• Home
  • »
  • News
  • »
  • state
  • »
  • 28 ಕೋಟಿ ರೂ. ಕಬ್ಬಿನ ಬಾಕಿ ಹಣ ಪಾವತಿ ಮಾಡದ ಸಕ್ಕರೆ ಕಾರ್ಖಾನೆ; ಸಂಕಷ್ಟದಲ್ಲಿ ಯಾದಗಿರಿ ರೈತರು

28 ಕೋಟಿ ರೂ. ಕಬ್ಬಿನ ಬಾಕಿ ಹಣ ಪಾವತಿ ಮಾಡದ ಸಕ್ಕರೆ ಕಾರ್ಖಾನೆ; ಸಂಕಷ್ಟದಲ್ಲಿ ಯಾದಗಿರಿ ರೈತರು

ಸಕ್ಕರೆ ಕಾರ್ಖಾನೆ

ಸಕ್ಕರೆ ಕಾರ್ಖಾನೆ

ಕಳೆದ ನಾಲ್ಕು ತಿಂಗಳಿನಿಂದ 28 ಕೋಟಿ ರೂ ಕಬ್ಬಿನ ಬಾಕಿ ಉಳಿಸಿಕೊಂಡ ಪರಿಣಾಮ ರೈತರ ಕೈಯಲ್ಲಿ ಹಣವಿಲ್ಲದೇ ಮಕ್ಕಳ ಮದುವೆ ಹಾಗೂ ಕುಟುಂಬಸ್ಥರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಪ್ರಯಾಸಪಡುವಂತಾಗಿದೆ.

  • Share this:

ಯಾದಗಿರಿ(ಮಾ.05): ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರ ಬದುಕು ಈಗ ಕಹಿಯಾಗಿದೆ. ಕಬ್ಬು ಪೂರೈಸಿದ 15 ದಿನಗಳ ಒಳಗೆ ರೈತರ ಖಾತೆಗೆ ಹಣ ಪಾವತಿ ಮಾಡಬೇಕಾದ ಸಕ್ಕರೆ ಕಾರ್ಖಾನೆ ಸಂಪೂರ್ಣ ಅನ್ನದಾತರಿಗೆ ‌ಮೋಸ ಮಾಡುವ ಕೆಲಸ ಮಾಡುತ್ತಿದೆ.ಕಬ್ಬಿನ ಬಾಕಿ ಹಣ ಪಾವತಿಯಾಗದ ಹಿನ್ನೆಲೆ ರೈತರು ನಿತ್ಯವೂ ಅಲೆದಾಡುವಂತಾಗಿದೆ.ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರು ಗ್ರಾಮದ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಯು ಕಬ್ಬು ಪೂರೈಸಿದ ರೈತರಿಗೆ ಬಾಕಿ ಹಣ ಪಾವತಿ ಮಾಡದೆ 28 ಕೋಟಿ ರೂ ಹಣ ಬಾಕಿ ಉಳಿಸಿಕೊಂಡಿದೆ.ಕೈಯಲ್ಲಿ ಹಣವಿಲ್ಲದೇ ರೈತರು ಪರದಾಡುವಂತಾಗಿದೆ.


ಕಳೆದ ವರ್ಷದ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಗೆ ಕಲಬುರಗಿ ಹಾಗೂ ಬೀದರ ಜಿಲ್ಲೆಯ ನೂರಾರು ರೈತರು ಕಬ್ಬು ಪೂರೈಸಿದ್ದಾರೆ. ಕಬ್ಬು ಪೂರೈಸಿದ 15 ದಿನಗಳ ಒಳಗಡೇ ಹಣ ಪಾವತಿ ಮಾಡಲಾಗುತ್ತದೆ ಎಂದು ಭರವಸೆ ನೀಡಿ ಈಗ ಕಬ್ಬು ಪೂರೈಸಿ ನಾಲ್ಕು ತಿಂಗಳಾದರೂ ರೈತರ ಖಾತೆಗೆ ಒಂದು ರೂ ಹಣ ಜಮಾ ಮಾಡಿಲ್ಲ. ಇದರಿಂದ ಅನ್ನದಾತರು ಕಂಗಲಾಗಿದ್ದಾರೆ. ಹಣದ ಕೊರತೆ ನೆಪ ಒಡ್ಡಿ ಆಡಳಿತ ಮಂಡಳಿಯವರು ಹಣ ಪಾವತಿ ಮಾಡುತ್ತಿಲ್ಲ‌ವಂತೆ. ಹಾಗಾದ್ರೆ ಸಕ್ಕರೆ ಮಾರಾಟ ಮಾಡಿದ ಹಣ ಏನು ಮಾಡಿದರು? ಸಕ್ಕರೆ ಮಾರಾಟ ಮಾಡಿದ ಹಣದಲ್ಲಿ ರೈತರಿಗೆ ಯಾಕೆ ಪಾವತಿ ಮಾಡುತ್ತಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Crime News: ಮದುವೆಯಾಗಿದ್ದ ಯುವತಿ ಪ್ರಿಯಕರನೊಂದಿಗೆ ಪರಾರಿ; ಕೋಪಗೊಂಡ ತಂದೆ ಮಾಡಿದ್ದು ಮಗಳ ಕೊಲೆ..!


ಕೈಯಲ್ಲಿ ಹಣವಿಲ್ಲದೇ ಕಂಗಾಲು..‌!


ಕಳೆದ ನಾಲ್ಕು ತಿಂಗಳಿನಿಂದ 28 ಕೋಟಿ ರೂ ಕಬ್ಬಿನ ಬಾಕಿ ಉಳಿಸಿಕೊಂಡ ಪರಿಣಾಮ ರೈತರ ಕೈಯಲ್ಲಿ ಹಣವಿಲ್ಲದೇ ಮಕ್ಕಳ ಮದುವೆ ಹಾಗೂ ಕುಟುಂಬಸ್ಥರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಪ್ರಯಾಸಪಡುವಂತಾಗಿದೆ. ರೈತರ ಕೈಯಲ್ಲಿ ಹಣವಿಲ್ಲದೇ ಮಕ್ಕಳ ಮದುವೆ ಕೂಡ ಮುಂದುಡುವಂತಾಗಿದೆ.


ಮಾತಿನ ಚಕಮಕಿ ...!


ಖುದ್ದು ರೈತರು ಕಲಬುರಗಿ ಹಾಗೂ ಬೀದರ ಜಿಲ್ಲೆಗಳಿಂದ ಆಗಮಿಸಿ ಕಬ್ಬಿನ ಬಾಕಿ ಹಣ ನೀಡಬೇಕೆಂದು ಕಾರ್ಖಾನೆಯವರನ್ನು ಕೇಳಿದ್ರೆ ಆಡಳಿತ ಮಂಡಳಿಯವರು ಹಾರಿಕೆ ಉತ್ತರ ನೀಡಿದರು. ಹಣವಿಲ್ಲ ಹಣ ಬಂದ ನಂತರ ನಿಮಗೆ ಹಣ ಪಾವತಿ ಮಾಡಲಾಗುತ್ತದೆ ಎಂದರು‌. ಈ ವೇಳೆ ರೈತರು ಹಾಗೂ ಕಾರ್ಖಾನೆ ಆಡಳಿತ ಮಂಡಳಿ ನಡುವೆ ಮಾತಿನಚಕಮಕಿ ನಡೆಯಿತು.


ಈ ಬಗ್ಗೆ ರೈತ ಮುಖಂಡ ಲಕ್ಷ್ಮಿಕಾಂತ ಪಾಟೀಲ ಮಾತನಾಡಿ,ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ಕಲಬುರಗಿ ಹಾಗೂ ಬೀದರ ಜಿಲ್ಲೆಯ ರೈತರಿಗೆ ಹಣ ಪಾವತಿ‌ ಮಾಡಿಲ್ಲ.ಈ ಬಗ್ಗೆ ಕೂಡಲೇ ಹಣ ಪಾವತಿ ಮಾಡಬೇಕು ಇಲ್ಲದಿದ್ದರೆ ಹೋರಾಟ ನಡೆಸಲಾಗುತ್ತದೆ ಎಂದರು .ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಕೂಡಲೇ ರೈತರಿಗೆ ಕಬ್ಬಿನ ಬಾಕಿ ಹಣ ಪಾವತಿ ಮಾಡಿ ಅನ್ನದಾತರ ಜೀವ ಉಳಿಸುವ ಕಾರ್ಯ ಮಾಡಬೇಕಿದೆ.

Published by:Latha CG
First published: