• Home
  • »
  • News
  • »
  • state
  • »
  • Viral Video: ರಸ್ತೆ ಗುಂಡಿ ಮುಚ್ಚಿದ ಶಾಲಾ ಮಕ್ಕಳು; ಸರ್ಕಾರಕ್ಕೆ ಚಾಟಿ ಬೀಸಿದ ಕಾಂಗ್ರೆಸ್

Viral Video: ರಸ್ತೆ ಗುಂಡಿ ಮುಚ್ಚಿದ ಶಾಲಾ ಮಕ್ಕಳು; ಸರ್ಕಾರಕ್ಕೆ ಚಾಟಿ ಬೀಸಿದ ಕಾಂಗ್ರೆಸ್

ರಸ್ತೆ ಗುಂಡಿ ಮುಚ್ಚುತ್ತಿರುವ ವಿದ್ಯಾರ್ಥಿಗಳು

ರಸ್ತೆ ಗುಂಡಿ ಮುಚ್ಚುತ್ತಿರುವ ವಿದ್ಯಾರ್ಥಿಗಳು

ಸಿಎಂ ಬಸವರಾಜ್ ಬೊಮ್ಮಾಯಿ ಅವರೇ, ಈ ಮಕ್ಕಳನ್ನಾದರೂ ನೋಡಿ ಬುದ್ದಿ ಕಲಿಯಿರಿ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

  • Share this:

ಕಳೆದ ಎರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ (Social Media) ವಿದ್ಯಾರ್ಥಿಗಳು (Students) ಶಾಲೆ ಮುಂಭಾಗದ ರಸ್ತೆಯಲ್ಲಿರುವ ಗುಂಡಿಗಳನ್ನು (Potholes) ಮುಚ್ಚುತ್ತಿರುವ ವಿಡಿಯೋ (Viral Video) ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇದೇ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ (Congress) ರಾಜ್ಯ ಬಿಜೆಪಿ ಸರ್ಕಾರದ (BJP Government) ವಿರುದ್ಧ ವಾಗ್ದಾಳಿ ನಡೆಸಿದೆ. ಮಾಜಿ ಸಚಿವ ಪ್ರಿಯಾಂಕ್ ಖರ್ಗೆ (Former Minister Priyank Kharge) ಈ ವಿಡಿಯೋ ಹಂಚಿಕೊಂಡು ಬಿಜೆಪಿಯನ್ನು ವ್ಯಂಗ್ಯ ಮಾಡಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರು (Hunsur, Mysuru) ವ್ಯಾಪ್ತಿಯ ಶಾಲೆಯ ಮುಂಭಾಗದಲ್ಲಿ ಗುಂಡಿಗಳನ್ನು ಮಕ್ಕಳು ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಮುಚ್ಚಿದ್ದಾರೆ.


ನಿಷ್ಪ್ರಯೋಜಕ ಸರ್ಕಾರದ ಬಂಡವಾಳ ಮಕ್ಕಳಿಗೂ ಅರ್ಥವಾಗಿ ರಸ್ತೆ ಗುಂಡಿಗಳನ್ನು ಮಕ್ಕಳೇ ಮುಚ್ಚುತ್ತಿದ್ದಾರೆ. ಮಕ್ಕಳು ಮಾಡುತ್ತಿರುವ ಈ ಕಾಮಗಾರಿಯನ್ನು ಸರ್ಕಾರವೇ ಮಾಡಿದ್ದಿದ್ದರೆ 40% ಕಮಿಷನ್ ಲೂಟಿ ಮಾಡಿ ಗುಂಡಿಗಳನ್ನು ಹಾಗೇ ಬಿಟ್ಟಿರುತ್ತಿತ್ತು.  ಸಿಎಂ ಬಸವರಾಜ್ ಬೊಮ್ಮಾಯಿ ಅವರೇ, ಈ ಮಕ್ಕಳನ್ನಾದರೂ ನೋಡಿ ಬುದ್ದಿ ಕಲಿಯಿರಿ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.


ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವ್ಯಂಗ್ಯ


ಇನ್ನು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿ, ಸರ್ಕಾರ ಶಾಲೆಗಳಿ್ಗೆ ಕೇಸರಿ ಬಣ್ಣ ಬಳಿಯಲು ಬ್ಯುಸಿ ಆಗಿದ್ರೆ, ಮಕ್ಕಳು ರಸ್ತೆಗುಂಡಿಗಳನ್ನು ಮುಚ್ಚುತ್ತಿದ್ದಾರೆ. ಸರ್ಕಾರ ತನ್ನ ಕೆಲವರ ಒಲೈಕೆಗಾಗಿ ಮಾತ್ರ ಕೆಲಸ ಮಾಡುತ್ತಿರೋದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ ಎಂದು ವ್ಯಂಗ್ಯ ಮಾಡಿದ್ದಾರೆ.



ಬೆಂಗಳೂರಿನ ರಸ್ತೆ ಗುಂಡಿಗಳು


ರಸ್ತೆಗುಂಡಿಗಳಿಗೆ ಬಾಡಿ, ಗಾಡಿ ಎಲ್ಲವೂ ನಾಶವಾಗುತ್ತಿವೆ. ರಸ್ತೆಗುಂಡಿಯ ಪರಿಣಾಮ ಬೈಕಿನ ಚಕ್ರವೇ ಮುರಿದು ಹೋಗಿದೆ, ಬಿಜೆಪಿಯವರು ನೊಂದ ಜನರ ಬಳಿ ನಿಂತು ದಮ್ಮು ತಾಕತ್ತಿನ ಮಾತಾಡುವ ಧೈರ್ಯ ತೋರಿಸುವರೇ? ಬಸವರಾಜ್ ಬೊಮ್ಮಾಯಿ  ಅವರೇ, ದಿನದಿನವೂ ರಸ್ತೆಗುಂಡಿ ಅವಾಂತರ ಹೆಚ್ಚುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವುದಕ್ಕೆ ನಾಚಿಕೆ ಎನಿಸುವುದಿಲ್ಲವೇ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.


ಬೆಂಗಳೂರಿನ ಗುಂಡಿಗಳಿಗೆ 5 ಸ್ಟಾರ್ ಕೊಡ್ತಂತೆ ಗೂಗಲ್!


ಬೆಂಗಳೂರಿನ ಐತಿಹಾಸಿಕ ಪಟ್ಟಿಗಳಲ್ಲಿ ಕಾಣಿಸಿಕೊಂಡಿರುವ ಬೆಳ್ಳಂದೂರು ಗುಂಡಿ ಗೂಗಲ್‍ನಲ್ಲಿ 5 ಸ್ಟಾರ್ ಗಿಟ್ಟಿಸಿಕೊಂಡಿದೆ. ಬಳಕೆದಾರರು ಗುಂಡಿಗೆ 5 ಸ್ಟಾರ್ ಕೊಟ್ಟಿದ್ದಾರೆ. ನಾವು ಈ ರೀತಿ ಗುಂಡಿಯನ್ನೂ ನೋಡೇ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.



ನಿಮೊ ತಾಯ್ ಎಂಬವರಿಂದ ಮಾಹಿತಿ


ನಿಮೊ ತಾಯ್ ಎಂಬ ಟ್ವಿಟ್ಟರ್ ಬಳಕೆದಾರರು ಬೆಂಗಳೂರಿನ ಗುಂಡಿಗೆ ಗೂಗಲ್‍ನಲ್ಲಿ 5 ಸ್ಟಾರ್ ಸಿಕ್ಕ ಮಾಹಿತಿ ಬಗ್ಗೆ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಗುಂಡಿ ಗೂಗಲ್‍ನಲ್ಲೂ ಸ್ಥಾನ ಪಡೆದಿದ್ದು, ಅತ್ಯುತ್ತಮ ರಿವ್ಯೂ ಪಡೆದಿದೆ ಎಂದು ಬರೆದುಕೊಂಡಿದ್ದಾರೆ.


ಇದನ್ನೂ ಓದಿ:  Arrest: ವೋಟರ್ ಐಡಿ ಪರಿಷ್ಕರಣೆ ಅಕ್ರಮ ಕೇಸ್​: ಮತ್ತೋರ್ವ ಅರೆಸ್ಟ್


ಮತ್ತೊಂದು ಟ್ವೀಟ್ ನಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡು ಗೂಗಲ್‍ನಿಂದ ಗುಂಡಿ ತೆಗೆದು ಹಾಕಲಾಗಿದೆ ಎಂದು ತಿಳಿಸಿದ್ದಾರೆ. ಆದ್ರೆ ಸ್ವಲ್ಪ ಹೊತ್ತಿಗೆ ಮತ್ತೊಂದು ಗುಂಡಿ ಹುಟ್ಟಿಕೊಂಡಿದೆ.


ವೈಜ್ಞಾನಿಕವಾಗಿ ರಸ್ತೆ ಗುಂಡಿ ಮುಚ್ಚುವುದು ಹೇಗ?


ಮಹಾನಗರ ಪಾಲಿಕೆ ಅಥವಾ ಹೆದ್ದಾರಿಗಳ ಗುಂಡಿ ಹೇಗೆ ಮುಚ್ಚಬೇಕು ಎಂದು Indian road congress rules for land conversion ಹೇಳುತ್ತದೆ. ಈ ನಿಯಮಗಳ ಪ್ರಕಾರ ಗುಂಡಿಯನ್ನು ಕ್ರಮಬದ್ಧವಾಗಿ ಮುಚ್ಚಬೇಕು. ಆಗ ಮಾತ್ರ ಪದೇ ಪದೇ ಗುಂಡಿಗಳು ಬೀಳಲ್ಲ. ಆದ್ರೆ ಬಿಬಿಎಂಪಿ ಯಾವ ನಿಯಮಗಳನ್ನು ಪಾಲನೇ ಮಾಡದೇ ಹಣ ಉಳಿಸಿ ಬುದ್ಧಿವಂತಿಕೆ ಪ್ರದರ್ಶಿಸಿ ಕೈ ತೊಳೆದುಕೊಂಡಿದೆ.


ಇದನ್ನೂ ಓದಿ:  Bengaluru Roads: ವಿನೂತನ ಟೆಕ್ನಾಲಜಿ ಬಳಸಿ ಬೆಂಗಳೂರಿನಲ್ಲಿ ರಸ್ತೆ ನಿರ್ಮಾಣ


ರಸ್ತೆ ಗುಂಡಿ ಮುಚ್ಚುವ ವಿಧಾನ


1.ಮೊದಲಿಗೆ ರಸ್ತೆ ಗುಂಡಿಯನ್ನು ಬಿಸಿಗಾಳಿಯಿಂದ ಸ್ವಚ್ಛಗೊಳಿಸಿ, ಅದರೊಳೊಗಿರುವ ಧೂಳನ್ನು ತೆಗೆಯಬೇಕು.


2.ತದನಂತರ ಒಂದು ಲೇಯರ್ ದ್ರವ ರೂಪದ ಡಾಂಬರ್ ಹಾಕಬೇಕು.


3.ಈ ಲೇಯರ್ ಸಂಪೂರ್ಣ ಒಣಗಿದ ನಂತರ ಮತ್ತೇ ಹೀಟ್​ ವೇವ್ ಮೂಲಕ ಬಿಸಿ ಮಾಡಬೇಕು.


4.ತದನಂತ ಜಲ್ಲಿ ಮತ್ತು ಸಿಮೆಂಟ್ ಮಿಶ್ರಣವನ್ನು ಗುಂಡಿಗೆ ತುಂಬಬೇಕು.


5.ಗುಂಡಿಯ ಆಳ ನೋಡಿಕೊಂಡು ಒಂದು ಅಥವಾ ಎರಡು ಲೇಯರ್ ಗಟ್ಟಿ ಡಾಂಬರ್​ ಹಾಕಬೇಕು.


6.ಗಟ್ಟಿ ಡಾಂಬಾರು ಒಣಗಿದ ನಂತರ ಅದರ ಮೇಲೆ ಜಲ್ಲಿ ಪೌಡರ್ ಹಾಕಬೇಕು.


7.ಗುಂಡಿ ಯಾವುದೇ ಆಕಾರದಲ್ಲಿದ್ದರೂ ಅದನ್ನು ಚೌಕಾಕಾರದಲ್ಲಿಯೇ ಮುಚ್ಚಬೇಕು.

Published by:Mahmadrafik K
First published: