• Home
  • »
  • News
  • »
  • state
  • »
  • Sukesh Chandrashekar: 14 ವರ್ಷದ ಹಿಂದೆಯೇ ಬೆಂಗಳೂರಿನಲ್ಲಿ ಅರೆಸ್ಟ್ ಆಗಿದ್ದ ಸುಕೇಶ್ ಚಂದ್ರಶೇಖರ್

Sukesh Chandrashekar: 14 ವರ್ಷದ ಹಿಂದೆಯೇ ಬೆಂಗಳೂರಿನಲ್ಲಿ ಅರೆಸ್ಟ್ ಆಗಿದ್ದ ಸುಕೇಶ್ ಚಂದ್ರಶೇಖರ್

ಸುಕೇಶ್ ಚಂದ್ರಶೇಖರ್

ಸುಕೇಶ್ ಚಂದ್ರಶೇಖರ್

ಹುಳಿಮಾವು ಪೊಲೀಸ್ ಠಾಣೆಯ ಪೊಲೀಸರ ಬಳಿ ಹಣ ಪಡೆದು ವಂಚಿಸುತ್ತಿದ್ದನು. ವಂಚನೆಗೊಳಗಾದ ಪೊಲೀಸರು ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

  • Share this:

ದೆಹಲಿಯ ಮಾಜಿ ಸಚಿವ ಸತ್ಯೇಂದರ್ ಜೈನ್ (Former Delhi minister Satyender Jain) ವಿರುದ್ಧ ಲಂಚದ ಆರೋಪ ಮಾಡಿರುವ ಸುಕೇಶ್ ಚಂದ್ರಶೇಖರ್​​ನನ್ನು (Sukesh Chandrashekar) 14 ವರ್ಷಗಳ ಹಿಂದೆ ಬೆಂಗಳೂರಿನ ಪೊಲೀಸರಿಂದ (Bengaluru Police) ಬಂಧನಕ್ಕೊಳಗಾಗಿದ್ದನು. ಸಹಾಯಕ ಪೊಲೀಸ್ ಕಮಿಷನರ್ ಎಂ ಬಾಬು ಅವರು ಸುಕೇಶ್ ಚಂದ್ರಶೇಖರ್​​​ನನ್ನು ಬಂಧಿಸಿದ್ದರು. ಕ್ರಿಮಿನಲ್​ಗಳಾದ ಚಾರ್ಲ್ಸ್​ ಸೊಬ್ರಾಜ್, ಮಧುಕರ್ ಝೆಂಡೆಯಂತವರ ಹೊಂದಿರರುವ ಕುಖ್ಯಾತ ಹಿಸ್ಟರಿ ಹೊಂದಿರುವ ಸುಕೇಶ್ ಮೊದಲ ಬಾರಿ ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾಗಿದ್ದನು. ಸುಕೇಶ್ ತನ್ನ ಆರಂಭದ ಜೀವನದಲ್ಲಿ ಮೋಸ, ವಂಚನೆ ಅಂತಹ ಕೃತ್ಯಗಳಲ್ಲಿ ಸುಕೇಶ್ ಹೆಸರು ಥಳಕು ಹಾಕಿತ್ತು. ಸದ್ಯ ಸುಕೇಶ್ ಚಂದ್ರಶೇಖರ್ ಉದ್ಯಮಿಯೊಬ್ಬರಿಗೆ 200 ಕೋಟಿ ರೂಪಾಯಿ ವಂಚನೆ ಆರೋಪದಡಿ ತಿಹಾರ್ ಜೈಲು (Tihar Jail) ಸೇರಿದ್ದಾನೆ.


ಹುಳಿಮಾವು ಪೊಲೀಸ್ ಠಾಣೆಯ ಪೊಲೀಸರ ಬಳಿ ಹಣ ಪಡೆದು ವಂಚಿಸುತ್ತಿದ್ದನು. ವಂಚನೆಗೊಳಗಾದ ಪೊಲೀಸರು ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.


ತಮಿಳುನಾಡಿನ ಸಚಿವರಿಗೆ 10 ಲಕ್ಷ ಮೋಸ


ತಾನೋರ್ವ ಮಾಜಿ ಮುಖ್ಯಮಂತ್ರಿಯೊಬ್ಬರ ಪುತ್ರ ಎಂದು ಹೇಳಿಕೊಂಡು ತಮಿಳುನಾಡಿನ ಹಾಲಿ ಸಚಿವರಿಗೆ 10 ಲಕ್ಷ ರೂಪಾಯಿ ವಂಚಿಸಿದ್ದನು. ತಾನು ವಿಐಪಿ ಎಂದು ಹೇಳಿಕೊಳ್ಳುತ್ತಿದ್ದ ಮೋಸದಿಂದ ಪಡೆದ ಕಾರ್​ಗಳಲ್ಲಿ ಸುಕೇಶ್ ಚಂದ್ರಶೇಖರ್ ತಿರುಗಾಡುತ್ತಿದ್ದನು ಎಂದು ಸಹಾಯಕ ಪೊಲೀಸ್ ಕಮಿಷನರ್ ಎಂ ಬಾಬು ಹೇಳುತ್ತಾರೆ.


Sukesh Chandrashekar first arrested by Bengaluru cop 14 years ago mrq
ಸುಕೇಶ್ ಚಂದ್ರಶೇಖರ್


ವಿಐಪಿ ಕಾರ್​​ಗಳಲ್ಲಿ ಬರುತ್ತಿದ್ದ ಸುಕೇಶ್​​ನಿಗೆ ಕೆಲ ಪೊಲೀಸರು ಸೆಲ್ಯೂಟ್ ಸಹ ಹೊಡೆಯುತ್ತಿದ್ದರು. ಅಂದಿನ ಉದಯನ್ಮೋಖ ರಾಜಕಾರಣಿ ಪತ್ನಿಗೆ ಮಾರುತಿ ಝೆನ್ ಕಾರ್​ ನೀಡಿದ್ದನು.


14 ವರ್ಷಗಳ ಹಿಂದೆ ಇತ್ತು ಆರು ಕಾರ್


ಬಂಧನದ ಬಳಿಕ ಎರಡು ಪ್ರಕರಣಗಳಲ್ಲಿ ತಪ್ಪು ಒಪ್ಪಿಕೊಂಡಿದ್ದನು. 14 ವರ್ಷಗಳ ಹಿಂದೆ ಸುಕೇಶ್ ಐಷಾರಾಮಿಯ ಆರು ಕಾರ್​ಗಳನ್ನು ಹೊಂದಿದ್ದನು. ಬಂಧನದ ವೇಳೆ ಸುಕೇಶ್ ಬಳಿಯಲ್ಲಿದ್ದ ಕಾರ್ ಮತ್ತು ಟಾಪ್ ಎಂಡ್ ಸೇರಿದಂತೆ ಕೆಲವು ವಸ್ತುಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿತ್ತು ಎಂದು ಬಾಬು ಹೇಳುತ್ತಾರೆ.


ಜಾಕ್ಲಿನ್​​ಗೆ ಬಿಗ್ ರಿಲೀಫ್


200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಜೊತೆ ಆರೋಪಿ ಎಂದು ಗುರುತಿಸಲ್ಪಟ್ಟ ನಟಿ ಜಾಕ್ಲಿನ್ ಫರ್ನಾಂಡಿಸ್​ಗೆ ಬಿಗ್ ರಿಲೀಫ್ ಸಿಕ್ಕಿದೆ. ಜಾಮೀನು ಅರ್ಜಿ ವಿಚಾರಣೆಗಾಗಿ ಮುಂಬೈನಿಂದ ಹೊರಗೆ ದೆಹಲಿ ಸೇರಿ ಇತರ ಪ್ರದೇಶಗಳಿಗೆ ಪದೇ ಪದೇ ಓಡಾಡುತ್ತಿದ್ದ ನಟಿಯ ಸಮಸ್ಯೆಗೆ ಬ್ರೇಕ್ ಬಿದ್ದಿದ್ದು ರಕ್ಕಮ್ಮ ಬೇಲ್ ಪಡೆದು ಸೇಫ್ ಆಗಿದ್ದಾರೆ.


ಇದನ್ನೂ ಓದಿ: Mohammad Nalapad: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್​ಗೆ ಸಂಕಷ್ಟ


ದೆಹಲಿ ಕೋರ್ಟ್ ನಟಿಗೆ ಜಾಮೀನು ಮಂಜೂರು ಮಾಡಿದ್ದು 2 ಲಕ್ಷದ ಬಾಂಡ್​ ಇಡುವಂತೆ ಕೂಡಾ ಆದೇಶ ಹೊರಡಿಸಿದೆ. ಅಂತೂ ಈ ಮೂಲಕ ನಟಿಗೆ ಎದುರಾದ ದೊಡ್ಡ ಸಮಸ್ಯೆ ನಿವಾರಣೆ ಆದಂತಾಗಿದೆ.


Sukesh Chandrashekar first arrested by Bengaluru cop 14 years ago mrq
ಸುಕೇಶ್ ಚಂದ್ರಶೇಖರ್


ಅನೇಕ ಮಂದಿಯನ್ನು ವಂಚಿಸಿದ ಆರೋಪ


ಪ್ರಸ್ತುತ ಜೈಲಿನಲ್ಲಿರುವ ಚಂದ್ರಶೇಖರ್ ಮಾಜಿ ಫೋರ್ಟಿಸ್ ಹೆಲ್ತ್‌ಕೇರ್ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಂತಹ ಉನ್ನತ ವ್ಯಕ್ತಿಗಳು ಸೇರಿದಂತೆ ಅನೇಕ ಮಂದಿಯನ್ನು ವಂಚಿಸಿದ ಆರೋಪ ಹೊತ್ತಿದ್ದಾರೆ. ಈ ಪ್ರಕರಣದಲ್ಲಿ ಫತೇಹಿ ಅವರನ್ನು ಜಾರಿ ನಿರ್ದೇಶನಾಲಯ ಈ ಹಿಂದೆ ವಿಚಾರಣೆ ನಡೆಸಿತ್ತು.


ಈ ಪ್ರಕರಣದಲ್ಲಿ ಫತೇಹಿಯನ್ನು ಈ ಹಿಂದೆ ಜಾರಿ ನಿರ್ದೇಶನಾಲಯ (ಇಡಿ) ಪ್ರಶ್ನಿಸಿತ್ತು. ಇಡಿ ಫತೇಹಿ ಮತ್ತು ಜಾಕ್ವೆಲಿನ್ ಫೆರ್ನಾಂಡಿಸ್ ಅವರು ಸುಖೇಶ್‌ನಿಂದ ಐಷಾರಾಮಿ ಕಾರುಗಳು ಮತ್ತು ಇತರ ದುಬಾರಿ ಉಡುಗೊರೆಗಳನ್ನು ಪಡೆದಿದ್ದಾರೆ ಎಂದು ವರದಿ ಮಾಡಿದೆ.


ಇದನ್ನೂ ಓದಿ:  Mysuru: ಗುಂಬಜ್​ ದಂಗಲ್​ನಲ್ಲಿ ರಾಮದಾಸ್ Vs ಪ್ರತಾಪ್ ಸಿಂಹ ವಾರ್; ಸಂಸದರ ಆರೋಪಕ್ಕೆ ಶಾಸಕರ ತಿರುಗೇಟು


ನೋರಾ ಫತೇಹಿ ಅವರು ಸೆಪ್ಟೆಂಬರ್ 13 ಮತ್ತು ಅಕ್ಟೋಬರ್ 14, 2021 ರಂದು ಇಡಿಯೊಂದಿಗೆ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ, ಅಲ್ಲಿ ಅವರು ಸುಕೇಶ್ ಮತ್ತು ಅವರ ನಟ ಪತ್ನಿ ಲೀನಾ ಅವರಿಂದ ಉಡುಗೊರೆಗಳನ್ನು ಸ್ವೀಕರಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.

Published by:Mahmadrafik K
First published: