ಬೆಂಗಳೂರು: ಖ್ಯಾತ ಲೇಖಕಿಯೂ (Writer) ಆಗಿರುವ ಇನ್ಫೋಸಿಸ್ ಫೌಂಡೇಶನ್ (Infosys Foundation) ಅಧ್ಯಕ್ಷೆ (President) ಸುಧಾ ಮೂರ್ತಿಯವರು (Sudha Murthy) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಬೆಂಗಳೂರಿನ (Bengaluru) ರವೀಂದ್ರ ಕಲಾಕ್ಷೇತ್ರದಲ್ಲಿ (Ravindra Kalakshetra) ನಡೆದ ‘ಮೋದಿ@20 – ಕನಸುಗಳು ಈಡೇರಿದವು’ ಎಂಬ ಪ್ರಧಾನಿ ಮೋದಿ ಸಾಧನೆ (Achievement) ಕುರಿತಾದ ಪುಸ್ತಕ ಬಿಡುಗಡೆ (Books Release) ವೇಳೆ ಸುಧಾಮೂರ್ತಿ ಮೋದಿ ಕುರಿತು ಮಾತನಾಡಿದರು. ಮೋದಿ@20 ಪುಸ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾಗಿ ನಾನೊಂದು ಲೇಖನ (Article) ಬರೆದಿದ್ದೇನೆ. ಅದರ ಹೆಸರು ‘then comes the winds of change’ ಅಂತ. ನಾನು ಮೋದಿಯವರನ್ನು ಯಾವ ರೀತಿಯಲ್ಲೂ ಬಲ್ಲವಳಲ್ಲ, ಅವರ ಜತೆ ನಾನು ಕೆಲಸವನ್ನು ಮಾಡಿಲ್ಲ. ಅವರಿರೋದು ದಿಲ್ಲಿ (Delhi), ನಾನಿರೋದು ಹಳ್ಳಿ (Village). ಅವರ ಬಗ್ಗೆ ಬರೆದುಕೊಡಿ ಅಂದಾಗ ಏನು ಬರೆಯಬೇಕೆಂದು ಗೊತ್ತಾಗ್ಲಿಲ್ಲ. ಅವರ ಆಡಳಿತ, ಸಾಧನೆ ಬಗ್ಗೆ ನನ್ನ ಬಳಿ ಅಂಕಿ ಅಂಶಗಳೂ (statistics) ಇರಲಿಲ್ಲ. ಆದರೂ ನನಗೆ ಗೊತ್ತಿರುವ ಮಾಹಿತಿ (Information) ಬರೆದಿದ್ದೇನೆ ಅಂತ ಸುಧಾ ಮೂರ್ತಿ ಹೇಳಿದ್ದಾರೆ.
“ಮಹಾನ್ ನಾಯಕ ಪರರಿಗಾಗಿ ಬದುಕುತ್ತಾನೆ”
ಈ ಲೇಖನ ಬರೆಯುತ್ತಾ ಬರೆಯುತ್ತಾ ಮೋದಿಯವರನ್ನು ನೋಡುವ ದೃಷ್ಟಿಕೋನ ಬದಲಾಯಿತು ಅಂತ ಸುಧಾ ಮೂರ್ತಿ ಹೇಳಿದ್ದಾರೆ. ಒಬ್ಬ ಮಹಾನ್ ನಾಯಕನ ಗುಣಗಳೇ ಬೇರೆ ಇರುತ್ತವೆ. ವಿಕಾಸಕ್ಕೆ ಒಬ್ಬ ವ್ಯಕ್ತಿಯ ನಾಯಕತ್ವ ಕಾರಣ ಆಗುತ್ತೆ. ಒಬ್ಬ ಸಮರ್ಥ ನಾಯಕ ತನಗಾಗಿ ಏನೂ ಮಾಡಿಕೊಳ್ಳಲ್ಲ. ಮಹಾನ್ ನಾಯಕ ಪರರಿಗಾಗಿ ಬದುಕಿರುತ್ತಾನೆ. ಈ ಗುಣಗಳನ್ನು ನಾನು ಮೋದಿಯವರಲ್ಲಿ ಕಂಡೆ ಅಂತ ಸುಧಾ ಮೂರ್ತಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದಾರೆ.
ಐಟಿ ಕಂಪನಿಗಳಿಂದ ಬೆಂಗಳೂರಲ್ಲಿ ಟ್ರಾಫಿಕ್ ಜಾಮ್!
ಇವತ್ತು ಐಟಿ ಬರದೇ ಇರುತ್ತಿದ್ದರೆ ಟ್ರಾಫಿಕ್ ಜಾಮ್ ಇರುತ್ತಿರಲಿಲ್ಲ ಅಂತ ಸುಧಾ ಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮ್ಮ ಮಕ್ಕಳು ನಮ್ಮ ಜೊತೆಯೇ ಇದ್ದಾರೆ. ಮೊದಲೆಲ್ಲಾ ಕೆಲಸ ಹುಡುಕಿಕೊಂಡು ಬೇರೆ ಕಡೆ ಹೋಗಬೇಕಿತ್ತು. ಈಗ ನಮ್ಮ ಮಕ್ಕಳಿಗೆ ಇಲ್ಲೇ ಉದ್ಯೋಗ ಸಿಕ್ಕಿ, ನಮ್ಮ ಜೊತೆಯೇ ಇದ್ದು ಕನ್ನಡದ ಹುಡುಗಿಯರನ್ನೇ ಮದುವೆಯಾಗುತ್ತಿದ್ದಾರೆ ಅಂತ ಹೇಳಿದ್ದಾರೆ. ಇನ್ನು ಐಟಿ ಬೆಳವಣಿಗೆಗೆ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಕೊಡುಗೆ ಅಪಾರವಾಗಿದೆ. ಹುಬ್ಬಳ್ಳಿಯಲ್ಲಿ ಕೂಡಾ ಬೆಂಗಳೂರಿನ ರೀತಿ ಅಭಿವೃದ್ಧಿ ಆಗಲಿ ಅಂತಾ ಸಿಎಂ ಬೊಮ್ಮಾಯಿ ಅವರಲ್ಲಿ ಕೇಳಿಕೊಳ್ಳುತ್ತೇನೆ ಅಂತ ಸುಧಾಮೂರ್ತಿ ವೇದಿಕೆ ಮೇಲೆಯೇ ಸಿಎಂಗೆ ಮನವಿ ಮಾಡಿದರು.
ಇದನ್ನೂ ಓದಿ: Fly Over: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಬೆಂಗಳೂರಿನಲ್ಲಿ 4 ಹೊಸ ಫ್ಲೈ ಓವರ್, ಎಲ್ಲೆಲ್ಲಿ ನಿರ್ಮಾಣವಾಗಲಿದೆ ಮೇಲ್ಸೇತುವೆ?
ಮೋದಿ@20 ಪುಸ್ತಕದಲ್ಲಿ ಘಟಾನುಘಟಿಗಳ ಲೇಖನ
ರೂಪ ಪಬ್ಲಿಕೇಷನ್ಸ್ನಿಂದ ಹೊರ ತಂದಿರುವ ಪುಸ್ತಕ
‘ಮೋದಿ@20 – ಕನಸುಗಳು ಈಡೇರಿದವು’ ಪುಸ್ತಕದಲ್ಲಿ ಘಟಾನುಘಟಿಗಳು ಲೇಖನ ಬರೆದಿದ್ದಾರೆ. ಸುಧಾಮೂರ್ತಿ, ಪಿ.ವಿ ಸಿಂಧು, ಅಮಿತ್ ಶಾ, ಅರವಿಂದ್ ಪನಗ್ರಿಯಾ, ಸದ್ಗುರು, ಅಮಿಶ್ ತ್ರಿಪಾಠಿ, ನಂದನ್ ನೀಲೆಕಣಿ ಸೇರಿದಂತೆ ಹಲವರು ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Mann Ki Baat: ತುರ್ತು ಪರಿಸ್ಥಿತಿ ಸಂದರ್ಭ ಪ್ರಜಾಪ್ರಭುತ್ವ ಅಳಿಸುವ ಪ್ರಯತ್ನ, ಮೋದಿ ಮಾತುಗಳು
ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬಸವರಾಜ್ ಬೊಮ್ಮಾಯಿ, ಕೇಂದ್ರ ರಾಜ್ಯ ಖಾತೆ ಸಚಿವ ಎಲ್ ಮುರುಗನ್, ಸಚಿವ ವಿ. ಸೋಮಣ್ಣ, ಸುನಿಲ್ ಕುಮಾರ್, ಬಿ.ಸಿ. ಪಾಟೀಲ್, ನಟಿ ತಾರಾ ಅನುರಾಧಾ, ಶಾಸಕ ಉದಯ್ ಗರುಡಾಚಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ