ನಾರಾಯಣ ಹೆಲ್ತ್ ಸಿಟಿ ವೈದ್ಯರಿಂದ ಜೀವಂತ ಹೃದಯ ರವಾನೆ ಜೊತೆ ಯಶಸ್ವಿ ಚಿಕಿತ್ಸೆ

ಕುಟುಂಬದವರ ಒತ್ತಾಸೆ ಮೇರೆಗೆ ಅಂಗಾಂಗ ದಾನ ಮಾಡಲಾಗಿದೆ. ನಾರಾಯಣ ಹೆಲ್ತ್ ಸಿಟಿ ರೋಗಿಗೆ ಹೃದಯ ದಾನ. ಲಿವರ್ ಮತ್ತು ಒಂದು ಕಿಡ್ನಿ ಎಸ್ಟರ್ ಆರ್ ಆಸ್ಪತ್ರೆ ರೋಗಿಗಳಿಗೆ ದಾನ ಮಾಡಲಾಗಿದ್ದು, ಮತ್ತೊಂದು ಕಿಡ್ನಿ ನಗರದ ಅಪೋಲೋ ಆಸ್ಪತ್ರೆ ರೋಗಿಗೆ ದಾನ ಮಾಡಲಾಗಿದೆ.

ಜೀವಂತ ಹೃದಯ ರವಾನೆ.

ಜೀವಂತ ಹೃದಯ ರವಾನೆ.

  • Share this:
ಆನೇಕಲ್: ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಸಮೀಪದ ನಾರಾಯಣ ಹೆಲ್ತ್ ಸಿಟಿ ವೈದ್ಯರ ತಂಡದಿಂದ ಮತ್ತೊಂದು ಜೀವಂತ ಹೃದಯ ರವಾನೆ ಮತ್ತು ಜೀವಂತ ಹೃದಯ ಕಸಿ ಶಸ್ತ್ರ ಚಿಕಿತ್ಸೆ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು, ನಾರಾಯಣ ಹೆಲ್ತ್ ಸಿಟಿ ಹೃದ್ರೋಗ ತಜ್ಞರಾದ ಡಾ ಭಗೀರಥ್ ಮತ್ತು ವರುಣ್ ಶೆಟ್ಟಿ ತಂಡದಿಂದ ಬೆಂಗಳೂರು ಮೂಲದ ಸುಮಾರು 42 ವರ್ಷ ವಯಸ್ಸಿನ ವ್ಯಕ್ತಿಗೆ ಯಶಸ್ವಿಯಾಗಿ ಹೃದಯ ಕಸಿ ನಡೆಸಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಬೆಂಗಳೂರು ಮೂಲದ ಈ ವ್ಯಕ್ತಿ ಹಲವು ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ನಾರಾಯಣ ಹೆಲ್ತ್ ಸಿಟಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೊತೆಗೆ ಹಾರ್ಟ್ ಟ್ರಾನ್ಸ್​ಪ್ಲಾಂಟ್​ಗಾಗಿ ಹೆಸರು ನೋಂದಾಯಿಸಿಕೊಂಡಿದ್ದರು ಎನ್ನಲಾಗಿದೆ. ಈ ನಡುವೆ ಬೆಂಗಳೂರು ಮೂಲದ ಸುಮಾರು 58 ವರ್ಷದ ಸುರೇಂದ್ರ ಬಾಬು ಎಂಬ ವ್ಯಕ್ತಿ ಅಂಗಾಂಗ ದಾನ ಮಾಡಿದ್ದು, ಅವುಗಳಲ್ಲಿ ಹೃದಯ ಹೊಂದಾಣಿಕೆ ಆಗಿದ್ದರಿಂದ ಇಂದು ನಗರದ ಎಸ್ಟರ್ ಆರ್ ವಿ ಆಸ್ಪತ್ರೆಯಿಂದ ಜೀವಂತ ಹೃದಯವನ್ನು ಗ್ರೀನ್ ಕಾರಿಡಾರ್ ಮೂಲಕ ರವಾನೆ ಮಾಡಿ ನಾರಾಯಣ ಹೆಲ್ತ್ ಸಿಟಿಯಲ್ಲಿ ಯಶಸ್ವಿಯಾಗಿ ಜೀವಂತ ಹೃದಯ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಇದನ್ನು ಓದಿ: ಸಮೃದ್ಧವಾಗಿ ಬೆಳೆದು ಅತಿಯಾದ ತೇವಾಂಶದಿಂದ ಏಕಾಏಕಿ ರೋಗಕ್ಕೆ ತುತ್ತಾದ ಕಡಲೆ ಬೆಳೆ; ಕಂಗಾಲಾದ ರೈತ ವರ್ಗ

ಇನ್ನೂ ಅಂಗಾಂಗ ದಾನಿ ಸುರೇಂದ್ರ ಬಾಬು ಇದ್ದಕ್ಕಿದ್ದಂತೆ ಇದೇ ತಿಂಗಳ 14ನೇ ತಾರೀಖಿನಂದು ಪಾಶ್ವವಾಯುಗೆ ಒಳಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಎಸ್ಟರ್ ಆರ್ ವಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಕುಟುಂಬದವರ ಒತ್ತಾಸೆ ಮೇರೆಗೆ ಅಂಗಾಂಗ ದಾನ ಮಾಡಲಾಗಿದೆ. ನಾರಾಯಣ ಹೆಲ್ತ್ ಸಿಟಿ ರೋಗಿಗೆ ಹೃದಯ ದಾನ. ಲಿವರ್ ಮತ್ತು ಒಂದು ಕಿಡ್ನಿ ಎಸ್ಟರ್ ಆರ್ ಆಸ್ಪತ್ರೆ ರೋಗಿಗಳಿಗೆ ದಾನ ಮಾಡಲಾಗಿದ್ದು, ಮತ್ತೊಂದು ಕಿಡ್ನಿ ನಗರದ ಅಪೋಲೋ ಆಸ್ಪತ್ರೆ ರೋಗಿಗೆ ದಾನ ಮಾಡಲಾಗಿದೆ.

ವರದಿ : ಆದೂರು ಚಂದ್ರು
Published by:HR Ramesh
First published: