ, ಹಸು, ಎಮ್ಮೆ, ಆಡು, ಕುರಿ, ಕೋಳಿ ಪಣಕ್ಕಿಟ್ಟು ಬೆಟ್ಟಿಂಗ್​​ಗೆ ಮುಂದಾದ ಜನ

ಮಂಡ್ಯದಲ್ಲಿ ಮತದಾನ ಮುಗಿಯುತ್ತಿದಂತೆಯೇ ಸೋಲು-ಗೆಲುವಿನ ಬಗ್ಗೆ ಆಂತರಿಕ ಸಮೀಕ್ಷೆಗಳು ಶುರುವಾಗಿವೆ. ಈಗಾಗಲೇ ಒಂದಷ್ಟು ಸಮೀಕ್ಷೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲ ಜನರನ್ನು ಮತ್ತಷ್ಟು ಕೆರಳಿಸಿದೆ.

ಸುಮಲತಾ ಅಂಬರೀಷ್​ ಮತ್ತು ನಿಖಿಲ್ ಕುಮಾರಸ್ವಾಮಿ

ಸುಮಲತಾ ಅಂಬರೀಷ್​ ಮತ್ತು ನಿಖಿಲ್ ಕುಮಾರಸ್ವಾಮಿ

  • Share this:
ಮಂಡ್ಯ(ಏ.21): ರಾಜ್ಯದಲ್ಲಿ ಮೊದಲ ಹಂತದ ಮತದಾನ ಮಗಿಯುತ್ತಿದ್ದಂತೆಯೇ ಮಂಡ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಸೋಲು-ಗೆಲುವಿನ ಲೆಕ್ಕಚಾರ ಜೋರಾಗಿ ನಡೆಯುತ್ತಿದೆ. ಸಿಎಂ ಎಚ್​​​.ಡಿ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ಅವ​​ರಿಗೆ ಪ್ರತಿಷ್ಠೆಯ ಕಣವೆಂದೇ ಕರೆಯಲಾಗುತ್ತಿರುವ ಈ ಕ್ಷೇತ್ರದಲ್ಲಿ ಬೆಟ್ಟಿಂಗ್​​ ಹಾವಳಿ ಹೆಚ್ಚಾಗಿದೆ. ಕ್ಷೇತ್ರದ ಜನತೆ ಹಳ್ಳಿ ಹಳ್ಳಿಗಳಲ್ಲಿ ಸೋಲು- ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಒಂದಷ್ಟು ಜನ ಹಣ, ಹಸು, ಎಮ್ಮೆ, ಆಡು, ಕುರಿ, ಕೋಳಿಯನ್ನು ಪಣಕ್ಕಿಟ್ಟು ಬೆಟ್ಟಿಂಗ್​​ ದಂಧೆಗೆ ಮುಂದಾಗಿದ್ಧಾರೆ.

ಮಂಡ್ಯದಲ್ಲಿನ ಬೆಟ್ಟಿಂಗ್​​ ದಂಧೆಗೆ ಬ್ರೇಕ್​​ ಹಾಕಲು ಪೊಲೀಸರು ಮುಂದಾಗಿದ್ಧಾರೆ. ಜಿಲ್ಲಾ ಅಪರಾಧ ವಿಭಾಗದ (ಡಿಸಿಬಿ) ಇನ್ಸ್​​​ಪೆಕ್ಟರ್ ನೇತೃತ್ವದಲ್ಲಿ ಐವರು ಪೋಲೀಸರ ತಂಡ ರಚಿಸಲಾಗಿದೆ. ಈಗಾಗಲೇ ಪೊಲೀಸರ ತಂಡ ಬೆಟ್ಟಿಂಗ್​​ ದಂಧೆ ಭೇದಿಸಲು ಮುಂದಾಗಿದೆ. ಅಲ್ಲದೇ ಬೆಟ್ಟಿಂಗ್​​ ಕಟ್ಟಿ ಸಿಕ್ಕಿಬಿದ್ದಲ್ಲಿ ಆರೋಪಿ ಜೈಲು ಸೇರೋದು ಗ್ಯಾರಂಟಿ ಎಂದು ಎಚ್ಚರಿಕೆ ನೀಡಲಾಗಿದೆ.

ಮಂಡ್ಯದಲ್ಲಿ ಮತದಾನ ಮುಗಿಯುತ್ತಿದಂತೆಯೇ ಸೋಲು-ಗೆಲುವಿನ ಬಗ್ಗೆ ಆಂತರಿಕ ಸಮೀಕ್ಷೆಗಳು ಶುರುವಾಗಿವೆ. ಈಗಾಗಲೇ ಒಂದಷ್ಟು ಸಮೀಕ್ಷೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲ ಜನರನ್ನು ಮತ್ತಷ್ಟು ಕೆರಳಿಸಿದೆ. ಈ ಮಧ್ಯೆ ಸುಮಲತಾ ಬೆಂಬಲಿಗರು ಕೂಡ ತಮ್ಮದೇ ಸಮೀಕ್ಷೆ ಬಿಡುಗಡೆ ಮಾಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಅಮೇಥಿ, ವಯನಾಡ್​​​ನಲ್ಲಿ ಸೋತ ಮೇಲೆ ರಾಹುಲ್ ಗೆಲ್ಲಲು​​ ಬೇರೆ ದೇಶಕ್ಕೆ ಹೋಗಬೇಕಾಗುತ್ತದೆ; ಬಿಜೆಪಿ

ಈ ಸಮೀಕ್ಷೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಬೆಟ್ಟಿಂಗ್ ಹಾವಳಿಗೆ ಕಾರಣವಾಗಿವೆ. ಇನ್ನು ಈ ಬೆಟ್ಟಿಂಗ್​​ನಿಂದ ಕ್ಷೇತ್ರದಲ್ಲಿ ಸಂಭವಿಸಬಹುದಾದ ಅಪಾಯ ತಪ್ಪಿಸಲು ಪೊಲೀಸ್ ಇಲಾಖೆ ಸಜ್ಜಾಗಿದೆ. ಹಾಗಾಗಿಯೇ ಬೆಟ್ಟಿಂಗ್ ಮೇಲೆ ವಿಶೇಷ ನಿಗಾ ವಹಿಸಲು ಡಿಸಿಬಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ 2ನೇ ಹಂತದ ಚುನಾವಣೆ; ಬಹಿರಂಗ ಪ್ರಚಾರಕ್ಕೆ ಇಂದು ತೆರೆ; ಏ.23ಕ್ಕೆ ಮತದಾನ

ಇನ್ನು ಕ್ಷೇತ್ರದ ಎಲ್ಲ ಪೊಲೀಸ್ ಠಾಣೆಗಳ ಸಬ್ ಇನ್ಸ್‍ಪೆಕ್ಟರ್​​ಗಳು ಬೆಟ್ಟಿಂಗ್​ ದಂಧೆ ಪತ್ತೆ ಹಚ್ಚಲು ಮುಂದಾಗಿದ್ಧಾರೆ. ಅಲ್ಲದೇ ಜನ ವೈಯಕ್ತಿಕವಾಗಿ ಬೆಟ್ಟಿಂಗ್ ಕಟ್ಟಿದರೆ ಅದನ್ನು ತಡೆಯುವುದು ಕಷ್ಟ. ಆದರೆ ಸಾರ್ವಜನಿಕವಾಗಿ ಬೆಟ್ಟಿಂಗ್​​ ದಂಧೆ ನಡೆಸಿದರೆ ತಡೆಯುತ್ತೇವೆ. ಆರೋಪಿಗಳನ್ನು ತಕ್ಷಣವೇ ಬಂಧಿಸುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.
-------------
First published: