ಮತ್ತೆ ಸಂಕಷ್ಟಕ್ಕೆ ಸಿಲುಕಿದ ಕಬ್ಬು ಬೆಳೆಗಾರ ; ರೈತರ ಕಬ್ಬು ಒಯ್ಯಲು ಕಾರ್ಖಾನೆಗಳ ಹಿಂದೇಟು

G Hareeshkumar | news18-kannada
Updated:January 12, 2020, 7:41 AM IST
ಮತ್ತೆ ಸಂಕಷ್ಟಕ್ಕೆ ಸಿಲುಕಿದ ಕಬ್ಬು ಬೆಳೆಗಾರ ; ರೈತರ ಕಬ್ಬು ಒಯ್ಯಲು ಕಾರ್ಖಾನೆಗಳ ಹಿಂದೇಟು
ಸಾಂದರ್ಭಿಕ ಚಿತ್ರ
  • Share this:
ಚಿಕ್ಕೋಡಿ(ಜ.12) : ರಾಜ್ಯದಲ್ಲೆ ಅತಿ ಹೆಚ್ಚು ಇಳುವರಿ ಕಬ್ಬು ಬೆಳೆಯುವ ರೈತರು ಅವರು ಕೃಷ್ಣಾ ಪ್ರವಾಹಕ್ಕೆ ಸಿಲುಕಿ ಬೆಳೆದ ಕಬ್ಬು ಕೂಡ ನೀರುಪಾಲಾಗಿತ್ತು ಉಳಿದ ಇರೊ ಬರೊ ಕಬ್ಬಾದರು ನಮ್ಮ ಕೈ ಹಿಡಿಯುತ್ತೆ ಅಂತ ಕನಸು ಕಾಣಿದ್ದ ರೈತ ಈಗ ಕಂಗಾಲಾಗಿದ್ದಾನೆ ರೈತನಿಗೆ ಸಿಹಿಯಾಗಬೇಕಾಗಿದ್ದ ಅದೆ ಕಬ್ಬು ಈ ಕಹಿಯಾಗಿದೆ. 

ಪ್ರವಾಹದ ಮಧ್ಯೆಯೂ ತಲೆ ಎತ್ತರಕ್ಕೆ ಬೆಳೆದು ನಿಂತಿರುವ ಕಬ್ಬು, ಅವದಿ ಮೂಗಿದರು ಕಬ್ಬು ಕಟಾವಿಗೆ ಮುಂದಾಗದ ಕಾರ್ಖಾನೆ ಮಾಲಿಕರು, ಅವಧಿ ಮೀರಿದ ಪರಿಣಾಮ ತುರಾಯಿ ಬಿಟ್ಟಿರುವ ಕಬ್ಬು. ರಾಜ್ಯದಲ್ಲೆ ಅತಿ ಹೆಚ್ಚು ಕಬ್ಬು ಬೆಳೆಯುವ ಜಿಲ್ಲೆ ಅದು ಬೆಳಗಾವಿ ಅದರಲ್ಲೂ ಕೃಷ್ಣಾ ತೀರದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯಲಾಗುತ್ತೆ ಚಿಕ್ಕೋಡಿ ವ್ಯಾಪ್ತಿಯಲ್ಲಿ 2019 ನೆ ಸಾಲಿಗೆ 1,93,184 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿತ್ತು

ಆದರೆ, 2019 ರ ಆಗಸ್ಟ ತಿಂಗಳಿನಲ್ಲಿ ಬಂದ್ ಕೃಷ್ಣಾ ನದಿ ಪ್ರವಾಹದಿಂದಾಗಿ ನದಿ ತೀರದ 71,175 ಹೆಕ್ಟೇರ್ ಪ್ರದೇಶದ ಕಬ್ಬು ಪ್ರವಾಹಕ್ಕೆ ತುತ್ತಾಗಿ 1,22,009 ಹೆಕ್ಟೇರ್ ಕಬ್ಬು ಮಾತ್ರ ಉಳಿದಿದ್ದು ಕಬ್ಬು ಬೆಳೆಗಾರರ ನಿದ್ದೆಗೆಡಿಸಿತ್ತು. ಉಳಿದ ಕಬ್ಬು ತಲೆ ಎತ್ತರಕ್ಕೆ ಬೆಳೆದು ನಿಂತು ತಿಂಗಳುಗಳೆ ಕಳೆದು ಹೋಗಿವೆ. ತಿಂಗಳ ಹಿಂದೆಯೆ ಕಟಾವಾಗಬೇಕಾಗಿದ್ದ ಕಬ್ಬು ಇದುವರೆಗೂ ಕಟಾವಾಗಿಲ್ಲ. ಅತಿವೃಷ್ಠಿಯಾದ ಪರಿಣಾಮ ಕಬ್ಬು ಬೆಳೆಗೆ ತುರಾಯಿ ಬಿಟ್ಟಿದೆ.

ಇನ್ನು ತುರಾಯಿ ಬಿಟ್ಟಿದ್ದರಿಂದ ಕಬ್ಬಿನ ತೂಕ ಹಾಗೂ ಇಳುವರಿಯಲ್ಲಿ ಕಮ್ಮಿಯಾಗುತ್ತೆ. ಮೊದಲೇ ಇಲ್ಲಿನ ರೈತರು ಪ್ರವಾಹಕ್ಕೆ ತುತ್ತಾಗಿ ಕಂಗಾಲಾಗಿದ್ದಾರೆ ಆದ್ರೆ ಕಾರ್ಖಾನೆಗಳು ಮಾತ್ರ ನಮ್ಮ ಕಡೆ ನೋಡುತ್ತಿಲ್ಲ ಅಂತಾರೆ ಇಲ್ಲಿನ ರೈತರು

ಇನ್ನು ಕಬ್ಬಿಗೆ ತುರಾಯಿ ಬಂದಿರುವುದರಿಂದ ಕಬ್ಬಿನ ಇಳುವರಿ ಕಡಿಮೆ ಬರುತ್ತೆ ಅನ್ನುವ ಕಾರಣಕ್ಕಾಗಿ. ತುರಾಯಿ ಬರದೆ ಇರುವ ಕಬ್ಬನ್ನೆ ಸಕ್ಕರೆ ಕಾರ್ಖಾನೆಗಳು ಮೊದಲು ಕಟಾವು ಮಾಡುತ್ತಿದ್ದವು. ಇದರಿಂದಾಗಿ ನಮ್ಮ ಕಬ್ಬುಗಳು ಕಟಾವು ಆಗದೆ ಹಾಗೆ ಉಳಿದಿವೆ. ಇನ್ನು ಒಪ್ಪಂದದ ಪ್ರಕಾರ ಕಾರ್ಖಾನೆಗಳೆ ನಮ್ಮ ಕಬ್ಬು ಕಟಾವು ಮಾಡಿಕೊಂಡು ಹೊಗಬೇಕು ಆದರೆ, ಅವರು ಮಾತ್ರ ಮುಂದಾಗುತ್ತಿಲ್ಲ.

ಇದನ್ನೂ ಓದಿ : ಎಷ್ಟು ಮಂದಿ ಬೇಕು?: ಉದ್ಯೋಗ ಭರ್ತಿಗೆ ಯೋಗ್ಯ ಅಭ್ಯರ್ಥಿಗಳಿಲ್ಲವೆಂದ ಡಿಸಿಎಂಗೆ ಕುಮಾರಸ್ವಾಮಿ ತಿರುಗೇಟು

ಇನ್ನು ನಾವೇ ಕಟಾವು ಮಾಡಿಕೊಡಬೇಕು ಅಂದ್ರೆ ಕೆಲಸಗಾರರು ಸಿಗುತ್ತಿಲ್ಲ. ಇನ್ನು ಇಷ್ಟು ವರ್ಷಗಳ ಕಾಲ ಕಾರ್ಖಾನೆಗಳು ನಮ್ಮಿಂದ ಲಾಭ ಪಡೆದು ಈಗ ನಮ್ಮ ಸಂಕಷ್ಟಕ್ಕೆ ಕಾರ್ಖಾನೆಗಳು ಮಾತ್ರ ಸ್ಪಂದಿಸುತ್ತಿಲ್ಲ ಎಂದು ರೈತರು ತಮ್ಮ ಆಳಲು ಹೇಳಿಕೊಂಡಿದ್ದಾರೆಒಟ್ಟಿನಲ್ಲಿ ಕಾರ್ಖಾನೆಗಳ ದುರಾಸೆಗೆ ರೈತ ರೋಸಿ ಹೋಗಿದ್ದಾನೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗಾಗಿದೆ ಕೃಷ್ಣಾ ತೀರದ ಕನ್ಬು ಬೆಳೆಗಾರರ ಸ್ಥಿತಿ ಇನ್ನಾದ್ರು ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕಾರ್ಖಾನೆಗಳಿಗೆ ಮೂಗುದಾರ ಹಾಕಬೇಕಾಗಿದೆ.

(ವರದಿ :  ಲೋಹಿತ್ ಶಿರೋಳ)
First published:January 12, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ