HOME » NEWS » State » SUDHAKAR IS AN UNWORTHY MINISTER STATEMENT BY MLA RIZWAN ARSHAD MAK

Rizwan Arshad: ಸುಧಾಕರ್​ ಓರ್ವ ಅಯೋಗ್ಯ ಮಂತ್ರಿ; ಶಾಸಕ ರಿಜ್ವಾನ್ ಅರ್ಷದ್ ಹೇಳಿಕೆ!

ನಮ್ಮ ರಾಜ್ಯದಲ್ಲಿ ಪ್ರತಿಯೊಂದಕ್ಕೂ ಮಂತ್ರಿ ಇದ್ದಾರೆ. ಬೆಡ್​ಗೆ ಒಬ್ರು, ಲಸಿಕೆಗೆ ಒಬ್ರು, ಹಣಕಾಸಿಗೆ ಒಬ್ರು ಆಮೇಲೆ ಆರೋಗ್ಯ ಸಚಿವರು. ನಮ್ಮಿಂದ 25 ಸಂಸದರು ಆಯ್ಕೆಯಾಗಿದ್ದಾರೆ. ಆದರೆ, ರಾಜ್ಯಕ್ಕೆ ಇವರಿಂದ ಯಾವ ಲಾಭವೂ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

news18-kannada
Updated:May 18, 2021, 5:15 PM IST
Rizwan Arshad: ಸುಧಾಕರ್​ ಓರ್ವ ಅಯೋಗ್ಯ ಮಂತ್ರಿ; ಶಾಸಕ ರಿಜ್ವಾನ್ ಅರ್ಷದ್ ಹೇಳಿಕೆ!
ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
  • Share this:
ಬೆಂಗಳೂರು (ಮೇ 18); ಕರ್ನಾಟಕ ಆರೋಗ್ಯ ಇಲಾಖೆ ಸಚಿವ ಸುಧಾಕರ್​ ಓರ್ವ ಅಯೋಗ್ಯ ಮಂತ್ರಿ ಎಂದು ಕಾಂಗ್ರೆಸ್​ ಶಾಸಕ ರಿಜ್ವಾನ್ ಅರ್ಷದ್ ಕಿಡಿಕಾರಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಇಂದು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಚಿವ ಸುಧಾಕರ್ ವಿರುದ್ಧ ಕಿಡಿಕಾರಿರುವ ರಿಜ್ವಾನ್ ಅರ್ಷದ್, "ರಾಜ್ಯದಲ್ಲಿ-ದೇಶದಲ್ಲಿ ಕೊರೋನಾ ಹೆಚ್ಚುತ್ತಿದ್ದ ಸಮಯದಲ್ಲಿ ಕಾಂಗ್ರೆಸ್​ ಅದನ್ನು ಎಚ್ಚರಿಸಿತ್ತು. ಆದರೆ, ಬಿಜೆಪಿ ಈ ಎಲ್ಲಾ ಎಚ್ಚರಿಕೆಯನ್ನೂ ಕಡೆಗಣಿಸಿತ್ತು. ಇನ್ನೂ ರಾಜ್ಯದಲ್ಲಿ ಕೊರೋನಾ ಕೈಮೀರಿದಾಗಲೂ ಆರೋಗ್ಯ ಸಚಿವ ಎನಿಸಿಕೊಂಡ ಸುಧಾಕರ್​ ಯಾವುದೇ ಪರಿಣಾಮಕಾರಿ ಕೆಲಸ ನಿರ್ವಹಿಸಿಲ್ಲ. ಬದಲಾಗಿ ಸಮಯ ವ್ಯರ್ಥ ಮಾಡುತ್ತಾ ಕಾಲ ಕಳೆದಿದ್ದಾರೆ. ಅವರೋರ್ವ ಅಯೋಗ್ಯ ಮಂತ್ರಿ" ಎಂದು ಕಿಡಿಕಾರಿದ್ದಾರೆ.

ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧವೂ ಕಿಡಿಕಾರಿರುವ ರಿಜ್ವಾನ್ ಅರ್ಷದ್, "ಕೋರೋನಾ ಬಂದ ಮೇಲೆ ರಾಜ್ಯವನ್ನು ಕೇಂದ್ರ ಕೈತೊಳೆದಿದೆ. ಲಸಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿದೆ. ನಮಗೆ ಒಂದು ಬೆಲೆಗೆ ಲಸಿಕೆ ಕೊಡ್ತಾರೆ, ಬೇರೆ ರಾಜ್ಯಕ್ಕೆ ಮತ್ತೊಂದು ರೀತಿ ಕೊಡ್ತಾರೆ. ಅದರಲ್ಲೂ ತಾರತಮ್ಯ ‌ಮಾಡುತ್ತಿದ್ದಾರೆ. ಲಸಿಕೆ ಇಲ್ಲದೆ ಅಭಿಯಾನ ಪ್ರಾರಂಭ ಮಾಡಿದ್ರು, ಇದನ್ನು ನಾನು ಸುಧಾಕರ್ ಗೆ ಪ್ರಶ್ನೆ ಮಾಡಿದ್ದೆ. ಆದರೆ, ಈವರೆಗೆ ಅವರು ಉತ್ತರ ನೀಡಿಲ್ಲ" ಎಂದು ಕಿಡಿಕಾರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, "ನಮ್ಮ ರಾಜ್ಯದಲ್ಲಿ ಪ್ರತಿಯೊಂದಕ್ಕೂ ಮಂತ್ರಿ ಇದ್ದಾರೆ. ಬೆಡ್​ಗೆ ಒಬ್ರು, ಲಸಿಕೆಗೆ ಒಬ್ರು, ಹಣಕಾಸಿಗೆ ಒಬ್ರು ಆಮೇಲೆ ಆರೋಗ್ಯ ಸಚಿವರು. ನಮ್ಮಿಂದ 25 ಸಂಸದರು ಆಯ್ಕೆಯಾಗಿದ್ದಾರೆ. ಒಬ್ಬ ಸಂಸದ ಕೂಡ ರಾಜ್ಯದ ಪರವಾಗಿ ಮಾತನಾಡುವುದಿಲ್ಲ. ಇವರೆಲ್ಲರೂ ರಾಜ್ಯಕ್ಕೆ ಅನುದಾನ ತರುವುದರಲ್ಲಿ ವಿಫಲರಾಗಿದ್ದಾರೆ. 35 ಸಾವಿರ ಕೋಟಿ ಲಸಿಕೆಗೆ ಕೇಂದ್ರ ಮೀಸಿಲಿಟ್ಟಿದೆ. ಸಂಸದರು ಈ ಹಣದಿಂದ ರಾಜ್ಯಕ್ಕೆ ಎಷ್ಟು ತಂದಿರಿ? ಲಸಿಕೆ ಇಲ್ಲದೆ ಅಭಿಯಾನ ಹೇಗೆ ಮಾಡ್ತೀರ..? ನಿಮ್ಮ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದ್ರಿ? ಅಂತಾ ಆದ್ರೂ ಹೇಳಿ" ಎಂದು ಕಿಡಿಕಾರಿದ್ದಾರೆ.ಕರ್ನಾಟಕದಲ್ಲಿ ಕೊರೋನಾ ಅಬ್ಬರ:

ಕರ್ನಾಟಕದಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಅಪಾಯದ ಮಟ್ಟ ಮೀರಿದೆ. ಭಾರತದಲ್ಲಿ ಅತಿಹೆಚ್ಚು ಪಾಸಿಟಿವಿಟಿ ರೇಟ್ ಹೊಂದಿರುವ ಟಾಪ್ 5 ಜಿಲ್ಲೆಗಳ ಪೈಕಿ ಕರ್ನಾಟಕದ 2 ಜಿಲ್ಲೆಗಳು ಗುರುತಿಸಿಕೊಂಡಿವೆ. ಬಳ್ಳಾರಿ ಮತ್ತು ಉತ್ತರ ಕನ್ನಡದಲ್ಲಿ ಅತಿಹೆಚ್ಚು ಕೊರೋನಾ ಪಾಸಿಟಿವಿಟಿ ರೇಟ್ ಇರುವುದು ಪತ್ತೆಯಾಗಿದೆ. ಇದರ ನಡುವೆ ಕೊರೋನಾ ಸೋಂಕು ಹೆಚ್ಚಳದಿಂದ ಒತ್ತಡಕ್ಕೆ ಒಳಗಾಗಿ ಕಡಿಮೆ ಟೆಸ್ಟ್ ಮಾಡಲು ಸರ್ಕಾರ ಸೂಚನೆ ನೀಡಿದೆ. ರೋಗ ಲಕ್ಷಣಗಳಿದ್ದರೆ ಮಾತ್ರ ಕೊರೋನಾ ಟೆಸ್ಟ್ ನಡೆಸಲು ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ದೈನಂದಿನ ಟೆಸ್ಟ್​ ಪ್ರಮಾಣ 1 ಲಕ್ಷಕ್ಕೂ ಕಡಿಮೆಯಾಗಿದೆ.

ಇದನ್ನೂ ಓದಿ: ಯೂತ್​ ಕಾಂಗ್ರೆಸ್​ ವಿತರಿಸಿದ ಐಸೊಲೇಶನ್​ ಕಿಟ್​ನಲ್ಲಿ ಸ್ಟಿರಾಯ್ಡ್​; ಕೇಸ್​ ದಾಖಲಿಸಿದ ಬಿಜೆಪಿ ಯುವ ಮೋರ್ಚಾ

ಸೋಮವಾರ ಕರ್ನಾಟಕದಲ್ಲಿ ಕೇವಲ 97,336 ಮಂದಿಗೆ ಕೊರೋನಾ ಟೆಸ್ಟ್ ಮಾಡಲಾಗಿದೆ. ಇಷ್ಟು ಕಡಿಮೆ ಟೆಸ್ಟ್ ಮಾಡಿದರೂ 38,603 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಕರ್ನಾಟಕದ ಕೊರೋನಾ ಪಾಸಿಟಿವಿಟಿ ರೇಟ್ 39.70ಗೆ ಏರಿಕೆಯಾಗಿದೆ. ಕರ್ನಾಟಕ ಸರ್ಕಾರ ಮಾಡುತ್ತಿರುವ ಎಡವಟ್ಟು ಅನಾಹುತದಿಂದ ಟೆಸ್ಟ್ ಸಂಖ್ಯೆ ಇಳಿಮುಖವಾದರೆ ಸಾವು, ಸೋಂಕು ಎರಡೂ ಉಲ್ಬಣಿಸುತ್ತದೆ.
Youtube Video

ಸೋಂಕು ಪತ್ತೆ ವಿಳಂಬದಿಂದ ಇನ್ನಷ್ಟು ಮಂದಿಗೆ ಸೋಂಕು ಅಂಟುತ್ತದೆ. ಬೇಗ ಕೊರೋನಾ ಸೋಂಕು ಪತ್ತೆಯಾಗದಿದ್ದರೆ ಸಾವಿನ ಪ್ರಮಾಣವೂ ಹೆಚ್ಚಾಗುತ್ತದೆ. ಸೋಂಕು ಉಲ್ಬಣಿಸಿದಾಗ ಸೋಂಕು ಪತ್ತೆಯಾದರೆ ವ್ಯಕ್ತಿ ಸಾವಿಗೀಡಾಗುವ ಸಾಧ್ಯತೆ ಹೆಚ್ಚಾಗಿರಲಿದೆ.
Published by: MAshok Kumar
First published: May 18, 2021, 5:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories