HOME » NEWS » State » SULLIA MANGALURU SULLIA TALUK PANJA WATER PROBLEM NOT SOLVED EVEN AFTER WATER TANK BUILT 7 YEARS AGO SCT AKP

Sullia: ಸುಳ್ಯದಲ್ಲಿ ನೀರಿನ ಟ್ಯಾಂಕ್ ನಿರ್ಮಾಣಗೊಂಡು 7 ವರ್ಷ ಕಳೆದರೂ ಹರಿದಿಲ್ಲ ಒಂದು ಹನಿ ನೀರು

Mangalore | ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ ಗ್ರಾಮಕ್ಕೆ ಕುಡಿಯುವ ‌ನೀರು ಪೂರೈಸಲೆಂದು ಪಂಜದ ಚಿಂಗಾಣಿಗುಡ್ಡೆ ಎಂಬಲ್ಲಿ ಏಳು ವರ್ಷದ ಹಿಂದೆ ನಿರ್ಮಾಣವಾದ ಕುಡಿಯುವ ನೀರಿನ ಬೃಹತ್ ಟ್ಯಾಂಕ್ ಗೆ ಇದುವರೆಗೆ ಒಂದು ಹನಿ ನೀರು ಬಿದ್ದಿಲ್ಲ.

news18-kannada
Updated:April 14, 2021, 8:21 AM IST
Sullia: ಸುಳ್ಯದಲ್ಲಿ ನೀರಿನ ಟ್ಯಾಂಕ್ ನಿರ್ಮಾಣಗೊಂಡು 7 ವರ್ಷ ಕಳೆದರೂ ಹರಿದಿಲ್ಲ ಒಂದು ಹನಿ ನೀರು
ಪುತ್ತೂರಿನಲ್ಲಿರುವ ನೀರಿನ ಟ್ಯಾಂಕ್
  • Share this:
ಪುತ್ತೂರು (ಏ. 14): ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಸರಕಾರಗಳು ಹಲವು ಯೋಜನೆಗಳನ್ನು ರೂಪುಗೊಳಿಸುತ್ತದೆ. ಅದರಲ್ಲೂ ಜನರ ಪ್ರತಿನಿತ್ಯದ ಅನಿವಾರ್ಯತೆಯಾದ ನೀರಿನ ಪೂರೈಕೆಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಇದೇ ಪ್ರಕಾರ ಗ್ರಾಮದ ಜನರ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚಮಾಡಿರುವ ಟ್ಯಾಂಕ್ ಒಂದು ಕಳೆದ ಏಳು ವರ್ಷಗಳಿಂದ ಉಪಯೋಗವಿಲ್ಲದೆ ಅನಾಥವಾಗಿ ಬಿದ್ದಿದೆ. ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ ಗ್ರಾಮಕ್ಕೆ ಕುಡಿಯುವ ‌ನೀರು ಪೂರೈಸಲೆಂದು ಪಂಜದ ಚಿಂಗಾಣಿಗುಡ್ಡೆ ಎಂಬಲ್ಲಿ ಏಳು ವರ್ಷದ ಹಿಂದೆ ನಿರ್ಮಾಣವಾದ ಕುಡಿಯುವ ನೀರಿನ ಬೃಹತ್ ಟ್ಯಾಂಕ್ ಗೆ ಇದುವರೆಗೆ ಒಂದು ಹನಿ ನೀರು ಬಿದ್ದಿಲ್ಲ. ಈ ಟ್ಯಾಂಕ್ ಮೂಲಕ ಗ್ರಾಮದ ವಿವಿಧ ಭಾಗಗಳಿಗೆ ನೀರು ಪೂರೈಕೆ ಮಾಡಬೇಕೆಂಬ ಯೋಜನೆ ಹಳ್ಳ ಹಿಡಿದಂತಾಗಿದೆ. ಈ ಟ್ಯಾಂಕ್ ನಿಂದ ಒಂದು ತೊಟ್ಟು ನೀರು ಕೂಡ ಎಲ್ಲಿಯೂ ಹರಿದಿಲ್ಲ.

ಏಳು ವರ್ಷದ ಹಿಂದೆ ಆಶಾ ತಿಮ್ಮಪ್ಪ ಎನ್ನುವವರು ಸುಳ್ಯದ  ಬೆಳ್ಳಾರೆ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದಾಗ ಇಡೀ ಪಂಜಕ್ಕೆ ಕುಡಿಯುವ ನೀರಿನ ಸರಬರಾಜು ಮಾಡುವ ಕನಸು ಕಂಡು ಅತಿ ಎತ್ತರದ ಪ್ರದೇಶವಾದ ಚಿಂಗಾಣಿಗುಡ್ಡೆಯಲ್ಲಿ ಒಂದು ಟ್ಯಾಂಕ್ ನಿರ್ಮಿಸಿದ್ದರು. ಈ ಟ್ಯಾಂಕಿಗೆ ಇಲ್ಲಿಗೆ ಸಮೀಪದ ಪುಳಿಕುಕ್ಕು ಎಂಬಲ್ಲಿ ಹರಿಯುವ ಕುಮಾರ ನದಿಯಿಂದ ನೀರು ಸರಬರಾಜು ಮಾಡಲು ವ್ಯವಸ್ಥೆಯನ್ನು ಮಾಡಲಾಗಿದೆ. ಇದಕ್ಕಾಗಿ ಕುಮಾರಧಾರಾ ನದಿಯಲ್ಲಿ ಒಂದು ಬಾವಿ (ಜಾಕ್ವೆಲ್) ನಿರ್ಮಾಣ ಯೋಜನೆಯನ್ನು ಜಾರಿಗೊಳಿಸಿದ್ದರು. ಪುಳಿಕುಕ್ಕುವಿನಿಂದ ಜಿಂಗಾಣಿಗುಡ್ಡೆವರೆಗೆ 4.2 ಕಿ.ಮಿ. ಪೈಪ್ಲೈನ್ ಹಾಕಲಾಗಿದೆ‌ 10 ಅಶ್ವಶಕ್ತಿಯ ಪಂಪು ಕೂಡ ಅಳವಡಿಸಲಾಗಿದೆ. ಆದರೆ ಇದರಿಂದ ನೀರು ಸರಬರಾಜು ಮಾಡಲು ಸಾಧ್ಯವಾಗಲೇ ಇಲ್ಲ.

ಇದನ್ನೂ ಓದಿ: Bangalore Crime: ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು; ಪುಟ್ಟೇನಹಳ್ಳಿ ಡಬಲ್ ಮರ್ಡರ್ ಆರೋಪಿ ಕಾಲಿಗೆ ಗುಂಡು

ಚಿಂಗಾಣಿ ಗುಡ್ಡೆಗೆ ಬಿಡಿ ನೀರಿನ ಪೈಪ್ ಹಾದು ಹೋಗುವ ಪಕ್ಕದಲ್ಲೇ ಇರುವ ಜೂನಿಯರ್ ಕಾಲೇಜು ಬಳಿಯ ಟ್ಯಾಂಕ್ ಗೂ ಸರಿಯಾಗಿ ನೀರು ಬೀಳುತ್ತಿಲ್ಲ. ಆ ಸಂದರ್ಭದಲ್ಲೂ ಟ್ಯಾಂಕಿಗೆ ನೀರು ಪೂರೈಸುವ ಪ್ರಯತ್ನಗಳು ನಿರಂತರವಾಗಿ ನಡೆದಿದೆ. ಪಂಜ  ಗ್ರಾಮ ಪಂಚಾಯತ್  ವತಿಯಿಂದ‌ ಪೈಪ್ ದುರಸ್ತಿಗೊಳಿಸಿ, ಏರ್ ವಾಲ್, ರಿಟರ್ನಿಂಗ್ ವಾಲ್ ಗಳನ್ನು ಅಳವಡಿಸಿ 20 ಅಶ್ವಶಕ್ತಿಯ ಪಂಪು ಖರೀದಿಸಿ ತಂದು ಅಳವಡಿಸಿ ಜೂನಿಯರ್ ಕಾಲೇಜ್ ಟ್ಯಾಂಕಿಗೆ ನೀರು ಬೀಳುವಂತೆ ಮಾಡಲಾಯಿತು. ಆದರೆ ಚಿಂಗಾಣಿಗುಡ್ಡ ಟ್ಯಾಂಕಿಗೆ ನೀರು ಬರಿಸಲು ಸ್ಥಳೀಯ ಪಂಚಾಯತ್‌ ನಿಂದಲೂ ಸಾಧ್ಯವಾಗಿಲ್ಲ.

ಚಿಂಗಾಣಿಗುಡ್ಡೆಯಲ್ಲಿ ಸುಮಾರು ಲಕ್ಷ  ಲೀಟರ್ ನೀರು ಸಂಗ್ರಹಿಸುವ ಯೋಜನೆಗೆ ಬಳಸಿದ ಹಣ, ಪೈಪ್ ಲೈನ್ ಖರ್ಚು, ಮಾನವಶ್ರಮ ವ್ಯರ್ಥವಾದಂತಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಹೆಚ್ಚಿನ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ನೀರಿದ್ದರೂ ,ಅದನ್ನು ಸಮರ್ಪಕವಾಗಿ ಪೂರೈಸಲಾಗದ ಸ್ಥಿತಿಯಲ್ಲಿ ಜಿಲ್ಲಾಡಳಿತವಿದೆ‌. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಟ್ಯಾಂಕ್ ನಿರ್ಮಿಸಿದರೂ, ಒಂದು ಹನಿ ನೀರು ಹರಿಸಲಾಗದ ವ್ಯವಸ್ಥೆಯ ವಿರುದ್ಧ ಇದೀಗ ಸ್ಥಳೀಯರಲ್ಲಿ ಅಸಮಾಧಾನವಿದೆ‌.

ಹಲವು ಬಾರಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಗಮನಕ್ಕೆ ಈ ವಿಚಾರವನ್ನು ತರಲಾಗಿದೆಯಾದರೂ ಈ ವರೆಗೂ ಯಾವುದೇ ಕ್ರ‌ಮ ಕೈಗೊಳ್ಳುತ್ತಿಲ್ಲ ಎಂದು ಸಾಮಾಜಿಕ ಹೋರಾಟಗಾರ ಜಿನ್ನಪ್ಪ ಗೌಡ ಆರೋಪಿಸಿದ್ದಾರೆ
Published by: Sushma Chakre
First published: April 14, 2021, 8:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories