ಬಾಗಲಕೋಟೆ(ಫೆ.02): ಇಂದು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರು ಜಮಖಂಡಿಯ ಎಪಿಎಂಸಿ ಆವರಣದಲ್ಲಿ ನಡೆಯುವ ವಾರದ ಸಂತೆಗೆ ಭೇಟಿ ನೀಡಿದ್ದರು. ಭಾನುವಾರ ಬೆಳಗ್ಗೆಯೇ ವಾರದ ಸಂತೆಗೆ ಸಾಮಾನ್ಯರಂತೆ ಭೇಟಿ ನೀಡಿದ ಸುಧಾಮೂರ್ತಿ ಚೀಲ ಹಿಡಿದು ಅಡ್ಡಾಡಿದರು. ನಂತರ ಸಂತೆಯಲ್ಲಿ ಅವರು ತರಕಾರಿ ಕೊಂಡದ್ದು ಭಾರೀ ವಿಶೇಷವಾಗಿತ್ತು.
ಹೌದು,
ಸುಧಾಮೂರ್ತಿಯವರು ಕುಟುಂಬ ಸಮೇತರಾಗಿ ಜಮಖಂಡಿಗೆ ಆಗಮಿಸಿದ್ದರು. ಇಲ್ಲಿನ ತಮ್ಮ ಮನೆದೇವರಾದ ಶೂರ್ಪಾಲಿಯ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಪೂಜೆ ಮಾಡಿಸಲು ಬಂದಿದ್ದಾರೆ. ಬಳಿಕ ಜಮಖಂಡಿಯಲ್ಲೇ ಸೋದರಳಿಯ(ತಮ್ಮನ ಮಗ) ನಾರಾಯಣ ಕುಲಕರ್ಣಿ ಮನೆಯಲ್ಲಿ ಉಳಿದಿದ್ದಾರೆ.
ಇದರ ಮರುದಿನ ಸುಧಾಮೂರ್ತಿಯವರು ಶೂರ್ಪಾಲಿಯ ಲಕ್ಷ್ಮೀನರಸಿಂಹ ಸ್ವಾಮಿಗೆ ಪೂಜೆ ಸಲ್ಲಿಸಿದರು. ಅದಾದ ಕೂಡಲೇ ಬಾದಾಮಿಯ ಬನಶಂಕರಿ ದೇವಸ್ಥಾನಕ್ಕೆ ತೆರಳಿದರು. ಅಲ್ಲಿನ ದೇವರ ದರ್ಶನ ಪಡೆದು ಬೆಂಗಳೂರಿಗೆ ವಾಪಸ್ಸಾದರು.
ಇದನ್ನೂ ಓದಿ: ಫೆಬ್ರವರಿ 6ಕ್ಕೆ ಸಚಿವ ಸಂಪುಟ ವಿಸ್ತರಣೆ; ಸೋತವರಿಗಿಲ್ಲ ಮಂತ್ರಿಗಿರಿ; ಸಿಎಂ ಯಡಿಯೂರಪ್ಪ ಸ್ಪಷ್ಟನೆ
ಇನ್ನು ಜಮಖಂಡಿ ಸಮೀಪದ ಸಾವಳಗಿ ಸುಧಾಮೂರ್ತಿಯವರ ಹುಟ್ಟೂರು. ಇಲ್ಲಿಗೆ ಭೇಟಿ ಕೊಟ್ಟಾಗಲೆಲ್ಲಾ ಕಾಯಿಪಲ್ಲೆ, ಹೂವು, ಬೆಲ್ಲ, ಸಾಂಬಾರು ಪದಾರ್ಥ ಕೊಂಡು ಬೆಂಗಳೂರಿನ ಮನೆಗೆ ಒಯ್ಯುತ್ತಾರೆ' ಎಂದು ನಾರಾಯಣ ಕುಲಕರ್ಣಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ