ಇದೆಂಥಾ ಅಂಧಾಭಿಮಾನ?; ಮಂಡ್ಯದಲ್ಲಿ ನಿಖಿಲ್ ಸೋತಿದ್ದಕ್ಕೆ ಅಭಿಮಾನಿ ಹೀಗಾ ಮಾಡೋದು?

ಬಹು ನಿರೀಕ್ಷಿತ ಮಂಡ್ಯ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿ ನಟಿ ಸುಮಲತಾ ಅಂಬರೀಶ್ ವಿರುದ್ಧ ಹೀನಾಯವಾಗಿ ಸೋಲನುಭವಿಸಿದ್ದರು. ಇದರಿಂದ ಮನನೊಂದ ಸುನೀಲ್ ನಿನ್ನೆ ತನ್ನ ಗ್ರಾಮವಾದ ಆಬಲವಾಡಿಗೆ ಆಗಮಿಸಿದ್ದಾರೆ. ಅಲ್ಲದೆ ತಾನು ಮತ ಚಲಾಯಿಸಿ ಶಾಯಿ ಹಚ್ಚಿಕೊಂಡಿದ್ದ ಬೆರಳನ್ನೆ ಕತ್ತರಿಸಿಕೊಂಡಿದ್ದಾರೆ.

MAshok Kumar | cricketnext
Updated:May 25, 2019, 9:27 AM IST
ಇದೆಂಥಾ ಅಂಧಾಭಿಮಾನ?; ಮಂಡ್ಯದಲ್ಲಿ ನಿಖಿಲ್ ಸೋತಿದ್ದಕ್ಕೆ ಅಭಿಮಾನಿ ಹೀಗಾ ಮಾಡೋದು?
ಬೆರಳನ್ನು ಕತ್ತರಿಸಿಕೊಂಡಿರುವುದು.
  • Share this:
ಮಂಡ್ಯ (ಮೇ.25); ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲಿನಿಂದ ಬೇಸರಗೊಂಡ ಅಂಧ ಅಭಿಮಾನಿಯೊಬ್ಬ ತನ್ನ ಕೈ ಬೆರಳನ್ನೇ ಕತ್ತರಿಸಿಕೊಂಡ ಘಟನೆ ಮದ್ದೂರಿನಲ್ಲಿ ನಡೆದಿದೆ.

ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದ ಸುನೀಲ್ ಬೆರಳನ್ನು ಕತ್ತರಿಸಿಕೊಂಡ ಯುವಕ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸುನೀಲ್ ಜೆಡಿಎಸ್​ ಪಕ್ಷದ ಪಕ್ಕಾ ಅಭಿಮಾನಿ. ಚುನಾವಣೆ ಸಂದರ್ಭದಲ್ಲಿ ಈತ ನಿಖಿಲ್ ಗೆಲುವಿಗಾಗಿ ಮದ್ದೂರಿಗೆ ಬಂದು ಮತ ಚಲಾಯಿಸಿ ಹೋಗಿದ್ದ. ಆದರೆ ಚುನಾವಣೆಯಲ್ಲಿ ನಿಖಿಲ್ ಸೋಲನುಭವಿಸಿದ್ದರು.

ಬೆರಳನ್ನು ಕತ್ತರಿಸಿಕೊಂಡಿರುವ ಸುನೀಲ್.


ಬಹು ನಿರೀಕ್ಷಿತ ಮಂಡ್ಯ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿ ನಟಿ ಸುಮಲತಾ ಅಂಬರೀಶ್ ವಿರುದ್ಧ ಹೀನಾಯವಾಗಿ ಸೋಲನುಭವಿಸಿದ್ದರು. ಇದರಿಂದ ಮನನೊಂದ ಸುನೀಲ್ ನಿನ್ನೆ ತನ್ನ ಗ್ರಾಮವಾದ ಆಬಲವಾಡಿಗೆ ಆಗಮಿಸಿದ್ದಾರೆ. ಅಲ್ಲದೆ ತಾನು ಮತ ಚಲಾಯಿಸಿ ಶಾಯಿ ಹಚ್ಚಿಕೊಂಡಿದ್ದ ಬೆರಳನ್ನೆ ಕತ್ತರಿಸಿಕೊಂಡಿದ್ದಾರೆ. ಕೊಪ್ಪ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

First published: May 25, 2019, 9:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading