ಜನರಿಗೆ ಬೆಲೆಬಾಳುವ ಉಡುಗೊರೆ ನೀಡುವುದಾಗಿ ಆಡಿಯೋ ಮೂಲಕ ಹೇಳಿದ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್

ಸುಧಾಕರ್ ಅವರು ತಮ್ಮ ಟ್ರಸ್ಟ್ ಸಿಬ್ಬಂದಿಗೆ ಧ್ವನಿ ಸಂದೇಶವೊಂದನ್ನು ಕಳುಹಿಸಿದ್ದು, ಅದರಲ್ಲಿ ಎಲ್ಲರೂ ಹೇಗೆ ಕೆಲಸ ಮಾಡಬೇಕು, ಯಾವ ರೀತಿ ಮಾಡಬೇಕು, ಅದರಿಂದ ತಮಗೆ ಸಿಗುವ ಸವಲತ್ತುಗಳೇನು ಎಂಬುದನ್ನು ವಿವರವಾಗಿ ಹೇಳಿದ್ದಾರೆ. ಸುಧಾಕರ್ ಮಾತನಾಡಿರುವ ಆಡಿಯೋ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.

HR Ramesh | news18-kannada
Updated:November 20, 2019, 3:29 PM IST
ಜನರಿಗೆ ಬೆಲೆಬಾಳುವ ಉಡುಗೊರೆ ನೀಡುವುದಾಗಿ ಆಡಿಯೋ ಮೂಲಕ ಹೇಳಿದ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್
ಸಚಿವ ಡಾ| ಕೆ. ಸುಧಾಕರ್
  • Share this:
ಚಿಕ್ಕಬಳ್ಳಾಪುರ: ಉಪಚುನಾವಣೆಯ ಅಖಾಡ ರಂಗೇರುತ್ತಿದ್ದು, ಗೆಲುವಿಗಾಗಿ ಅಭ್ಯರ್ಥಿಗಳು ನಾನಾ ಕಸರತ್ತು, ಹಲವು ತಂತ್ರಗಾರಿಕೆಗೆ ಮೊರೆ ಹೋಗುತ್ತಿದ್ದಾರೆ. ಅದರಂತೆ ಚಿಕ್ಕಬಳ್ಳಾಪುರ ಕ್ಷೇತ್ರ ಬಿಜೆಪಿ ಅಭ್ಯರ್ಥಿಯಾಗಿರುವ ಸುಧಾಕರ್ ಅವರು ಮತದಾರರಿಗೆ ಬೆಲೆ ಬಾಳುವ ಗಿಫ್ಟ್​ ನೀಡುವುದಾಗಿ ತಮ್ಮ ಟ್ರಸ್ಟ್ ಸಿಬ್ಬಂದಿಗೆ ಹೇಳಿರುವ ಆಡಿಯೋವೊಂದು ಇದೀಗ ವೈರಲ್ ಆಗಿದೆ.ಸುಧಾಕರ್ ಅವರು ತಮ್ಮ ಟ್ರಸ್ಟ್ ಸಿಬ್ಬಂದಿಗೆ ಧ್ವನಿ ಸಂದೇಶವೊಂದನ್ನು ಕಳುಹಿಸಿದ್ದು, ಅದರಲ್ಲಿ ಎಲ್ಲರೂ ಹೇಗೆ ಕೆಲಸ ಮಾಡಬೇಕು, ಯಾವ ರೀತಿ ಮಾಡಬೇಕು, ಅದರಿಂದ ತಮಗೆ ಸಿಗುವ ಸವಲತ್ತುಗಳೇನು ಎಂಬುದನ್ನು ವಿವರವಾಗಿ ಹೇಳಿದ್ದಾರೆ. ಸುಧಾಕರ್ ಮಾತನಾಡಿರುವ ಆಡಿಯೋ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.

ಸಿಬ್ಬಂದಿಗಳು ಪ್ರಾಮಾಣಿಕವಾಗಿ ಇನ್ನು 20 ದಿನ ಹಗಲು-ಇರುಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಯಾರೂ ಈ ಸಮಯದಲ್ಲಿ ರಜೆ ತೆಗೆದುಕೊಳ್ಳಬಾರದು. ಚುನಾವಣೆ ಮುಗಿದ ಬಳಿಕ ಎಲ್ಲರಿಗೂ ಒಂದು ವಾರ ರಜೆ ನೀಡಲಾಗುವುದು ಮತ್ತು ಒಂದು ಸುಂದರ ಸ್ಥಳಕ್ಕೆ ಪ್ರವಾಸದ ಆಯೋಜನೆಯನ್ನು ಮಾಡುತ್ತೇನೆ. ಅಲ್ಲದೇ, ಈ ತಿಂಗಳು ಬೋನಸ್​ ಆಗಿ ಒಂದು ತಿಂಗಳ ಸಂಬಳವನ್ನು ಹೆಚ್ಚುವರಿಯಾಗಿ ನೀಡಲಾಗುವುದು. ನೀವುಗಳು ನಿಮ್ಮ ವ್ಯಾಪ್ತಿಯಲ್ಲಿ ಬರುವ ಮನೆಗಳ ವಿಳಾಸ, ಆ ಮನೆಯ ಯಜಮಾನ ಅಥವಾ ಹೆಂಡತಿಯ ಹೆಸರು ಹಾಗೂ ಫೋನ್ ನಂಬರ್​ ಅನ್ನು ಪಡೆದುಕೊಳ್ಳಬೇಕು. ಯಾಕೆಂದರೆ ಅವರೆಲ್ಲರಿಗೂ ನಾನು ಬೆಲೆಬಾಳುವ ಉಡುಗೊರೆಯೊಂದನ್ನು ನೀಡಲಿದ್ದೇನೆ. ಚುನಾವಣೆ ಸಮಯ ಆದ್ದರಿಂದ ಆ ಬೆಲೆಬಾಳುವ ವಸ್ತುವಿನ ಬಿಲ್ ಅನ್ನು ಆ ಮನೆ ಮಾಲೀಕನ ಹೆಸರಿನಲ್ಲೇ ಮಾಡಬೇಕು. ಹಾಗಾಗಿ ಹೆಸರು, ವಿಳಾಸ ಕಲೆ ಹಾಕಿ ಎಂದು ಸುಧಾಕರ್ ಅವರು ಸುಮಾರು ಆರು ನಿಮಿಷಗಳ ಕಾಲದ ಧ್ವನಿ ಸಂಭಾಷಣೆ ಮೂಲಕ ಹೇಳಿದ್ದಾರೆ.

ಇದನ್ನು ಓದಿ: ಎಂಟಿಬಿ ಒಬ್ಬ ಯಕಶ್ಚಿತ್ ರಾಜಕಾರಣಿ, ಅವನ ಬಳಿ‌ ನಾನ್ ಯಾಕ್ರೀ ದುಡ್ಡು ತಗೊಳ್ಳಲಿ?; ಸಿದ್ದರಾಮಯ್ಯ ಕಿಡಿ

First published: November 20, 2019, 3:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading