ಕೆಆರ್‌ಎಸ್ ಬಿರುಕು‌; ತನಿಖೆ ನಡೆಸುವಂತೆ ಕೇಂದ್ರ ಸಚಿವರಿಗೆ ಸಂಸದೆ ಸುಮಲತಾ ಮನವಿ

ಒಕ್ಕೂಟ ಸರ್ಕಾರದ ಗಣಿ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ಕೃಷ್ಣರಾಜ ಜಲಸಾಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಸತ್ಯ ಶೋಧನೆ ಮಾಡಲು ಡ್ರೋನ್ ಸರ್ವೇ ಮಾಡಬೇಕು. ಈ ವಿಷಯದಲ್ಲಿ ಕೇಂದ್ರ ದೃಢವಾದ ನಿಲುವು ತೆಗೆದುಕೊಳ್ಳಬೇಕು ಎಂದು ಕೇಳಿಕೊಂಡಿದ್ದಾರೆ.

ಕೇಂದ್ರ ಜ ಶಕ್ತಿ ಸಚಿವ ಗಜೇಂದ್ರ ಸಿಂಗ್​ ಶೆಖಾವತ್​ ಅವರಿಗೆ ಮನವಿ ಸಲ್ಲಿಸಿದ ಸಂಸದೆ ಸುಮಲತಾ

ಕೇಂದ್ರ ಜ ಶಕ್ತಿ ಸಚಿವ ಗಜೇಂದ್ರ ಸಿಂಗ್​ ಶೆಖಾವತ್​ ಅವರಿಗೆ ಮನವಿ ಸಲ್ಲಿಸಿದ ಸಂಸದೆ ಸುಮಲತಾ

  • Share this:
ನವದೆಹಲಿ, ಜು. 20: ಅಕ್ರಮ ಕಲ್ಲು ಗಣಿಗಾರಿಕೆಯಿಂದ ಕೃಷ್ಣರಾಜ ಸಾಗರ ಬಿರುಕು‌ ಬಿಟ್ಟಿದೆ ಎಂಬ ಸ್ಫೋಟಕ ಮಾಹಿತಿ ಹೊರಹಾಕಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಈಗ ಈ ವಿಷಯವನ್ನು ತನಿಖೆ ಮಾಡುವಂತೆ ಒಕ್ಕೂಟ ಸರ್ಕಾರದ ಜಲಸಂಪನ್ಮೂಲ ಹಾಗೂ ಗಣಿ ಇಲಾಖೆಯನ್ನು ಒತ್ತಾಯಿಸಿದ್ದಾರೆ‌. ಅಲ್ಲದೆ ವಿಷಯವನ್ನು ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಚರ್ಚೆ ಮಾಡಲು ಅವಕಾಶ ನೀಡುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಕೇಳಿಕೊಂಡಿದ್ದಾರೆ.

ಮಂಗಳವಾರ ಒಕ್ಕೂಟ ಸರ್ಕಾರದ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿದ ಸಂಸದೆ ಸುಮಲತಾ ಅಂಬರೀಶ್, ಕೃಷ್ಣರಾಜ ಜಲಸಾಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಅಣೆಕಟ್ಟಿಗೆ ಅಪಾಯ ಉಂಟಾಗುತ್ತಿದೆ. ಈ ಬಗ್ಗೆ ಉನ್ನತ ಮಟ್ಟದ ಸಮಿತಿ ರಚಿಸಿ ತನಿಖೆ ನಡೆಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಅಲ್ಲದೆ ಒಕ್ಕೂಟ ಸರ್ಕಾರದ ಗಣಿ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ಕೃಷ್ಣರಾಜ ಜಲಸಾಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಸತ್ಯ ಶೋಧನೆ ಮಾಡಲು ಡ್ರೋನ್ ಸರ್ವೇ ಮಾಡಬೇಕು. ಈ ವಿಷಯದಲ್ಲಿ ಕೇಂದ್ರ ದೃಢವಾದ ನಿಲುವು ತೆಗೆದುಕೊಳ್ಳಬೇಕು ಎಂದು ಕೇಳಿಕೊಂಡಿದ್ದಾರೆ.

ಸೋಮವಾರ ಈ ಬಗ್ಗೆ ಮಾತನಾಡಿದ್ದ ಸುಮಲತಾ, 'ಕನ್ನಂಬಾಡಿ ಕಟ್ಟೆ ತನ್ನನ್ನು ಕಾಪಾಡುವಂತೆ ಕೂಗಿ ಹೇಳುತ್ತಿದೆ. ನಿನ್ನೆ ರಾತ್ರಿ ಸ್ಥಳೀಯರು ಕರೆ ಮಾಡಿ ಕೆಆರ್‌ಎಸ್ ಡ್ಯಾಂ ಗೋಡೆ ಕುಸಿದಿರುವ ಬಗ್ಗೆ ಮಾಹಿತಿ ನೀಡಿದರು. ಬಳಿಕ ನಾನು ಅಧಿಕಾರಿಗೆ ಕರೆ ಮಾಡಿ ಮಾಹಿತಿ ಕೇಳಿದೆ.‌ ಅಧಿಕಾರಿಗಳು ಎರಡು-ಮೂರು ಕಲ್ಲು ಬಿದ್ದಿವೆ ಎಂದು ಮಾಹಿತಿ ನೀಡಿದರು.‌ ಈ ಬಗ್ಗೆ ಫೋಟೋ ಮತ್ತು ವಿಡಿಯೋಗಳ ಮಾಹಿತಿ‌ ಕೇಳಿದ್ದೇನೆ. ಜೊತೆಗೆ ಸ್ಥಳದಲ್ಲಿರುವ ಅಧಿಕಾರಿಗಳೊಂದಿಗೆ ಮಾತನಾಡುವಂತೆ ಸೂಚಿಸಿದ್ದೇನೆ.‌ ಸ್ಥಳೀಯ ಅಧಿಕಾರಗಳಿಂದ ಜುಲೈ 18 ಸಂಜೆ 5:15ರ ಸುಮಾರಿಗೆ ಗೋಡೆ ಕುಸಿದಿದೆ ಎಂದಿದ್ದರು.

ನಂತರ ಜಿಲ್ಲಾಧಿಕಾರಿ ಜೊತೆಗೂ ಮಾತನಾಡಿದ್ದೇನೆ. ಡಿಸಿ ಕೂಡ ಹಳೆಯ ಗೋಡೆ ಕುಸಿದಿದೆ ಎಂದು ಹೇಳಿದ್ದಾರೆ. ಅವರ ಪ್ರಕಾರ ರಾತ್ರಿ 9.30 ಸಮಯದಲ್ಲಿ ಘಟನೆ ಆಗಿದೆ. ಎಲ್ಲರೂ ಸಮಯ ವಿಚಾರದಲ್ಲಿ ಸುಳ್ಳು ಹೇಳುತ್ತಿದ್ದಾರೆ. ಕೆಆರ್‌ಎಸ್  ಗೋಡೆ ಕುಸಿದಿರುವ ವಿಚಾರ ಬೇಜವಬ್ದಾರಿಯಿಂದ ವರ್ತಿಸುತ್ತಿದ್ದಾರೆ' ಎಂದು ಕಿಡಿ ಕಾರಿದ್ದರು.

ಇದನ್ನೂ ಓದಿ: ಸಿಎಂ ಕುರ್ಚಿಗೆ ಟವಲ್ ಹಾಕಿಕೊಂಡವರು ಯಡಿಯೂರಪ್ಪನ ಟೀಕಿಸ್ತಿದ್ದಾರೆ: ಸಿದ್ದರಾಮಯ್ಯಗೆ HDK ಗುದ್ದು!

ಕೆಆರ್‌ಎಸ್ ಅಣೆಕಟ್ಟು ಸದ್ಯಕ್ಕೆ ಸೇಫ್ ಆಗಿದೆ.‌ ಅದು ಹಾಗೆಯೇ ಚೆನ್ನಾಗಿ ಇರಬೇಕು ಎನ್ನುವುದು ನಮ್ಮ ಬಯಕೆ.‌ ಆದರೆ ಈಗ ಗೋಡೆ ಕುಸಿದಿರುವುದು ರೆಡ್ ಅಲರ್ಟ್ ಇದ್ದಂತೆ. ಕನ್ನಂಬಾಡಿ ತನ್ನನ್ನು ಕಾಪಾಡುವಂತೆ ಕೂಗಿ ಹೇಳುತ್ತಿದೆ.‌ ಯಾರೊಬ್ಬರು ಗೋಡೆ ಕುಸಿತಕ್ಕೆ ಸರಿಯಾದ ಕಾರಣ ಹೇಳ್ತಿಲ್ಲ. ರಾಜ್ಯ ಸರ್ಕಾರ ಈಗ ಮೌನವಾಗಿ ಕೂರಲು ಸಾಧ್ಯವಿಲ್ಲ. ಸರ್ಕಾರ ಉತ್ತರ ನೀಡಬೇಕು ಒಂದು ಒತ್ತಾಯಿಸಿದ್ದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: