Tumakuru: ಸಿದ್ದಗಂಗಾ ಮಠದ ನೂತನ ಉತ್ತರಾಧಿಕಾರಿಗೆ ಇಂದು ಪಟ್ಟಾಭಿಷೇಕ

ಸಿದ್ದಗಂಗಾ ಮಠಕ್ಕೆ ಉತ್ತರಾಧಿಕಾರಿ ನೇಮಕ

ಸಿದ್ದಗಂಗಾ ಮಠಕ್ಕೆ ಉತ್ತರಾಧಿಕಾರಿ ನೇಮಕ

Siddaganga Mutt: ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮ ಮೂಲಕ ಪಟ್ಟಾಭಿಷೇಕ ಆರಂಭವಾಗಲಿದೆ.

  • Share this:

ತುಮಕೂರು: ಸಿದ್ದಗಂಗಾ ಮಠದ (Siddaganga Mutt) ನೂತನ ಉತ್ತರಾಧಿಕಾರಿ ಮನೋಜ್ ಕುಮಾರ್ (Manoj Kumar) ಅವರಿಗೆ ಪಟ್ಟಾಭಿಷೇಕ ಕಾರ್ಯಕ್ರಮ ನೆರವೇರಲಿದೆ. ಸಿದ್ದಗಂಗಾ ಮಠದ ಆಡಳಿತ ಮಂಡಳಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲು ಮುಂದಾಗಿದೆ. ನೂತನವಾಗಿ ಆಯ್ಕೆಯಾಗಿರುವ ಮೂರು ಮಠದ ಉತ್ತರಾಧಿಕಾರಿಗಳಿಗೆ ಪಟ್ಟಾಭಿಷೇಕ ನಡೆಯಲಿದೆ. ತುಮಕೂರಿನ ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾಗಿ ಮನೋಜ್ ಕುಮಾರ್, ರಾಮನಗರ ಜಿಲ್ಲೆ‌ ಮಾಗಡಿ ತಾಲೂಕಿನ ಕಂಚುಗಲ್ ಬಂಡೇಮಠದ (Kanchugal Bandemutt) ಉತ್ತರಾಧಿಕಾರಿಯಾಗಿ ಹರ್ಷ ಮತ್ತು  ವಿಜಯಪುರ ಬಸವಕಲ್ಯಾಣ ಮಠದ (Basavaklayan Mutt) ಉತ್ತರಾಧಿಕಾರಿ ಗೌರಿಶಂಕರ್ ಉತ್ತರಾಧಿಕಾರಿಯಾಗಿದ್ದಾರೆ.


ಇಂದು ಬಸವ ಜಯಂತಿ (Basava Jayanti) ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದಲ್ಲಿ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಮಠದ ಭಕ್ತಾದಿಗಳು, ಸಾರ್ವಜನಿಕರು ಹಾಗೂ ಹಿತೈಷಿಗಳು ಭಾಗಿಯಾಗಲಿದ್ದಾರೆ.


ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮ ಮೂಲಕ ಪಟ್ಟಾಭಿಷೇಕ ಆರಂಭವಾಗಲಿದೆ. ಬೆಳಗಿನ ಜಾವದಿಂದಲೇ ಪೂಜೆ ಪುರಸ್ಕಾರ ಪ್ರಾರಂಭವಾಗಿದೆ.


ಯಾರು ಈ ಮನೋಜ್ ಕುಮಾರ್?


ಸಿದ್ದಗಂಗಾ ಮಠಕ್ಕೆ ಸಿದ್ದಗಂಗಾ ಪಾಲಿಟೆಕ್ನಿಕ್ ಉಪನ್ಯಾಸಕ ಮನೋಜ್ ಕುಮಾರ್ ಅವರನ್ನು ಉತ್ತರಾಧಿಕಾರಿಯನ್ನಾಗಿ ಮಠದ ಸರ್ವಾಧ್ಯಕ್ಷ ಸಿದ್ದಲಿಂಗಸ್ವಾಮಿ ಅವರು ನೇಮಿಸಿದ್ದಾರೆ. ಸಿದ್ದಗಂಗಾ ಪಾಲಿಟೆಕ್ನಿಕ್ ನಲ್ಲಿ ಉಪನ್ಯಾಸಕರಾಗಿರುವ ಮನೋಜ್ ಕುಮಾರ್ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೈಲನಹಳ್ಳಿಯವರಾಗಿದ್ದಾರೆ.
ಇದನ್ನೂ ಓದಿ:  Siddaganga Matha: ಸಿದ್ದಗಂಗಾ ಮಠಕ್ಕೆ ಉತ್ತರಾಧಿಕಾರಿ ನೇಮಕ, ಅನ್ನದಾಸೋಹ ಕ್ಷೇತ್ರದ ಗದ್ದುಗೆ ಏರಲಿದ್ದಾರೆ ಯುವ ಕಾಲೇಜು ಶಿಕ್ಷಕ!


ಮನೋಜ್ ಕುಮಾರ್ ಬಾಲ್ಯ

top videos


    ಷಡಕ್ಷರಿ, ವಿರೂಪಾಕ್ಷಮ್ಮ ದಂಪತಿಗಳು ಮನೋಜ್ ಕುಮಾರ್‌ ಅವರ ತಂದೆ-ತಾಯಿಯಾಗಿದ್ದು, ಮನೋಜ್ ಕುಮಾರ್ ಅವರು ಬಿಎಸ್​​ಸಿ, ಎಂಎಸ್​​ಸಿ, ಎಂಎ ವಿದ್ವತ್ ವಿದ್ಯಾಭ್ಯಾಸ ಮಾಡಿದ್ದಾರೆ. 1987ರ ಜೂನ್​ 2ರಂದು ಮನೋಜ್​ ಕುಮಾರ್​ ಅವರು ಜನಿಸಿದ್ದರು.

    First published: