ಅಂದು ಐಟಿ ಅಧಿಕಾರಿಗಳಿಂದ ಯಶ್​, ಸುದೀಪ್​ ಪ್ರಶಂಸೆ; ಇಂದು ಅವರಿಂದಲೇ ದಾಳಿ

ಈ ಹಿಂದೆ ಸಕಾಲದಲ್ಲಿ ಆದಾಯ ತೆರಿಗೆ ಸಲ್ಲಿಸಿ ಅಧಿಕಾರಿಗಳಿಂದ ಮೆಚ್ಚುಗೆ ಪಾತ್ರವಾಗಿದ್ದ ಯಶ್, ಸುದೀಪ್​ಗೆ​ ಇಂದು ಅದೇ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.

Seema.R | news18
Updated:January 3, 2019, 6:12 PM IST
ಅಂದು ಐಟಿ ಅಧಿಕಾರಿಗಳಿಂದ ಯಶ್​, ಸುದೀಪ್​ ಪ್ರಶಂಸೆ; ಇಂದು ಅವರಿಂದಲೇ ದಾಳಿ
ಯಶ್​- ಸುದೀಪ್​
Seema.R | news18
Updated: January 3, 2019, 6:12 PM IST
ಬೆಂಗಳೂರು (ಜ.3):  ಆದಾಯ ಸಲ್ಲಿಕೆಯಲ್ಲಿ ಪಾರದರ್ಶಕತೆ ಕಾಯ್ದುಗೊಂಡಿಲ್ಲ ಎಂಬ ಶಂಕೆಯ ಹಿನ್ನಲೆಯಲ್ಲಿ ನಟ ಯಶ್​, ಸುದೀಪ್​, ಪುನೀತ್​ ರಾಜ್​ಕುಮಾರ್​, ಶಿವರಾಜ್​ ಕುಮಾರ್​ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದರೆ ಒಂದು ಕಾಲದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದಲೇ ಈ ನಟರು ಪ್ರಶಂಸೆಗೆ ಪಾತ್ರರಾಗಿದ್ದರು ಎಂಬುದು ಮರೆಯುವಂತಿಲ್ಲ.

ಹೌದು, ಈ ಹಿಂದೆ ಸಕಾಲದಲ್ಲಿ ಆದಾಯ ತೆರಿಗೆ ಸಲ್ಲಿಸಿ ಅಧಿಕಾರಿಗಳಿಂದ ಮೆಚ್ಚುಗೆ ಪಾತ್ರವಾಗಿದ್ದ ಯಶ್, ಸುದೀಪ್​ಗೆ​ ಇಂದು ಅದೇ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.

ಸಿನಿಮಾ ನಟರು ತಮ್ಮ ಬ್ಯುಸಿ ಶೆಡ್ಯೂಲ್​ಗಳಲ್ಲಿ ಸಕಾಲದಲ್ಲಿ ಆದಾಯ ತೆರಿಗೆಯನ್ನು ಪಾವತಿ ಮಾಡುವುದಿಲ್ಲ. ಇದೇ ರೀತಿ 2017ರಲ್ಲಿ ಕೂಡ ಕನ್ನಡದ ಸ್ಟಾರ್​ ನಟರಾದ ಕಿಚ್ಚ ಸುದೀಪ್​ ಹಾಗೂ ರಾಕಿಂಗ್​ ಸ್ಟಾರ್​ ಯಶ್​ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಈ ನಟರಿಗೆ ಐಟಿ ಇಲಾಖೆ ನೋಟಿಸ್​ ಜಾರಿ ಮಾಡಿತು.

ವೃತ್ತಿಪರ ತೆರಿಗೆಯನ್ನು ಕಟ್ಟದ ಹಿನ್ನಲೆ ಯಶ್​, ಸುದೀಪ್​, ಪುನೀತ್ ರಾಜಕುಮಾರ್​, ದರ್ಶನ್​, ರಮ್ಯ ಜಗ್ಗೇಶ್​, ಮಾಲಾಶ್ರೀ, ಉಪೇಂದ್ರ ಯೋಗೇಶ್​, ಸಂಚಾರಿ ವಿಜಯ್​ಗೆ ನೋಟಿಸ್​ ನೀಡಲಾಗಿತ್ತು. ತಕ್ಷಣಕ್ಕೆ ಯಶ್​ ಬಾಕಿ ಉಳಿಸಿಕೊಂಡಿದ್ದ 53,500 ಹಾಗೂ ಸುದೀಪ್​ ಬಾಕಿ ಉಳಿಸಿಕೊಂಡ 33,033 ರೂ. ವೃತ್ತಿಪರಿಗೆಯನ್ನು ಕಟ್ಟಿ ತಮ್ಮ ಕರ್ತವ್ಯ ಮರೆದಿದ್ದರು.

ಈ ಕುರಿತು ಅಂದು ಬೆಂಗಳೂರು ಮಿರರ್​ನೊಂದಿಗೆ ಮಾತನಾಡಿದ್ದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತ ಕೆ ರಮಣ್​, ಯಶ್​ ಹಾಗೂ ಸುದೀಪ್ ಅವರ ನಿಷ್ಠೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ನಮ್ಮ ನೋಟಿಸ್​ಗೆ ತಕ್ಷಣ ಸ್ಪಂದಿಸಿದ ಯುವ ನಟರ ನಡುವಳಿಕೆ ಪ್ರಶಂಸನೀಯ. ನಮ್ಮ ನೋಟಿಸ್​ಗೆ ಕೂಡಲೇ ಸ್ಪಂದಿಸಿ, ತಮ್ಮ ಜವಾಬ್ದಾರಿ ಮೆರೆದಿದ್ದಾರೆ. ತಮ್ಮ ಸ್ಟಾರ್​ಗಳನ್ನು ನೋಡಿ ಅವರ ಸಹನಟರು ಹಾಗೂ ಅಭಿಮಾನಿಗಳು ಕೂಡ ತೆರಿಗೆ ವಿಷಯದಲ್ಲಿ ಅವರನ್ನು ಹಿಂಬಾಲಿಸಬೇಕು. ಸೂಕ್ತ ಸಮಯದಲ್ಲಿ ಅವರ ನಡೆ ಎಲ್ಲರ ಮೆಚ್ಚುಗೆ ಪಡೆದಿದೆ ಎಂದು ಅವರನ್ನು ಶ್ಲಾಘಿಸಿದ್ದರು.

ಇದನ್ನು ಓದಿ: ಐಟಿ ದಾಳಿ ಹಿಂದೆ ರಾಜಕೀಯ ಹಿತಾಸಕ್ತಿ ಇಲ್ಲ, ಬಿಗ್​ ಬಜೆಟ್​ ಚಿತ್ರಗಳೇ ಕಾರಣವಿರಬಹುದು; ನಟ ಸುದೀಪ್​
Loading...

ಇನ್ನು ಪುನೀತ್​ ರಾಜ್​ಕುಮಾರ್​ 2017 ಜುಲೈ 24 ಆದಾಯ ತೆರಿಗೆ ದಿನಾಚರಣೆಯಲ್ಲಿ ಐಟಿ ಕಚೇರಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಫೋಟೋ ಕೂಡ ಐಟಿ ವೆಬ್​ಸೈಟ್​ನಲ್ಲಿ ಕಾಣಬಹುದು. ಆದಾಯ ತೆರಿಗೆ ಇಲಾಖೆ ಕಾರ್ಯಕ್ರಮಕ್ಕೆ ಪುನೀತ್​ ಆಹ್ವಾನಿತರಾಗಿದ್ದರು ಎಂದರೆ, ಅವರ ಬಗ್ಗೆ ಇಲಾಖೆಗೆ ಉತ್ತಮ ಅಭಿಪ್ರಾಯ ಇತ್ತು ಎಂಬುದನ್ನು ನಿಸ್ಸಂಶಯವಾಗಿ ಹೇಳಬಹುದು.

ವಿಪರ್ಯಾಸವೆಂದರೆ ಇದಾದ ಒಂದು ವರ್ಷದ ಬಳಿಕ ಇಂದು ಈ ಮೂವರು ಸ್ಟಾರ್​ ನಟರ ಮೇಲೆ ಆದಾಯ ತೆರಿಗೆ ಇಲಾಖೆ ಸೂಕ್ತ ತೆರಿಗೆಯನ್ನು ದಾಖಲಿಸಿದ್ದಾರೋ ಇಲ್ಲವೋ ಎನ್ನುವ ಬಗ್ಗೆ ತಿಳಿಯಲು ಅವರ ಮನೆ ಕಚೇರಿಗಳ ಮೇಲೆ ದಾಳಿ ನಡೆಸಿದೆ.

First published:January 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ