• Home
  • »
  • News
  • »
  • state
  • »
  • Belagavi: ಪ್ರತಿ ಟನ್ ಕಬ್ಬಿನ ಬೆಲೆ ನಿಗದಿ ವಿಚಾರ; ರೈತರು ಹಾಗೂ ಸರ್ಕಾರದ ನಡುವೆ ಸಂಘರ್ಷ, ಮತ್ತೆ ಉಗ್ರ ಹೋರಾಟದ ಎಚ್ಚರಿಕೆ!

Belagavi: ಪ್ರತಿ ಟನ್ ಕಬ್ಬಿನ ಬೆಲೆ ನಿಗದಿ ವಿಚಾರ; ರೈತರು ಹಾಗೂ ಸರ್ಕಾರದ ನಡುವೆ ಸಂಘರ್ಷ, ಮತ್ತೆ ಉಗ್ರ ಹೋರಾಟದ ಎಚ್ಚರಿಕೆ!

ಕಬ್ಬಿನ ಬೆಲೆ ನಿಗದಿಗೆ ಆಗ್ರಹ

ಕಬ್ಬಿನ ಬೆಲೆ ನಿಗದಿಗೆ ಆಗ್ರಹ

ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಇಳುವರಿ ಆಧರಿಸಿ ಎಫ್ ಆರ್ ಪಿ ಬೆಲೆ ನಿಗದಿ ಮಾಡಿದ್ದಾರೆ. ಆದರೇ ಬೆಳೆಗಾರರು ಮಾತ್ರ ಪ್ರತಿ ಟನ್ ಕಬ್ಬಿಗೆ 5 ಸಾವಿರ ರೂಪಾಯಿ ನಿಗದಿ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

  • Share this:

ಬೆಳಗಾವಿ (ನ.4): ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಸಕ್ಕರೆ ಕಾರ್ಖಾನೆಗಳ (Sugar Factory) ಸಂಖ್ಯೆ ಹೆಚ್ಚಾಗುತ್ತಿದ್ದ ಜತೆಗೆ ಕಬ್ಬು ಬೆಳೆಯುವ ಪ್ರದೇಶ ವ್ಯಾಪ್ತಿ ಹೆಚ್ಚಾಗುತ್ತಲೇ ಇದೆ. ಆದರೇ ದರಕ್ಕಾಗಿ ಕಾರ್ಖಾನೆಗಳು ಹಾಗೂ ಕಬ್ಬು ಬೆಳೆಗಾರರ ನಡುವೆ ಸಂಘರ್ಷಗಳು ನಡೆಯುತ್ತಿವೆ. ಈ ವರ್ಷವು ಇಂತಹದೇ ಸಂಘರ್ಷ ಏರ್ಪಟ್ಟಿದ್ದು, ಸಕ್ಕರೆ ಸಚಿವರು ಸರಕಾರ ಸೂಕ್ತ ಬೆಲೆ ನಿಗದಿ ಮಾಡದೇ ಇದ್ರೆ ಮುಂಬರುವ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಬೃಹತ್ ಪ್ರತಿಭಟನೆ (Protest) ನಡೆಯುವ ಸಾಧ್ಯತೆ ಇದೆ.  ಸಕ್ಕರೆ ಆಯುಕ್ತರ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಇಳುವರಿ ಆಧರಿಸಿ ಎಫ್ ಆರ್ ಪಿ ಬೆಲೆ ನಿಗದಿ (Pricing Fixing) ಮಾಡಿದ್ದಾರೆ. ಆದರೇ ಬೆಳೆಗಾರರು ಮಾತ್ರ ಪ್ರತಿ ಟನ್ ಕಬ್ಬಿಗೆ 5 ಸಾವಿರ ರೂಪಾಯಿ ನಿಗದಿ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ.


ಇಡೀ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯ ಅತಿ ಹೆಚ್ಚು ಸಕ್ಕರೆ ಉತ್ಪಾದನೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ 27 ಸಕ್ಕರೆ ಕಾರ್ಖಾನೆಗಳು ಈಗಾಗಲೇ ಕುಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿವೆ. ಸಕ್ಕರೆ ಕಾರ್ಖಾನೆಗಳ ಇಳುವರಿ ಆಧರಿಸಿ ಎಫ್ ಆರ್ ಪಿ ಬೆಲೆ ನಿಗದಿ ಮಾಡಿ ಸಕ್ಕರೆ ಆಯುಕ್ತರ ಆದೇಶ ಹೋರಡಿಸಿದ್ದಾರೆ. ಇಳುವರಿ ಆಧಾರಿಸಿ 3050ರಿಂದ 3660 ರೂಪಾಯಿ ವರೆಗೆ ಪ್ರತಿ ಟನ್ ಗೆ ಬೆಲೆ ಫಿಕ್ಸ್ ಮಾಡಲಾಗಿದೆ.


ಆದರೇ  ಕಬ್ಬು ಕಟಾವ್ ಹಾಗೂ ಸಾಗಾಣಿಕೆ ವೆಚ್ಚ ಮಾತ್ರ ಈ ಕಗ್ಗಟಾಂಗಿ ಉಳಿದುಕೊಂಡಿದೆ. ಪ್ರತಿ ಟನ್ ಕಬ್ಬಿಗೆ ಎಚ್ ಎನ್ ಟಿ ಎಂದು 700 ರೂಪಾಯಿ ಯಿಂದ 950 ರೂಪಾಯಿ ವರೆಗೆ ರೈತರಿಂದ ಕಡಿತ ಮಾಡುತ್ತಿರೋ ಸಕ್ಕರೆ ಕಾರ್ಖಾನೆಗಳು. ರೈತರಿಗೆ ಪ್ರತಿ ಟನ್ ಕಬ್ಬಿಗೆ 2400 - 2500 ರೂಪಾಯಿ ಮಾತ್ರ ಸಿಗುತ್ತಿದೆ.


ಇದನ್ನೂ ಓದಿ: Potholes in Bengaluru: ಅಪಘಾತ ತಪ್ಪಿಸಲು ಅಖಾಡಕ್ಕಿಳಿದ ಖಾಕಿ! ಟ್ರಾಫಿಕ್ ಪೊಲೀಸರಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯ


ಸಾಗಾಣಿಕೆ  ವೆಚ್ಚ ನಿಗದಿ ಮಾಡಬೇಕು


ಕಿಲೋ ಮಿಟರ್ ಮೇಲೆ ಕಟಾವ್ ಸಾಗಾಣಿಕೆ  ವೆಚ್ಚ ನಿಗದಿ ಮಾಡಬೇಕು ಎನ್ನುವ ಕಾನೂನು ಇದೆ, ಆದರೇ ಎಲ್ಲಾ ರೈತರಿಗೆ 700 ರಿಂದ 950 ರೂಪಾಯಿ ಕಡಿತ ಮಾಡಲಾಗುತ್ತಿದೆ. ರೈತರು ತಮ್ಮ ಎತ್ತಿನ ಗಾಡಿ, ಟ್ರ್ಯಾಕ್ಟರ್ ನಲ್ಲಿ ಕಬ್ಬು ತಂದರು ಎಚ್ ಎನ್ ಟಿ ಕಟ್ ಮಾಡೋ ಕಾರ್ಖಾನೆಗಳು ಇವೆ ಎನ್ನುವುದು ರೈತರ ಆರೋಪ. ಕಬ್ಬು ಕಟಾವ್ ಹಾಗೂ ಸಾಗಾಣಿಕೆ ವೆಚ್ಚ ಬಿಟ್ಟು ಪ್ರತಿ ಟನ್ ಕಬ್ಬಿಗೆ 3500 ರೂಪಾಯಿ ನೀಡಲು ರಾಜ್ಯಾದ್ಯಂತ ಕಬ್ಬು ಬೆಳೆಗಾರರ ಆಗ್ರಹವಾಗಿದೆ.




ಕಾರ್ಖಾನೆಗಳು ಕೇವಲ ಸಕ್ಕರೆ ಮಾರಾಟ ಮಾಡೋ ಲೆಕ್ಕ ಮಾತ್ರ ಕೊಡುತ್ತಿವೆ, ಕಬ್ಬಿನಿಂದ ಅನೇಕ ಉಪ ಉತ್ಪನ್ನಗಳಿಂದ ಸಾಕಷ್ಟು ಪ್ರಮಾಣದಲ್ಲಿ ಲಾಭ ಇದೆ. ಮೊಲಾಸಿಸ್, ಅಲ್ಕೋಹಾಲ್, ಕಬ್ಬಿನ ಸಿಪ್ಪೆಯಿಂದ ವಿದ್ಯುತ್ ಉತ್ಪಾದನೆ ಮತ್ತು ಗೊಬ್ಬರ ತಯಾರು ಮಾಡಿ ಮಾರಾಟ ಮಾಡುತ್ತಿವೆ. ಪ್ರತಿ ಟನ್ ಕಬ್ಬಿನ ಉಪ ಉತ್ಪನ್ನಗಳಿಂದ ಸುಮಾರು 10 ಸಾವಿರ ರೂ. ಆದಾಯ ಸಕ್ಕರೆ ಕಾರ್ಖಾನೆ ಲಾಭ ಇದೆ. ಉಪ ಉತ್ಪನ್ನಗಳ ಆದಾಯದಿಂದ ಶೇಕಡಾ 30 ಲಾಭ ಕಾರ್ಖಾನೆ ಶೇ 70ರಷ್ಟು ಲಾಭ ರೈತರಿಗೆ ಕೊಡಬೇಕು ಎನ್ನುವ ನಿಯಮವನ್ನು ಯಾರು ಪಾಲನೆ ಮಾಡುತ್ತಿಲ್ಲ.


ಇದನ್ನೂ ಓದಿ: Chandrashekar Death: ಆಶ್ರಮಕ್ಕೆ ಬಂದ ಚಂದ್ರಶೇಖರ್​ಗೆ ವಿನಯ್​ ಗುರೂಜಿ ಹೇಳಿದ್ದೇನು? ಸಾವಿನ ಬಗ್ಗೆ ಸುಳಿವು ಕೊಟ್ಟಿದ್ರಾ ಅವಧೂತರು?


ರೈತರು ಹಾಗೂ ಸರ್ಕಾರದ ನಡುವೆ ಸಂಘರ್ಷ


ಸರ್ಕಾರ ನಿಯಮವನ್ನು ಪಾಲಿಸುತ್ತಿಲ್ಲ ಯಾವುದೇ ಸಕ್ಕರೆ ಕಾರ್ಖಾನೆಗಳು.  ಕಬ್ಬಿನ ಇಳಿವರಿಯನ್ನು ಸಹ ಕಾರ್ಖಾನೆಗಳು ಪಾರದರ್ಶಕವಾಗಿ ತೋರಿಸುತ್ತಿಲ್ಲ ಎನ್ನು ಆರೋಪ ಇದೆ. ಕಬ್ಬು ಬೆಳೆಗಾರರ ಸಮಸ್ಯೆಯ ಬಗ್ಗೆ ಈಗಾಗಲೇ ಎಸ್ ಎ ಪಿ ಕಮಿಟಿ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಸಕ್ಕರೆ ಸಚಿವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ರೈತ ಹೋರಾಟಗಾರ ಸಿದ್ದಗೌಡ ಮೊದಗಿ ಹೇಳಿದ್ದಾರೆ.

Published by:ಪಾವನ ಎಚ್ ಎಸ್
First published: