ನಿಖಿಲ್​​ ನಾಮಪತ್ರ ಸಲ್ಲಿಕೆಯಲ್ಲಿ ಅವ್ಯವಹಾರ; ನಾಮಪತ್ರ ವಜಾ ಕೋರಿ ಸುಮಲತಾ ಬೆಂಬಲಿಗರ ಒತ್ತಾಯ!

ಅವಧಿ ಮುಗಿದ ಬಳಿಕ ಮತ್ತೆ ನಾಮಪತ್ರ ಸ್ವೀಕರಿಸಲಾಗಿದೆ. ಕಾನೂನು ಬಾಹಿರವಾಗಿ ಹೊಸ ಮಾದರಿ ನಾಮಪತ್ರವನ್ನು ಜಿಲ್ಲಾಧಿಕಾರಿ ಸ್ವೀಕರಿಸಿದ್ದಾರೆ. ಹೊಸ ಮಾದರಿಯಲ್ಲಿ 8 ಕಾಲಂ ಭರ್ತಿ ಮಾಡಬೇಕಿದ್ದ ಅಫಿಡವಿಟ್, ಹಳೇ ಮಾದರಿಯಂತೆ 6 ಕಾಲಂ ಭರ್ತಿ ಮಾಡಿ ಸಲ್ಲಿಸಿದ್ದರು- ಸುಮಲತಾ ಬೆಂಬಲಿಗ

Ganesh Nachikethu | news18
Updated:March 28, 2019, 6:33 PM IST
ನಿಖಿಲ್​​ ನಾಮಪತ್ರ ಸಲ್ಲಿಕೆಯಲ್ಲಿ ಅವ್ಯವಹಾರ; ನಾಮಪತ್ರ ವಜಾ ಕೋರಿ ಸುಮಲತಾ ಬೆಂಬಲಿಗರ ಒತ್ತಾಯ!
ನಿಖಿಲ್​ ಕುಮಾರಸ್ವಾಮಿ
  • News18
  • Last Updated: March 28, 2019, 6:33 PM IST
  • Share this:
ಮಂಡ್ಯ(ಮಾ.28): ಕರ್ನಾಟಕದಲ್ಲೀಗ ಚುನಾವಣೆ ಕಾವು ಜೋರಾಗಿದೆ. ಇತ್ತ ಕಾಂಗ್ರೆಸ್​​-ಜೆಡಿಎಸ್​​ ನಾಯಕರ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ಐಟಿ ದಾಳಿ ನಡೆಸುತ್ತಿದ್ದರೇ, ಅತ್ತ ಮಂಡ್ಯದಲ್ಲಿ ನಿಖಿಲ್​​ ನಾಮಪತ್ರ ಅಸಿಂಧುಗೊಳಿಸುವಂತೆ ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದಾರೆ. ಸುಮಲತಾ ಅಂಬರೀಶ್​​ ಬೆಂಬಲಿಗರು ಆಯೋಗಕ್ಕೆ ದೂರು ನೀಡಿ ಜೆಡಿಎಸ್​​ ಅಭ್ಯರ್ಥಿ ನಾಮಪತ್ರ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ. ಹೀಗಾಗಿ ಚುನಾವಣೆ ಹೊತ್ತಲ್ಲಿಯೇ ಮಾಜಿ ಪ್ರಧಾನಿ ದೇವೆಗೌಡರ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ.

ಮಂಡ್ಯದಲ್ಲಿ ಚುನಾವಣೆ ಕಣ ರಂಗೇರುತ್ತಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​​ ಅವರು ಚುನಾವಣೆ ಪ್ರಚಾರದ ಮೂಲಕ ಮತಬೇಟೆ ಆರಂಭಿಸಿದ್ದಾರೆ. ಈ ಬೆನ್ನಲ್ಲೇ ಜೆಡಿಎಸ್​​ ಪಾಳೆಯದಲ್ಲೀಗ ನಿಖಿಲ್​​​ ಕುಮಾರಸ್ವಾಮಿ ನಾಮಪತ್ರ ಅಸಿಂಧುವಾಗುತ್ತಾ? ಎಂಬ ಆಂತಕ ಮೂಡಿದೆ. ನಿಖಿಲ್ ಮೊದಲಿಗೆ​​ ಹೊಸ ಮಾದರಿಯಲ್ಲಿ ಅಲ್ಲದೇ ​​ಹಳೇ ಮಾದರಿಯಲ್ಲಿ ನಾಮಪತ್ರ ಸಲ್ಲಿಸಿದ್ದರು. ಬಳಿಕ ಖುದ್ದು ಮಂಡ್ಯ ಜಿಲ್ಲಾಧಿಕಾರಿಗಳು ನಿಖಿಲ್​​ ಅವರನ್ನು ಕರೆಸಿ ನಿನ್ನೆ  ಮತ್ತೆ ಹೊಸ ನಾಮಪತ್ರ ಸ್ವೀಕರಿಸಿದ್ದರು. ಇದೀಗ ಸುಮಲತಾ ಬೆಂಬಲಿಗರು ಇದರ ವಿರುದ್ಧ ಆಯೋಗಕ್ಕೆ ದೂರು ನೀಡುವ ಮೂಲಕ ನಿಖಿಲ್​​ ನಾಮಪತ್ರ ವಜಾಗೊಳಿಸುವಂತೆ ಪಟ್ಟು ಹಿಡಿದಿದ್ಧಾರೆ ಎನ್ನಲಾಗಿದೆ.

ಅವಧಿ ಮುಗಿದ ಬಳಿಕ ಮತ್ತೆ ನಾಮಪತ್ರ ಸ್ವೀಕರಿಸಲಾಗಿದೆ. ಕಾನೂನು ಬಾಹಿರವಾಗಿ ಹೊಸ ಮಾದರಿ ನಾಮಪತ್ರವನ್ನು ಜಿಲ್ಲಾಧಿಕಾರಿ ಸ್ವೀಕರಿಸಿದ್ದಾರೆ. ಹೊಸ ಮಾದರಿಯಲ್ಲಿ 8 ಕಾಲಂ ಭರ್ತಿ ಮಾಡಬೇಕಿದ್ದ ಅಫಿಡವಿಟ್, ಹಳೇ ಮಾದರಿಯಂತೆ 6 ಕಾಲಂ ಭರ್ತಿ ಮಾಡಿ ಸಲ್ಲಿಸಿದ್ದರು. ಆಗಲೇ ನಾವು ನಾಮಪತ್ರ ಪರಿಶೀಲನೆ ವೇಳೆಯಲ್ಲಿ ನಾವು ಆಕ್ಷೇಪ ಮಾಡಿದ್ದೆವು. ನಾಮಪತ್ರದ ಜತೆಗಿದ್ದ ಪ್ರಮಾಣ ಪತ್ರವನ್ನು ತೋರಿಸಲಿಲ್ಲ. ಕೇಳಿದ್ದಕ್ಕೆ ಲಿಖಿತ ದೂರು ನೀಡುವಂತೆ ಹೇಳಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ: ಜೆಡಿಎಸ್​ ಸಮಾವೇಶದ ವೇಳೆ ನೀತಿಸಂಹಿತೆ ಉಲ್ಲಂಘನೆ; ನಿಖಿಲ್ ಕುಮಾರಸ್ವಾಮಿ ವಿರುದ್ಧ ಮಂಡ್ಯದಲ್ಲಿ 3 ದೂರು​ ದಾಖಲು

ಇನ್ನು ಚುನಾವಣೆ ಆಯೋಗಕ್ಕೆ ನಾವು ದೂಡು ನೀಡಿದ ಬಳಿಕ ಮತ್ತೊಂದು ನಾಮಪತ್ರ ಪಡೆದಿರುವ ಶಂಕೆಯಿದೆ. ಎಲ್ಲಾ ಅಧಿಕಾರಿಗಳು ರಾಜ್ಯ ಸರ್ಕಾರದ ಜತೆ ಶಾಮೀಲಾಗಿದ್ದಾರೆ. ತಕ್ಷಣ ಜಿಲ್ಲಾಧಿಕಾರಿ ಸೇರಿ ಪ್ರಮುಖ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು. ಕಾನೂನು ಬಾಹಿರವಾಗಿ ಅಫಿಡವಿಟ್ ಸಲ್ಲಿಸಿದ್ದಾರೆ. ಹೀಗಾಗಿ ನಿಖಿಲ್ ನಾಮಪತ್ರ ಅಸಿಂಧುಗೊಳಸಬೇಕು. ಈಗಾಗಲೇ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ.  ಇಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ನ್ಯಾಯಾಲಯದ ಮೊರೆ ಹೋಗ್ತೀವಿ ಎಂದು ಸುಮಲತಾ ಅಂಬರೀಶ್ ಅವರ ಬೆಂಬಲಿಗರ ಮದನ್ ಹೇಳಿದ್ದಾರೆ.
--------------
First published: March 28, 2019, 3:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading