ಶ್ರೀರಂಗಪಟ್ಟಣ, ಮಂಡ್ಯ: ಗುರುಗಳನ್ನು, ಅಕ್ಷರ ಕಲಿಸುವ ಶಿಕ್ಷಕರನ್ನು (Teachers) ’ಗುರು ಬ್ರಹ್ಮ (Brahmha) .. ಗುರು ವಿಷ್ಣು (Vishnu).. ಗುರು ದೇವೋ ಮಹೇಶ್ವರ: (God Shiva).. ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರವೇ ನಮ: ಅಂತ ಕೈಮುಗೀತಾರೆ. ತಾಯಿ (Mother) ಮಗುವಿಗೆ (Child) ಜೀವ ಕೊಟ್ಟರೆ, ಗುರು ಹೊಸ ಜೀವನ (New Life) ಕೊಡುತ್ತಾನೆ. ಇಂತಹ ಮಹತ್ವದ ಸ್ಥಾನದಲ್ಲಿರುವ ಗುರು ಇನ್ನೊಬ್ಬರಿಗೆ ಮಾದರಿಯಾಗಿ (Model) ಇರಬೇಕು. ಆದರೆ ಆತನೇ ತಪ್ಪು ಮಾಡಿದ್ರೆ ಏನಾಗುತ್ತದೆ? ಹೀಗೆ ವಿದ್ಯಾರ್ಥಿನಿಯರ (Students) ಕೈಯಲ್ಲಿ ಬಾಸುಂಡೆ ಬರುವಂತೆ ಹೊಡೆಸಿಕೊಳ್ಳಬೇಕಾಗುತ್ತದೆ! ಹೌದು, ಹಾಸ್ಟೆಲ್ನಲ್ಲಿ (Hostel) ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಶಿಕ್ಷಕನ ವಿರುದ್ಧ ವಿದ್ಯಾರ್ಥಿನಿಯರು ಸಿಡಿದೆದ್ದಿದ್ದಾರೆ. ಕೈಗೆ ಸಿಕ್ಕಿದ ಕಬ್ಬಿನ ಜಲ್ಲೆ, ಕೋಲು ತೆಗೆದುಕೊಂಡು, ಆತನ ರೂಮಿಗೆ ನುಗ್ಗಿ ಹೊಡೆದಿದ್ದಾರೆ. ಇಂಥದ್ದೊಂದು ಘಟನೆ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕಟ್ಟೇರಿ ಎಂಬ ಗ್ರಾಮದಲ್ಲಿನ ಬಾಲಕಿಯರ ವಸತಿ ನಿಲಯದಲ್ಲಿ ನಡೆದಿದೆ.
ಮುಖ್ಯ ಶಿಕ್ಷಕನಿಗೆ ವಿದ್ಯಾರ್ಥಿನಿಯರಿಂದ ಥಳಿತ
ಶ್ರೀರಂಗಪಟ್ಟಣ ತಾಲೂಕಿನ ಕಟ್ಟೇರಿ ಗ್ರಾಮದ ಬಾಲಕಿಯರ ಸರ್ಕಾರಿ ವಸತಿ ನಿಲಯದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಇಲ್ಲಿನ ಹಾಸ್ಟೆಲ್ನ ವಿದ್ಯಾರ್ಥಿನಿಯರು ಮುಖ್ಯ ಶಿಕ್ಷಕ ಚಿನ್ಮಯಾನಂದ ಮೂರ್ತಿ ಎಂಬಾತನಿಗೆ ಕಬ್ಬಿನ ಜಲ್ಲೆ ಹಾಗೂ ಕೋಲಿನಿಂದ ಥಳಿಸಿದ್ದಾರೆ.
ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ
ಚಿನ್ಮಯಾನಂದ ಮೂರ್ತಿ ಎಂಬಾತ ಕಟ್ಟೇರಿ ಗ್ರಾಮದ ಫ್ರೌಡಶಾಲಾ ಹೆಣ್ಣು ಮಕ್ಕಳ ಸರ್ಕಾರಿ ವಸತಿ ನಿಲಯದಲ್ಲಿ ವಸತಿ ಶಾಲೆಯ ಉಸ್ತುವಾರಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಈತ ಮುಖ್ಯ ಶಿಕ್ಷಕನಾಗಿದ್ದು, ಹಾಸ್ಟೆಲ್ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಾ ಇದ್ದನಂತೆ. ಕೆಲವು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಕೂಡ ನೀಡಿದ್ದನೆಂಬ ಆರೋಪ ಈತನ ಮೇಲಿದೆ.
ಇದನ್ನೂ ಓದಿ: KARTET Result: ಶಿಕ್ಷಕರ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಹೀಗೆ ಮಾಡಿ
ರಾತ್ರಿ ಕೂಗಿಕೊಂಡ ಹಾಸ್ಟೆಲ್ ವಿದ್ಯಾರ್ಥಿನಿ
ನಿನ್ನೆ ರಾತ್ರಿಯೂ ಹಾಸ್ಟೆಲ್ನಲ್ಲೇ ಇದ್ದ ಶಿಕ್ಷಕ ಚಿನ್ಮಯಾನಂದ ಮೂರ್ತಿ ಹಾಸ್ಟೆಲ್ನಲ್ಲಿದ್ದ ವಿದ್ಯಾರ್ಥಿಯೋರ್ವಳ ಜೊತೆ ಅಸಭ್ಯವಾಗಿ ವರ್ತಿಸಿದ್ದಾನಂತೆ. ಈ ವೇಳೆ ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಯತ್ನ ನಡೆಸಿದ್ದು, ಆಗ ಆಕೆ ಭಯದಿಂದ ಕೂಗಿ ಕೊಂಡಿದ್ದಾಳೆ.
ಸಹಪಾಠಿ ಹುಡುಗಿಯ ಸಹಾಯಕ್ಕೆ ಹೋದ ವಿದ್ಯಾರ್ಥಿನಿಯರು
ಈ ವೇಳೆ ಹುಡುಗಿ ಕೂಗಿಕೊಂಡಿದ್ದನ್ನು ಹಾಸ್ಟೆಲ್ ಇತರೇ ವಿದ್ಯಾರ್ಥಿನಿಯರು ಕೇಳಿಸಿಕೊಂಡಿದ್ದಾರೆ. ಅಲ್ಲಿ ಏನೋ ನಡೆಯುತ್ತಿದೆ ಎಂಬುದನ್ನು ಮನಗಂಡ ವಿದ್ಯಾರ್ಥಿನಿಯರು ಕೈಗೆ ಸಿಕ್ಕಿದ ಕಬ್ಬಿನ ಜಲ್ಲೆ, ಕೋಲುಗಳನ್ನು ತೆಗೆದುಕೊಂಡು ಶಿಕ್ಷಕ ಚಿನ್ಮಯಾನಂದ ಮೂರ್ತಿ ರೂಮಿಗೆ ನುಗ್ಗಿದ್ದಾರೆ.
ಕಾಮುಕ ಶಿಕ್ಷಕನಿಗೆ ವಿದ್ಯಾರ್ಥಿನಿಯರಿಂದಲೇ ಥಳಿತ
ಈ ವೇಳೆ ಶಿಕ್ಷಕ ಚಿನ್ಮಯಾನಂದ ಮೂರ್ತಿ ಮೇಲೆ ವಿದ್ಯಾರ್ಥಿನಿಯರು ಹಲ್ಲೆ ನಡೆಸಿದ್ದಾರೆ. ಹೀಗೆ ಏಕಾಏಕಿ ವಿದ್ಯಾರ್ಥಿನಿಯರು ಮುಗಿ ಬೀಳುತ್ತಿದ್ದಂತೆ ಕಾಮುಕ ಶಿಕ್ಷಕ ಕಂಗಾಲಾಗಿದ್ದಾನೆ. ತನ್ನ ರೂಮಿನ ಬಾಗಿಲು ಹಾಕಿಕೊಂಡು ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದಾನೆ. ಆದರೆ ಬಾಗಿಲು ತಳ್ಳಿ ಒಳಕ್ಕೆ ನುಗ್ಗಿದ್ದ ವಿದ್ಯಾರ್ಥಿನಿಯರು ಆತನಿಗೆ ಸರಿಯಾಗಿಯೇ ಬಾರಿಸಿದ್ದಾರೆ.
ಇದನ್ನೂ ಓದಿ: Drunk Teacher: ಕಂಠಪೂರ್ತಿ ಕುಡಿದು, ಕ್ಲಾಸಿಗೆ ಬಂದು ಮಲಗಿದ್ಲು! ಶಿಕ್ಷಕಿ ವರ್ತನೆಗೆ ಮಕ್ಕಳು ಕಂಗಾಲು
ಶಿಕ್ಷಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಇನ್ನು ಫ್ರೌಡಶಾಲಾ ಹೆಣ್ಣು ಮಕ್ಕಳ ವಸತಿ ನಿಲಯದಲ್ಲಿ ವಸತಿ ಶಾಲೆಯ ಉಸ್ತುವಾರಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕನ ಅಸಭ್ಯ ವರ್ತನೆ ಬಗ್ಗೆ ವಿದ್ಯಾರ್ಥಿನಿಯರು ಕೆಆರ್ಎಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇರೆಗೆ ಶಿಕ್ಷಕ ಚಿನ್ಮಯಾನಂದ ಮೂರ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಕೆಆರ್ಎಸ್ ಪೊಲೀಸರು, ಆರೋಪಿ ಶಿಕ್ಷಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ