ನ್ಯೂಸ್-18 ವರದಿ ಬೆನ್ನಲ್ಲೇ ಎಚ್ಚೆತ್ತ ವಿದ್ಯಾರ್ಥಿಗಳು: ಕಾಲೇಜು ಸ್ಥಳಾಂತರ ವಿರೋಧಿಸಿ ಪ್ರತಿಭಟನೆ

ನ್ಯೂಸ್​​-18 ವರದಿಯಿಂದ ಎಚ್ಚೆತ್ತ ತೆರಕಾಂಬಿ ಹೋಬಳಿಯ ವಿದ್ಯಾರ್ಥಿಗಳು ಈಗ ರಜೆಯಿದ್ದರೂ ಸಂಘಟಿತರಾಗಿ ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಿದರು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಸ್ಥಳೀಯ ಶಾಸಕ ನಿರಂಜನ್ ಕುಮಾರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಕಾಲೇಜು ಸ್ಥಳಾಂತರ ವಿರೋಧಿಸಿ ಪ್ರತಿಭಟನೆ

ಕಾಲೇಜು ಸ್ಥಳಾಂತರ ವಿರೋಧಿಸಿ ಪ್ರತಿಭಟನೆ

  • Share this:
ಚಾಮರಾಜನಗರ(ಜು.24): ಸ್ಥಳಾಂತರಗೊಂಡ ಕಾಲೇಜು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಶಾಸಕ ಸಫಲ, ಬಿಜೆಪಿ ಶಾಸಕ ವಿಫಲ ಎಂಬ ಸುದ್ದಿ ನ್ಯೂಸ್-18 ಪ್ರಸಾರ ಮಾಡಿತ್ತು. ನ್ಯೂಸ್​​-18 ಕನ್ನಡ ಈ ಸುದ್ದಿ ವರದಿ ಮಾಡುತ್ತಿದ್ದಂತೆಯೇ ಎಚ್ಚೆತ್ತ ಚಾಮರಾಜನಗರ ಜಿಲ್ಲೆ ತೆರಕಣಾಂಬಿ ಭಾಗದ ವಿದ್ಯಾರ್ಥಿಗಳು ಸಂಘಟಿತರಾಗಿ ಕಾಲೇಜು ಉಳಿವಿಗಾಗಿ ಪ್ರತಿಭಟನೆ ನಡೆಸಿದರು.

ತೆರಕಣಾಂಬಿಯಲ್ಲಿ ಕಳೆದ ಆರು ವರ್ಷಗಳಿಂದ ನಡೆಯುತ್ತಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ವಿದ್ಯಾರ್ಥಿಗಳ ಕೊರತೆ ನೆಪ ಹೇಳಿ ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕು ಹಾರೋಗೇರಿಗೆ ವರ್ಗಾಯಿಸಲಾಗಿದೆ. ಈ ನಡುವೆ ಪ್ರಥಮ ದರ್ಜೆ ಕಾಲೇಜಿಗಾಗಿ ತೆರಕಣಾಂಬಿಯಲ್ಲಿ ಮೂರು ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿದೆ. ಈ ಕಟ್ಟಡ ಉದ್ಘಾಟನೆಗೂ ಮೊದಲೇ ಕಾಲೇಜನ್ನು ಬೆಳಗಾವಿ ಜಿಲ್ಲೆಗೆ ವರ್ಗಾಯಿಸಲಾಗಿದೆ.

ಇದರಿಂದ ಈ ಭಾಗದ ವಿದ್ಯಾರ್ಥಿಗಳ ಪದವಿ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿರುವ ಬಗ್ಗೆ ನ್ಯೂಸ್18 ಗಮನ ಸೆಳೆದಿತ್ತು. ಅಲ್ಲದೆ ಹನೂರು ಪಟ್ಟಣದಿಂದ ಬೆಳಗಾವಿ ಜಿಲ್ಲೆಗೆ ವರ್ಗಾವಣೆಗೊಂಡ ಪ್ರಥಮ ದರ್ಜೆ ಕಾಲೇಜನ್ನು ಅಲ್ಲಿನ ಕಾಂಗ್ರೆಸ್ ಶಾಸಕ ಆರ್. ನರೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಉಳಿಸಿಕೊಂಡ ಬಗ್ಗೆ, ಹಾಗೂ ತಮ್ಮದೇ ಸರ್ಕಾರವಿದ್ದರೂ ತೆರಕಣಾಂಬಿ ಕಾಲೇಜನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ಶಾಸಕ ವಿಫಲರಾದ ಬಗ್ಗೆ ವಿಸ್ತೃತ ವರದಿ ಮಾಡಲಾಗಿತ್ತು

ಈ ಹಿನ್ನಲೆಯಲ್ಲಿ ಎಚ್ಚೆತ್ತ ತೆರಕಾಂಬಿ ಹೋಬಳಿಯ ವಿದ್ಯಾರ್ಥಿಗಳು ಈಗ ರಜೆಯಿದ್ದರೂ ಸಂಘಟಿತರಾಗಿ ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಿದರು. ಮಾಸ್ಕ್  ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಸ್ಥಳೀಯ ಶಾಸಕ ನಿರಂಜನ್ ಕುಮಾರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ತೆರಕಣಾಂಬಿ ಹೋಬಳಿಯಲ್ಲಿ ನಲವತ್ತಕ್ಕು ಹೆಚ್ಚು ಹಳ್ಳಿಗಳಿದ್ದು, ಬಹುತೇಕ ಹಳ್ಳಿಗಳ ಕಾಡಂಚಿನಲ್ಲಿವೆ. ತೆರಕಣಾಂಬಿ ಪ್ರಥಮ ದರ್ಜೆ ಕಾಲೇಜನ್ನು ವರ್ಗಾಯಿಸರುವುದರಿಂದ ಈ ಭಾಗದ ವಿದ್ಯಾರ್ಥಿಗಳು ದೂರದ ಗುಂಡ್ಲುಪೇಟೆ ಅಥವಾ ಚಾಮರಾಜನಗರಕ್ಕೆ ಹೋಗಬೇಕಾಗುತ್ತದೆ. ಇದರಿಂದ ಎಷ್ಟೋ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮೊಟಕುಗೊಳಿಸುವ ಅನಿವಾರ್ಯತೆ ಎದುರಾಗಿದೆ. ಹಾಗಾಗಿ ಈ ಕಾಲೇಜನ್ನು ಯಾವುದೇ ಕಾರಣಕ್ಕು ವರ್ಗಾಯಿಸಬಾರದು ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿದೆೆ.

ಪ್ರತಿಭಟನೆ ವೇಳೆ ಮಾತನಾಡಿದ ವಿದ್ಯಾರ್ಥಿಗಳು, ಇದೊಂದು ವರ್ಷ ಕಾಲಾವಕಾಶ ಕೊಡಿ, ನಾವೆಲ್ಲಾ ಸೇರಿ ಅಗತ್ಯಪ್ರಮಾಣದ ವಿದ್ಯಾರ್ಥಿಗಳ ಸಂಖ್ಯಾಬಲ ತೋರಿಸುತ್ತೇವೆ. ಕಾಲೇಜು ಸ್ಥಳಾಂತರವಾಗಿರುವುದರಿಂದ ಗ್ರಾಮೀಣ ಭಾಗದ ಅದರಲ್ಲು ಹೆಣ್ಣುಮಕ್ಕಳ ಶೈಕ್ಷಣಿಕ ಭವಿಷ್ಯ ಹಾಳಾಗಲಿದೆ  ಕಾಲೇಜನ್ನು ಇಲ್ಲಿಯೇ ಉಳಿಸಿ ಎಂದು ಆಗ್ರಹಿಸಿದರು.

ಇದನ್ನೂ ಓದಿ: 15 ದಿನ ಆಯುರ್ವೇದ ಚಿಕಿತ್ಸೆ ಬಳಿಕ ಕೊರೋನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾದ ಸಚಿವ ಸಿ.ಟಿ.ರವಿ

ಸ್ಥಳೀಯ ಬಿಜೆಪಿ ಶಾಸಕ ನಿರಂಜನ್ ಕುಮಾರ್ ವಿರುದ್ದವೂ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾನಿರತ ವಿದ್ಯಾರ್ಥಿಗಳು, ಈ ಭಾಗದ ಬಡ ಹಾಗು ಹಿಂದುಳಿದ ವರ್ಗಳ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಸರ್ಕಾರ ತನ್ನ  ನಿರ್ಧಾರ ಬದಲಿಸಬೇಕು. ಸರ್ಕಾರ  ಕಾಲೇಜು ಸ್ಥಳಾಂತರ ಆದೇಶ ವಾಪಸ್ ತೆಗೆದುಕೊಳ್ಳಬೇಕು ಇಲ್ಲದಿದ್ದಲ್ಲಿ  ಅಮರಣಾಂತ ಉಪವಾಸ ಕೂರಬೇಕಾಗುತ್ತದೆ ಎಂದು ಎಚ್ಚರಿಸಿದರು.
Published by:Ganesh Nachikethu
First published: