ಬೆಂಗಳೂರು ಜನರ ಬಹುದಿನಗಳ ಕನಸು ನನಸು: 8 ಸಬರ್ಬನ್ ರೈಲುಗಳ ಸಂಚಾರ ಆರಂಭ


Updated:March 14, 2018, 12:26 AM IST
ಬೆಂಗಳೂರು ಜನರ ಬಹುದಿನಗಳ ಕನಸು ನನಸು: 8 ಸಬರ್ಬನ್ ರೈಲುಗಳ ಸಂಚಾರ ಆರಂಭ

Updated: March 14, 2018, 12:26 AM IST
- ಶಾಲಿನಿ ಈಶ್ವರ್, ನ್ಯೂಸ್ 18 ಕನ್ನಡ

ಬೆಂಗಳೂರು(ಮಾ.13): ರಾಜಧಾನಿ ಬೆಂಗಳೂರು ಜನರ ಬಹುದಿನಗಳ ಕನಸು ಕೊನೆಗೂ ನನಸಾಗಿದೆ. ಉಪನಗರ ರೈಲುಗಳ ಹೆಚ್ಚಳಕ್ಕಾಗಿ ನಡೆಸಿದ ಚುಕುಬುಕು ಚಳುವಳಿ ಕೊನೆಗೂ ಫಲ ಕೊಟ್ಟಿದೆ. ನಿನ್ನೆಯಿಂದ ಹೆಚ್ಚುವರಿಯಾಗಿ 8 ಸಬ್​ಅರ್ಬನ್​ ರೈಲುಗಳು ಪ್ರಯಾಣ ಆರಂಭಿಸಿವೆ. ಬೈಯಪ್ಪನಹಳ್ಳಿ-ವೈಟ್​ಫೀಲ್ಡ್​ ನಡುವೆ 4 ಹೊಸ ವಿದ್ಯುತ್​ ಚಾಲಿತ ಮೆಮು ಟ್ರೈನ್​ ಸಂಚರಿಸಿದರೆ, ಇತ್ತ ಬಾಣಸವಾಡಿ-ಹುಸೂರು ರಸ್ತೆ ಮಾರ್ಗದಲ್ಲಿ ಡೀಸೆಲ್​ ಚಾಲಿತ ನಾಲ್ಕು ರೈಲುಗಳು ಸಂಚಾರ ನಡೆಸಲಿವೆ. ದಿನನಿತ್ಯ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದವರು, ಮೆಮು ಟ್ರೈನ್‌ಗಳು ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ನೈರುತ್ಯ ರೈಲ್ವೆ ಇಲಾಖೆ ಹೊಸ ರೈಲುಗಳ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಿದೆ. ಈ ಪ್ರಕಾರ ರಜಾದಿನ ಭಾನುವಾರ ಹೊರತುಪಡಿಸಿ ವಾರದ 6 ದಿನವೂ ಈ ರೈಲುಗಳು ಸಂಚರಿಸಲಿವೆ.

ಮೆಮು ರೈಲು ವೇಳಾಪಟ್ಟಿ         

ರೈಲು ಸಂಖ್ಯೆ             ಎಲ್ಲಿಂದ        ಹೊರಡುವ ಸಮಯ     ಎಲ್ಲಿಗೆ                 ತಲುಪುವ ಸಮಯ

06570                 ಮೆಜೆಸ್ಟಿಕ್         ಬೆಳಗ್ಗೆ  7:50             ಬೈಯಪ್ಪನಹಳ್ಳಿ         8.15

06567               ವೈಟ್​ಫೀಲ್ಡ್        ಬೆಳಗ್ಗೆ  9                 ಬೈಯಪ್ಪನಹಳ್ಳಿ          9.20
Loading...

06568             ಬೈಯಪ್ಪನಹಳ್ಳಿ      ಸಂಜೆ 4.45ಕ್ಕೆ           ವೈಟ್‌ಫೀಲ್ಡ್‌            5.05

06569             ಬೈಯಪ್ಪನಹಳ್ಳಿ      ಸಂಜೆ 6.45ಕ್ಕೆ            ಮೆಜೆಸ್ಟಿಕ್‌               7.15

 

ಡೆಮು ರೈಲು ವೇಳಾ ಪಟ್ಟಿ         

ರೈಲು ಸಂಖ್ಯೆ             ಎಲ್ಲಿಂದ            ಹೊರಡುವ ಸಮಯ          ಎಲ್ಲಿಗೆ             ತಲುಪುವ ಸಮಯ

06571                ಬಾಣಸವಾಡಿ            ಬೆಳಗ್ಗೆ      9:50             ಹೊಸೂರು​                 11:00

06572                  ಹೊಸೂರು              ಬೆಳಗ್ಗೆ      11:15          ಬಾಣಸವಾಡಿ               12:25

06573                 ಬಾಣಸವಾಡಿ            ಮಧ್ಯಾಹ್ನ 12.40           ಹೊಸೂರಿಗೆ                1.45

06574                   ಹೊಸೂರು             ಮಧ್ಯಾಹ್ನ  3:20            ಬಾಣಸವಾಡಿ              4.40

ಇನ್ನೂ ಪ್ರತಿ ರೈಲಿನಲ್ಲಿ 8 ಬೋಗಿಗಳಿರಲಿವೆ. ಒಂದೇ ಬಾರಿಗೆ ಒಂದು ರೈಲಿನಲ್ಲಿ 2,400 ಜನ ಪ್ರಯಾಣಿಸುವ ಸಾಮರ್ಥ್ಯ ಹೊಂದಿದ್ದು, ಮೆಮು ರೈಲು ಡೆಮು ರೈಲಿಗಿಂತ ಹೆಚ್ಚಿನ ವೇಗ ಹೊಂದಿದೆ. ಹಾಗೆ ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ಜಂಟಿಯಾಗಿ ಮೆಮು ರೈಲು ಖರೀದಿ ವೆಚ್ಚವನ್ನು ಭರಿಸಿವೆ. ಪ್ರಸ್ತುತ 110 ರೈಲುಗಳು ಕರ್ನಾಟಕದಲ್ಲಿ ಸಂಚರಿಸುತ್ತಿದ್ದು, ಇದೀಗ ಮತ್ತೆ 8 ರೈಲುಗಳ ಸೇವೆ ಆರಂಭವಾಗಿದೆ.

 
First published:March 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ