ಬಿಜೆಪಿ ಸೇರಲು ಸುಮಲತಾ ಅಂಬರೀಶ್​ ಒಲವು? ಮುಂದಿನ ವಾರ ಜನಾಭಿಪ್ರಾಯ ಯಾತ್ರೆ ಬಳಿಕ ಅಂತಿಮ ನಿರ್ಧಾರ

ಬಿಜೆಪಿ ಸೇರುವಂತೆ ಮಂಡ್ಯ ಜನರು ಕರೆ ಕೊಟ್ಟರೆ ಸುಮಲತಾ ಬಿಜೆಪಿಗೆ ಬೆಂಬಲ ನೀಡಲಿದ್ದಾರೆ. ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಸುಮಲತಾ ಅಂಬರೀಶ್​ ಶೀಘ್ರದಲ್ಲೇ ನಿರ್ಧಾರ ತಿಳಿಸಲಿದ್ದಾರೆ.

Latha CG | news18
Updated:June 6, 2019, 2:48 PM IST
ಬಿಜೆಪಿ ಸೇರಲು ಸುಮಲತಾ ಅಂಬರೀಶ್​ ಒಲವು? ಮುಂದಿನ ವಾರ ಜನಾಭಿಪ್ರಾಯ ಯಾತ್ರೆ ಬಳಿಕ ಅಂತಿಮ ನಿರ್ಧಾರ
ಸುಮಲತಾ ಅಂಬರೀಶ್​
Latha CG | news18
Updated: June 6, 2019, 2:48 PM IST
ಮಂಡ್ಯ(ಜೂ 06): ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಭಾರೀ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ ಪಕ್ಷೇತರ ಸಂಸದೆ ಸುಮಲತಾ ಅವರ ಮುಂದಿನ ನಡೆ  ಏನು ಎಂಬುದು ಇನ್ನೂ ತಿಳಿದಿಲ್ಲ. ಸುಮಲತಾ ಅಂಬರೀಶ್​​ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ವಿರುದ್ಧ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.  ಇದೀಗ ಪಕ್ಷೇತರ ಸಂಸದೆಯಾಗಿರುವ ಸುಮಲತಾ ಬಿಜೆಪಿ ಸೇರಲಿದ್ದಾರಾ ಎಂಬ ಪ್ರಶ್ನೆ ಹುಟ್ಟಿದೆ. ಹೀಗಾಗಿ ಮಂಡ್ಯ ಜಿಲ್ಲೆಯಾದ್ಯಂತ ಜನಾಭಿಪ್ರಾಯ ಸಂಗ್ರಹಿಸಲು ಸುಮಲತಾ ಮುಂದಾಗಿದ್ದಾರೆ.

ಹೌದು, ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ ಸುಮಲತಾ ಬಿಜೆಪಿ ನಾಯಕರಾದ ಬಿ.ಎಸ್​. ಯಡಿಯೂರಪ್ಪ, ಎಸ್​.ಎಂ. ಕೃಷ್ಣ ಅವರನ್ನು ಭೇಟಿಯಾಗಿದ್ದರು. ಚುನಾವಣೆ ಸಂದರ್ಭದಲ್ಲಿ ತನ್ನ ಪರ ಬೆಂಬಲಕ್ಕೆ ನಿಂತಿದ್ದ  ಅವರಿಗೆ ಸುಮಲತಾ ಕೃತಜ್ಞತೆ ತಿಳಿಸಿದ್ದರು. ಬಳಿಕ ಪಕ್ಷೇತರ ಸಂಸದೆಯಾಗಿರುವ ಕಾರಣ ಬಿಜೆಪಿ ಸೇರಲು ಸಾಧ್ಯವಿಲ್ಲ ಎಂದೂ ಸಹ ಹೇಳಿದ್ದರು. ಜೊತೆಗೆ ತನಗೆ ಮತ ಹಾಕಿ ಗೆಲ್ಲಿಸಿದ ಮಂಡ್ಯ ಜನರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದರು. ಈಗ ಆ ಸಮಯ ಬಂದಿದ್ದು, ಸುಮಲತಾ ಅಂಬರೀಶ್​ ಮುಂದಿನ ವಾರದಿಂದ ಜನಾಭಿಪ್ರಾಯ ಯಾತ್ರೆ ಪ್ರಾರಂಭಿಸಲಿದ್ದಾರೆ.  ಮಂಡ್ಯ ಕ್ಷೇತ್ರದ 8 ತಾಲೂಕುಗಳಲ್ಲಿ ಸಮಾವೇಶ ಏರ್ಪಡಿಸಿ ಬಿಜೆಪಿ ಪಕ್ಷ ಸೇರ್ಪಡೆಗೆ ಜನಾಭಿಪ್ರಾಯ ಸಂಗ್ರಹಿಸಲಿದ್ದಾರೆ.

ಇದನ್ನೂ ಓದಿ: ಮೋದಿ ಸಂಪುಟದ ಎಂಟು ಸಮಿತಿಗಳಲ್ಲಿ ಅಮಿತ್ ಶಾಗೆ ಸ್ಥಾನ; ಪ್ರಮುಖ ಸಮಿತಿಯಿಂದ ರಾಜನಾಥ ಸಿಂಗ್​ಗೆ ಕೊಕ್​!

ಕೃತಜ್ಞತಾ ಸಭೆ ಹೆಸರಿನಲ್ಲಿ ಜನಾಭಿಪ್ರಾಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.  ಬಿಜೆಪಿ ಸೇರುವಂತೆ ಮಂಡ್ಯ ಜನರು ಕರೆ ಕೊಟ್ಟರೆ ಸುಮಲತಾ ಬಿಜೆಪಿಗೆ ಬೆಂಬಲ ನೀಡಲಿದ್ದಾರೆ.  ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಸುಮಲತಾ ಅಂಬರೀಶ್​ ಶೀಘ್ರದಲ್ಲೇ ನಿರ್ಧಾರ ತಿಳಿಸಲಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ತನಗೆ ಬೆಂಬಲ ಸೂಚಿಸಿದ್ದ ಬಿಜೆಪಿ ಪಕ್ಷ ಸೇರಲು ಸುಮಲತಾ ಅವರಿಗೂ ಒಲವಿದೆ ಎನ್ನಲಾಗಿದೆ. ಜೊತೆಗೆ ತನ್ನ ಬೆನ್ನೆಲುಬಾಗಿ ನಿಂತಿದ್ದ ಕನ್ನಡ ಚಿತ್ರರಂಗವೂ ಸಹ ಬಿಜೆಪಿ ಸೇರುವಂತೆ ಸುಮಲತಾ ಅವರಿಗೆ ಸಲಹೆ ನೀಡಿದೆ ಎಂದು ತಿಳಿದುಬಂದಿದೆ. ಹೀಗಾಗಿ ಸುಮಲತಾ ಬಿಜೆಪಿ ಸೇರಲು ತನ್ನ ಕ್ಷೇತ್ರದ ಜನರ ಅಭಿಪ್ರಾಯ ಮುಖ್ಯ ಎಂದು ಭಾವಿಸಿ, ಅವರ ಅನಿಸಿಕೆ ಸಂಗ್ರಹಿಸಲು ಮುಂದಾಗಿದ್ದಾರೆ. ಮುಂದಿನ ವಾರ ಮಂಡ್ಯ ಜಿಲ್ಲೆಯ 8 ಕ್ಷೇತ್ರಗಳಲ್ಲೂ ಕೃತಜ್ಞತೆ ಸಭೆ ಮಾಡಿ ಜನಾಭಿಪ್ರಾಯ ಸಂಗ್ರಹಿಸಲು ಸುಮಲತಾ ಚಿಂತನೆ ನಡೆಸಿದ್ದಾರೆ.

First published:June 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...