ಟೊಮೋಟೊ ಬೆಲೆಯಲ್ಲಿ ದಿಢೀರ್​ ಕುಸಿತ; ರೊಚ್ಚಿಗೆದ್ದು ಬೀದಿಗೆ ಎಸೆದೋದ ರೈತ!

ರೈತ ಮೊದಲು ಅಕ್ಕಪಕ್ಕದ ಜನರಿಗೆ, ಕೂಲಿಕಾರ್ಮಿಕರಿಗೆ , ಹೋಟೆಲ್ ಮಾಲೀಕರಿಗೆ ಉಚಿತವಾಗಿ ಟೊಮೋಟೊ ಹಂಚಿದ್ದಾನೆ. ಆದರೂ, ಮೂರ್ನಾಲ್ಕು ಕ್ವಿಂಟಲ್ ಟೊಮೋಟೊ ಉಳಿದಿದ್ದು ಮಾರುಕಟ್ಟೆ ಎದುರೇ ರಸ್ತೆಗೆ ಎಸೆದಿದ್ದಾನೆ.

news18-kannada
Updated:January 24, 2020, 8:14 PM IST
ಟೊಮೋಟೊ ಬೆಲೆಯಲ್ಲಿ ದಿಢೀರ್​ ಕುಸಿತ; ರೊಚ್ಚಿಗೆದ್ದು ಬೀದಿಗೆ ಎಸೆದೋದ ರೈತ!
ಟೊಮೋಟೊವನ್ನು ರಸ್ತೆಗೆ ಎಸೆದು ಹೋಗಿರುವ ರೈತ.
  • Share this:
ರಾಯಚೂರು (ಜನವರಿ 24): ಕಷ್ಟ ಪಟ್ಟು ಸಾವಿರಾರು ರೂಪಾಯಿ ಖರ್ಚು ಮಾಡಿ  ಬೆಳೆದ ಬೆಳೆಗೆ ಬೆಳೆಗೆ ಸೂಕ್ತ ಬೆಲೆ ಸಿಗದ ಕಾರಣ ರೋಸಿಹೋದ ರೈತನೋರ್ವ ಮಾರುಕಟ್ಟೆಗೆ ತಂದ ಟೊಮೋಟೋವನ್ನು ಬೀದಿಗೆಸೆದು ಹೋದ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರು ನಗರದ ಹತ್ತಿ ಮಾರುಕಟ್ಟೆ ಪ್ರಾಂಗಣದಲ್ಲಿ ಬೆಳಗ್ಗೆ ತರಕಾರಿ ಖರೀದಿ ನಡೆಯುತ್ತದೆ. ಆದರೆ, ನಿನ್ನೆವರೆಗೆ ಒಳ್ಳೆಯ ಬೆಳೆ ಇದ್ದ ಟೊಮೊಟೋಗೆ ಇಂದು ಪುಟ್ಟಿಗೆ ಕೇವಲ 2 ರೂ. ಮಾತ್ರ ಬೆಲೆ ನಿಗದಿ ಮಾಡಲಾಗಿದೆ. ಕನಿಷ್ಠ 3 ರೂಪಾಯಿ ಕೊಡುವಂತೆ ಮನವಿ ಮಾಡಿದರೂ ವರ್ತಕರು ಮಣೆ ಹಾಕಿಲ್ಲ. ಇದರಿಂದ ಸಿಟ್ಟಿಗೆದ್ದ ರೈತನೋರ್ವ, ನಿಮಗೆ ಬೇಕಾಬಿಟ್ಟಿ ದರಕ್ಕೆ ನೀಡುವುದಕ್ಕಿಂತ ರಸ್ತೆಗೆಸೆಯುವುದೇ ಲೇಸು ಎಂದು  ಈ ರೀತಿ ಮಾಡಿದ್ದಾನೆ.

ರೈತ ಮೊದಲು ಅಕ್ಕಪಕ್ಕದ ಜನರಿಗೆ, ಕೂಲಿಕಾರ್ಮಿಕರಿಗೆ , ಹೋಟೆಲ್ ಮಾಲೀಕರಿಗೆ ಉಚಿತವಾಗಿ ಟೊಮೋಟೊ ಹಂಚಿದ್ದಾನೆ. ಆದರೂ, ಮೂರ್ನಾಲ್ಕು ಕ್ವಿಂಟಲ್ ಟೊಮೋಟೊ ಉಳಿದಿದ್ದು ಮಾರುಕಟ್ಟೆ ಎದುರೇ ರಸ್ತೆಗೆ ಎಸೆದಿದ್ದಾನೆ.

ಒಂದು ಎಕರೆ ಟೊಮೋಟೊ ಬೆಳೆಯಲು ಕನಿಷ್ಠ 30 ರಿಂದ 40 ಸಾವಿರ ರೂ. ಖರ್ಚಾಗುತ್ತದೆ. ಹಗಲಿರುಳೆನ್ನದೆ ನೀರು ಕಟ್ಟಬೇಕು. ಮುದುರು, ಬೂದು ರೋಗ ಕಾಟವಿದ್ದು ಕಾಲಕಾಲಕ್ಕೆ ರಾಸಾಯನಿಕ ಸಿಂಪಡಿಸಬೇಕಿದೆ. ಇಲ್ಲವಾದರೆ ಬೆಳೆಯೇ ಕೈಗೆಟುಕುವುದಿಲ್ಲ. ಆದರೆ, ಮಾರುಕಟ್ಟೆಯಲ್ಲಿ ಕೆಜಿಗೆ 8ರಿಂದ 10 ರೂ. ದರವಿದ್ದರೂ ರೈತರಿಗೆ ಮಾತ್ರ ಇದರ ಅರ್ಧದಷ್ಟು ಬೆಲೆ ಸಿಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ನಿಖಿಲ್​ ಎಲ್ಲಿದಿಯಪ್ಪ ಆಯ್ತು ಈಗ ಮಿಣಿ ಮಿಣಿ ಪೌಡರ್ ಸರದಿ; ಟ್ರೋಲಿಗರ ಡಾರ್ಲಿಂಗ್ ಆದ ಹೆಚ್​.ಡಿ. ಕುಮಾರಸ್ವಾಮಿ
First published:January 24, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ