• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • S Angara: ಅಂದು ಸಿಡಿದೆದ್ದ ಅಂಗಾರ, ಇಂದು ಯೂಟರ್ನ್! ಉದ್ವೇಗದಲ್ಲಿ ಹೇಳಿದ್ದ ಮಾತನ್ನು ವಾಪಸ್ ಪಡೀತಿನಿ ಎಂದ ಸಚಿವ!

S Angara: ಅಂದು ಸಿಡಿದೆದ್ದ ಅಂಗಾರ, ಇಂದು ಯೂಟರ್ನ್! ಉದ್ವೇಗದಲ್ಲಿ ಹೇಳಿದ್ದ ಮಾತನ್ನು ವಾಪಸ್ ಪಡೀತಿನಿ ಎಂದ ಸಚಿವ!

ಸಚಿವ ಅಂಗಾರ ಯು-ಟರ್ನ್

ಸಚಿವ ಅಂಗಾರ ಯು-ಟರ್ನ್

ಸಚಿವ ಎಸ್ ಅಂಗಾರ ಅವರೊಂದಿಗೆ ಸಂಘದ ಮುಖಂಡರು ಸಂಪರ್ಕ ಮಾಡಿ ನಿವೃತ್ತಿ ಹೇಳಿಕೆ ವಾಪಸ್ ಪಡೆಯುವಂತೆ ಸೂಚನೆ ನೀಡಿದ್ದರು ಎನ್ನಲಾಗಿದೆ.

  • Share this:

ಬೆಂಗಳೂರು: ಚುನಾವಣೆಯಲ್ಲಿ (Election) ಈಗಾಗಲೇ ನಮ್ಮ ಪಕ್ಷದ ಕಡೆಯಿಂದ ಅಭ್ಯರ್ಥಿಗಳನ್ನು (Candidate) ಘೋಷಣೆ ಮಾಡಿದೆ. ಆದರೆ ಏಪ್ರಿಲ್​​ 12ರಂದು ಮಾಧ್ಯಮದವರು ಮನೆಗೆ ಬಂದು ಹೇಳಿಕೆ ನೀಡಲು ಕೇಳಿದ ಸಂದರ್ಭದಲ್ಲಿ ರಾಜಕೀಯ ನಿವೃತ್ತಿಯ (Politics Retirement ) ಮಾತನ್ನು ಹೇಳಿದ್ದೆ. ಆದರೆ ಈಗ ನಾನು ನನ್ನ ಮಾತನ್ನು ವಾಪಸ್ ಪಡೆದುಕೊಳ್ಳುತ್ತಿದ್ದೇನೆ ಎಂದು ಸುಳ್ಯ ಶಾಸಕ (Sullia MLA), ಸಚಿವ ಎಸ್​​ ಅಂಗಾರ (S Angara) ಹೇಳಿದ್ದಾರೆ. ಇದರೊಂದಿಗೆ ಸುಳ್ಯ ಶಾಸಕ ಅಂಗಾರ ಅವರು ಪಕ್ಷದ ವಿರುದ್ಧ ಹೂಡಿದ್ದ ಬಂಡಾಯ ಶಮನವಾಗಿದೆ. ಇಂದು ಸುದ್ದಿಗೋಷ್ಠಿ ನಡೆಸಿ ತಾವು ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತೇನೆ ಎಂದು ಅಂಗಾರ ಸ್ಪಷ್ಟಪಡಿಸಿದ್ದಾರೆ.


ಬೇಸರ ಮತ್ತು ಉದ್ವೇಗದಲ್ಲಿ ಹೇಳಿಕೆ ನೀಡಿದ್ದೆ


ಸಚಿವ ಎಸ್ ಅಂಗಾರ ಅವರೊಂದಿಗೆ ಸಂಘದ ಮುಖಂಡರು ಸಂಪರ್ಕ ಮಾಡಿ ನಿವೃತ್ತಿ ಹೇಳಿಕೆ ವಾಪಸ್ ಪಡೆಯುವಂತೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಸಂಘದ ಸೂಚನೆ ಹಿನ್ನೆಲೆ ಇಂದು ಅಂಗಾರ ಸುದ್ದಿಗೋಷ್ಟಿ ನಡೆಸಿದ್ದು, ಪಕ್ಷದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇನೆ. ನಾನು ಬೇಸರದಲ್ಲಿ ಮತ್ತು ಉದ್ವೇಗದಲ್ಲಿ ಈ ಹಿಂದೆ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದೆ. ಅದರೆ ಆ ಮಾತನ್ನು ವಾಪಸ್ಸು ಪಡೆಯುತ್ತೇನೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: Puttru: ಬಸ್​​-ಕಾರು ನಡುವೆ ಭೀಕರ ಅಪಘಾತ; ಮೂವರು ಮಕ್ಕಳು ಸೇರಿ 6 ಮಂದಿ ಸಾವು


ಅಲ್ಲದೆ, ಮುಂದೆ ಪಕ್ಷದ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಿ ಗೆಲ್ಲಿಸುವುದು ನನ್ನ ಗುರಿ. ನಾನು ನಿವೃತ್ತಿಯ ವಿಚಾರವನ್ನು ವೈಯುಕ್ತಿಕ ಅಭಿಪ್ರಾಯ ಮೇರೆಗೆ ಹೇಳಿದ್ದೆ. ಆದರೆ ನನಗೆ ಅಭ್ಯರ್ಥಿ ಆಯ್ಕೆ ವಿಧಾನದ ಬಗ್ಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನೋವಿನಲ್ಲಿ ಆ ಮಾತನನ್ನು ಹೇಳಿದ್ದೆ. ಆದರೆ ಮುಂದೆ ರಾಜಕೀಯದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತೇನೆ.




ಪಕ್ಷದ ಅಭ್ಯರ್ಥಿಯೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಹಾಗೂ ಅಸಮಾಧಾನವಿಲ್ಲ. ಆದರೆ ನಾನು ಗೆದ್ದ ಸಂದರ್ಭದಲ್ಲಿ ಕೇಳದೆ ಪಕ್ಷ ಅವಕಾಶ ನೀಡಿತ್ತು. ಆದರೆ ನಾನು ಈ ಬಾರಿಯೂ ಸ್ಪರ್ಧೆ ಸಿದ್ಧನಾಗಿದ್ದೆ. ಈಗ ಪಕ್ಷ ಮಹತ್ವದ ನಿರ್ಧಾರ ಕೈಗೊಂಡಿದೆ. ಆದ್ದರಿಂದ ನಾನು ಪಕ್ಷದ ಅಭ್ಯರ್ಥಿ ಪರ ಕಾರ್ಯನಿರ್ವಹಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

First published: