ಮೊದಲು ಬಿಜೆಪಿ, ಈಗ ಕಾಂಗ್ರೆಸ್​​​, ಮುಂದೆ ನನ್ನ ಜೆಡಿಎಸ್​​​ ಅಭ್ಯರ್ಥಿ ಎನ್ನಬಹುದು: ಸುಮಲತಾ!

ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಕೂಡಾ ಸುಮಲತಾ ಅಂಬರೀಶ್ ಅವರಿಗೆ ಬಹಿರಂಗವಾಗಿಯೇ ಬೆಂಬಲಿಸುತ್ತಿದ್ದು, ಮೈತ್ರಿ ಕೂಟದ ಅಭ್ಯರ್ಥಿ ನಿಖಿಲ್ ಕುಮಾರ್ ಅವರನ್ನು ಬೆಂಬಲಿಸುವುದು ಅನುಮಾನ ಎನ್ನಲಾಗುತ್ತಿದೆ. ಗಮನಾರ್ಹ ಸಂಗತಿಯೆಂದರೇ ಇಂದು ಮಾಜಿ ಶಾಸಕ ಚೆಲುವರಾಯ ಸ್ವಾಮಿ ಅವರು ಕೂಡ ಇಂದು ಹಳೆ ಮೈಸೂರು ಭಾಗದಲ್ಲಿ ಮೈತ್ರಿ ನಡೆಯಲ್ಲ ಎಂದು ಹೇಳಿದ್ದಾರೆ.

Ganesh Nachikethu | news18
Updated:April 6, 2019, 6:28 PM IST
ಮೊದಲು ಬಿಜೆಪಿ, ಈಗ ಕಾಂಗ್ರೆಸ್​​​, ಮುಂದೆ ನನ್ನ ಜೆಡಿಎಸ್​​​ ಅಭ್ಯರ್ಥಿ ಎನ್ನಬಹುದು: ಸುಮಲತಾ!
ಸುಮಲತಾ ಅಂಬರೀಶ್​
  • News18
  • Last Updated: April 6, 2019, 6:28 PM IST
  • Share this:
ಬೆಂಗಳೂರು(ಏ.06): "ಮೊದಲು ಬಿಜೆಪಿ, ಈಗ ಕಾಂಗ್ರೆಸ್​​​, ಮುಂದೆ ನನ್ನ ಜೆಡಿಎಸ್​​ ಅಭ್ಯರ್ಥಿ ಎಂದ್ರು ಅಚ್ಚರಿಯಿಲ್ಲ. ನಾನು ಮಂಡ್ಯ ಜನರಿಗಾಗಿಯೇ ಸ್ಪರ್ಧೆ ಮಾಡಿದ್ದೇನೆ. ಅವರು ಹೇಳಿದಂತೆಯೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ. ಚುನಾವಣೆ ಮುಗಿದ ಕೂಡಲೇ ನಾನು ಬಿಜೆಪಿ ಸೇರುತ್ತೇನೆ, ಮಂಡ್ಯ ಬಿಟ್ಟು ಹೋಗುತ್ತೇನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗುವುದಿಲ್ಲ" ಎಂದು ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದ್ಧಾರೆ. ಈ ಮೂಲಕ ಇಲ್ಲಸಲ್ಲದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಇಂದು ಮಂಡ್ಯದಲ್ಲಿ ಸುದ್ದಿಗಾರರ ಜತೆಗೆ ಮಾತಾಡಿದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​​​, ತಾವು ಬಿಜೆಪಿಗೆ ಸೇರುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಬಿಜೆಪಿ ನನಗೆ ಬೆಂಬಲ ನೀಡಿದೆ. ತಮ್ಮ ಪಕ್ಷಕ್ಕೆ ಬನ್ನಿ ಎಂಬ ಯಾವುದೇ ಷರತ್ತು ಹಾಕಿಲ್ಲ. ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಇಲ್ಲಿನ ಜನರ ಸೇವೆ ಮಾಡುತ್ತೇನೆ. ಅವರು ಹೇಳಿದಂತೆಯೇ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.

ಹಾಗೆಯೇ ನಾನು ಮಂಡ್ಯ ಬಿಟ್ಟು ಹೋಗುವುದಿಲ್ಲ. ಗೆದ್ದ ಮೇಲೆ ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಈ ಮೊದಲು ನಾನು ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂದರು. ಬಳಿಕ ಕಾಂಗ್ರೆಸ್​​ ಅಭ್ಯರ್ಥಿ ಎಂದು ಹೇಳಿದರು. ನಾಳೆ ನನ್ನನ್ನ ಜೆಡಿಎಸ್ ಅಭ್ಯರ್ಥಿ ಎಂದು ಕೂಡ ಹೇಳಬಹುದು. ಇದಕ್ಕೆಲ್ಲಾ ನಾವು ಕಿವಿಗೊಡಬಾರದು. ಚುನಾವಣೆಯಲ್ಲಿ ಈ ಎಲ್ಲಾ ಪ್ರಶ್ನೆಗಳಿಗೆ ಜನರೇ ನನ್ನ ಪರವಾಗಿ ಉತ್ತರ ನೀಡಲಿದ್ದಾರೆ ಎಂದು ಅಂಬರೀಶ್​​ ಪತ್ನಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮಂಡ್ಯ ಚುನಾವಣೆ ಸೋಲಿನ ಭೀತಿಯಲ್ಲಿ ಸಿಎಂ: ಸುಮಲತಾ, ದರ್ಶನ್​​, ಯಶ್​​ ಬೆನ್ನ ಹಿಂದೆ ಬಿದ್ದ ಗುಪ್ತಚರ ಇಲಾಖೆ; ಗೆಲ್ಲಲು ಎಚ್​​​ಡಿಕೆ ತಂತ್ರವೇನು?

ಲೋಕಸಭೆ ಚುನಾವಣೆಗೆ ಈಗಾಗಲೇ ದಿನಗಣನೆ ಶುರುವಾಗಿದೆ. ಕರ್ನಾಟಕದಲ್ಲೀಗ ಮಂಡ್ಯ ಚುನಾವಣೆ ಕಣ ಭಾರೀ ಸದ್ದು ಮಾಡುತ್ತಿದೆ. ಕಾಂಗ್ರೆಸ್​​-ಜೆಡಿಎಸ್​​​ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್​​ ಕುಮಾರಸ್ವಾಮಿ, ಇನ್ನೊಂದೆಡೆ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅವರು ಬಿರುಸಿನ ಪ್ರಚಾರ ಮಾಡುತ್ತಿದ್ಧಾರೆ. ನಿಖಿಲ್​​ ಗೆಲ್ಲಿಸಲು ಇಡೀ ಜೆಡಿಎಸ್​​​ ಟೊಂಕ ನಿಂತಿದ್ದರೇ, ಅತ್ತ ನಟರಾದ ದರ್ಶನ್​​ ಮತ್ತು ಯಶ್​​ ಸುಮಲತಾ ಅಂಬರೀಶ್​​ ಪರವಾಗಿ ಪ್ರಚಾರ ಮಾಡುತ್ತಿದ್ಧಾರೆ.

ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್​​ ಮಂಡ್ಯ ಕ್ಷೇತ್ರವನ್ನು ಜೆಡಿಎಸ್​​ಗೆ ಬಿಟ್ಟುಕೊಟ್ಟಿದೆ. ಈ ಕ್ಷೇತ್ರವನ್ನು ಜೆಡಿಎಸ್​​​ಗೆ ಬಿಟ್ಟುಕೊಟ್ಟಿರುವುದನ್ನು ವಿರೋಧಿಸಿದ ಸ್ಥಳೀಯ ಕಾಂಗ್ರೆಸ್ಸಿಗರು​​ ಬಹಿರಂಗವಾಗಿಯೇ ಸುಮಲತಾರಿಗೆ ಬೆಂಬಲಿಸುತ್ತಿದ್ದಾರೆ. ಈ ಕ್ಷೇತ್ರವನ್ನು ಈಗಾಗಲೇ ಜೆಡಿಎಸ್ ಗೆ ಬಿಟ್ಟು ಕೊಡಲಾಗಿದೆ. ನೀವು ಮೈತ್ರಿ ಧರ್ಮ ಪಾಲಿಸಿ ನಿಖಿಲ್​​ ಪರ ಕೆಲಸ ಮಾಡಬೇಕೆಂದು ಆದೇಶಿಸಿದರೂ ಹೈಕಮಾಂಡ್​​ಗೆ ಕ್ಯಾರೇ ಎನ್ನದ ಕಾಂಗ್ರೆಸ್ಸಿಗರು  ಅಂಬರೀಶ್ ಪತ್ನಿಯವರ ಜತೆಗೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ಧಾರೆ.

ಇದನ್ನೂ ಓದಿ: ‘ನಮ್ಮಪ್ಪ ಡ್ರೈವರ್​​​​, ನಾನು ಡ್ರೈವರ್​​​ ಮಗ, ನನಗೆ ಬಿಸಿಲು ಹೊಸದಲ್ಲ’: ಸಿಎಂಗೆ ಯಶ್​​ ತಿರುಗೇಟು!
Loading...

ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಕೂಡಾ ಸುಮಲತಾ ಅಂಬರೀಶ್ ಅವರಿಗೆ ಬಹಿರಂಗವಾಗಿಯೇ ಬೆಂಬಲಿಸುತ್ತಿದ್ದು, ಮೈತ್ರಿ ಕೂಟದ ಅಭ್ಯರ್ಥಿ ನಿಖಿಲ್ ಕುಮಾರ್ ಅವರನ್ನು ಬೆಂಬಲಿಸುವುದು ಅನುಮಾನ ಎನ್ನಲಾಗುತ್ತಿದೆ. ಗಮನಾರ್ಹ ಸಂಗತಿಯೆಂದರೇ ಇಂದು ಮಾಜಿ ಶಾಸಕ ಚೆಲುವರಾಯ ಸ್ವಾಮಿ ಅವರು ಕೂಡ ಹಳೆ ಮೈಸೂರು ಭಾಗದಲ್ಲಿ ಮೈತ್ರಿ ನಡೆಯಲ್ಲ ಎಂದು ಹೇಳಿದ್ದಾರೆ.
-------------
First published:April 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...