ಧಾರವಾಡ: ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರದ (Kundagol Assembly Constituency) ಕಾಂಗ್ರೆಸ್ ಟಿಕೆಟ್ ಫೈಟ್ ಇನ್ನು ಶಮನವಾಗಿಲ್ಲ. ಈ ನಡುವೆ ಕುಂದಗೋಳದಲ್ಲಿ ಆಯೋಜನೆಯಾಗಿದ್ದ ಪ್ರಜಾಧ್ವನಿ ಯಾತ್ರೆ (Congress Prajadhwani Yatre) ಮೂರನೇ ಬಾರಿಗೆ ಮುಂದೂಡಿಕೆಯಾಗಿದೆ. ಹಾಲಿ ಶಾಸಕಿ ಕುಸುಮ/ಕುಸುಮಾವತಿ ಶಿವಳ್ಳಿ (MLA Kusuma Shivalli) ಅವರಿಗೆ ಈ ಬಾರಿ ಟಿಕೆಟ್ ನೀಡಬಾರದು ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರು (Congress Leaders) ವರಿಷ್ಠರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಅತ್ತಿಗೆ ಕುಸುಮಾ ಶಿವಳ್ಳಿ ಬೆಂಬಲಕ್ಕೆ ನಿಂತಿದ್ದ ಮೈದುನ ತಮಗೆ ಟಿಕೆಟ್ ನೀಡಬೇಕು ಎಂದು ಹೇಳಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಮತ್ತೊಮ್ಮೆ ಕುಂದಗೋಳದಲ್ಲಿ ನಿಗದಿಯಾಗಿದ್ದ ಪ್ರಜಾಧ್ವನಿ ಯಾತ್ರೆ ಮುಂದೂಡಿಕೆಯಾಗಿದೆ. ಇತ್ತ ಶಾಸಕಿ ಕುಸುಮಾ ಶಿವಳ್ಳಿ ಇಂದು ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಭೇಟಿಗೆ ಮುಂದಾಗಿರೋದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಹುಬ್ಬಳ್ಳಿಯ ಆದರ್ಶ ನಗರದಲ್ಲಿರುವ ಸಿಎಂ ಬೊಮ್ಮಾಯಿ ಮನೆಗೆ ಕುಸುಮಾ ಶಿವಳ್ಳಿ ಬಂದಿದ್ದರು. ಸತತ ಒಂದೂವರೆ ಗಂಟೆ ಕಾದು ಕುಳಿತರೂ ಮುಖ್ಯಮಂತ್ರಿಗಳು ಪೂರ್ವ ನಿಯೋಜಿತ ಕಾರ್ಯಕ್ರಮಕ್ಕಾಗಿ ಬೆಳಗಾವಿಗೆ ತೆರಳಿದರು.
ಬಿಜೆಪಿ ಟಿಕೆಟ್ ಕೇಳಲು ಬಂದಿಲ್ಲ
ಈ ವೇಳೆ ಮಾತನಾಡಿದ ಕುಸುಮಾ ಶಿವಳ್ಳಿ, ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬಂದಿದ್ದೆ. ಆದರೆ ಸಿಎಂ ಭೇಟಿಯಾಗಲಿಲ್ಲ. ನಾನೇನೂ ಬಿಜೆಪಿ ಟಿಕೆಟ್ ಕೇಳಲು ಬಂದಿರಲಿಲ್ಲ. ಇದಕ್ಕೆ ಯಾವುದೇ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು.
ಮುಂದಿನ ಚುನಾವಣೆಯಲ್ಲಿಯೂ ನಾನೇ ಕುಂದಗೋಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಕಲಘಟಗಿಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ಇರೋ ಹಿನ್ನೆಲೆ ಕುಂದಗೋಳದಲ್ಲಿ ರದ್ದುಗೊಂಡಿದೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಿದರು.
ಇದು ಬಿಜೆಪಿ ಪ್ರೇರಿತ ದಾಳಿ ಅಲ್ಲ
ಬೆಳಗಾವಿಗೆ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ಮಾಜಿ ಸಚಿವ ಆರ್.ಶಂಕರ್ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳ ದಾಳಿಯ ಕುರಿತು ಪ್ರತಿಕ್ರಿಯಿಸಿದರು. ಈ ದಾಳಿಯ ಹಿಂದೆ ಬಿಜೆಪಿ ಪಾತ್ರವಿಲ್ಲ. ಬಿಜೆಪಿ ಪ್ರೇರಿತ ದಾಳಿ ಅನ್ನೋದು ಸುಳ್ಳು ಎಂದು ಸ್ಪಷ್ಟನೆ ನೀಡಿದರು.
ತನಿಖಾ ಸಂಸ್ಥೆಗಳಿಗೆ ಎಷ್ಟು ಮುಕ್ತ ವಾತಾವರಣ ನೀಡಿದ್ದೇವೆ ಅನ್ನೋದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಯಾರೇ ತಪ್ಪು ಮಾಡಿದ್ರೂ ಅವರನ್ನು ಶಿಕ್ಷಿಸುವ ಕಾರ್ಯವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಶಂಕರ್ ಪ್ರಕರಣದಲ್ಲಿಯೂ ತನಿಖಾ ಸಂಸ್ಥೆಗಳು ತಮ್ಮದೇ ಆದ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
ಸಿ.ಟಿ, ರವಿ ಮತ್ತು ವಿಜಯೇಂದ್ರ ಮಾತಿನ ಚಕಮಕಿ ಕುರಿತು ಪ್ರಶ್ನಿಸಿದ್ದಕ್ಕೆ ಸಿಡಿಮಿಡಿಗೊಂಡ ಸಿಎಂ ಬೊಮ್ಮಾಯಿ, ಎಲ್ಲವೂ ಮಾಧ್ಯಮಗಳ ಸೃಷ್ಟಿ. ಸಚಿವ ಸೋಮಣ್ಣ ದೆಹಲಿಗೆ ಹೋಗ್ತಿರೋ ವಿಚಾರ ನನಗೆ ಗೊತ್ತಿದೆ ಎಂದು ಸಿಟ್ಟಿನಿಂದಲೇ ಹೋದರು.
ಇದನ್ನೂ ಓದಿ: Bengaluru-Mysuru Expressway ಪ್ರಯಾಣಿಕರಿಗೆ ಬೆಲೆ ಏರಿಕೆ ಶಾಕ್ ನೀಡಿದ KSRTC
ಆರ್ ಶಂಕರ್ ನಿವಾಸದ ಮೇಲೆ ದಾಳಿ
ಹಾವೇರಿ ವಾಣಿಜ್ಯ ತೆರಿಗೆ ಆಯುಕ್ತರಾದ ಶಿವಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಕ್ಷೇತ್ರದ ಜನತೆಗೆ ವಿತರಿಸಲು ತಂದಿದ್ದ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಗೃಹ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರಿಗೆ ಎಂದು ವಿತರಣೆ ಮಾಡಲು ತಂದಿರುವ ವಸ್ತುಗಳನ್ನು ಇರಿಸಲಾಗಿತ್ತು. ಶಂಕರ್ ಅವರ ಭಾವಚಿತ್ರವುಳ್ಳ ಸೀರೆ ಬಾಕ್ಸ್, ತಟ್ಟೆ ಲೋಟ ಹಾಗೂ ಎಲ್‌ಕೆಜಿಯಿಂದ ಪದವಿ ವಿದ್ಯಾರ್ಥಿಗಳಿಗೆ ಹಂಚಲು ತಂದಿದ್ದ ಬ್ಯಾಗ್ಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ದಾಳಿ ವೇಳೆ ಆರ್. ಶಂಕರ್ ಮನೆಯಲ್ಲಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ