ಅನ್ನ, ಆಶ್ರಯ ನೀಡಿದ ಗುರುಗಳ ಪುಣ್ಯಸ್ಮರಣೆಗೆ ಲಕ್ಷಾಂತರ ರೂಪಾಯಿ ಹೂವಿನ ಅಲಂಕಾರ, ಬೆಳ್ಳಿ ಗದ್ದುಗೆ ನೀಡಿದ ವಿದ್ಯಾರ್ಥಿಗಳು..!

ಈ ವರ್ಷ ಒಂದೂವರೆ ಲಕ್ಷಕ್ಕೂ ಅಧಿಕ ಹಣದಿಂದ ಇಪ್ಪತ್ತೈದು ಬಗೆಯ ಕಲರ್ ಕಲರ್ ಹೂವುಗಳನ್ನ ತಂದು ಗದ್ದುಗೆ ಹಾಗೂ ಗದ್ದುಗೆ ಇರೋ ಸ್ಥಳದ ಆವರಣವನ್ನ ಕಂಗೊಳಿಸುವಂತೆ ಮಾಡಿದ್ದಾರೆ.

ಈ ವರ್ಷ ಒಂದೂವರೆ ಲಕ್ಷಕ್ಕೂ ಅಧಿಕ ಹಣದಿಂದ ಇಪ್ಪತ್ತೈದು ಬಗೆಯ ಕಲರ್ ಕಲರ್ ಹೂವುಗಳನ್ನ ತಂದು ಗದ್ದುಗೆ ಹಾಗೂ ಗದ್ದುಗೆ ಇರೋ ಸ್ಥಳದ ಆವರಣವನ್ನ ಕಂಗೊಳಿಸುವಂತೆ ಮಾಡಿದ್ದಾರೆ.

ಈ ವರ್ಷ ಒಂದೂವರೆ ಲಕ್ಷಕ್ಕೂ ಅಧಿಕ ಹಣದಿಂದ ಇಪ್ಪತ್ತೈದು ಬಗೆಯ ಕಲರ್ ಕಲರ್ ಹೂವುಗಳನ್ನ ತಂದು ಗದ್ದುಗೆ ಹಾಗೂ ಗದ್ದುಗೆ ಇರೋ ಸ್ಥಳದ ಆವರಣವನ್ನ ಕಂಗೊಳಿಸುವಂತೆ ಮಾಡಿದ್ದಾರೆ.

 • Share this:
  ಹಾವೇರಿ(ಮಾ.15): ನಗರದ ಸಿಂದಗಿ ಶಾಂತವೀರೇಶ್ವರ ಮಠದ ಶಾಂತವೀರೇಶ್ವರ ಸ್ವಾಮೀಜಿಗಳು ಸಾವಿರಾರು ಶಿಷ್ಯರಿಗೆ ಅನ್ನ, ಆಶ್ರಯ, ವೇದಾಧ್ಯಯನ ಹೇಳಿಕೊಟ್ಟ ಗುರುಗಳು. ಈಗ ಸ್ವಾಮೀಜಿಗಳು ಲಿಂಗೈಕ್ಯರಾಗಿ ಬರೋಬ್ಬರಿ ನಾಲ್ವತ್ತೊಂದು ವರ್ಷಗಳು ಕಳೆದಿವೆ. ಹೀಗಾಗಿ ಮಠದಲ್ಲಿರೋ ಲಿಂಗೈಕ್ಯ ಶಾಂತವೀರೇಶ್ವರ ಸ್ವಾಮೀಜಿಗಳ ಗದ್ದುಗೆಯನ್ನ ಸ್ವಾಮೀಜಿಗಳ ಶಿಷ್ಯಂದಿರು ಹಾಗೂ ಮಠದ ಹಳೆಯ ವಿದ್ಯಾರ್ಥಿಗಳು ಸೇರ್ಕೊಂಡು ವಿಶಿಷ್ಟವಾಗಿ ಅಲಂಕಾರ ಮಾಡಿದ್ದಾರೆ. ಒಂದೂವರೆ ಲಕ್ಷಕ್ಕೂ ಅಧಿಕ ಹಣವನ್ನ ಖರ್ಚು ಮಾಡಿ ಬೆಂಗಳೂರಿನಿಂದ ಕಲರ್ ಕಲರ್‌ ಹೂವುಗಳನ್ನ ತರಿಸಿ ಭರ್ಜರಿಯಾಗಿ ಅಲಂಕಾರ ಮಾಡಿದ್ದಾರೆ. ಗದ್ದುಗೆ ಇರೋ ಸ್ಥಳ, ಗದ್ದುಗೆ ಇರೋ ಸ್ಥಳದ ಆವರಣವನ್ನ ಗುಲಾಬಿ, ಸೇವಂತಿ ಹೀಗೆ ಬಗೆಬಗೆಯ ಹೂವುಗಳಿಂದ ಕಣ್ಮನ ಸೆಳೆಯುವಂತೆ ಅಲಂಕಾರ ಮಾಡಿದ್ದಾರೆ. 

  ಶಾಂತವೀರೇಶ್ವರ ಸ್ವಾಮೀಜಿಗಳೆಂದ್ರೆ ಮಠದ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಗುರುಗಳಾಗಿದ್ರು. ಲಿಂಗೈಕ್ಯ ಸ್ವಾಮೀಜಿಗಳ ಹಾಕಿಕೊಟ್ಟ ದಾರಿಯಲ್ಲಿ ಇಂದಿಗೂ ಸಾವಿರಾರು ವಿದ್ಯಾರ್ಥಿಗಳು ವೇದ, ಶಾಸ್ತ್ರ, ಪುರಾಣಗಳ ಅಧ್ಯಯನ ಮಾಡ್ತಿದ್ದಾರೆ. ಮಠದಲ್ಲಿ ಈಗಲೂ ಇನ್ನೂರರಿಂದ ಮುನ್ನೂರು ವಿದ್ಯಾರ್ಥಿಗಳು ಅಭ್ಯಾಸ ಮಾಡ್ತಿದ್ದಾರೆ. ಪ್ರತಿವರ್ಷ ಲಿಂಗೈಕ್ಯ ಶಾಂತವೀರೇಶ್ವರ ಸ್ವಾಮೀಜಿಗಳ ಪುಣ್ಯ ಸ್ಮರಣೆಯನ್ನ ಮಠದ ಹಳೆಯ ವಿದ್ಯಾರ್ಥಿಗಳು ವಿಶಿಷ್ಟವಾಗಿ ಆಚರಿಸ್ತಾರೆ. ಲಿಂಗೈಕ್ಯ ಶ್ರೀಗಳ ಗದ್ದುಗೆ ಹಾಗೂ ಗದ್ದುಗೆ ಇರೋ ಸ್ಥಳದ ಆವರಣವನ್ನ ಒಂದೊಂದು ರೀತಿಯಲ್ಲಿ ಅಲಂಕರಿಸ್ತಾರೆ.

  Kodagu: ಕಾಡಾನೆ ನಿಯಂತ್ರಣಕ್ಕೆ ಕುಣಿದು ಹಾಡುತ್ತಾ ಹಾಡಿಯ ಕಾವಲು ಕಾಯುತ್ತಿರುವ ಗಿರಿಜನರು

  ಈ ವರ್ಷ ಒಂದೂವರೆ ಲಕ್ಷಕ್ಕೂ ಅಧಿಕ ಹಣದಿಂದ ಇಪ್ಪತ್ತೈದು ಬಗೆಯ ಕಲರ್ ಕಲರ್ ಹೂವುಗಳನ್ನ ತಂದು ಗದ್ದುಗೆ ಹಾಗೂ ಗದ್ದುಗೆ ಇರೋ ಸ್ಥಳದ ಆವರಣವನ್ನ ಕಂಗೊಳಿಸುವಂತೆ ಮಾಡಿದ್ದಾರೆ. ಹೂವುಗಳ ಅಲಂಕಾರಕ್ಕೆ ಲೈಟಿಂಗ್ ಎಫೆಕ್ಟ್ ಕೊಟ್ಟಿದ್ರಿಂದ ಮಠಕ್ಕೆ ಬರೋ ಭಕ್ತರ ಕಣ್ಮನ ಸೆಳಿತಿದೆ. ಇದರ ಜೊತೆಗೆ ಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಲಿಂಗೈಕ್ಯ ಶಾಂತವೀರೇಶ್ವರ ಸ್ವಾಮೀಜಿಗಳ ಶಿಷ್ಯಂದಿರು ಸೇರ್ಕೊಂಡು ಅರವತ್ತು ಕೆ.ಜಿ ತೂಕದ ಬೆಳ್ಳಿಯಿಂದ ಗದ್ದುಗೆ ಹಾಗೂ ಗದ್ದುಗೆ ಇರೋ ಬಾಗಿಲಿನ ಚೌಕಟ್ಟು ಮಾಡಿಸಿದ್ದಾರೆ.

  ಗುರುವಿನ ಋಣವನ್ನ ಸುಲಭವಾಗಿ ತೀರಿಸಲು ಸಾಧ್ಯವಿಲ್ಲ. ಹೀಗಾಗಿ ಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಲಿಂಗೈಕ್ಯ ಶಾಂತವೀರೇಶ್ವರ ಸ್ವಾಮೀಜಿಗಳ ಶಿಷ್ಯಂದಿರು ಸೇರಿಕೊಂಡು ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವಕ್ಕೆ ಈ ರೀತಿಯಾಗಿ ಕಾಣಿಕೆ ಅರ್ಪಿಸಿದ್ದೇವೆ ಅಂತಾರೆ ಮಠದ ಹಳೆಯ ವಿದ್ಯಾರ್ಥಿಗಳು.

  ಸಿಂದಗಿ ಶಾಂತವೀರೇಶ್ವರ ಮಠ ಅಂದ್ರೆ ಅದು ಇಂದಿಗೂ ವೇದ, ಶಾಸ್ತ್ರ, ಪುರಾಣಗಳು ಹಾಗೂ ಸಂಸ್ಕೃತ ಅಧ್ಯಯನಕ್ಕೆ ಹೆಸರುವಾಸಿಯಾಗಿದೆ. ಪ್ರತಿವರ್ಷ ಮಠದಿಂದ ನೂರಾರು ವಿದ್ಯಾರ್ಥಿಗಳು ಅಧ್ಯಯನ ಮುಗಿಸಿ ಹೊರಬರ್ತಾರೆ. ಹೀಗೆ ಹೊರಬಂದ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿಕೊಂಡು ಪ್ರತಿವರ್ಷ ಲಿಂಗೈಕ್ಯ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವವನ್ನ ವಿಶಿಷ್ಟವಾಗಿ ಆಚರಿಸ್ತಾರೆ.

  ಒಟ್ಟಿನಲ್ಲಿ ಈ ವರ್ಷ ಲಿಂಗೈಕ್ಯ ಸ್ವಾಮೀಜಿಗಳ ಪುಣ್ಯಸ್ಮರಣೋತ್ಸವವನ್ನ ಮಠದ ಹಳೆಯ ವಿದ್ಯಾರ್ಥಿಗಳು ಕಲರ್ ಕಲರ್ ಹೂವುಗಳಿಂದ ಅಲಂಕರಿಸಿ,‌ ಅರವತ್ತು ಕೆ.ಜಿ ಬೆಳ್ಳಿ ಬಾಗಿಲ ಚೌಕಟ್ಟು ಮತ್ತು ಗದ್ದುಗೆ ಮಾಡಿಸಿ ಗುರುವಿಗೆ ಕಾಣಿಕೆ‌ ರೂಪದಲ್ಲಿ ಅರ್ಪಿಸಿ ಗುರುವಿನ ಕೃಪೆಗೆ ಪಾತ್ರರಾದ್ರು.

  (ವರದಿ: ಮಂಜುನಾಥ್ ತಳವಾರ)
  Published by:Latha CG
  First published: