• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸುಳ್ವಾಡಿ ವಿಷಪ್ರಸಾದ ದುರಂತ: ಈಡೇರದ ಭರವಸೆ; ಸಂಕಷ್ಟದಲ್ಲಿ ಸಂತ್ರಸ್ಥರು

ಸುಳ್ವಾಡಿ ವಿಷಪ್ರಸಾದ ದುರಂತ: ಈಡೇರದ ಭರವಸೆ; ಸಂಕಷ್ಟದಲ್ಲಿ ಸಂತ್ರಸ್ಥರು

ಸುಳ್ವಾಡಿ ವಿಷಪ್ರಸಾದ ದುರಂತದ ಸಂತ್ರಸ್ತರು

ಸುಳ್ವಾಡಿ ವಿಷಪ್ರಸಾದ ದುರಂತದ ಸಂತ್ರಸ್ತರು

2018ರ ಡಿಸೆಂಬರ್ 14ರಂದು ವಿಷಪ್ರಸಾದ ಸೇವಿಸಿ 17 ಜನ ಮೃತಪಟ್ಟು, 120ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಅಂದಿನಿಂದ ದೇವಾಲಯವನ್ನು ಮುಚ್ಚಿ ಮುಜರಾಯಿ ಇಲಾಖೆ ವಶಕ್ಕೆ ಪಡೆಯಲಾಗಿತ್ತು.

  • Share this:

ಚಾಮರಾಜನಗರ (ಅ. 9): ಸುಳ್ವಾಡಿಯ ಕಿಚ್ ಗುತ್ ಮಾರಮ್ಮ ದೇವಾಲಯದಲ್ಲಿ  ವಿಷಪ್ರಸಾದ ದುರಂತ ನಡೆದು ಎರಡು ವರ್ಷ ಆಗುತ್ತಾ ಬಂದಿದ್ದರೂ ಸರ್ಕಾರ ಸಂತ್ರಸ್ಥರಿಗೆ ನೀಡಿದ್ದ ಪ್ರಮುಖ ಭರವಸೆಗಳು ಇನ್ನೂ ಈಡೇರಿಲ್ಲ. 
ಮೃತಪಟ್ಟವರ  ಕುಟುಂಬಗಳಿಗೆ ತಲಾ ಎರಡು ಎಕರೆ ಜಮೀನು ಹಾಗೂ ಉದ್ಯೋಗ ನೀಡುವುದಾಗಿ ನೀಡಿದ್ದ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿದೆ. ಅಸ್ವಸ್ಥರಾದವರಿಗೆ ನಿವೇಶನ ನೀಡುವುದಾಗಿ ಸರ್ಕಾರ ನೀಡಿದ್ದ  ಭರವಸೆ ಈಡೇರಿದೆಯಾದರೂ ನಿವೇಶನ ನೀಡಿರುವ ಜಾಗ ವಿವಾದದಲ್ಲಿದ್ದು, ಸಂತ್ರಸ್ಥರು ಭ್ರಮನಿರಸನಗೊಂಡಿದ್ದಾರೆ.


ಅಸ್ವಸ್ಥರಾದವರಿಗೆ ನೀಡಿರುವ ಹೆಲ್ತ್ ಕಾರ್ಡ್​ನಿಂದ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಸಂತ್ರಸ್ಥರು ಆರೋಪಿಸಿದ್ದಾರೆ.  ಎಸ್.ಸಿ.ಎಸ್.ಟಿ. ದೌರ್ಜನ್ಯ ಕಾಯ್ದೆಯಡಿ ಸಂಬಂಧಿಸಿದವರಿಗೆ ಪರಿಹಾರ ಬಂದಿದೆ. ಇತರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಹಾರ ನೀಡಿವೆ.  ಆದರೆ ಪರಿಹಾರದ ಹಣ ಬಹುತೇಕ ಚಿಕಿತ್ಸೆಗಾಗಿಯೇ ಖರ್ಚಾಗಿದೆ ಎನ್ನುತ್ತಾರೆ ವಿಷಪ್ರಸಾದ ಸೇವಿಸಿ ಅಸ್ವಸ್ಥರಾಗಿದ್ದ ಬಿದರಹಳ್ಳಿಯ ನರಸಿಂಹ. ವಿಷದ ದುಷ್ಪರಿಣಾಮ ತಮ್ಮನ್ನು ಇನ್ನೂ ಬಾಧಿಸುತ್ತಿದ್ದು ದುಡಿಯುವ ಚೈತನ್ಯ ಕಳೆದುಕೊಂಡಿದ್ದೇವೆ ಎಂದು  ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.


Sulwadi Temple Prasada Poisoning Case Victims Did Not Get Compensation Yet
ಸುಳ್ವಾಡಿ ಮಾರಮ್ಮನ ದೇವಸ್ಥಾನ


ವಿಷಪ್ರಸಾದ ಸೇವಿಸಿ ಅಸ್ವಸ್ಥರಾಗಿದ್ದವರು ಕಣ್ಣು ಮಂಜಾಗುವುದು, ಸುಸ್ತು ಸಂಕಟ, ಅಂಗಾಂಗಗಳ ವೈಫಲ್ಯ ಹೀಗೆ ಹತ್ತಾರು ರೀತಿಯ ತೊಂದರೆ ಅನುಭವಿಸುತ್ತಿದ್ದು, ಸಂಕಷ್ಟದಲ್ಲಿದ್ದಾರೆ. ಸರ್ಕಾರ ಇವರಿಗೆ ನಿಗಮ ಮಂಡಳಿಗಳಿಂದ ಇತರರಿಗೆ ನೀಡುವ ಸೌಲಭ್ಯಗಳಂತೆ ಇವರಿಗೂ ಕೆಲವು ಸೌಲಭ್ಯಗಳನ್ನು ನೀಡಿದೆ. ಆದರೆ, ವಿಶೇಷ ಪ್ಯಾಕೇಜ್ ನೀಡಿ ಇವರ ಬದುಕು ಸುಧಾರಿಸುವ ಕೆಲಸ ಮಾಡಲಿಲ್ಲ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಪೆದ್ದನಪಾಳ್ಯ ಮಣಿ.


ಇದನ್ನೂ ಓದಿ: Mysuru Dasara 2020: ಮೈಸೂರು ದಸರಾಗೆ ಸಿದ್ಧತೆ; ಮರಳಿನ ಮೂಟೆ ಹೊರುವ ತಾಲೀಮು ನಡೆಸಿದ ಗಜಪಡೆ


ಇದೇ ವೇಳೆ ಎರಡು ವರ್ಷಗಳಿಂದ ಮುಚ್ಚಿದ್ದ ಕಿಚ್ ಗುತ್ ಮಾರಮ್ಮ ದೇವಾಲಯವನ್ನು ಅಕ್ಟೋಬರ್ 20ರಿಂದ ತೆರೆಯಲು ಭರದ ಸಿದ್ದತೆಗಳು ನಡೆಯುತ್ತಿವೆ.  ಸಣ್ಣಪುಟ್ಟ ರಿಪೇರಿ ಕಾಮಗಾರಿ ಮಾಡಿ ಸುಣ್ಣಬಣ್ಣ ಹೊಡೆಯಲಾಗುತ್ತಿದೆ.  2018ರ ಡಿಸೆಂಬರ್ 14ರಂದು ವಿಷಪ್ರಸಾದ ಸೇವಿಸಿ 17 ಜನ ಮೃತಪಟ್ಟು, 120ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಅಂದಿನಿಂದ ದೇವಾಲಯವನ್ನು ಮುಚ್ಚಿ  ಮುಜರಾಯಿ ಇಲಾಖೆ ವಶಕ್ಕೆ ಪಡೆಯಲಾಗಿತ್ತು. ಟ್ರಸ್ಟ್​ವೊಂದರ ವಶದಲ್ಲಿದ್ದ ಈ ದೇವಾಲಯದ ಆಡಳಿತದ ಚುಕ್ಕಾಣಿ ಹಿಡಿಯಲು ಹುನ್ನಾರ ನಡೆಸಿ ಪ್ರಸಾದಕ್ಕೆ ವಿಷ ಬೆರೆಸಿದ ಆರೋಪದ ಮೇರೆಗೆ ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ ಸೇರಿದಂತೆ ನಾಲ್ವರು ಈಗಾಗಲೇ ಜೈಲಿನಲ್ಲಿದ್ದಾರೆ.


ದೇವಸ್ಥಾನ ತೆರೆಯುವುದಕ್ಕೆ ತಮ್ಮ ಆಕ್ಷೇಪಣೆಯೇನೂ ಇಲ್ಲ. ಆದರೆ, ಸರ್ಕಾರ ದೇವಸ್ಥಾನವನ್ನು ತೆರೆಯುವುದಕ್ಕೆ  ತೋರಿಸುತ್ತಿರುವ ಆಸಕ್ತಿಯನ್ನು ಭರವಸೆ ಈಡೇರಿಕೆಗೂ ತೋರಿಸಬೇಕು. ಹಾಗೆಯೇ ಈ ವಿಷ ದುರಂತ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ  ತ್ವರಿತವಾಗಿ ವಿಚಾರಣೆ ನಡೆಸಿ ತಮಗೆ ನ್ಯಾಯ ದೊರಕಿಸಿ ಕೊಡಬೇಕು ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದು ಸಂತ್ರಸ್ಥರ ಆಗ್ರಹವಾಗಿದೆ.

Published by:Sushma Chakre
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು