ಉಚಿತ ಲ್ಯಾಪ್​ಟಾಪ್​ಗಾಗಿ ವಿದ್ಯಾರ್ಥಿಗಳಿಂದ ಪ್ರತಿಭಟನೆ; ಡಿಸಿಎಂ ಕಾರಜೋಳಗೆ ಮುತ್ತಿಗೆ ಯತ್ನ

ಸಿದ್ದರಾಮಯ್ಯ ಕಾಲದ ಉಚಿತ ಲ್ಯಾಪ್ ಟಾಪ್ ಭಾಗ್ಯಕ್ಕೆ ಸಿಎಂ ಬಿಎಸ್​ವೈ ಚಾಲನೆ ನೀಡಿದ್ದಾರೆ. ಸಿದ್ದರಾಮಯ್ಯ 2017-18 ನೇ ಸಾಲಿನಿಂದ ಎಲ್ಲ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸುವ ಭರವಸೆ ಕೊಟ್ಟಿದ್ದರು. ರಾಜ್ಯಾದಂತ 1,09,916 ವಿದ್ಯಾರ್ಥಿಗಳಿಗೆ 311 ಕೋಟಿ ರೂ ವೆಚ್ಚದಲ್ಲಿ ಲ್ಯಾಪ್‌ಟಾಪ್‌ ವಿತರಣೆ ಮಾಡಲು ಸಿಎಂ ಬಿಎಸ್​ವೈ ಮುಂದಾಗಿದ್ದಾರೆ.

Latha CG | news18-kannada
Updated:January 12, 2020, 2:42 PM IST
ಉಚಿತ ಲ್ಯಾಪ್​ಟಾಪ್​ಗಾಗಿ ವಿದ್ಯಾರ್ಥಿಗಳಿಂದ ಪ್ರತಿಭಟನೆ; ಡಿಸಿಎಂ ಕಾರಜೋಳಗೆ ಮುತ್ತಿಗೆ ಯತ್ನ
ಡಿಸಿಎಂ ಗೋವಿಂದ ಕಾರಜೋಳ-ವಿದ್ಯಾರ್ಥಿಗಳು
  • Share this:
ಬಾಗಲಕೋಟೆ(ಜ. 12): ಸಿದ್ದರಾಮಯ್ಯ ಸರ್ಕಾರದ  ಉಚಿತ ಲ್ಯಾಪ್​ಟಾಪ್​ ಯೋಜನೆಗೆ ಬಿಜೆಪಿ ಸರ್ಕಾರ ಇಂದು ಚಾಲನೆ ನೀಡಿದೆ. ಸಿಎಂ ಬಿಎಸ್​ ಯಡಿಯೂರಪ್ಪ ಬೆಂಗಳೂರಿನಲ್ಲಿ ವಿವೇಕಾನಂದ ಜಯಂತಿ ಆಚರಣೆ ವೇಳೆ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್​ಟಾಪ್​ ವಿತರಣೆ ಮಾಡಿದ್ದಾರೆ. ರಾಜ್ಯಾದ್ಯಂತ 1,09,916 ಲ್ಯಾಪ್​​ಟಾಪ್​​​ಗಳನ್ನು ವಿತರಣೆ ಮಾಡಲು ನಿರ್ಧರಿಸಲಾಗಿದೆ. ಬಾಗಲಕೋಟೆಯಲ್ಲಿ ಉಚಿತ ಲ್ಯಾಪ್​ಟಾಪ್​ಗಾಗಿ ಕಾಲೇಜು ವಿದ್ಯಾರ್ಥಿಗಳು  ಡಿಸಿಎಂ ಗೋವಿಂದ ಕಾರಜೋಳಗೆ ಮುತ್ತಿಗೆ ಹಾಕಲು ಯತ್ನಿಸಿರುವ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್​ನಲ್ಲಿ ಇಂದು ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಸಪ್ತಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಡಿಸಿಎಂ ಗೋವಿಂದ ಕಾರಜೋಳ ಅವರು ಭಾಷಣ ಮಾಡಲು ಮುಂದಾದರು. ಆಗ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಸಂಘಟನೆ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಉಚಿತ ಲ್ಯಾಪ್​ಟಾಪ್​ ನೀಡುವಂತೆ ಮನವಿ ಕೊಡಲು ವೇದಿಕೆ ಬಳಿ ಬಂದರು. ದ್ವಿತೀಯ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್​ಟಾಪ್​ ನೀಡಬೇಕೆಂದು ಮನವಿ ಮಾಡಿದರು.

ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಚಿದಾನಂದಮೂರ್ತಿ ಅಂತ್ಯಕ್ರಿಯೆ

ಈ ವೇಳೆ "ಅಧಿಕಾರಿಗಳು ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​​ ಕೊಡುತ್ತಿಲ್ಲ. ತಮ್ಮ ಬಂಗಲೆ ನವೀಕರಣ ಮಾಡಿಕೊಳ್ಳುತ್ತಾರೆ," ಎಂದು ಡಿಸಿಎಂ ಕಾರಜೋಳಗೆ ದಲಿತ ಸಂಘಟನೆ ಮುಖಂಡ ಯುವರಾಜ್  ಹೇಳಿದರು. ಇದನ್ನು ಕೇಳಿ ಗರಂ ಆದ ಕಾರಜೋಳ, "ಏನ್ ನೀನು ಬುದ್ದಿವಂತ. ಈಗ  ಮನವಿ ಏನು ಕೊಡಲಿಕ್ಕೆ ಬಂದಿದ್ದೀರಿ, ಅದನ್ನು ಕೊಡಿ," ಎಂದು ಕಿಡಿಕಾರಿದರು. ಆಗ ಕಾರ್ಯಕ್ರಮದಲ್ಲಿ ಕೆಲಕಾಲ ಗೊಂದಲ ಉಂಟಾಯಿತು. ಪೊಲೀಸರು  ವಿದ್ಯಾರ್ಥಿಗಳನ್ನು ಕಾರ್ಯಕ್ರಮದಿಂದ ಹೊರಗೆ ಕಳುಹಿಸಿದರು.  ಆಡಿಟೋರಿಯಂ ಹಾಲ್ ಹೊರಗೆ ಬೇಕೆ ಬೇಕು ನ್ಯಾಯ ಬೇಕೆಂದು ವಿದ್ಯಾರ್ಥಿಗಳು ಘೋಷಣೆ ಕೂಗಿದರು. ಕಾರ್ಯಕ್ರಮದ ಬಳಿಕ ಡಿಸಿಎಂ ಗೋವಿಂದ ಕಾರಜೋಳ ಕಾಲೇಜು ವಿದ್ಯಾರ್ಥಿಗಳ ಮನವಿ ಆಲಿಸಿದರು.

"ಸಿದ್ದರಾಮಯ್ಯ ಇದ್ದಾಗ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​ ಕೊಡುತ್ತೇವೆ ಎಂದಿದ್ದರು. ಈಗ ನಮ್ಮ ವಿರುದ್ಧ ಪ್ರತಿಭಟನೆ ಮಾಡುವುದು ಏಕೆ?" ಎಂದು ಡಿಸಿಎಂ ಪ್ರಶ್ನಿಸಿದರು. ಆಗ ವಿದ್ಯಾರ್ಥಿಗಳು, " ಸಿದ್ದರಾಮಯ್ಯ ಲ್ಯಾಪ್​ಟಾಪ್ ಕೊಟ್ಟಿಲ್ಲ. ನೀವಾದರೂ ಕೊಡಿ. ಈಗ ಪ್ರಥಮ ವರ್ಷದ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್​ಟಾಪ್​​ ಕೊಡಲು ಸರ್ಕಾರ ಮುಂದಾಗಿದೆ. ಎರಡನೆ, ಮೂರನೇ ವರ್ಷದ ಕಾಲೇಜು ವಿದ್ಯಾರ್ಥಿಗಳಿಗೂ ಲ್ಯಾಪ್​​ಟಾಪ್​​ ಕೊಡಿ," ಎಂದು ಡಿಸಿಎಂಗೆ ಮನವಿ ಮಾಡಿದರು. ಈ ವೇಳೆ ಕೆಲಕಾಲ ಡಿಸಿಎಂ ಕಾರಜೋಳ ಜೊತೆ ವಿದ್ಯಾರ್ಥಿಗಳ ವಾಗ್ವಾದ ನಡೆಯಿತು. ಬಳಿಕ ಪೊಲೀಸರು  ಮಧ್ಯೆ ಪ್ರವೇಶಿಸಿ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದರು.

ಕಾಲೇಜು ಶುಲ್ಕ ಪಾವತಿಸುತ್ತೇವೆ, ಆದ್ರೆ ಹಾಸ್ಟೆಲ್​ ಶುಲ್ಕವನ್ನು ಈಗಲೇ ಕಟ್ಟುವುದಿಲ್ಲ; ಜೆಎನ್​ಯುಎಸ್​ಯು ಅಧ್ಯಕ್ಷೆ ಐಶೆ ಘೋಷ್

ಸಿದ್ದರಾಮಯ್ಯ ಕಾಲದ ಉಚಿತ ಲ್ಯಾಪ್ ಟಾಪ್ ಭಾಗ್ಯಕ್ಕೆ ಸಿಎಂ ಬಿಎಸ್​ವೈ ಚಾಲನೆ ನೀಡಿದ್ದಾರೆ. ಸಿದ್ದರಾಮಯ್ಯ 2017-18 ನೇ ಸಾಲಿನಿಂದ ಎಲ್ಲ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸುವ ಭರವಸೆ ಕೊಟ್ಟಿದ್ದರು. ಆದರೆ ಟೆಂಡರ್ ಸಮಸ್ಯೆ, ರಾಜಕೀಯ ಸಂದರ್ಭಗಳಿಂದ 3 ವರ್ಷಗಳಿಂದ ಲ್ಯಾಪ್‌ಟಾಪ್ ಗಳ‌ ವಿತರಣೆ ಆಗಿರಲಿಲ್ಲ.  ಇಂದು ಬಿಜೆಪಿ ಸರ್ಕಾರದಿಂದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಗಳ ವಿತರಣೆ ಮಾಡಲಾಯಿತು. ಸರ್ಕಾರಿ, ಅನುದಾನಿತ ಕಾಲೇಜುಗಳಲ್ಲಿ ಕಲೆ, ವಾಣಿಜ್ಯ, ವಿಜ್ಞಾನ ಪದವಿ ಹಾಗೂ ಇಂಜಿನಿಯರಿಂಗ್‌, ಮೆಡಿಕಲ್‌, ಪಾಲಿಟೆಕ್ನಿಕ್‌ ಡಿಪ್ಲೊಮಾ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲು ನಿರ್ಧರಿಸಿದೆ. ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ಸರ್ಕಾರಿ-ಅನುದಾನಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಗುತ್ತದೆ. ರಾಜ್ಯಾದಂತ 1,09,916 ವಿದ್ಯಾರ್ಥಿಗಳಿಗೆ 311 ಕೋಟಿ ರೂ ವೆಚ್ಚದಲ್ಲಿ ಲ್ಯಾಪ್‌ಟಾಪ್‌ ವಿತರಣೆ ಮಾಡಲು ಸಿಎಂ ಬಿಎಸ್​ವೈ ಮುಂದಾಗಿದ್ದಾರೆ.
First published:January 12, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ