• Home
 • »
 • News
 • »
 • state
 • »
 • DK Shivakumar: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ; ಟಿಕೆಟ್​​ಗಾಗಿ ಅರ್ಜಿ ಸಲ್ಲಿಸಿ, ವಲಸಿಗರಿಗೂ ಮುಕ್ತ ಆಹ್ವಾನ- ಡಿಕೆಶಿ

DK Shivakumar: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ; ಟಿಕೆಟ್​​ಗಾಗಿ ಅರ್ಜಿ ಸಲ್ಲಿಸಿ, ವಲಸಿಗರಿಗೂ ಮುಕ್ತ ಆಹ್ವಾನ- ಡಿಕೆಶಿ

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡುವವರಿಂದ ಅರ್ಜಿ ಸ್ವೀಕಾರ ಮಾಡುತ್ತೇವೆ. ನ.5 ರಿಂದ 15 ರವರೆಗೆ ಅರ್ಜಿ ಸ್ವೀಕರಿಸಬಹುದಾಗಿದೆ.

 • News18 Kannada
 • Last Updated :
 • Karnataka, India
 • Share this:

  ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Assembly Election) ಇನ್ನೇನು ಆರೇಳು ತಿಂಗಳು ಮಾತ್ರ ಬಾಕಿಯಿದೆ. ಈಗಾಗಲೇ ಎಲ್ಲಾ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಕಾಂಗ್ರೆಸ್ (Congress)​ ಕೂಡ ಮತದಾರರ ಮನವೊಲಿಸಲು ನಾನಾ ಪ್ಲಾನ್ (Plan)​ ಮಾಡಿದೆ. ಇನ್ನು ಕಾಂಗ್ರೆಸ್​ನಲ್ಲಿ ಟಿಕೆಟ್​ ಆಕಾಂಕ್ಷಿಗಳು (Ticket Aspirants) ಅರ್ಜಿ ಸಲ್ಲಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar) ಹೇಳಿದ್ದಾರೆ. ಅಲ್ಲದೇ ಪಕ್ಷ ಬಿಟ್ಟು ಹೋದವರಿಗೆ ಮುಕ್ತ ಆಹ್ವಾನ ನೀಡಿದ್ದಾರೆ.


  ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಲು ಅರ್ಜಿ ಸಲ್ಲಿಸಿ


  ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​  ಅವರು, ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡುವವರಿಂದ ಅರ್ಜಿ ಸ್ವೀಕಾರ ಮಾಡುತ್ತೇವೆ. ನ. 5 ರಿಂದ 15 ರವರೆಗೆ ಅರ್ಜಿ ಸ್ವೀಕರಿಸಬಹುದಾಗಿದೆ. ಅರ್ಜಿಗೆ 5 ಸಾವಿರ ರೂ. ನಿಗದಿ ಮಾಡಲಾಗಿದೆ.


  ನಾನು ಸ್ಪರ್ಧೆ ಮಾಡಲು ಅರ್ಜಿ ಸಲ್ಲಿಸಬೇಕು


  ಜೊತೆಗೆ ಅರ್ಜಿ ಸಲ್ಲಿಸುವಾಗ ಸಾಮಾನ್ಯ ವರ್ಗದವರು 2 ಲಕ್ಷ ರೂ, ಎಸ್ಸಿ ಎಸ್ಟಿ ವರ್ಗದವರು 1 ಲಕ್ಷ ರೂ. ಡಿಡಿ ತೆಗೆಸಿಕೊಡಬೇಕು. ಆ ಹಣವನ್ನು ಕೆಪಿಸಿಸಿ ಕಟ್ಟಡದ ನಿರ್ಮಾಣಕ್ಕೆ ಬಳಸಿಕೊಳ್ಳುತ್ತದೆ ಎಂದು ಹೇಳಿದ್ರು. ನಾನು ಕೂಡ ಸ್ಪರ್ಧೆ ಮಾಡಲೂ ಅರ್ಜಿ ಸಲ್ಲಿಸಬೇಕು. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂದು ಕೊಂಡವರು ಮೊದಲು ಅರ್ಜಿ ಸಲ್ಲಿಸಿ ಎಂದು ಡಿಕೆಶಿ ಹೇಳಿದ್ದಾರೆ.


  dk shivakumar case, dk shivakumar money laundering case, national herald case, kannada news, karnataka news, ಡಿಕೆ ಶಿವಕುಮಾರ್ ಕೇಸ್, ನ್ಯಾಷನಲ್ ಹೆರಾಲ್ಡ್​ ಕೇಸ್


  ಇದನ್ನೂ ಓದಿ:  MLA Tippareddy: ಬಿಜೆಪಿ ಶಾಸಕ ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಯತ್ನ; ಬೆತ್ತಲಾದ ಯುವತಿಯಿಂದ ವಿಡಿಯೋ ಕಾಲ್?


  ಎಲ್ಲರಿಗೂ ಪಕ್ಷದಲ್ಲಿ ಸ್ವಾಗತವಿದೆ


  ಕಾಂಗ್ರೆಸ್ ಸದಸ್ಯರ​ ಮರುನೇಮಕಕ್ಕೆ ಒತ್ತಾಯ ಹೆಚ್ಚಾಗಿದೆ. ಹೀಗಾಗಿ ಆನ್​ಲೈನ್​ನಲ್ಲಿ ಮೆಂಬರ್​ ಶಿಪ್​ ಪ್ರಾರಂಭ ಮಾಡುತ್ತೇವೆ. ಕೆಲವು ನಾಯಕರು ಸೇರ್ಪಡೆಗೆ ಬಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ನಾಯಕತ್ವದಲ್ಲಿ ಯಾರು ಬೇಕಾದರೂ ಬರಬಹುದು. ಎಲ್ಲರಿಗೂ ಪಕ್ಷದಲ್ಲಿ ಸ್ವಾಗತವಿದೆ. ಪಕ್ಷ ಸೇರುವವರಿಗೆ ಮುಕ್ತ ಅವಕಾಶವಿದೆ. ಅವರು ಬರಲಿ ಇವರು ಬರಲಿ ಎನ್ನಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಯಾರನ್ನ ಸೇರಿಸಬೇಕು, ಬಿಡಬೇಕು ಎಂದು ಅಲ್ಲಂ ವೀರಭದ್ರಪ್ಪ ಕಮಿಟಿ ನಿರ್ಧರಿಸುತ್ತದೆ. ಆದರೆ ಸೇರ್ಪಡೆಯಾಗುವವರಿಗೆ ಮುಕ್ತ ಅವಕಾಶವಿದೆ ಎಂದು ಹೇಳಿದ್ರು.


  ವಲಸೆ ಹೋದವರಿಗೂ ಮುಕ್ತ ಆಹ್ವಾನ


  ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, ವಲಸೆ ಹೋದವರಿಗೂ ಮುಕ್ತ ಆಹ್ವಾನ ನೀಡಿದ್ದಾರೆ. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಮಾತನಾಡ್ತಿದ್ದೇನೆ. ಯಾರು ಬೇಕಾದರೂ ಬರಬಹುದು. ಅಪ್ಲಿಕೇಶನ್ ಹಾಕುವವರಿಗೆ ಮುಕ್ತ ಅವಕಾಶವಿದೆ. ಯಾರು ಬೇಕಾದ್ರೂ ಬರಲಿ ನೋ ಪ್ರಾಬ್ಲಂ ಮೊದಲು ಅವರು ಅರ್ಜಿ ಹಾಕಲಿ, ಆಮೇಲೆ ನಮ್ಮ ಕಮಿಟಿ ಪರಿಶೀಲಿಸುತ್ತದೆ ಎಂದು ಡಿಕೆಶಿ ಹೇಳಿದ್ದಾರೆ.


  ಸಚಿವ ಶ್ರೀರಾಮುಲು ಬಗ್ಗೆ ಡಿಕೆಶಿ ವ್ಯಂಗ್ಯ


  ಕಾಮಗಾರಿ ತ್ವರಿತಗೊಳಿಸಲು ಸಚಿವ ಶ್ರೀರಾಮುಲು ನದಿ ಪಕ್ಕದಲ್ಲೇ ಮಲಗಿದ್ದ ವಿಚಾರಕ್ಕೆ ಮಾತಾಡಿದ ಡಿ.ಕೆ ಶಿವಕುಮಾರ್​ , ಶ್ರೀರಾಮುಲು ಬಗ್ಗೆ ವ್ಯಂಗ್ಯವಾಡಿದ್ದಾರೆ. ರಾಮನೇ ಅಲ್ಲಿ ಮಲಗಿದ್ದಾನೆ ಅಂದ್ರೆ ರಾಮ ರಾಜ್ಯದ ಪರಿಸ್ಥಿತಿ ಏನಾಗಿದೆ? ನೀವೇ ನೋಡಿ, ಯಾಕೆ? ರಾಮುಲು ಪರಿಸ್ಥಿತಿ ಹೀಗಾಯ್ತು ಅಂತ ಜನಾರ್ಧನ ರೆಡ್ಡಿಯನ್ನೇ ಕೇಳಬೇಕು.ರಾಮುಲು ಹಾಗೆ ಮಲಗಿಯೇ ಇರಲಿ ಬಿಡಿ ಎಂದು ಡಿಕೆ ಶಿವಕುಮಾರ್​ ಹೇಳಿದ್ರು.


  ಇದನ್ನೂ ಓದಿ: DK Shivakumar: ಡಿಕೆಶಿಗೆ ಕೊಂಚ ನಿರಾಳ; ದೆಹಲಿ ಹೈಕೋರ್ಟ್​​ನಿಂದ EDಗೆ ನೋಟಿಸ್


  ಕರ್ನಾಟಕ ರತ್ನ ಅವಾರ್ಡ್ ಕಾರ್ಯಕ್ರಮದಲ್ಲಿ ಅವ್ಯವಸ್ಥೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಬಗ್ಗೆಯೂ ಕಿಡಿಕಾರಿದ್ರು. ನಿನ್ನೆ ಯಾಕೆ ಸ್ಟೇಜ್ ಹಾಗಾಯ್ತು, ಸ್ಟೇಜ್ ಕಥೆ ಏನಾಯ್ತು?, ವೆರಿ ಸಾರಿ ಫಾರ್ ಸ್ಟೇಜ್ ಆರ್ಗನೈಸೆಷನ್, ನಿನ್ನೆ ಆದ ವ್ಯವಸ್ಥೆ ಬಗ್ಗೆ ನೀವೇ ವಿಶ್ಲೇಷಣೆ ಮಾಡಿ ಬಳಿಕ ನಾವು ಮಾತಾಡ್ತೇವೆ ಎಂದು ಡಿಕೆಶಿ ಹೇಳಿದ್ದಾರೆ.

  Published by:ಪಾವನ ಎಚ್ ಎಸ್
  First published: