ಸುಳ್ವಾಡಿ ದುರಂತ; ವರ್ಷದಿಂದ ಮುಚ್ಚಿರುವ ದೇಗುಲದ ಬಾಗಿಲು ತೆರೆಯಲು ಶೀಘ್ರದಲ್ಲೇ ಕ್ರಮ; ಸುರೇಶ್​ ಕುಮಾರ್​

ದೇಗುಲದಲ್ಲಿ ಘಟನೆ ನಡೆದ ಬಳಿಕ ದೇವಾಲಯದಲ್ಲಿ ಪೂಜೆ ಪುನಸ್ಕಾರಗಳು ನಿಂತುಹೋಗಿವೆ. ಈ ಬಗ್ಗೆ ನಮಗೂ ಬೇಸರವಿದೆ. ಸದ್ಯ ದೇಗುಲಕ್ಕೆ ಆಡಳಿತಾಧಿಕಾರಿ ನೇಮಿಸಲಾಗಿದೆ. ಶೀಘ್ರದಲ್ಲಿಯೇ ಪೂಜೆ ಮಾಡಲು ಅರ್ಚಕರ ನೇಮಕಕ್ಕೂ ಕ್ರಮ ಕೈಗೊಳ್ಳಲಾಗುವುದು. 

Seema.R | news18-kannada
Updated:December 14, 2019, 11:47 AM IST
ಸುಳ್ವಾಡಿ ದುರಂತ; ವರ್ಷದಿಂದ ಮುಚ್ಚಿರುವ ದೇಗುಲದ ಬಾಗಿಲು ತೆರೆಯಲು ಶೀಘ್ರದಲ್ಲೇ ಕ್ರಮ; ಸುರೇಶ್​ ಕುಮಾರ್​
ಕಿಚ್​ ಗುತ್​ ಮಾರಮ್ಮ ದೇವಾಲಯ
  • Share this:
ಚಾಮರಾಜನಗರ (ಡಿ.14): ದೇವಾಸ್ಥಾನದ ಆಡಳಿತ ಚುಕ್ಕಾಣಿ ಹಿಡಿಯುವ ಸಲುವಾಗಿ ಭಕ್ತರು ಸೇವಿಸುವ ಪ್ರಸಾದದೊಳಗೆ ವಿಷ ಮಿಶ್ರಣ ಮಾಡಿ 17 ಜನರ ಸಾವಿಗೆ ಕಾರಣವಾಗಿದ್ದ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ದುರಂತ ಸಂಭವಿಸಿ ಇಂದಿಗೆ ಒಂದು ವರ್ಷವಾಗಿದೆ.

ಘಟನೆ ಬಳಿಕ ದೇವಾಸ್ಥಾನವನ್ನು ಸುಪರ್ದಿಗೆ ತೆಗೆದುಕೊಂಡಿದ್ದ ಮುಜರಾಯಿ ಇಲಾಖೆ ಅಂದಿನಿಂದ ದೇಗುಲದ ಬಾಗಿಲಿಗೆ ಬೀಗ ಜಡಿದಿದೆ. ಇದು ಗ್ರಾಮಸ್ಥರಲ್ಲಿ ಬೇಸರಕ್ಕೂ ಕಾರಣವಾಗಿದೆ.  ವರ್ಷದಿಂದ ಪೂಜೆ ಇಲ್ಲದಿರುವ ಕಿಚ್​ಗುತ್ತ್​ ಮಾರಮ್ಮನ ದೇಗುಲಕ್ಕೆ ಶೀಘ್ರದಲ್ಲಿಯೇ ಆರ್ಚಕರನ್ನು ನೇಮಕ ಮಾಡಿ , ಮತ್ತೆ ಪೂಜೆಗಳನ್ನು ಪುನಾರಂಭ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್​ ಕುಮಾರ್​ ಭರವಸೆ ನೀಡಿದ್ದಾರೆ.

ದೇಗುಲದಲ್ಲಿ ಘಟನೆ ನಡೆದ ಬಳಿಕ ದೇವಾಲಯದಲ್ಲಿ ಪೂಜೆ ಪುನಸ್ಕಾರಗಳು ನಿಂತುಹೋಗಿವೆ. ಈ ಬಗ್ಗೆ ನಮಗೂ ಬೇಸರವಿದೆ. ಸದ್ಯ ದೇಗುಲಕ್ಕೆ ಆಡಳಿತಾಧಿಕಾರಿ ನೇಮಿಸಲಾಗಿದೆ. ಶೀಘ್ರದಲ್ಲಿಯೇ ಪೂಜೆ ಮಾಡಲು ಅರ್ಚಕರ ನೇಮಕಕ್ಕೂ ಕ್ರಮ ಕೈಗೊಳ್ಳಲಾಗುವುದು. ಆಗಮ ಶಾಸ್ತ್ರ ಗೊತ್ತಿರುವ ಅರ್ಚಕರ ನೇಮಕ ಮಾಡಿದರೆ ಒಳಿತ ಎಂಬ ಭಾವನೆ ಇದೆ. ಇದರಿಂದ ತಡವಾಗುತ್ತಿದೆ. ಶುಭಮುಹೂರ್ತ ನೋಡಿ ದೇಗುಲ ತೆರೆಯಲಾಗುವುದು ಎಂದು ಅವರು ತಿಳಿಸಿದರು.

ಘಟನೆಯಲ್ಲಿ ಸಾವನ್ನಪ್ಪಿದ್ದ ಮೃತ ಕುಟುಂಬಗಳಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಅಸ್ವಸ್ಥರಾದವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಸರ್ಕಾರ ಹೇಳಿದಂತೆ ಮೃತರ ಕುಟುಂಬಕ್ಕೆ ಜಮೀನು ಡುವ ಪ್ರಕ್ರಿಯೆ ಮುಂದುವರೆದಿದೆ. ಒಂದೊಂದು ಕುಟುಂಬಕ್ಕೂ ತಲಾ 2 ಎಕರೆ ನಿವೇಶನ ನೀಡಲಾಗುವುದು. ಆದರೆ ಇಲ್ಲಿ ಸರ್ಕಾರಿ ಜಮೀನು ಇಲ್ಲ. ಹಾಗಾಗಿ ಖಾಸಗಿ ಜಮೀನು ಖರೀದಿಗೆ ಕ್ರಮವಹಿಸಲಾಗಿದೆ ಎಂದರು.

ಇದನ್ನು ಓದಿ: ಸುಳ್ವಾಡಿ ವಿಷ ದುರಂತ ಪ್ರಕರಣ; ಕಿಚ್​ಗುತ್​ ಮಾರಮ್ಮ ದೇವಾಲಯದ ಬಾಗಿಲು ತೆರೆಯುವಂತೆ ಗ್ರಾಮಸ್ಥರ ಮನವಿ

ನಿವೇಶನ ರಹಿತರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು. ಕೆಲವು ಸಂತ್ರಸ್ತರ ಹೆಸರು ಕೈ ಬಿಟ್ಟುಹೋಗಿದೆ. ಈ ಹಿನ್ನೆಲೆ ಸುಳ್ವಾಡಿಯಲ್ಲಿ ಅದಾಲತ್ ನಡೆಸಲು ಸೂಚನೆ ಹೊರಡಿಸಲಾಗುವುದು ಎಂದರು.
First published:December 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ