ಕೊರೋನಾ ವೈರಸ್​ ವಿರುದ್ಧ ಹೋರಾಡಲು ಪಣತೊಟ್ಟ ಸಂಸದೆ ಸುಮಲತಾ ಅಂಬರೀಶ್​

ಎರಡು ತಿಂಗಳ ವೇತನ ಎರಡು ಲಕ್ಷ ರೂಪಾಯಿಗಳನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ತಮ್ಮ ಖಾತೆಯಿಂದ ವರ್ಗಾಯಿಸಲು ಸಂಬಂಧಪಟ್ಟ ಬ್ಯಾಂಕಿಗೆ ಸುಮಲತಾ ಸೂಚಿಸಿದ್ದಾರೆ. ಈ ಮೂಲಕ ಔದಾರ್ಯತೆ ಮೆರೆದಿದ್ದಾರೆ.

news18-kannada
Updated:March 27, 2020, 7:41 AM IST
ಕೊರೋನಾ ವೈರಸ್​ ವಿರುದ್ಧ ಹೋರಾಡಲು ಪಣತೊಟ್ಟ ಸಂಸದೆ ಸುಮಲತಾ ಅಂಬರೀಶ್​
ಸಂಸದೆ ಸುಮಲತಾ ಅಂಬರೀಶ್
  • Share this:
ಬೆಂಗಳೂರು (ಮಾ.27): ಕೊರೋನಾ ವೈರಸ್​ಗೆ ಸಂಪೂರ್ಣ ಭಾರತವೇ ನಲುಗಿದೆ. ಈವರೆಗೆ 700ಕ್ಕೂ ಹೆಚ್ಚು ಪಾಸಿಟಿವ್​ ಪ್ರಕರಣ ದಾಖಲಾಗಿದ್ದು, 16 ಜನರು ಮೃತಪಟ್ಟಿದ್ದಾರೆ. ಈ ಮಧ್ಯೆ ಸಾಕಷ್ಟು ಜನ ಪ್ರತಿನಿಧಿಗಳು ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ಪ್ರಯತ್ನಿಸುತ್ತಿದ್ದಾರೆ. ಈ ಸಾಲಿಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಕೂಡ ಸೇರ್ಪಡೆ ಆಗುತ್ತಾರೆ. 

ಮಂಡ್ಯ ನಗರದಲ್ಲಿ ಮಿಮ್ಸ್ ಬೋಧಕ ಆಸ್ಪತ್ರೆಗೆ ವೆಂಟಿಲೇಟರ್ ಯಂತ್ರಗಳ ಅತ್ಯವಶ್ಯಕತೆ ಇದೆ. ಹೀಗಾಗಿ ಇದನ್ನು ಒದಗಿಸಲು ಸುಮಲತಾ ಅಂಬರೀಶ್​ ಅನುದಾನದ ಹಣದಲ್ಲಿ ಮೊದಲ ಹಂತದಲ್ಲಿ 50 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲು ಸೂಚಿಸಿದ್ದಾರೆ. ಜೊತೆಗೆ ಎರಡು ತಿಂಗಳ ವೇತನ ಎರಡು ಲಕ್ಷ ರೂಪಾಯಿಗಳನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ತಮ್ಮ ಖಾತೆಯಿಂದ ವರ್ಗಾಯಿಸಲು ಸಂಬಂಧಪಟ್ಟ ಬ್ಯಾಂಕಿಗೆ ಅವರು  ಸೂಚಿಸಿದ್ದಾರೆ.

ಇದನ್ನೂ ಓದಿ: ಮದುವೆಗೂ ಮುಂಚೆ ಸುಮಲತಾ ಹುಟ್ಟುಹಬ್ಬಕ್ಕೆ ಅಂಬರೀಶ್ ಕೊಟ್ಟಿದ್ದ ಒಲಿವಿನ ಉಡುಗೊರೆ ಏನು?

ಇದರ ಜೊತೆಗೆ ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಎರಡು ತಿಂಗಳ ಮಾಸಿಕ ವೇತನ  2 ಲಕ್ಷ ರೂಪಾಯಿಯನ್ನು ಕರ್ನಾಟಕ ಮುಖ್ಯಮಂತ್ರಿಗಳ ಪರಿಹಾರ ನಿಧಿ COVID-19 ಖಾತೆಗೆ  ವರ್ಗಾಯಿಸಲು ಇವರು ಸಂಬಂಧಪಟ್ಟ ಬ್ಯಾಂಕಿಗೆ ಸೂಚಿಸಿದ್ದಾರೆ. ಈ ಮೂಲಕ ಔದಾರ್ಯತೆ ಮೆರೆದಿದ್ದಾರೆ.

ಸುಮಲತಾ ಅಂಬರೀಶ್​ ಕೆಲಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊರೊನಾ ವಿರುದ್ಧ ಸಂಸದೆ ಒಬ್ಬರು ತಮ್ಮ ಸಂಬಂಳವನ್ನೇ ನಿಡುತ್ತಿರುವುದು ನಿಜಕ್ಕೂ ಖುಷಿಯ ವಿಚಾರ ಎಂದು ಹೇಳಿದ್ದಾರೆ.

 
First published:March 27, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading