Sumalatha Ambareesh: ಮಂಡ್ಯದಿಂದ ಕಣಕ್ಕಿಳಿಯುವ ಇಂಗಿತ ಹೊರಹಾಕಿದ ಸಂಸದೆ

ಸುಮಲತಾ ಅಂಬರೀಶ್, ಮಂಡ್ಯ ಸಂಸದೆ

ಸುಮಲತಾ ಅಂಬರೀಶ್, ಮಂಡ್ಯ ಸಂಸದೆ

ಅವಶ್ಯಕತೆ ಬಿದ್ರೆ ಚುನಾವಣೆ ಆಯೋಗಕ್ಕೆ ದೂರು ನೀಡುವೆ. ಅವರು ನನಗೆ ವಾರ್ನಿಂಗ್ ಕೊಡ್ತಿದ್ದಾರಾ ಏನು ಎಂದು ಕ್ಲಿಯರ್ ಮಾಡಬೇಕು ಎಂದು ಆಗ್ರಹಿಸಿದರು.

  • Share this:

ಮಂಡ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ (Loksabha Election) ಮಂಡ್ಯ (Mandya) ಕ್ಷೇತ್ರ ಇಡೀ ದೇಶದ ಗಮನ ಸೆಳೆದಿತ್ತು. ಇದೀಗ ವಿಧಾನಸಭಾ ಚುನಾವಣೆಯಲ್ಲಿ (Assembly Election) ಮತ್ತೊಮ್ಮೆ ಮಂಡ್ಯ ಸಂಚಲನ ಮೂಡಿಸುವ ಸಾಧ್ಯತೆಗಳಿವೆ. ಬಿಜೆಪಿಯಿಂದ ಸಂಸದೆ ಸುಮಲತಾ ಅಂಬರೀಶ್ (MP Sumalatha Ambareesh) ಸ್ಪರ್ಧೆ ಮಾಡ್ತಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಮಂಡ್ಯದಿಂದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (Former CM HD Kumaraswamy) ಸ್ಪರ್ಧೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಪುತ್ರನನ್ನು ಸೋಲಿಸಿದ ಸುಮಲತಾ ಅಂಬರೀಶ್ ಅವರಿಗೆ ಟಕ್ಕರ್ ಕೊಡಲು ಕುಮಾರಸ್ವಾಮಿ ಸಿದ್ಧತೆ ಮಾಡಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ವರದಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.


ಮಂಡ್ಯ ಬಿಜೆಪಿಯಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ. ಮಂಡ್ಯ ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ವದಂತಿ ಇದೆ. ಪಕ್ಷ ಸೂಚನೆ ನೀಡಿದ್ರೆ ನನ್ನ ಸ್ಪರ್ಧೆ ಇರಲಿದೆ. ಆದ್ರೆ ಪಕ್ಷ ನನಗೆ ಯಾವುದೇ ಸೂಚನೆ ನೀಡಿಲ್ಲ ಎಂದು ಹೇಳುವ ಮೂಲಕ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು.


ರವೀಂದ್ರ ಶ್ರೀಕಂಠಯ್ಯ ಹೇಳಿಕೆಗೆ ತಿರುಗೇಟು


ಇದೇ ವೇಳೆ ಸುಮಲತಾ ಅಪ್ರಬುದ್ಧ ರಾಜಕಾರಣಿ ಎಂಬ ರವೀಂದ್ರ ಶ್ರೀಕಂಠಯ್ಯ ಹೇಳಿಕೆಗೆ ತಿರುಗೇಟು ನೀಡಿದರು. ಅಪ್ರಬುದ್ದ ರಾಜಕಾರಣಿ ಯಾರು ಅನ್ನೋದನ್ನ ಜನ ತೋರಿಸಿಕೊಡುತ್ತಾರೆ. 5 ವರ್ಷದಲ್ಲಿ ಅವರು ಮಾಡಿದ ಸಾಧನೆ ಏನು ಇಲ್ಲ. ಜನಕ್ಕೂ ಅದು ಗೊತ್ತಿಲ್ಲ. ರಾಜಕಾರಣ ಅಂದ್ರೆ ಅವ್ರಿಗೆ ಜನರ ಮೇಲೆ ದಬ್ಬಾಳಿಕೆ, ಅಹಂಕಾರ ತೋರಿಸೋದು.ಜನ ಈ ಬಾರಿ ಅವರಿಗೆ ಸರಿಯಾಗಿ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.




ಚುನಾವಣಾ ಆಯೋಗಕ್ಕೆ ದೂರು ನೀಡುವೆ


ಸುಮಲತಾ ಜನಗಳ ಮುಂದ ಹೋದಾಗ ಎಚ್ಚರಿಕೆಯಿಂದ ಇರಬೇಕು ಎಂಬ ರವೀಂದ್ರ ಶ್ರೀಕಂಠಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸುಮಲತಾ ಅಂಬರೀಶ್, ಅವಶ್ಯಕತೆ ಬಿದ್ರೆ ಚುನಾವಣೆ ಆಯೋಗಕ್ಕೆ ದೂರು ನೀಡುವೆ. ಅವರು ನನಗೆ ವಾರ್ನಿಂಗ್ ಕೊಡ್ತಿದ್ದಾರಾ ಏನು ಎಂದು ಕ್ಲಿಯರ್ ಮಾಡಬೇಕು ಎಂದು ಆಗ್ರಹಿಸಿದರು.


ಇದನ್ನೂ ಓದಿ: Karnataka Elections: ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಫಿಕ್ಸ್? ಅತ್ತ ಸುಮಲತಾಗೆ ಬಿಜೆಪಿ ಮಹತ್ವದ ಆದೇಶ!

top videos


    ರವೀಂದ್ರನಾಥ ಶ್ರೀಕಂಠಯ್ಯ ಹೆದರಿಸುತ್ತಿದ್ದಾರೆ ಎಂದು ದೂರು ಕೊಡುತ್ತೇವೆ. ಅವರು ಹೆದರಿಸೋಕೆ ಬರ್ತಿರೋದು ನನಗೆ ಹೊಸದೇನೂ ಅಲ್ಲ. ಈ ಹಿಂದೆ ಕೂಡ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಹೆದರಿಸಲು ಪ್ರಯತ್ನಿಸಿದ್ದರು. ಈ ವಿಚಾರವನ್ನ ನಾನು ಗಂಭೀರವಾಗಿ ಪರಿಗಣಿಸಿದರೆ ಅವರ ವಿರುದ್ದ ದೂರು ಕೊಡುತ್ತೇನೆ ಎಂದರು.

    First published: