ಬೆಂಗಳೂರು: ಅದು ಮೊಬೈಲ್ ಕಳ್ಳತನ ಮಾಡುವ ನಟೋರಿಯಸ್ ಗ್ಯಾಂಗ್ (Notorious Gang). ಬಿಎಂಟಿಸಿ ಬಸ್ (BMTC Bus) ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಗ್ಯಾಂಗ್, ರಶ್ ಇದ್ದ ಬಸ್ ಗಳನ್ನು ಸೆಲೆಕ್ಟ್ ಮಾಡಿಕೊಳ್ಳುತ್ತಿದ್ದರು. ಬಸ್ ಹತ್ತುವ ನೆಪದಲ್ಲಿ ಬಂದವರು ಪ್ರಯಾಣಿಕರ ಮೊಬೈಲ್ಗೆ (Mobile Theft) ಕನ್ನ ಹಾಕುತ್ತಿದ್ದರು. ಯುವಕರು ಕೈ ಚಳಕ ತೋರುವ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಪ್ರಯಾಣಿಕರಂತೆ (Bus Passengers) ರಶ್ ಇರೋ ಬಸ್ ಹತ್ತುವ ಈ ಯುವಕರು ಕೈನಲ್ಲಿ ಪೇಪರ್ ಹಿಡಿದು ಕೆಲವೇ ಕ್ಷಣದಲ್ಲಿ ಮತ್ತೆ ಕೆಳಕ್ಕೆ ಇಳಿಯುತ್ತಾನೆ. ಕೈ ನಲ್ಲಿ ಮೊಬೈಲ್ ಹಿಡಿದು ಕ್ಷಣಮಾತ್ರದಲ್ಲಿ ಅಲ್ಲಿಂದ ಎಸ್ಕೇಪ್ ಆಗ್ತಾರೆ.
ಇತ್ತೀಚೆಗೆ ಬಿಎಂಟಿಸಿ ಬಸ್ನಲ್ಲಿ ಮೊಬೈಲ್, ಪರ್ಸ್ಗಳ ಕಳ್ಳತನ ಹೆಚ್ಚಾಗಿದೆ. ರಶ್ ಇರುವ ಬಸ್ಗಳನ್ನೇ ಟಾರ್ಗೆಟ್ ಮಾಡುವ ಕಳ್ಳರು, ಪ್ರಯಾಣಿಕರಂತೆ ಬಸ್ ಹತ್ತಿ, ಬೇರೆ ಪ್ರಯಾಣಿಕರ ಜೇಬಿಂದ ಮೊಬೈಲ್ ಎಗರಿಸಿ ಅಲ್ಲಿಂದ ಪರಾರಿ ಆಗ್ತಿದ್ದಾರೆ.
ಇಂತ ಮೊಬೈಲ್ ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ಕಳ್ಳರ ಗ್ಯಾಂಗ್ ಅನ್ನ ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಅವರಿಂದ ಅಪಾರ ಪ್ರಮಾಣದ ಫೋನ್ಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: KSRTC Electric Bus: ರಸ್ತೆಗಿಳಿದ ಕೆಎಸ್ಆರ್ಟಿಸಿ ಇಲೆಕ್ಟ್ರಿಕ್ ಬಸ್; ಬೆಂಗಳೂರಿನಿಂದ ರಾಮನಗರ ಪ್ರಾಯೋಗಿಕ ಸಂಚಾರ ಶುರು
ಗೋರಿಪಾಳ್ಯದ ಮತ್ತು ಜೆಜೆ ನಗರ ನಿವಾಸಿಗಳಾದ ರೆಹಮಾನ್ ಷರೀಫ್, ಜಾಫರ್ ಸಿದ್ದಿಕಿ, ಸೈಯದ್ ಅಖಿಲ್, ಮುಸ್ತಾಕ್ ಅಹ್ಮದ್ ಬಂಧಿತ ಆರೋಪಿಗಳು. ಮೊಬೈಲ್ ಕದಿಯಲು ಮೂವರು ಇದ್ರೆ, ಅವರನ್ನು ಎಸ್ಕೇಪ್ ಮಾಡಲು ಇಬ್ಬರು ಆಟೋ ಚಾಲಕರು ರೆಡಿಯಾಗಿರುತ್ತಿದ್ದರು. ಕದ್ದ ಮಾಲನ್ನ ಪಡೆದುಕೊಳ್ಳಲು ಇನ್ನೊಂದು ಗ್ಯಾಂಗ್ ಇತ್ತು. ಪೊಲೀಸರು ಪ್ರಯಾಣಿಕರ ಸೋಗಿನಲ್ಲೇ ಬಂದು ಕಾರ್ಯಾಚರಣೆ ನಡೆಸಿದ 6 ಮಂದಿಯನ್ನ ಬಂಧಿಸಿದ್ದಾರೆ.
ಕದ್ದ ಮೊಬೈಲ್ಗಳನ್ನ ಆರೋಪಿಗಳು ಹೊರ ದೇಶಕ್ಕೆ ಕಳುಹಿಸುತ್ತಿದ್ದರು ಎಂಬ ಮಾಹಿತಿ ಪೊಲೀಸ್ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು 30 ಲಕ್ಷ ರೂಪಾಯಿ ಮೌಲ್ಯದ ವಿವಿಧ ಕಂಪನಿಯ 150ಕ್ಕೂ ಹೆಚ್ಚು ಮೊಬೈಲ್ಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಗ್ಯಾಂಗ್ನ ಮಾಸ್ಟರ್ ಮೈಂಡ್ಗಳಿಗೆ ಹುಡುಕಾಟ ನಡೆಸಿದ್ದಾರೆ.
ಟಿಂಬರ್ ಗೋಡನ್ನಲ್ಲಿ ಅಗ್ನಿ ಅವಘಡ; ಲಕ್ಷಾಂತರ ರೂಪಾಯಿ ಮೌಲ್ಯದ ಪ್ಲೇವುಡ್ ಬೆಂಕಿಗೆ ಆಹುತಿ
ಬೆಂಗಳೂರಿನ ಟಿಂಬರ್ ಲೇಔಟ್ನ ಪ್ಲೇವುಡ್ ಗೋಡನ್ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸ್ಥಳಕ್ಕೆ 10 ಅಗ್ನಿಶಾಮಕ ವಾಹನ ದೌಡಾಯಿಸಿದ್ದಾವೆ. ಸಂಪೂರ್ಣ ಗೋಡನ್ಗೆ ಬೆಂಕಿ ಆವರಿಸಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕದಳ ಹರಸಾಹಸ ಪಡುತ್ತಿದ್ದಾರೆ.
ಇದನ್ನೂ ಓದಿ: Santro Ravi: 14 ದಿನ ಜೈಲುಪಾಲಾದ ಬ್ರೋಕರ್ ಸ್ಯಾಂಟ್ರೋ ರವಿ; ವಿಚಾರಣೆ ವೇಳೆ ಪೊಲೀಸರಿಗೆ ಆವಾಜ್!
ದುರ್ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪ್ಲೇವುಡ್ ಬೆಂಕಿಗೆ ಆಹುತಿಯಾಗಿದ್ದು, ನವೀನ್ ಗುಪ್ತ ಎಂಬುವರಿಗೆ ಸೇರಿದ ಪ್ಲೇವುಡ್ ಗೋಡನ್ ಇದಾಗಿದೆ. ಸಂಜೆ ಕೆಲಸ ಮುಗಿಸಿ ಬೀಗ ಹಾಕಿ ಮಾಲೀಕರು ವಾಪಸ್ ಹೋಗಿದ್ದರು. ಆದರೆ ತಡರಾತ್ರಿ ಬೆಂಕಿ ತಗುಲಿ ಇಡೀ ಗೋಡನ್ ಭಸ್ಮವಾಗಿದೆ. ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ತಪ್ಪಿದ ಭಾರೀ ಅನಾಹುತ
ಇನ್ನು, ಅಗ್ನಿ ಅವಘಡ ಸಂಭವಿಸಿದ ಪ್ಲೇವುಡ್ ಗೋಡನ್ ಪಕ್ಕದಲ್ಲೇ ಇದ್ದ ಗ್ಯಾಸ್ ಸಿಲಿಂಡರ್ ಗೋಡನ್ ಕೂಡ ಇದ್ದು, ಗೋಡನ್ ನಲ್ಲಿ ಸ್ಟೋರ್ ಮಾಡಿಟ್ಟಿದ್ದ ಸಿಲಿಂಡರ್ಗಳಿಗೆ ಅದೃಷ್ಟವಶಾತ್ ಬೆಂಕಿ ವ್ಯಾಪಿಸಿಲ್ಲ.
ಸ್ಥಳದಲ್ಲಿ ಬೆಂಕಿ ವ್ಯಾಪಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಗೋಡನ್ ನಲ್ಲಿದ್ದ ಸಿಲಿಂಡರ್ ಗಳನ್ನ ಕೂಡಲೇ ಬೇರೆಡೆಗೆ ಶಿಫ್ಟ್ ಮಾಡಿದ್ದಾರೆ. ಸತತ ಆರು ಗಂಟೆಗಳ ಕಾಲ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದೆ. ಒಟ್ಟಾರೆ 23 ಅಗ್ನಿಶಾಮಕ ವಾಹನಗಳು ಹಾಗೂ 100 ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ