ಕೆಆರ್ ಪೇಟೆ ಉಪಚುನಾವಣೆ; ಪಕ್ಷೇತರ ಅಭ್ಯರ್ಥಿಗೆ ಸುಮಲತಾ ಅಂಬರೀಶ್​ ಬೆಂಬಲ?

ಸರ್ವೆ ದೇವೇಗೌಡ ಪ್ರಚಾರದ ಫ್ಲೆಕ್ಸ್​​ನಲ್ಲಿ‌ ಸಂಸದೆ ಸುಮಲತಾ ಮತ್ತು ಅಂಬಿ ಭಾವಚಿತ್ರವಿದೆ. ಸ್ವಾಭಿಮಾನದ ಹೆಸರಿನಲ್ಲಿ ಸುಮಲತಾ ಭಾವಚಿತ್ರ ಹಾಕಿಕೊಂಡು ದೇವೇಗೌಡ ಪ್ರಚಾರ ಆರಂಭಿಸಿದ್ದಾರೆ.

Rajesh Duggumane | news18-kannada
Updated:November 22, 2019, 11:14 AM IST
ಕೆಆರ್ ಪೇಟೆ ಉಪಚುನಾವಣೆ; ಪಕ್ಷೇತರ ಅಭ್ಯರ್ಥಿಗೆ ಸುಮಲತಾ ಅಂಬರೀಶ್​ ಬೆಂಬಲ?
ಸಂಸದೆ ಸುಮಲತಾ ಅಂಬರೀಶ್
  • Share this:
ಮಂಡ್ಯ (ನ.22): ರಾಜ್ಯ ವಿಧಾನಸಭಾ ಉಪಚುನಾವಣೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಯಾವ ಪಕ್ಷ ಬೆಂಬಲಿಸುತ್ತಾರೆ ಎನ್ನುವ ಕುತೂಹಲ ಅನೇಕರಲ್ಲಿದೆ. ಈ ವಿಚಾರದಲ್ಲಿ ಸಂಸದೆ ಕೂಡ ಮೌನವಹಿಸಿದ್ದಾರೆ. ಈಗ ಕೆಆರ್​ ಪೇಟೆ ಉಪಚುನಾವಣೆಯಲ್ಲಿ ಸುಮಲತಾ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದಾರಾ ಎನ್ನುವ ಅನುಮಾನ ಮೂಡಿದೆ.

ಕೆಆರ್​ ಪೇಟೆ ಉಪಚುನಾವಣೆಯಲ್ಲಿ ಘಟಾನುಘಟಿಗಳು ಕಣಕ್ಕೆ ಇಳಿದಿದ್ದಾರೆ.  ಬಿಜೆಪಿಯಿಂದ ಕೆ.ಸಿ.ನಾರಾಯಣಗೌಡ, ಕಾಂಗ್ರೆಸ್​​ನಿಂದ ಕೆ.ಬಿ ಚಂದ್ರಶೇಖರ್, ಜೆಡಿಎಸ್​ನಿಂದ ದೇವರಾಜ್ ಬಿ.ಎಲ್, ಉತ್ತಮ ಪ್ರಜಾಕೀಯ ಪಕ್ಷದಿಂದ ಚಂದ್ರೇಗೌಡ ಎಚ್​ಎಂ, ಪುರ್ವಾಂಚಲ ಮಹಾ ಪಂಚಾಯತ್​ ಪಕ್ಷದಿಂದ ರೇವಣ್ಣ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸರ್ವೆ ದೇವೇಗೌಡ ಸ್ಪರ್ಧೆಗೆ ಇಳಿದಿದ್ದಾರೆ. ಸುಮಲತಾ ಸರ್ವೆ ದೇವೇಗೌಡರಿಗೆ ಬೆಂಬಲ ನೀಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

ಇದಕ್ಕೆ ಮುಖ್ಯ ಕಾರಣ, ಸರ್ವೆ ದೇವೇಗೌಡ ಪ್ರಚಾರದ ಫ್ಲೆಕ್ಸ್​​ನಲ್ಲಿ‌ ಸಂಸದೆ ಸುಮಲತಾ ಮತ್ತು ಅಂಬಿ ಭಾವಚಿತ್ರವಿದೆ. ಸ್ವಾಭಿಮಾನದ ಹೆಸರಿನಲ್ಲಿ ಸುಮಲತಾ ಭಾವಚಿತ್ರ ಹಾಕಿಕೊಂಡು ದೇವೇಗೌಡ ಪ್ರಚಾರ ಆರಂಭಿಸಿದ್ದಾರೆ.

ಇದನ್ನೂ ಓದಿ: ತನ್ವೀರ್ ಕೊಲೆ ಯತ್ನಕ್ಕೆ ಸ್ಫೋಟಕ ತಿರುವು; ಹಿಂದೂ ಮುಖಂಡನ ಕೊಲೆಗೂ ಈ ಪ್ರಕರಣಕ್ಕೂ ಇದೆ ಲಿಂಕ್?

ಅಂದಹಾಗೆ, ಸುಮಲತಾ ಪಕ್ಷೇತರ ಅಭ್ಯರ್ಥಿಗೆ ನೇರವಾಗಿ ಬೆಂಬಲ ನೀಡಿದ್ದಾರೋ ಅಥವಾ ಮತ ಗಳಿಕೆಗೆ ದೇವೇಗೌಡ ಸುಮಲತಾ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೋ ಎನ್ನುವ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕಿದೆ.

(ವರದಿ: ರಾಘವೇಂದ್ರ ಗಂಜಾಮ್​)
First published: November 22, 2019, 11:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading