ಆನ್​​​ಲೈನ್ ಕ್ಲಾಸ್​​​ಗೆ ನೆಟ್​​ವರ್ಕ್​​​ ಸಮಸ್ಯೆ; ಈ ವಿದ್ಯಾರ್ಥಿಗಳಿಗೆ ಬಸ್ ನಿಲ್ದಾಣವೇ ತರಗತಿ...!

ಕುಗ್ರಾಮಗಳಲ್ಲಿ ಇರುವಂತಹ ಈ ವಿದ್ಯಾರ್ಥಿಗಳು ಮೊಬೈಲ್ ನೆಟ್​​ವರ್ಕ್​​ ಹುಡುಕಿಕೊಂಡು ಮನೆ ಬಿಟ್ಟು ಬೀದಿ ಸುತ್ತಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಪಾಲೆತ್ತಡಿ ಎಂ‌ಬಲ್ಲಿನ ವಿದ್ಯಾರ್ಥಿಗಳಿಗೆ ಬಸ್ ನಿಲ್ದಾಣವೇ ತರಗತಿಯಾಗಿದೆ.

news18-kannada
Updated:August 11, 2020, 11:43 AM IST
ಆನ್​​​ಲೈನ್ ಕ್ಲಾಸ್​​​ಗೆ ನೆಟ್​​ವರ್ಕ್​​​ ಸಮಸ್ಯೆ; ಈ ವಿದ್ಯಾರ್ಥಿಗಳಿಗೆ ಬಸ್ ನಿಲ್ದಾಣವೇ ತರಗತಿ...!
ಬಸ್​ ನಿಲ್ದಾಣದಲ್ಲಿ ಕುಳಿತಿರುವ ವಿದ್ಯಾರ್ಥಿಗಳು
  • Share this:
ದಕ್ಷಿಣ ಕನ್ನಡ(ಆ.11): ದಕ್ಷಿಣ ಕನ್ನಡ ವಿದ್ಯಾವಂತರ, ಅಭಿವೃದ್ಧಿ ಹೊಂದಿರುವ ಜಿಲ್ಲೆ ಎನ್ನುವ ಮಾತಿದೆ. ಆದರೆ ಇಲ್ಲಿನ ವಿದ್ಯಾವಂತರಾಗಲು ಪಡುವ ಪಾಡೇನು ಎನ್ನುವುದು ಇದೀಗ ಜಗಜ್ಜಾಹೀರಾಗುತ್ತಿದೆ. ಕೊರೋನಾ ಹಿನ್ನಲೆಯಲ್ಲಿ ಶಾಲಾ- ಕಾಲೇಜುಗಳು ಬಂದ್  ಆಗಿರುವ ಹಿನ್ನಲೆಯಲ್ಲಿ ಈ ಭಾಗದ ವಿದ್ಯಾರ್ಥಿಗಳು ಕಲಿಕೆಗಾಗಿ ಪಡುತ್ತಿರುವ ಪಾಡು ದೇವರಿಗೇ ಪ್ರೀತಿ.

ಹೌದು, ಬೆಟ್ಟ-ಗುಡ್ಡ, ಬಯಲು ಸೀಮೆ- ದಟ್ಟ ಕಾಡು ಹೀಗೆ ಪ್ರಕೃತಿಯ ಎಲ್ಲಾ ರೂಪಗಳನ್ನು ಮೈಗೂಡಿಸಿಕೊಂಡಿರುವ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ನೆಟ್​​ವರ್ಕ್​ನದ್ದೇ ಪ್ರಾಬ್ಲಮ್. ಮಂಗಳೂರು ಸೇರಿದಂತೆ ಪಟ್ಟಣಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈಗಾಗಲೇ ಆನ್ ಲೈನ್ ಕ್ಲಾಸ್ ಆರಂಭಗೊಂಡಿದ್ದು, ಈ ಕ್ಲಾಸ್ ಗಳನ್ನು ಎಟೆಂಡ್ ಮಾಡೋದೇ‌ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ತಲೆನೋವಾಗಿದೆ.

ಕುಗ್ರಾಮಗಳಲ್ಲಿ ಇರುವಂತಹ ಈ ವಿದ್ಯಾರ್ಥಿಗಳು ಮೊಬೈಲ್ ನೆಟ್​​ವರ್ಕ್​​ ಹುಡುಕಿಕೊಂಡು ಮನೆ ಬಿಟ್ಟು ಬೀದಿ ಸುತ್ತಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಪಾಲೆತ್ತಡಿ ಎಂ‌ಬಲ್ಲಿನ ವಿದ್ಯಾರ್ಥಿಗಳಿಗೆ ಬಸ್ ನಿಲ್ದಾಣವೇ ತರಗತಿಯಾಗಿದೆ.

Coronavirus India Updates: ದೇಶದಲ್ಲಿ ಮುಂದುವರೆದ ಕೊರೋನಾ ಹಾವಳಿ; ಸೋಮವಾರ 53,601 ಪ್ರಕರಣಗಳು ಪತ್ತೆ

ಬೆಳಿಗ್ಗೆ ಎದ್ದು ಆನ್ ಲೈನ್ ಕ್ಲಾಸ್ ಗೆ ಹಾಜರಾಗಲು ಇಲ್ಲಿನ ಹತ್ತಾರು ವಿದ್ಯಾರ್ಥಿಗಳು ಈ ಬಸ್ ನಿಲ್ದಾಣದ ಬಳಿ ಬರುತ್ತಾರೆ. ಬೆಳಿಗ್ಗಿನಿಂದ ಮಧ್ಯಾಹ್ನದವರೆಗೆ ತರಗತಿ ಇರುವ ಕಾರಣ ಕುಳಿತುಕೊಳ್ಳಲು ಕುರ್ಚಿಗಳನ್ನೂ ಹೊತ್ತುಕೊಂಡು ಬರುತ್ತಾರೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹೆಚ್ಚಾಗಿ ಇಲ್ಲದ ಕಾರಣ ಈ ವಿದ್ಯಾರ್ಥಿಗಳ ಕ್ಲಾಸ್ ಗಳಿಗೆ ಯಾವುದೇ ಅಡಚಣೆಯಾಗುತ್ತಿಲ್ಲ.

ಮೊಬೈಲ್ ನೆಟ್​​​ವರ್ಕ್​​ಗಾಗಿ  ಮನೆಯಿಂದ ಒಂದು, ಎರಡು ಕಿಲೋಮೀಟರ್ ಕಾಡಿನ ಹಾದಿಯಲ್ಲಿ ಬರುವ ಈ ವಿದ್ಯಾರ್ಥಿಗಳು ಮಧ್ಯಾಹ್ನದ ತನಕ ಬಸ್ ನಿಲ್ದಾಣದಲ್ಲೇ ನಿಂತು ಬಳಿಕ ತರಗತಿ ಮುಗಿದ ಬಳಿಕ ಮನೆಗೆ ಮರಳುತ್ತಾರೆ.
ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್​​ ಸೇರಿದಂತೆ ಈ ಭಾಗದಲ್ಲಿ ಯಾವ ನೆಟ್​​ವರ್ಕ್​​ಗಳೂ ವರ್ಕ್ ಆಗದ ಕಾರಣ ವಿದ್ಯಾರ್ಥಿಗಳು ಆನ್​ಲೈನ್​​ ತರಗತಿಗಳಿಗಾಗಿ ಈ‌ ಪಾಡು ಪಡುವಂತಾಗಿದೆ. ಜಿಲ್ಲೆಯ ಎಲ್ಲಾ ಊರಿನ ಸಮಸ್ಯೆಗಳೂ ಇದೊಂದೇ ಆಗಿರುವುದರಿಂದ ಎಲ್ಲರೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಹೊಂದಿಕೊಂಡಿದ್ದಾರೆ.
Published by: Latha CG
First published: August 11, 2020, 11:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading