Farmer Success Story: ಯಾದಗಿರಿ ಜಿಲ್ಲೆಯ ರೈತರೊಬ್ಬರು ಕೃಷಿಯಿಂದ (Agriculture) ಆರ್ಥಿಕ ನಷ್ಟ (Loss) ಅನುಭವಿಸಿ ಈಗ ಕೋಳಿ ಸಾಕಾಣಿಕೆ (Poultry) ಮಾಡಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ನಿರಂತರ ಮಳೆ (Heavy Rainfall) ಸುರಿದ ಹಿನ್ನೆಲೆ ರೈತ ವಿರೂಪಾಕ್ಷಪ್ಪ ಗೌಡ ಅವರು ಬೆಳೆ ಹಾನಿಯಿಂದ (Crop Loss) ಆರ್ಥಿಕ ನಷ್ಟ ಅನುಭವಿಸಿದ್ದರು. ಬೇರೆಯವರ ಜಮೀನು ಗುತ್ತಿಗೆ (Lease) ಪಡೆದು ಕೃಷಿ ಮಾಡುತ್ತಿದ್ದರು. ಆದರೆ ಮಳೆಯಿಂದ ಬೆಳೆ ಹಾನಿಯಾಗಿ ಆರ್ಥಿಕ ನಷ್ಟ ಅನುಭವಿಸಿ, ಈಗ ಕೋಳಿ ಸಾಕಾಣಿಕೆ ಮಾಡಿ ನೆಮ್ಮದಿ ಬದುಕು ಕಟ್ಟಿಕೊಂಡಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ (Vadagera) ತಾಲೂಕಿನ ಮಾಚನೂರು (Machanuru, Yadagiri) ಗ್ರಾಮದ ವಿರೂಪಾಕ್ಷಪ್ಪ ಗೌಡ ಅವರು ಜವಾರಿ ಕೋಳಿ (ನಾಟಿ ಕೋಳಿ) ಸಾಕಾಣಿಕೆ ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಗ್ರಾಮದ ಜಮೀನಿನಲ್ಲಿ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಸದ್ಯ ಇವರ ಫಾರ್ಮ್ನಲ್ಲಿ 750 ಕೋಳಿಗಳನ್ನು ಸಾಕಾಣಿಕೆ ಮಾಡಿದ್ದಾರೆ. ಅದರಲ್ಲಿ 350 ಜವಾರಿ ಕೋಳಿಗಳು, ಬಿವಿ-380 ತಳಿಯ 250 ಕೋಳಿಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ.
ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಶಂಕರ್ ಪಾಟೀಲ್ ಎಂಬ ಹೆಸರಿನಲ್ಲಿ ಕೋಳಿ ಸಾಕಾಣಿಕೆ ಮಾಡಲು ಸುಸಜ್ಜಿತ ಫಾರ್ಮ್ ಮಾಡಿದ್ದಾರೆ. ದೇಶಿಯ ಕೋಳಿ ಹಾಗೂ ಮೊಟ್ಟೆಗಳು ಆರೋಗ್ಯಕ್ಕೆ ಲಾಭಕರವಾಗಿದ್ದು, ಹೀಗಾಗಿ, ಜವಾರಿ ಕೋಳಿ ಬಿ ವಿ -380 ತಳಿಯ ಕೋಳಿ ಸಾಕಾಣಿಕೆ ಮಾಡಿದ್ದಾರೆ.
ಬಿವಿ 380 ತಳಿಯ ಕೋಳಿ ಮೊಟ್ಟೆಗೆ ಹೆಚ್ಚು ಬೇಡಿಕೆ
ಜವಾರಿ ಕೋಳಿ ಮಾಂಸ, ಮೊಟ್ಟೆ, ಅದೇ ರೀತಿ ಬಿವಿ 380 ತಳಿಯ ಕೋಳಿಗಳ ಮೊಟ್ಟೆಗಳಿಗೆ ಬೇಡಿಕೆ ಹೆಚ್ಚಿದೆ. ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗೆ ವಿರೂಪಾಕ್ಷಪ್ಪ ಮೊಟ್ಟೆಗಳನ್ನು ಮಾರಾಟ ಮಾಡುತ್ತಾರೆ. ಕೋಳಿಗಳು ನಿತ್ಯವೂ 300ಕ್ಕೂ ಮೊಟ್ಟೆಗಳನ್ನು ಇಡುತ್ತವೆ. ಇನ್ನು ಸುತ್ತಮುತ್ತಲಿನ ಗ್ರಾಮಗಳು ಜನರು ಇಲ್ಲಿಗೆ ಬಂದು ಕೋಳಿ ಹಾಗೂ ಮೊಟ್ಟೆಗಳನ್ನು ಖರೀದಿ ಮಾಡುತ್ತಾರೆ.
ದಿನಕ್ಕೆ 300ಕ್ಕೂ ಅಧಿಕ ಮೊಟ್ಟೆ ಮಾರಾಟ
ನಿತ್ಯವೂ 300ಕ್ಕೂ ಹೆಚ್ಚು ಮೊಟ್ಟೆಗಳನ್ನು ಮಾರಾಟ ಮಾಡುತ್ತಾರೆ. ನಿತ್ಯವೂ ಈಗ ಮೊಟ್ಟೆಗಳನ್ನು ಮಾರಾಟ ಮಾಡಿ ಸಾವಿರಾರು ರೂಪಾಯಿಗಳಿಗೂ ಅಧಿಕ ಹಣ ಸಂಪಾದನೆ ಮಾಡುತ್ತಿದ್ದಾರೆ. ಅದೇ ರೀತಿ ಮಾಂಸಕ್ಕಾಗಿ ಕೋಳಿ ಮಾರಾಟದಿಂದಲೂ ಹಣ ಸಂಪಾದಿಸುತ್ತಿದ್ದಾರೆ.
ಕೋಳಿ ಸಾಕಾಣಿಕೆ ಜೊತೆ ಅರಿವು ಮೂಡಿಸುವ ಕೆಲಸ
ಕೋಳಿ ಫಾರ್ಮ್ಗೆ ಬರುವ ಯುವಕರಿಗೆ ಈ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ವಿರೂಪಾಕ್ಷಪ್ಪ ಗೌಡ ಅವರ ಕುಟುಂಬಸ್ಥರು ಕೋಳಿ ಫಾರ್ಮ್ ಮುಂಭಾಗದಲ್ಲಿಯೇ ವಾಸ ಮಾಡಿ ಕೋಳಿ ಸಾಕಾಣಿಕೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾರ್ಮಿಕರನ್ನು ಇಟ್ಟಿಕೊಳ್ಳದೇ ಇಡೀ ಕುಟುಂಬಸ್ಥರು ಕೋಳಿ ಫಾರ್ಮ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಮಾಚನೂರು ಮೊಟ್ಟೆಗಳಂದೇ ಫೇಮಸ್
ಈಗ ಯಾದಗಿರಿ ಜಿಲ್ಲೆಯಲ್ಲಿ ಮಾಚನೂರು ಮೊಟ್ಟೆಗಳೆಂದೇ ಫೇಮಸ್ ಆಗಿದೆ.ಯುವಕರು ಕೂಡ ಸ್ವಾವಲಂಬಿ ಬದುಕು ಸಾಗಿಸಬೇಕೆಂದು ವಿರೂಪಾಕ್ಷಪ್ಪ ಗೌಡ ಅವರು ಹೇಳುತ್ತಾರೆ. ಈಗಿನ ಯುವಕರು ಕೆಲಸವಿಲ್ಲವೆಂದು ಬೃಹತ್ ನಗರಗಳತ್ತ ವಲಸೆ ಹೋಗುತ್ತಾರೆ. ಆದರೆ ವಿರೂಪಾಕ್ಷಪ್ಪಗೌಡ ಅವರು ಕೃಷಿಯಲ್ಲಿ ನಷ್ಟ ಆಗಿ ಚಿಂತಿಸಿ ಕೊರಗದೆ ಮತ್ತೆ ಕೋಳಿ ಸಾಕಾಣಿಕೆ ಮಾಡಲು ಆರಂಭಿಸಿದರು.
ಇದನ್ನೂ ಓದಿ: Kalaburgi: ಮನೆಗೆ ಬರದ ಕಾಲೇಜಿಗೆ ಹೋಗಿದ್ದ ಯುವತಿ; 3 ದಿನ ನಂತ್ರ ಸೇತುವೆ ಬಳಿ ಶವ ಪತ್ತೆ
ನೆಮ್ಮದಿ ಜೀವನ ನೀಡಿದ ಕೋಳಿ ಸಾಕಾಣಿಕೆ
ಲಾಭ ಪಡೆಯುವ ಅಚಲ ನಿರ್ಧಾರ ಮಾಡಿ ಕೋಳಿ ಸಾಕಾಣಿಕೆ ಮಾಡಿ, ಈಗ ನಿತ್ಯವೂ ಸಾವಿರಾರು ರೂಪಾಯಿ ಹೆಚ್ಚು ಲಾಭ ಪಡೆಯುತ್ತಿದ್ದಾರೆ. ವಿರೂಪಾಕ್ಷಪ್ಪ ಗೌಡ ಅವರು ಯುವಕರಿಗೆ ಈಗ ಮಾದರಿಯಾಗಿದ್ದಾರೆ.
ವರದಿ: ನಾಗಪ್ಪ ಮಾಲಿಪಾಟೀಲ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ